ಕೃಷಿ ತ್ಯಾಜ್ಯಗಳನ್ನು ಬೆಂಕಿಗೆ ಹಾಕೋದಲ್ಲ, ಮಣ್ಣಿಗೆ ಹಾಕಬೇಕು !

0
ಲೇಖಕರು: ಪ್ರಶಾಂತ್‌ ಜಯರಾಮ್

ಭಾರತ ದೇಶದಲ್ಲಿ ಒಟ್ಟು ಕೃಷಿ ಹಿಡುವಳಿಯ ಪ್ರಮಾಣ ಸುಮಾರು ಅಂದಾಜು 155 MH(Million Hectare-ದಶಲಕ್ಷ Hectare) ಪ್ರದೇಶದಲ್ಲಿ ಪ್ರತಿ ವರ್ಷ 600 MT( Million Ton- ದಶಲಕ್ಷ ಟನ್) ಕೃಷಿ ತ್ಯಾಜ್ಯ(Crop Residues) ಉತ್ಪಾದನೆಯಾಗುತ್ತಿದೆ.ಆ ಪ್ರಕಾರ ಪ್ರತಿ Hectare ಪ್ರದೇಶದಲ್ಲಿ ಸರಾಸರಿ 04 ಟನ್ ಕೃಷಿ ತ್ಯಾಜ್ಯ ಉತ್ಪಾದನೆಯಾಗುತ್ತಿದೆ.

*ಸಾಮಾನ್ಯವಾಗಿ ಯಾವುದೇ ಕೃಷಿ ತ್ಯಾಜ್ಯದಲ್ಲಿ ಎಲ್ಲ ರೀತಿಯ ಪೋಷಕಾಂಶ ಲಭ್ಯವಾಗುತ್ತದೆ, ಪ್ರಧಾನವಾಗಿ ಪರಿಗಣಿಸುವ NPK (ಸಾರಾಜನಕ, ರಂಜಕ, ಪೊಟಾಷ್ ) ತೆಗೆದುಕೊಂಡರೆ,ಪ್ರತಿ ಟನ್ ಒಂದಕ್ಕೆ 5.5 ಕೆಜಿ ಸಾರಾಜನಕ,2.5 ಕೆಜಿ ರಂಜಕ,25 ಕೆಜಿ ಪೊಟ್ಯಾಸಿಯಂ ರೀತಿ 04 ಟನ್ ಕೃಷಿ ತ್ಯಾಜ್ಯದಲ್ಲಿ 22 ಕೆಜಿ ಸಾರಾಜನಕ,10 ಕೆಜಿ ರಂಜಕ ,100 ಕೆಜಿ ಪೊಟ್ಯಾಸಿಯಂ ಲಭ್ಯವಾಗುತ್ತದೆ.

ಈ ಪ್ರಮಾಣದ NPK ಯನ್ನು ರಸಗೊಬ್ಬರದ ಮೂಲಕ ಬೆಳೆಗಳಿಗೆ ನೀಡಬೇಕಾದರೆ ಯೂರಿಯಾ :100 ಕೆಜಿ, ಡಿ.ಎ.ಪಿ:20 ಕೆಜಿ,ಮ್ಯೂರೇಟ್ ಆಫ್ ಪೊಟಾಷ್ (MOP):167 ಕೆಜಿ ನೀಡಬೇಕಾಗುತ್ತದೆ.

ಈ ಪ್ರಮಾಣದ ರಾಸಾಯನಿಕ ಗೊಬ್ಬರಕ್ಕೆ ತಗುಲುವ ಮೂಲ ಬೆಲೆ ಸುಮಾರು ರೂ 16,000/ ಗಳು,ಈ ಪ್ರಕಾರ 01 ಟನ್ ಕೃಷಿ ತ್ಯಾಜ್ಯದ ಮೌಲ್ಯವನ್ನು ಕೇವಲ ರಸಗೊಬ್ಬರಕ್ಕೆ(NPK) ಸರಿಸಾಮಾನವಾಗಿ ನೋಡಿದಾಗ ರೂ 4000/,ಪ್ರತಿ ಎಕರೆವಾರು ಉತ್ಪಾದನೆಯಾಗುತ್ತಿರುವ ಕೃಷಿ ತ್ಯಾಜ್ಯದ ಮೌಲ್ಯ ರೂ 6500/.

ಉದಾಹರಣೆಗೆ ಪ್ರತಿ ಎಕರೆಯಲ್ಲಿ ಕಬ್ಬಿನ ಸೋಗು/ರವದಿ 03 ರಿಂದ 04 ಟನ್ ಉತ್ಪಾದನೆಯಾಗುತ್ತದೆ, ಇದನ್ನು ಬೆಂಕಿಯಲ್ಲಿ ಸುಡದೆ ಭೂಮಿಯಲ್ಲಿ ಸೇರಿಸಿದಾಗ ರಾಸಾಯನಿಕ ಗೊಬ್ಬರದ ಮೂಲಕ ನೀಡುವ 12 ರಿಂದ 16 ಸಾವಿರ ರೂಪಾಯಿ ಉಳಿತಾಯವಾಗುತ್ತದೆ.

01 ಟನ್ ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಾಕಿ ಸುಟ್ಟರೆ 1460 ಕೆಜಿ Co2 ಜೊತೆಗೆ Methane,Carbon manoxide, Nitrous oxide ಮತ್ತು ಇನ್ನಿತರೇ ವಿಷಕಾರಕ ಅನಿಲಗಳು ವಾತಾವರಣಕ್ಕೆ ಸೇರುವುದರಿಂದ ಹವಾಮಾನ ಬದಲಾವಣೆಗೆ ಕಾರಣವಾಗಿ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತದೆ.ಕೃಷಿ ತ್ಯಾಜ್ಯಗಳಿಗೆ ಬೆಂಕಿ ಹಾಕುವುದರಿಂದ ಮಣ್ಣಿನಲ್ಲಿರುವ ಸೊಕ್ಷ್ಮಜೀವಿಗಳು ಸಾಯುತ್ತವೆ

ಮಣ್ಣಿನ ಫಲವತ್ತತೆ ಕುಂಠಿತವಾಗುತ್ತದೆ,ಮಣ್ಣಿನಲ್ಲಿ ಸಾವಯವ ಅಂಶ ಕಡಿಮೆಯಾಗಿ ನೀರನ್ನು ಹಿಡಿದಿಟ್ಟುಕೊಳ್ಳಲು ವಿಫಲವಾಗುತ್ತದೆ,ಕೃಷಿ ತ್ಯಾಜ್ಯವನ್ನು ಸುಡುವುದರಿಂದ ಮತ್ತು ಮಣ್ಣಿಗೆ ಸೇರಿಸುವುದರಿಂದ ಪರಿಸರದ ಮೇಲೆ ಆಗುವ ನಷ್ಟ ಮತ್ತು ಲಾಭವನ್ನು ಹಣದ ರೂಪದಲ್ಲಿ ಲೆಕ್ಕ ಹಾಕಲಾಗದು.

ನಮ್ಮ ಕೃಷಿ ಜಮೀನಿನಲ್ಲಿ ದೊರೆಯುವ ಕೃಷಿ ತ್ಯಾಜ್ಯಗಳನ್ನು ಜಾನುವಾರುಗಳಿಗೆ ಮೇವಾಗಿ ಉಪಯೋಗಿಸಿಕೊಂಡು ಅವುಗಳ ಮಲ-ಮೂತ್ರವನ್ನು ಭೂಮಿಗೆ ಸೇರಿಸುವುದು ಅಥವಾ ಮುಚ್ಚಿಗೆ ಅಥವಾ ಗೊಬ್ಬರ ಮಾಡಿಕೊಂಡು ಕೃಷಿ ಭೂಮಿಗೆ

ಮರಳಿಸುವುದರಿಂದ ಬೆಳೆ ಬೆಳೆಯಲು ಹೊರಗಿನಿಂದ ಯಾವುದೇ ರೀತಿಯ ರಸಗೊಬ್ಬರ ಕೊಡುವ ಅವಶ್ಯಕತೆಯಿರುವುದಿಲ್ಲ ಮತ್ತು ಭೂಮಿಯ ಫಲವತ್ತತೆಯನ್ನು ನಿರಂತರವಾಗಿ ಕಾಯ್ದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9342434530

LEAVE A REPLY

Please enter your comment!
Please enter your name here