ತೋಟಗಳಲ್ಲಿ, ಕಾಡುಗಳಲ್ಲಿ ತನ್ನಷ್ಟಕ್ಕೇ ತಾನೇ ಹುಟ್ಟಿ ಬೆಳೆಯುವ ಈ ಮೆಣಸನ್ನು ಲವಂಗ ಮೆಣಸು, ಚೂರು ಮೆಣಸು, ಗಾಂಧಾರಿ ಮೆಣಸು, ನುಚ್ಚು ಮೆಣಸು, ಸಣ್ಣಮೆಣಸು, ಕಾಂತರಿ ಜೀರಿಗೆ ಮೆಣಸು ಹೀಗೆ ಆಯಾ ಪ್ರದೇಶಕ್ಕೆ ಹೊಂದಿಕೊAಡು ಹಲವಾರು ಹೆಸರುಗಳಿಂದ ಗುರುತಿಸುತ್ತಾರೆ. ಥೈಲಾಂಡ್ ಮೂಲದ ಈ ಮೆಣಸಿನ ವ್ಶೆಜ್ಞಾನಿಕ ಹೆಸರು ‘ಕ್ಯಾಪ್ಸಿಕಂ ಚೈನೀಸ್. ಇಂಗ್ಲೀಷಿನಲ್ಲಿ ಬರ್ಡ್ ಐ ಚಿಲ್ಲಿ ಅಂತಲೂ ಕರೆಯುತ್ತಾರೆ, ೧ ರಿಂದ ೨ ಸೆಂಟಿ ಮೀಟರ್ ನಷ್ಟು ಸಣ್ಣ ಗಾತ್ರ. ಆದರೆ ಬಲು ಖಾರ. ಹಣ್ಣಾದಾಗ ಸುಂದರ ಕೆಂಪು ಬಣ್ಣ. ಈ ಮೆಣಸಿನಕಾಯಿ ಹಳ್ಳಿ...
ಭಾರತದ ವಿವಿಧ ರಾಜ್ಯಗಳ ಸರಾಸರಿ ಕೃಷಿ ಭೂಮಿಯ ಹಿಡುವಳಿ ಮತ್ತು ಕೃಷಿ ಕುಟುಂಬದ ಆದಾಯದ ಮಾಹಿತಿಯ ಪ್ರಕಾರ ಶೇ 76% ಕ್ಕೂ ಹೆಚ್ಚು ಕೃಷಿಕರು 2.5 ಎಕರೆ ಜಮೀನಿಗಿಂತ ಕಡಿಮೆ ಜಮೀನು ಹೊಂದಿದವರಾಗಿರುತ್ತಾರೆ.ಕೃಷಿ ಕುಟುಂಬದ ಆದಾಯದಲ್ಲಿ ಶೇ 35% ಬೆಳೆ ಬೆಳೆಯುವುದರ ಮೂಲಕ, ಶೇ15% ಪ್ರಾಣಿ ಸಾಕಣೆ ಮೂಲಕ(ಹಸು/ಎಮ್ಮೆ/ಕುರಿ/ಕೋಳಿ /ಹಂದಿ), ಶೇ 40% ಕೂಲಿ/ಸಂಬಳಗಳ ಮೂಲಕ ಹಾಗು ಶೇ 5-10% ಇನ್ನಿತರೆ ಚಟುವಟಿಕೆ ಮೂಲಕ(ಕುಲ ಕಸಬು, ವ್ಯಪಾರ, ಪಿಂಚಣಿ, ಬಡ್ಡಿ ಇತ್ಯಾದಿ ) ಪಡೆಯಲಾಗುತ್ತಿದೆ. ಈ ಪ್ರಕಾರ ಕೃಷಿ ಕುಟುಂಬದ ಆದಾಯದಲ್ಲಿ ಶೇ...
ಬೆಂಗಳೂರು: ಜೂನ್ ೧೬ (ಯು.ಎನ್.ಐ.) ಬೆಂಗಳೂರಿನ ಜಿಕೆವಿಕೆಯಲ್ಲಿ ಜೂನ್ 18 ರಿಂದ ಜೂನ್ 24ರವರೆಗೆ ಸಸ್ಯ ಸಂತೆ ಆಯೋಜಿಸಲಾಗಿದೆ ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ ಕೃಷಿವಿಜ್ಞಾನಿ ಡಾ. ಎಲ್. ಜಗದೀಶ್ ತಿಳಿಸಿದ್ದಾರೆ.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣ, ಜಿಕೆವಿಕೆ ವೆಸ್ಟ್ ಗೇಟ್ ಬೆಂಗಳೂರು ಇಲ್ಲಿ ಸಸ್ಯ ಸಂತ ನಡೆಯುತ್ತದೆ. ದಿನಾಂಕ 18 ಜೂನ್ 2022 ರಂದು ಸಸ್ಯ ಸಂತೆಯ ಉದ್ಘಾಟನೆಯ ಜೊತೆಗೆ ವಿಶ್ವ ಪರಿಸರ ದಿನಾಚರಣೆ ಹಾಗೂ ವನ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತೇವೆ. ಇದರ ಉದ್ಘಾಟನೆಯನ್ನು ಚಲನಚಿತ್ರ ನಟ ಹಾಗೂ ಕಿರುತರೆ ನಾಯಕಿ...
ಕೃಷಿ ಭಾರತದ ಒಂದು ಪ್ರಮುಖ ಉದ್ಯಮ ಸುಮಾರು ೬೦% ಜನಸಂಖ್ಯೆಯು ಕೃಷಿ ಮತ್ತು ಕೃಷಿ ಆಧಾರಿತ ಉದ್ಯಮದಲ್ಲಿ ತೊಡಗಿರುತ್ತಾರೆ. ಕೃಷಿಯು ಗ್ರಾಮೀಣ ಭಾಗದಒಂದು ಪ್ರಮುಖ ಆದಾಯ ತರುವ ಚಟುವಟಿಕೆ. ಕೃಷಿಯಿಂದ ದೇಶದ ಆದಾಯಕ್ಕೆ(ಜಿಟಿಪಿ) ಸುಮಾರು ೧೫%ರಿಂದ ೧೬% ರಷ್ಟುಕೊಡುಗೆ ನೀಡುತ್ತದೆ.
ಇತ್ತೀಚಿನ ಕೋವಿಡ್-೧೯ ಸಾಂಕ್ರಾಮಿಕ ಸಂದರ್ಭದಲ್ಲಿ ಎಲ್ಲ ಚಟುವಟಿಕೆಗಳು ಕುಂಟಿತವಾದರೂ ಕೃಷಿ ಚಟುವಟಿಕೆಗಳಿಗೆ ಹೆಚ್ಚು ತೊಂದರೆಯಾಗಿರುವುದಿಲ್ಲ ಮತ್ತು ನಗರ ಪ್ರದೇಶದಲ್ಲಿ ವಾಸ ಮಾಡುತ್ತಿದ್ದ ಹಲವಾರು ಯುವಕ ಯುವತಿಯರು ಗ್ರಾಮೀಣ ಪ್ರದೇಶಕ್ಕೆ ವಲಸೆ ಬಂದು ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ವಿಷಯ.
ಪ್ರಧಾನ ಮಂತ್ರಿ ನರೇಂದ್ರ ಮೋದಿ...
ನಮ್ಮ ಮಲೆನಾಡಿನಲ್ಲಿ ಅಪ್ಪೆ ಕೊಡ್ಲು,ಮಾವಿನ ಹೊಳೆ,ಮಾವಿನ ಜಡ್ಡಿ ಹೀಗೆ ಮಾವಿನ ಹೆಸರಿನಿಂದ ಶುರುವಾಗುವ ಸ್ಥಳ ಎಲ್ಲೆಡೆ ಇವೆ. ಹೊಳೆ ದಂಡೆಯ ಮೇಲಿರುವ ಅಪ್ಪೆ ಮರಗಳು ಹಣ್ಣಾಗಿ ನೀರಿಗೆ ಬಿದ್ದರೆ ನೀರೆಲ್ಲ ಹುಳಿ! ಈಜಲು ಹಳ್ಳಕ್ಕೆ ಇಳಿದು ನೀರಲ್ಲಿ ಕಾಲು ಹಾಕಿದ ಹೊಸತರಲ್ಲಿ ಯಾವುದೋ ಜಲಚರವೆಂದು ಕೊಳೆತು ಮುಳುಗಿದ ಅಪ್ಪೆ ಹಣ್ಣು ಕಾಲಿಗೆ ತಾಗಿ ಹೆದರಿಸುತ್ತಿತ್ತು.
ಬೇಸಿಗೆಯಲ್ಲಿ ಹೊಳೆಗೆ ಒಂದು ಒಗ್ಗರಣೆ ಹಾಕಿದರೆ ಅಪ್ಪೇಹುಳಿ ಆಗ್ತದೆ ಎಂದು ರಾಶಿ ಹಣ್ಣು ನೋಡಿ ನಗುತ್ತಿದ್ದೆವು.
ಈಗ ಉಪ್ಪಿನ ಕಾಯಿ ಬೇಡಿಕೆ ಹೆಚ್ಚಿ ಮರದ ಟೊಂಗೆ ಕಡಿದು ಮಿಡಿ ಕೊಯ್ದ...
ಸಣ್ಣ ಮೆಣಸು ಪ್ರಾದೇಶಿಕ ಹೆಸರುಗಳು
ಸೂಜಿ ಮೆಣಸು, ಜೀರಿಗೆ ಮೆಣಸು, ಗಾಂಧಾರಿ ಮೆಣಸು, ಲವಂಗ ಮೆಣಸು, ಸಣ್ಣ ಮೆಣಸು, ತುರುಕು ಮೆಣಸು ( ಸಕಲೇಶಪುರ) ಭತ್ತ ಮೆಣಸು
ಹಸಿ ಮೆಣಸಿನ ಕಾಯಿಗಳು ದೊರೆಯದ ಕಾಲದಲ್ಲಿ ಅಡುಗೆ ಮನೆ ಸಾಮ್ರಾಜ್ಯ ಆಳಿದ ಪುಟ್ಟ ಜೀವ ನೀನೇ! ಅದರಲ್ಲಿಯೂ ಮಲೆನಾಡಿನ ಅಕ್ಕರೆಯ ಮಾವಿನ ಕಾಯಿ ಗೊಜ್ಜು, ಬಜ್ಜಿ,ಹಲಸು, ಕೆಸವಿನ ಎಲೆ ಅಡುಗೆಗೆ ಬೇಕಾದ ಸರಕು ನೀನೇ ಆಗಿದ್ದೆ. ಎಳೆ ಸವತೆಗೆ ಉಪ್ಪು ಮೆಣಸು ಹಾಕಿ ತಿನ್ನುವ ಹುಚ್ಚು ಹತ್ತಲು ನಿನ್ನದೇ ರುಚಿ ಕಾರಣವೆಂದು ಎಲ್ಲರೂ ಒಪ್ಪುತ್ತಾರೆ.
ಹಲಸಿನ ಹಣ್ಣು (...
ಅರಣ್ಯ ಮಾದರಿ ಕೃಷಿ ಮಾಡುವುದು ಸುಲಭವೇನಲ್ಲ. ಸಾಕಷ್ಟು ಪೂರ್ವಯೋಜನೆ, ಸಿದ್ಧತೆ ಅತ್ಯವಶ್ಯಕ. ಇದರಿಂದ ಪ್ರತ್ಯಕ್ಷ - ಪರೋಕ್ಷ ಪರಿಣಾಮಗಳಿವೆ. ತೋಟದ ನಿರ್ವಹಣೆ ಮಾಡುವವರಿಗಷ್ಟೇ ಅಲ್ಲದೇ ಸುತ್ತಮುತ್ತಲಿನವರಿಗೂ ಇದರಿಂದ ಅಪಾರ ಪ್ರಯೋಜನಗಳಿವೆ. ಆದರೆ ಅವರು ಇದರ ಪ್ರಯೋಜನ ಅರಿಯಬೇಕಷ್ಟೇ. ಅರಿಯದೇ ಇದ್ದಾಗ ಏನಾಗುತ್ತದೆ ಎಂಬದರ ಬಗ್ಗೆ ನನ್ನ ಅನುಭವವನ್ನು ಇಲ್ಲಿ ಹೇಳಿದ್ದೇನೆ.
ಪ್ರತಿಬಾರಿ ನಿಟ್ಟಾಲಿಗೆ ಹೋದಾಗ ಅದೇ ರಗಳೆ. ನಾನು ತೋಟದಲ್ಲಿ ಬರೀ ಗಿಡಗಳನ್ನೇ ಬೆಳೆಸಿದ್ದಕ್ಕೆ ತಮ್ಮನೆಯಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ ಅನ್ನೋದು ಕೆಲವಾರು ಮಹಿಳೆಯರ ಗೋಳು. ತೋಟದ ಎರಡೂ ಬದಿಯಲ್ಲಿ ರಸ್ತೆ. ರಸ್ತೆಯ ಪಕ್ಕವೇ...
ಪಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ e-KYC ಮಾಡಿಸಲು 31.07.2022 ಕೊನೆಯ ದಿನಾಂಕವಾಗಿರುತ್ತದೆ.
ಕರ್ನಾಟಕ ರಾಜ್ಯದಲ್ಲಿ ಭಾರತ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ದಿನಾಂಕ. 01.02.2019 ರಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆಯಡಿ ವಾರ್ಷಿಕ ರೂ. 6000/-ಗಳ ಆರ್ಥಿಕ ನೆರವನ್ನು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ಮೂಲಕ ವರ್ಗಾವಣೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆರ್ಥಿಕ ನೆರವು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಬೇಕಾದರೆ e-KYC ಮಾಡಿಸುವುದು ಕಡ್ಡಾಯವಾಗಿರುತ್ತದೆ.
ಕರ್ನಾಟಕ ರಾಜ್ಯದಲ್ಲಿ ಇಲ್ಲಿಯವರೆಗೆ ಶೇ. 16 ರಷ್ಟು ರೈತರು ಮಾತ್ರ e-KYC_ಮಾಡಿಸಿದ್ದು ಶೇ....
ಕಳೆದ ವಾರ ತೋಟದಿಂದ ಒಂದು ಸುದ್ದಿ ಬಂತು. ತೋಟಕ್ಕೆ ಸುಮಾರು 35-40 ನವಿಲುಗಳು ಬಂದಿವೆ. ಎರಡು ದಿನಗಳಿಂದ ಅವು ಅಲ್ಲಿಯೇ ಬಿಡಾರ ಹೂಡಿವೆ. ಯಾರಾದರೂ ನೋಡಲು ಹೋದರೆ ಗಿಡದಲ್ಲಿ ಮಾಯವಾಗಿ ಬಿಡುತ್ತವೆ.
ನನಗೆ ನಿಜಕ್ಕೂ ಅಚ್ಚರಿಯಾಗಿ ಹೋಯಿತು. ಬಹುಶಃ ಅವು ನವಿಲು ಆಗಿರಲಿಕ್ಕಿಲ್ಲ. ಬೇರೆ ಯಾವುದೋ ಪಕ್ಷಿಗೆ ನವಿಲು ಅಂದುಕೊಂಡಿರಬಹುದು ಅಂತಾ ಯೋಚಿಸಿ, ಅಲ್ಲಿದ್ದ ಒಬ್ಬ ಹುಡುಗನಿಗೆ ಫೋಟೋ ಕಳಿಸುವಂತೆ ಹೇಳಿದೆ. ಹತ್ತೇ ನಿಮಿಷಕ್ಕೆ ಅವನು ಫೋನ್ ಮಾಡಿ, "ಹೌದ್ರೀ ಸರ್ರಾ, ಎಲ್ಲಾ ನವುಲು ಅದಾವ. ಎರೆಡು ಗಂಡು ನವುಲು ನಾ ನೋಡಿದೆ. ಪೋಟೋ...
ಮುಂದಿನ 24 ಗಂಟೆಗಳಲ್ಲಿ ಉತ್ತರ ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ ಮತ್ತು ರಾಯಲಸೀಮಾದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ.
ಮುಂದಿನ ಐದು ದಿನಗಳಲ್ಲಿ ಉತ್ತರ ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ, ದಕ್ಷಿಣ ಕರಾವಳಿ ಆಂಧ್ರಪ್ರದೇಶ ಮತ್ತು ರಾಯಲಸೀಮಾದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಿಂಚು ಅಥವಾ ಗಂಟೆಗೆ 30-40 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ ಎಂದು ಬುಲೆಟಿನ್ ನಲ್ಲಿ ತಿಳಿಸಲಾಗಿದೆ.
ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಕರಾವಳಿ ಆಂಧ್ರಪ್ರದೇಶ, ರಾಯಲಸೀಮಾದಲ್ಲಿ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು...