ಬಂಗಾಳಕೊಲ್ಲಿಯಲ್ಲಿ 2024ರ ಮೇ 23ರಂದು ಚಂಡಮಾರುತ ಉಂಟಾಗುವ ಸಾಧ್ಯತೆ ಇದೆಯೆಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ‘ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಉತ್ತರ ಅಂಡಮಾನ್ ಸಮುದ್ರಕ್ಕೆ ಹೊಂದಿಕೊಂಡಂತೆ ಅದು ಮತ್ತಷ್ಟು ತೀವ್ರಗೊಳ್ಳುವ ವಾಯುಭಾರ ಕುಸಿತದ ಮಧ್ಯಮ ಸಂಭವನೀಯತೆ ಇದೆ. ಈ ವ್ಯವಸ್ಥೆಯು ಮತ್ತಷ್ಟು ತೀವ್ರಗೊಂಡು ಉತ್ತರ-ಈಶಾನ್ಯಕ್ಕೆ ಚಲಿಸುವ ಸಾಧ್ಯತೆಯಿದೆ’ ಎಂದು ಹೇಳಲಾಗಿದೆ.
ವರ್ಷದ ಈ ಸಮಯದಲ್ಲಿ ಕೊಲ್ಲಿಯಲ್ಲಿನ ವ್ಯವಸ್ಥೆಗಳು ದೈತ್ಯಾಕಾರದ ಚಂಡಮಾರುತಗಳಾಗಿ ತೀವ್ರಗೊಳ್ಳುವ ಸಾಧ್ಯತೆಗಳಿರುತ್ತವೆ. ಅವುಗಳು ಭಾರತದ ಪೂರ್ವ ಕರಾವಳಿಗೆ ಅಪ್ಪಳಿಸಿರುವ ನಿದರ್ಶನಗಳಿವೆ.
ವಾಯುಭಾರ ಕುಸಿತ ಪ್ರದೇಶದ ಬಗ್ಗೆಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡುವ ಮುನ್ನವೇ ಸಾಮಾಜಿಕ ಮಾಧ್ಯಮಗಳಲ್ಲಿ ಇದರ ಊಹಾಪೋಹ ಜೋರಾಗಿತ್ತು. ಹವಾಮಾನ ಇಲಾಖೆಯು ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಸಾಧ್ಯತೆ ಬಗ್ಗೆ ಮುನ್ಸೂಚನೆ ನೀಡಿದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಚಂಡಮಾರುತದ ಪರಿಣಾಮಗಳ ಬಗ್ಗೆ ಮತ್ತಷ್ಟೂ ಊಹಾಪೋಹ ಹೆಚ್ಚಾಗಿದೆ.
ಭಾರತೀಯ ಹವಾಮಾನ ಇಲಾಖೆ ತಜ್ಞರು ಚಂಡಮಾರುತದ ಸಾಧ್ಯತೆ ಬಗ್ಗೆ ಹೇಳಿದ್ದರೂ ಅದರ ಪರಿಣಾಮಗಳೇನಿರಬಹುದು ಎಂದುಹೇಳಿಲ್ಲ. ಆದರೂ ಕೆಲವು ಆನ್‌ಲೈನ್ ಪೋರ್ಟಲ್‌ಗಳು ಈಗಾಗಲೇ ವಾಯುಭಾರ ಕುಸಿತದ ನಿರೀಕ್ಷಿತ ಸಮಯ ಮತ್ತು ಸ್ಥಳವನ್ನು ಊಹಿಸುವಷ್ಟು ದೂರ ಹೋಗಿವೆ ಎಂದು ಇಲಾಖೆ ಅಧಿಕಾರಿಗಳು ಸ್ಪಷ್ಟವಾಗಿ ಹೇಳಿದ್ದಾರೆ
”ಕಡಿಮೆ ಒತ್ತಡದ ಪ್ರದೇಶ ಇನ್ನೂ ರೂಪುಗೊಂಡಿಲ್ಲ. ಇದು ಮೊದಲ ಹೆಜ್ಜೆ. ಈ ವ್ಯವಸ್ಥೆಯು ಚಂಡಮಾರುತವಾಗಿ ತೀವ್ರಗೊಳ್ಳುತ್ತದೆಯೇ ಎಂಬುದನ್ನು ನಿರ್ಧರಿಸುವ ಹಲವು ಅಂಶಗಳಿವೆ ”ಎಂದು ಕಲ್ಕತ್ತಾದ ಪ್ರಾದೇಶಿಕ ಹವಾಮಾನ ಕೇಂದ್ರದ ಹವಾಮಾನ ವಿಭಾಗದ ಮುಖ್ಯಸ್ಥ ಎಚ್.ಆರ್.ಬಿಸ್ವಾಸ್ ಹೇಳಿದ್ದಾರೆ
ಚಂಡಮಾರುತವಾಗಿ ಬದಲಾಗುವ ಮೊದಲು ವಾಯುಭಾರ ಕುಸಿತವು ಆಳವಾದ ವಾಯುಭಾರ ಕುಸಿತವಾಗಿ ತೀವ್ರಗೊಳ್ಳುತ್ತದೆ. ಚಂಡಮಾರುತಗಳು ಶಾಖ ಮತ್ತು ತೇವಾಂಶದ ಮೇಲೆ ಪರಿಣಾಮ ಬೀರುತ್ತದೆ. ಸಮುದ್ರದ ಮೇಲ್ಮೈ ತಾಪಮಾನವು ಆಗ ಬೆಚ್ಚಗಿರುತ್ತದೆ ಮತ್ತು ಇದು ವ್ಯವಸ್ಥೆಯನ್ನು ತೀವ್ರಗೊಳಿಸಲು ಸಹಾಯ ಮಾಡುತ್ತದೆ ಎಂದು ಹವಾಮಾನ ವಿಜ್ಞಾನಿಗಳು ಹೇಳಿದ್ದಾರೆ.
ಈ ಪ್ರಕ್ರಿಯೆಯಲ್ಲಿ ಇನ್ನೂ ಇತರ ಅಂಶಗಳಿವೆ. ನೈಋತ್ಯ ಮುಂಗಾರು ಮೇ 19 ರಂದು ಆಗ್ನೇಯ ಕೊಲ್ಲಿಗೆ ಮುನ್ನಡೆಯುವ ನಿರೀಕ್ಷೆಯಿದೆ. ಮುಂಗಾರು ಹರಿವು ಹೆಚ್ಚಿನ ಮತ್ತು ಗಮನಾರ್ಹವಾದ ಲಂಬವಾದ ಗಾಳಿಯ ರೀತಿಯಿಂದ ನಿರೂಪಿಸಲ್ಪಟ್ಟಿದೆ. ಇದು ಚಂಡಮಾರುತದ ತೀವ್ರತೆ ಮೇಲೆ ಪರಿಣಾಮ ಉಂಟು ಮಾಡಬಹುದು. ಕಡಿಮೆ ಲಂಬವಾದ ಗಾಳಿಯು ಚಂಡಮಾರುತವು ತೀವ್ರಗೊಳ್ಳಲು ಪೂರಕವಾಗಿರುತ್ತದೆ.
ಮೇ 23ರ ವೇಳೆಗೆ ಕಡಿಮೆ ಒತ್ತಡದ ವ್ಯವಸ್ಥೆಯು ರೂಪುಗೊಳ್ಳುವ ನಿರೀಕ್ಷೆಯಿರುವಾಗ ಮುಂಗಾರು ಎಷ್ಟರ ಮಟ್ಟಿಗೆ ಮುಂದುವರಿಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. “ಬಲವಾದ ಲಂಬವಾದ ಗಾಳಿ ರೀತಿಯು ನೈಋತ್ಯ ಮುಂಗಾರಿನ ಲಕ್ಷಣವಾಗಿದೆ. ಆದರೆ ಇದು ಕೊಲ್ಲಿಯ ಹೆಚ್ಚಿನ ಭಾಗಕ್ಕೆ ಮುಂದುವರಿದಾಗ ಮಾತ್ರ ಎಂದು ಹೇಳಬಹುದು.
ಈ ಬಾರಿ ನೈರುತ್ಯ ಮುಂಗಾರು ಮೇ 31 ರ ಸುಮಾರಿಗೆ ಕೇರಳವನ್ನು ತಲುಪುವ ನಿರೀಕ್ಷೆಯಿದೆ. ಕಡಿಮೆ ಒತ್ತಡದ ಪ್ರದೇಶವು ರೂಪುಗೊಂಡಾಗ ನೈಋತ್ಯ ಮುಂಗಾರು ಮಾರುತಗಳ ಮೇಲೆ ಯಾವ ರೀತಿಯ ಪರಿಣಾಮವಾಗುತ್ತದೆ ಎಂಬುದನ್ನು ನೋಡಬೇಕಾಗಿದೆ. ಎಂದು ಹವಾಮಾನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೊಲ್ಲಿಯಲ್ಲಿ ಬಲವಾದ ವ್ಯವಸ್ಥೆಯು ಮುಂಗಾರನ್ನು ಬಂಗಾಳಕ್ಕೆ ಮುಂದೂಡಬಹುದು ಎಂದು ಸಹ ಹೇಳಲಾಗಿದೆ.
ಬಂಗಾಳಕೊಲ್ಲಿ ವ್ಯವಸ್ಥೆಯು ನೈಋತ್ಯ ಮುಂಗಾರು ಮಾರುತಗಳಿಗೆ ಆವೇಗವನ್ನು ನೀಡುತ್ತದೆ. ಆದರೆ ವ್ಯವಸ್ಥೆಯ ಸಮಯವು ನಿರ್ಣಾಯಕವಾಗಿದೆ. ಮತ್ತೊಂದೆಡೆ, “ಫನಿ ಚಂಡಮಾರುತವು (ಏಪ್ರಿಲ್ 26, 2019) ಮಾನ್ಸೂನ್ ಆಗಮನವನ್ನು ವಿಳಂಬಗೊಳಿಸಿತು. ಅಂಫಾನ್ ಚಂಡಮಾರುತವು (ಮೇ 20, 2020 ) ಮಾನ್ಸೂನ್ ಆಗಮನವನ್ನು ವೇಗಗೊಳಿಸಿತು, ”ಎಂದು ತಜ್ಞರು ಹೇಳಿದ್ದಾರೆ.
“ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸಂಭವಿಸಿದರೆ ಕರ್ನಾಟಕ ರಾಜ್ಯದ ದಕ್ಷಿಣ ಒಳನಾಡು, ದಕ್ಷಿಣ ಕನ್ನಡದ ಕರಾವಳಿ ತೀರದ ಪ್ರದೇಶಗಳಲ್ಲಿ ಭಾರಿಮಳೆ ಆಗುವ ಸಾಧ್ಯತೆ ಇದೆ. ಕೊಲ್ಲಿಯಲ್ಲಿನ ಚಂಡಮಾರುತದಿಂದ ಸದ್ಯದಲ್ಲಿಯೇ ಬರಲಿರುವ ಮುಂಗಾರು ಮೇಲೆ ಪರಿಣಾಮವಾಗುವುದಿಲ್ಲ. ಅರಬ್ಬಿ ಸಮುದ್ರದಲ್ಲಿ ಕಳೆದ ಐದು ವರ್ಷಗಳಿಂದ ಮೇ ತಿಂಗಳಿನಲ್ಲಿ ಚಂಡಮಾರುತಗಳು ಘಟಿಸಿವೆ. ಈ ಬಾರಿ ಇದು ಘಟಿಸಿದರೆ ಮಾತ್ರ ಮುಂಗಾರು ಆಗಮಿಸುವ ಸಮಯ ವಿಳಂಬವಾಗಬಹುದು” ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ಮುಖ್ಯಸ್ಥ ಸಿ.ಎಸ್. ಪಾಟೀಲ್ “ಅಗ್ರಿಕಲ್ಚರ್ ಇಂಡಿಯಾ” ಪ್ರತಿನಿಧಿಗೆ ತಿಳಿಸಿದರು.