ನಗರಗಳಲ್ಲಿ ವಾಸಿಸುವ ಅನೇಕರು ಬಾಯಿ ರುಚಿ ತಣಿಸುವ ಸಲುವಾಗಿ ಜಂಕ್ಪುಡ್ ಸೇವಿಸುವ ರೂಢಿ ಬೆಳೆಸಿಕೊಂಡು ಅನೇಕ ದೈಹಿಕ ಸಮಸ್ಯೆಗಳನ್ನು ತಂದು ಕೊಳ್ಳುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಇಂಥ ಮನೋಭಾವ ಬೆಳೆಯುತ್ತಿದೆ. ಇಂಥವರಿಗೆ ಪೌಷ್ಟಿಕ ಪದಾರ್ಥಗಳು ಎಂದರೆ ಅವು ಮಾಲ್/ಮಾರ್ಟುಗಳಲ್ಲಿ ಇರುವ ಡಬ್ಬಗಳು, ಪ್ಯಾಕೇಟುಗಳಲ್ಲಿ ಮಾತ್ರ ಲಭ್ಯ ಎಂಬ ಭಾವನೆ. ಇಂಥ ಸಂದರ್ಭದಲ್ಲಿ ಧಾನ್ಯಗಳು, ತೃಣಧಾನ್ಯಗಳು, ಎಣ್ಣೆಕಾಳುಗಳು ಸೊಪ್ಪುಗಳನ್ನು ಬಳಸಿ ಪೌಷ್ಟಿಕ/ ಸ್ವಾದಿಷ್ಟ ಮುಖ್ಯವಾಗಿ ಆರೋಗ್ಯಕರ ಆಹಾರ ತಯಾರಿಸಬಹುದು ಎಂಬುದರ ಬಗ್ಗೆ ಆಹಾರ ವಿಜ್ಞಾನ ತಜ್ಞರಾದ ಡಾ. ಉಷಾ ರವೀಂದ್ರ ಅವರು ನಿರಂತರ ಪ್ರಚಾರ ಮಾಡುತ್ತಿದ್ದಾರೆ.
ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ತೃಣಧಾನ್ಯಗಳು ಮೂರು ದಶಕಗಳ ಹಿಂದೆಯೇ ಕಣ್ಮರೆಯಾಗಿವೆ. ಅನೇಕರಿಗೆ ಆರ್ಕ, ಸಾಮೆ ಇತ್ಯಾದಿ ಕಿರುಧಾನ್ಯಗಳ ಬಗ್ಗೆ ಗೊತ್ತಿಲ್ಲ; ನೋಡಿಯೂ ಇರುವುದಿಲ್ಲ ಎಂದರೆ ಉತ್ಪ್ರೇಕ್ಷೆ ಅಲ್ಲ. ಗ್ರಾಮೀಣ ಭಾಗದ ಇಂದಿನ ತಾಯಂದಿರು ತಮ್ಮ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು ಮೆಡಿಕಲ್/ ಡಿಪಾರ್ಟ್ಮೆಂಟ್ ಸ್ಟೋರುಗಳಲ್ಲಿ ಸಿಗುವ ಡಬ್ಬಗಳು/ ಪ್ಯಾಕೇಟುಗಳ ಮೊರೆ ಹೋಗುತ್ತಿದ್ದಾರೆ.
ತೃಣಧಾನ್ಯಗಳನ್ನು ಬಳಸಿ ಅತ್ಯಂತ ಸ್ವಾದಿಷ್ಟವಾದ ಅನೇಕ ಬಗೆಯ ಆಹಾರ ತಯಾರಿಸಬಹುದು ಎಂದು ಡಾ. ಉಷಾ ರವೀಂದ್ರ ಅವರು ತೋರಿಸಿ ಕೊಡುತ್ತಿದ್ದಾರೆ. ಮಕ್ಕಳ ಅತ್ಯುತ್ತಮ ಬೆಳವಣಿಗೆಗೆ ಪೂರಕವಾಗುವ ಜೊತೆಗೆ ಅವರಿಗೆ ಇಷ್ಟವಾಗುವ ತಿನಿಸುಗಳನ್ನು ಮಾಡಬಹುದು ಎಂದು ತೋರಿಸುತ್ತಿದ್ದಾರೆ.
ಇವೆಲ್ಲದರ ಜೊತೆಗೆ ಸತತವಾಗಿ ಬಳಸಿದರೆ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಮೈದಾ ಬಳಸದೆ ತೃಣಧಾನ್ಯಗಳನ್ನು ಬಳಸಿ ರುಚಿಕರ ಬೇಕರಿ ಪದಾರ್ಥಗಳನ್ನು ಮಾಡುವುದರ ಬಗ್ಗೆ ಆಸಕ್ತ ಗ್ರಾಮೀಣ/ನಗರಗಳ ಮಹಿಳೆಯರಿಗೆ ಹೇಳಿಕೊಡುತ್ತಿದ್ದಾರೆ. ಇವರು ನೀಡಿದ ತರಬೇತಿಯಿಂದ ಅನೇಕ ಮಹಿಳೆಯರು ಆರ್ಥಿಕ ಪ್ರಗತಿ ಹೊಂದಿದ್ದಾರೆ. – ಸಂಪಾದಕ

ಲೇಖಕರು: ಡಾ. ಉಷಾ ರವೀಂದ್ರ

ಅಗಸೆ ಬೀಜ ಅತಿ ಚಿಕ್ಕಕಾಳಾದರೂ ಪೋಷಕಾ0ಶಗಳ ಆಗರವೆ0ದು ದೃಢಪಟ್ಟಿದೆ. ಹಿ0ಗಾರಿನಲ್ಲಿ ಬೆಳೆಯುವ ವಾರ್ಷಿಕ ಕಿರು ಎಣ್ಣೆಕಾಳಾಗಿದೆ. ಇದನ್ನು ಮುಖ್ಯವಾಗಿ ಎಣ್ಣೆ ಹಾಗೂ ನಾರಿನ ಉದ್ದೇಶಕ್ಕಾಗಿ ಬೆಳೆಯಲಾಗುತ್ತಿದೆ. ಸಾಮಾನ್ಯವಾಗಿ 26-45 ಪ್ರತಿಶತದಷ್ಟು ಎಣ್ಣೆ ಹಾಗೂ ಹಿ0ಡಿ ಪಡೆಯಬಹುದು. ಅಲ್ಲದೆ 23-34 ಪ್ರತಿಶತದಷ್ಟು ಸಸಾರಜನಕ, 4 ಪ್ರತಿಶತದಷ್ಟು ಲವಣಾ0ಶ ಇದೆ. ಇದು ವಿವಿಧ ತಳಿಗಳ ಮೇಲೆ ಅವಲ0ಬನೆಯಾಗಿದೆ. ಪ್ರಮುಖವಾಗಿ ಉತ್ತರ ಕರ್ನಾಟಟಕದಲ್ಲಿ ಬೆಳೆಯಲಾಗುತ್ತಿದ್ದು, ದಿನನಿತ್ಯದ ಆಹಾರದಲ್ಲಿ ಬಳಕೆಯಾಗುತ್ತಿದೆ.

ಅಗಸೆ ವಿಶೇಷ: ತನ್ನದೇ ಆದ ವಿಶಿಷ್ಟ ಗುಣ ಹಾಗೂ ಪ್ರಾಮುಖ್ಯತೆ ಹೊ0ದಿದೆ. ಆರೋಗ್ಯಕ್ಕೆ ಅವಶ್ಯವಿರುವ ಅನೇಕ ಬಗೆಯ ಪೌಷ್ಟಿಕಾ0ಶಗಳನ್ನು ಒಳಗೊ0ಡಿದೆ. ಬಣ್ಣ ನೀಡುವ ಗುಣವಿರುವುದರಿ0ದ ಬಣ್ಣ ಹಾಗೂ ವಾರ್ನೀಶ್ ತಯಾರಿಕೆಯಲ್ಲಿ ಕೂಡ ಬಳಸುತ್ತಾರೆ.
ಪ್ರತಿ ನೂರು ಗ್ರಾ0.ಅಗಸೆ ಬೀಜದಲ್ಲಿರುವ ಪೌಷ್ಟಿಕಾ0ಶ: ತೇವಾ0ಶ- 6.50 ಗ್ರಾ0., ಪ್ರೋಟಿನ್-20.30 ಗ್ರಾ0., ಕೊಬ್ಬು 37.10 ಗ್ರಾ0.. ಖನಿಜಗ-2.4-3.55 ಗ್ರಾ0.. ಶಕ್ತಿ-530 ಕಿ. ಕ್ಯಾ.. ನಾರಿನಾ0ಶ-4.8 ಗ್ರಾ0.. ಶರ್ಕರಪಿಷ್ಟಗಳು-28.90 ಗ್ರಾ0.


ಕರಗುವ ನಾರಿನಾ0ಶ: 10.90,. ಕರಗದೆ ಇರುವ ನಾರಿನಾ0ಶ :17.21,. ಸುಣ್ಣದಾ0ಶ-170 ಮಿ.ಗ್ರಾ0.. ಕಬ್ಬಿಣ 2.7 ಮಿ.ಗ್ರಾ0.
ಅಗಸೆಯಲ್ಲಿ ಕಡಿಮೆ ಪ್ರಮಾಣದ ಕಾರ್ಬೊಹೈಡ್ರೇಟ್ಸ್ ಇರುವುದರಿ0ದ ಯಾರಿಗೆ ಸಕ್ಕರೆ ಹಾಗೂ ಗ0ಜಿಯ ಭಾಗ (ಸ್ಟಾರ್ಚ್) ಬೇಕಿಲ್ಲವೋ ಅಥವಾ ಕಡಿಮೆ ಸೇವಿಸಲು ಇಚ್ಚಿಸುತ್ತಾರೋ ಅ0ತಹವರಿಗೆ ಒಳ್ಳೆಯ ಆಹಾರ. ಹೆಚ್ಚಿನ ಪ್ರಮಾಣದಲ್ಲಿ “ಬಿ” ಗು0ಪಿನ ಜೀವಸತ್ವಗಳನ್ನು ಹೊ0ದಿದೆ. ಹಾಗೂ ವಿಶೇಷವಾಗಿ, ಖನಿಜಗಳಾದ ಮೆಗ್ನಿಸಿಯ0 ಮತ್ತು ಮ್ಯಾ0ಗನೀಸ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಒಳಗೊ0ಡಿದೆ.
ಅಗಸೆಯ ಪ್ರಾಮುಖ್ಯತೆ ಯಾಕೆ: ಇತ್ತೀಚಿನ ಸ0ಶೋಧನೆಗಳ ಪ್ರಕಾರ ಅಗಸೆ ಬೀಜದಲ್ಲಿ ಔಷಧ ಗುಣವಿರುವುದು ದೃಢಪಟ್ಟಿದೆ. ಮುಖ್ಯವಾಗಿ ಒಮೆಗಾ-3 ಹಾಗೂ ಒಮೆಗಾ-6 ಎ0ಬ ಕೊಬ್ಬಿನಾಮ್ಲಗಳಿದ್ದು, ಒಮೆಗಾ-3 ಕೊಬ್ಬಿನಾಮ್ಲವು ಮೆದುಳಿನ ಬೆಳವಣಿಗೆಗೆ ಸಹಾಯಕಾರಿ. ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿಯೂ ಕೂಡ ಉಪಯೋಗಕಾರಿಯಾಗಿದೆ. ಒಮೆಗಾ-3 ಆಮ್ಲವು ಹಲವಾರು ರೋಗ ರುಜೀನಗಳು ಬರದ0ತೆ ತಡೆಹಿಡಿಯುವಲ್ಲಿ ಸಹಕಾರಿಯಾಗಿದೆ. ಅ0ದರೆ ಸಕ್ಕರೆ ಖಾಯಿಲೆ, ಹೃದಯ ಖಾಯಿಲೆ,ಅಸ್ಥಮಾ, ಮೂಳೆಸವಕಳಿ ಮತ್ತು ಕ್ಯಾನ್ಸರ್ ಇತ್ಯಾದಿ.
ಒಮೆಗಾ-3 ಮತ್ತು ಅದರ ಪ್ರಾಮುಖ್ಯತೆ: ಡಿ-3 ಕೊಬ್ಬಿನಾಮ್ಲವು ಮೀನುಗಳಲ್ಲಿ ಅದರಲ್ಲೂ ಸಾಲ್ಮನ್ ತಳಿಯ ಮೀನಿನಲ್ಲಿ ಹೆಚ್ಚಾಗಿ ಇರುವುದನ್ನು ಕಾಣಬಹುದು. ಭಾರತದಲ್ಲಿ ಸುಮಾರು ಶೇ. 60 ರಷ್ಟು ಜನಸ0ಖ್ಯೆ ಸಸ್ಯಾಹಾರಿಗಳು. ಅಗಸೆ ಸೇವನೆ ಅತ್ಯವಶ್ಯಕವಾಗಿದೆ. ಇದರಿ0ದಾಗಿ ಡಿ-3/6 ಅನುಪಾತ ಕೂಡ ಸಮತಲದಲ್ಲಿರುತ್ತದೆ.


ನಾರಿನಾ0ಶದ ವಿಶೇಷತೆ: ಅಗಸೆಯಲ್ಲಿರುವ ಕರಗುವ ನಾರಿನಾ0ಶವು ನಮ್ಮ ರಕ್ತದಲ್ಲಿನ ಕೊಲೆಸ್ಟ್ರಾಲ್ ಅ0ಶವನ್ನು ಕಡಿಮೆ ಮಾಡುವ ಗುಣ ಹೊ0ದಿರುವುದರಿ0ದ, ಕೊಲೆಸ್ಟ್ರಾಲ್ ಸ0ಗ್ರಹಣೆಯಿ0ದಾಗಿ ಉ0ಟಾಗುವ ಹೃದಯದ ಖಾಯಿಲೆಯನ್ನು ತಡೆಯುವಲ್ಲಿ ಸಹಾಯಕಾರಿಯಾಗಿದೆ. ಅಲ್ಲದೇ ಕರಗದೇ ಇರುವ ನಾರಿನಾ0ಶವೂ ಕೂಡ ಇರುವುದರಿ0ದ ರಕ್ತದಲ್ಲಿನ ಸಕ್ಕರೆ ಅ0ಶವನ್ನು ಸ್ಥಿರೀಕರಿಸುತ್ತದೆ. ನಮ್ಮ ಸಣ್ಣ ಕರುಳು ಚೆನ್ನಾಗಿ ಕೆಲಸ ಮಾಡುವ0ತೆ ಪ್ರಚೋದಿಸುತ್ತದೆ. 10 ವರ್ಷ ದೊಳಗಿನಮಕ್ಕಳಲ್ಲಿ ಕಲಿಕೆ ಮತ್ತು ಬುದ್ಧಿಮತ್ತೆ ಹೆಚ್ಚಿಸಲು ಅಗಸೆ ಒಂದು ಉತ್ತಮ ಧಾನ್ಯವೆಂದು ಅಧ್ಯಯನದಿಂದ ತಿಳಿದುಬದಿಂದೆ.
ಫೈಟೋರಾಸಾಯನಿಕ ಅ0ಶಗಳು: ಅಗಸೆಬೀಜದಲ್ಲಿ ಹೆಚ್ಚಾಗಿ ಲಿಗ್ನನ್ಸ್ಗಳು ಇರುವುದರಿ0ದ ಆ0ಟಿಆಕ್ಸಿಡ0ಟ್ಸಗಳ ಆಗರವೆ0ದು ಹೇಳಬಹುದು. ಲಿಗ್ನನ್ಸ್ ಹಾರ್ಮೋನುಗಳು ಏರಿಳಿತವನ್ನು ನಿಯ0ತ್ರಿಸುವಲ್ಲಿ ಸಹಾಯಕಾರಿಯಾಗಿರುವುದಲ್ಲದೇ ಬ0ಜೆತನವನ್ನು ಹೋಗಲಾಡಿಸಲು ಸಹಕಾರಿ ಎ0ದು ಸ0ಶೋಧನೆಗಳಿ0ದ ತಿಳಿದುಬ0ದಿದೆ. ಅಲ್ಲದೇ ಮೂರನೇ ವಿಧದ ಸಕ್ಕರೆ ಖಾಯಿಲೆ ಹಾಗೂ ಮುಟ್ಟಿನ ತೊ0ದರೆಗಳನ್ನು ಹೋಗಲಾಡಿಸಲು ಸಹಾಯಕಾರಿಯಾಗಿದೆ. 25 ಗ್ರಾಂ ಅಗಸೆ ಸೆವಿಸಿದ ಮಹಿಳೆಯರಲ್ಲಿ ಕ್ಯಾನ್ಸರ್ ರೋಗದ ಪ್ರಮಾಣವನ್ನು ಕಡಿಮೆ ಮಾಡುವ ಫೈಟೋಇಸ್ಟ್ರೊಜನ್ ಇರುವುದು ತಿಳಿದು ಬಂದಿದೆ.
ಇಷ್ಟೆಲ್ಲ ಉಪಯುಕ್ತತೆ ಇರುವ ಅಗಸೆಯನ್ನು ಹಲವಾರು ಪದಾರ್ಥಗಳಲ್ಲಿ ಬಳಸಬಹುದಾಗಿದೆ. ಅಗಸೆ ಬೀಜವುಳ್ಳ ಆಹಾರವನ್ನು ಸೇವಿಸುವುದರಿ0ದ ಸ್ತನಕ್ಯಾನ್ಸರ್ ತಡೆಯಬಹುದು ಎನ್ನುತ್ತದೆ ಹೊಸ ಸ0ಶೋಧನೆ. ಅಗಸೆ ಬೀಜದ ಆಹಾರ ಕ್ಯಾನ್ಸರ್ ರೋಗಿಗಳ ಪ್ರಮಾಣವನ್ನು ಶೇ. 40 ರಷ್ಟು ತಡೆಯುತ್ತದೆ ಎ0ದು ಜರ್ಮನಿಯ ಹೆಡಲ್ಬಗರ್ನರಿನಲ್ಲಿರುವ ಕ್ಯಾನ್ಸರ್ ಸ0ಶೋಧನಾ ಸ0ಸ್ಥೆ ಹೇಳಿದೆ. ಅಗಸೆ ಬೀಜದಲ್ಲಿ ಹೆಚ್ಚಿನ ಪ್ರಮಾಣದ ಫೈಟೋಈಸ್ಟ್ರೋಜನ್ ಇರುವುದೇ ಇದಕ್ಕೆ ಕಾರಣ. ಫೈಟೋಈಸ್ಟ್ರೋಜನ್ ರಾಸಾಯನಿಕ ಕ್ಯಾನ್ಸರ್ಕಾರಕ ಜೀವಕೋಶಗಳನ್ನು ನಾಶಮಾಡುತ್ತದೆ ಎನ್ನುತ್ತದೆ ಸ0ಶೋಧನೆ. ಇದಕ್ಕಾಗಿ ಸುಮಾರು 1000 ಸ್ತನಕ್ಯಾನ್ಸರ್ ರೋಗಿಗಳ ರಕ್ತ ಮಾದರಿಯನ್ನು ಸತತವಾಗಿ ಮೂರು ವರ್ಷಗಳ ಕಾಲ ಅಧ್ಯಯನ ನಡೆಸಲಾಗಿದೆ. ಈಗ ಸುಮಾರು 1.6 ದಶಲಕ್ಷಮಹಿಳೆಯರಿಗೆ ಸ್ತನಕ್ಯಾನ್ಸರ್ ಶೇ. 60 ರಷ್ಟು. ಅಭಿವೃದ್ಧಿಶೀಲ ದೇಶಗಳಲ್ಲಿ ಹೆಚ್ಚಾಗಿರುವುದು ಕ0ಡುಬ0ದಿದೆ.
ಅಗಸೆ ಬೀಜದ ಬಳಕೆ: ಅಗಸೆಯನ್ನು ಬೀಜರೂಪದಲ್ಲಿ ಪುಡಿಮಾಡಿ ಬಳಸಬಹುದು. ಸೊಪ್ಪನ್ನೂ ಬಳಕೆಮಾಡಬಹುದು. ಅಗಸೆಯನ್ನು ಹಿಟ್ಟು ಮಾಡಿ ಹಲವಾರು ಹಿಟ್ಟಿನ ಮಿಶ್ರಣಗಳಲ್ಲಿ ಬಳಸಬಹುದು. ಮೊಳಕೆ ಮಾಡಿದ ಅಗಸೆ ಹಿಟ್ಟು ಜಗತ್ತಿನಾದ್ಯ0ತ ಸಿಗುತ್ತದೆ. ಅಗಸೆ ಎಣ್ಣೆ ಹಾಗೂ ಮಾತ್ರೆ ಇತ್ಯಾದಿ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಅಗಸೆಯಿ0ದ ಈ ಕೆಳಗಿನ ಪದಾಥ9ಗಳನ್ನು ತಯಾರಿಸಬಹುದು: 1. ಅಗಸೆ ಚಟ್ನಿಪುಡಿ 2. ಅಗಸೆ ಹುರಿಗಾಳು 3. ಅಗಸೆ ರಸ0ಪುಡಿ 4. ಅಗಸೆ ಪುಡಿಯದ ಸಿಹಿ ಪದಾರ್ಥಗಳು 5. ಅಗಸೆ ಬೀಜದ ಉಪ್ಪಿನಕಾಯಿ 6. ಅಗಸೆ ಲಡ್ಡು 7. ಅಗಸೆಯ ನ್ಯೂಟ್ರಿಬಾರ್ 8. ಅಗಸೆ ಬೆರೆತ ಬ್ರೆಡ್ 9. ಅಗಸೆಯ ಕೇಕ್ 10.ಅಗಸೆಯ ಬಿಸ್ಕತ್ 11.ಅಗಸೆಯ ಪಿಜ್ಜಾ 12. ಮಿಲ್ಕ ಶೆಖ್ ಮಿಕ್ಸ್ ಇತ್ಯಾದಿ

ತೆಗೆದುಕೊಳ್ಳಬೇಕಾದ ಜಾಗ್ರತೆ ಮತ್ತು ಅಡ್ಡಪರಿಣಾಮಗಳು: ಹೆಚ್ಚಿನ ಪ್ರಮಾಣದಲ್ಲಿ ನಾರಿನಾ0ಶವಿರುವುದರಿ0ದ ಅಗಸೆಯ ಸೇವನೆಯನ್ನು ಪ್ರಾರ0ಭಿಸುವಾಗ ಸ್ವಲ್ಪ ಪ್ರಮಾಣದಲ್ಲಿ ಶುರುಮಾಡಿ, ನಿಧಾನವಾಗಿ ಪ್ರಮಾಣವನ್ನು ಹೆಚ್ಚಿಸಬೇಕು. ಇಲ್ಲವಾದರೆ ಹೆಚ್ಚಿನ ನಾರಿನಾ0ಶವಿರುವುದರಿ0ದ, ಸೇವನೆಯಿ0ದ ಅತಿಸಾರ/ಬೇಧಿಯಾಗುವ ಅಪಾಯವಿದೆ.
ಆಕ್ಸಿಡೇಷನ್/ರ್ಯಾನ್ಸಿಡಿಟಿ ಸಮಸ್ಯೆ : ಅಸೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನ್ಸ್ಯಾಚುರೇಟೆಡ್ ಆಮ್ಲದ ಅ0ಶವಿರುವುದರಿ0ದ, ಬೇಗನೆ ಕೆಡುವುದನ್ನು ಕಾಣಬಹುದು. ಹಾಗಾಗಿ ಸರಿಯಾದ ರೀತಿಯಲ್ಲಿ ಸ0ಗ್ರಹಣೆ ಮಾಡಬೇಕು. ಅಗಸೆ ಎಣ್ಣೆಯನ್ನು ರೆಫ್ರಿಜಿರೇಟ್ ಮಾಡಬಾರದು. ಕ0ದುಬಣ್ಣದ ಬಾಟಲಿಗಳಲ್ಲಿ ಶೇಖರಿಸಿಡಬೇಕು.
ಹಾರ್ಮೋನಲ್ ಪರಿಣಾಮ: ಅತಿ ಹೆಚ್ಚಿನ ಪ್ರಮಾಣದಲ್ಲಿ ಆ0ಟಿಆಕ್ಸಿಡ0ಟ್ಸ ಮತ್ತು ಫೈಟೋಈಸ್ಟ್ರೋಜನ್ ಇರುವುದರಿ0ದ ಹಿತಮಿತ ಪ್ರಮಾಣದಲ್ಲಿ ಬಳಸಬೇಕು. ಅಗಸೆಯಲ್ಲಿರುವ ಇತರ ವಿಷಕಾರಿ ಅ0ಶವನ್ನು ಹೋಗಲಾಡಿಸಲು ಹುರಿದು ಅಥವಾ ಬೇಯಿಸಿ ಬಳಸುವುದು ಸೂಕ್ತ. ಪ್ರತಿದಿನ 2 ಟೀ. ಚಮಚ ಅಗಸೆ ಬೀಜವನ್ನು ಸೇವಿಸುವುದು ಸೂಕ್ತ. ಕೆಲವು ಸ0ಶೋಧನೆಗಳಲ್ಲಿ 6 ಟೀ. ಚಮಚ ಸೇವಿಸಿರುವ ಪ್ರಮಾಣವನ್ನು ಸಹ ದಾಖಲಿಸಿದ್ದಾರೆ.
ಅಗಸೆಯ ಲಭ್ಯತೆ: ಎರಡು ಬಣ್ಣದಲ್ಲಿ ಲಭ್ಯವಿದೆ. ಅದು ಕ0ದು ಬಣ್ಣ ಹಾಗೂ ಬ0ಗಾರದ ಬಣ್ಣದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಒ0ದು ವರ್ಷದವರೆಗೂ ಇಡೀ ಕಾಳನ್ನು ಶೇಖರಿಸಿಡಬಹುದು. ಆದರೆ ಆದಷ್ಟು ತಾಜಾ ಇರುವ ಕಾಳನ್ನು ಬಳಸಬೇಕು. ಸಯನೊಜೆನಿಕ್ ಗ್ಲೈಕೊಸೈಡ್ಸ ಮತ್ತು ಲಿನಟಿನ್ (ಅಚಿಟಿ ಪಿರಿಡೊಕ್ಸಿನ್ ಅಂಶ) ಇದ್ದು ಕಡಿಮೆ ಪ್ರಮಾಣದಲ್ಲಿ ಬಳಸಬೇಕು.


ಅಗಸೆಯ ಬಳಕೆ ಬಗ್ಗೆ ಕಿವಿಮಾತು: 1.ಅಗಸೆಯಲ್ಲಿ ಕರಗುವ ನಾರಿನಾ0ಶವಿರುವುದರಿ0ದ ಹೆಚ್ಚಿಗೆ ನೀರನ್ನು ಕುಡಿಯಬೇಕು. 2.ಪ್ರಾರ0ಭದಲ್ಲಿ ಕಡಿಮೆ ಪ್ರಮಾಣ ಸೇವಿಸಬೇಕು. 3.ಅಗಸೆಯನ್ನು ಬೇಕರಿ ಪದಾರ್ಥಗಳಲ್ಲಿ ಮೊಟ್ಟೆಗೆ ಬದಲಾಗಿ ಬಳಸಲಾಗುತ್ತಿದೆ. ಹಾಗಾಗಿ ಮೊಟ್ಟೆರಹಿತ ಬೇಕರಿ ಪದಾರ್ಥಗಳ ತಯಾರಿಕೆಗೆ ಸೂಕ್ತ, ಏಕೆ0ದರೆ ಹೆಚ್ಚಿನ ಪ್ರಮಾಣದಲ್ಲಿ ಕರಗುವ ನಾರಿನಾ0ಶವಿರುವುದರಿ0ದ ಪದಾರ್ಥಗಳ ರೂಪ ಹಾಗೂ ಆಕಾರವನ್ನು ನಿರ್ಧರಿಸುವಲ್ಲಿ ಸಹಾಯಕಾರಿಯಾಗಿದೆ.
ಲೇಖಕರು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆಯಲ್ಲಿ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ಪ್ರಾಧ್ಯಾಪಕರು.

LEAVE A REPLY

Please enter your comment!
Please enter your name here