Home Blog Page 93
ನಾನು ಹುಟ್ಟಿ ಬೆಳೆದದ್ದು ಪಕ್ಕಾ ಕೃಷಿ ಪಂಡಿತರ ಮಗಳಾಗಿಯಾದರೂ, ಸ್ವತಂತ್ರವಾಗಿ ಕೃಷಿಯ ಬದುಕನ್ನು ಅಪ್ಪಿಕೊಂಡು ಬರೋಬ್ಬರಿ 23 ವರ್ಷಗಳಾದವು. ಮೊದಮೊದಲು ಸಂಪೂರ್ಣ ಜ್ಞಾನವಿಲ್ಲದಿದ್ದರೂ ಅದರೊಳಗೆ ತೊಡಗಿಸಿಕೊಳ್ಳುತ್ತಾ ಮಣ್ಣು ಮತ್ತು ಬೆಳೆಗಳ ಬಗ್ಗೆ ತಿಳಿಯತೊಡಗಿದೆ. ಸಾಂಪ್ರದಾಯಿಕ ಬೆಳೆ ತೆಂಗು ನಮ್ಮ ಸೀಮೆಯ ಕೃಷಿ ಎಂದರೆ, ತೋಟಗಾರಿಕಾ ಬೆಳೆಯಾಗಿ ಮುಖ್ಯವಾಗಿ ತೆಂಗು ಬೆಳೆಯುತ್ತಿದ್ದರು. ನೀರಿನ ಸೌಕರ್ಯ ಇದ್ದವರು ವಾಣಿಜ್ಯ ಬೆಳೆಗಳಾಗಿ ಬಾಳೆ ಹಾಗೂ ತರಕಾರಿಗಳ ಕೃಷಿ ಮಾಡುತ್ತಿದ್ದರು. ಮಳೆಯಾಧಾರಿತ ಬೆಳೆಗಳಾಗಿ ರಾಗಿ, ಜೋಳ, ಅವರೆ, ತೊಗರಿ, ಹೆಸರು, ಉದ್ದು, ಹುರುಳಿ, ಅಲಸಂದೆಗಳನ್ನು ಸಾಮಾನ್ಯ ಬೆಳೆಗಳಾಗಿ ಬೆಳೆಯುತ್ತಿದ್ದರು. ಕೀಟನಾಶಕಗಳು ಈಗ ಹಲವಾರು ರೈತರ...
ಹಣ್ಣುಗಳಲ್ಲಿ ಹಲಸು ಅತಿ ದೊಡ್ಡದು. ವೈಜ್ಙಾನಿಕವಾಗಿ ಮೊರೆಸಿಯೇ ಕುಟುಂಬಕ್ಕೆ ಸೇರಿದೆ. ಜಗತ್ತಿನಲ್ಲಿಯೇ ಮರದಲ್ಲಿ ಬಿಡುವ ಅತಿ ದೊಡ್ಡ ಹಣ್ಣೆಂಬ  ಖ್ಯಾತಿ ಇದೆ. ಈ ಹಣ್ಣಿನ ಮೂಲ ದಕ್ಷಿಣ  ಏಷ್ಯಾದ ದಕ್ಷಿಣ ಭಾಗದ ಪಶ್ಛಿಮ ಘಟ್ಟಗಳು. ಅದರಲ್ಲೂ ಮುಖ್ಯವಾಗಿ ಬಾಂಗ್ಲಾದೇಶ, ಭಾರತ ಮಲೇಶಿಯಾ, ಮ್ಯಾನ್ಮಾರ್, ಶ್ರೀಲಂಕಾ, ಬ್ರೇಜಿಲ್, ಪಾಕಿಸ್ತಾನ ಮುಂತಾದ ದೇಶಗಳ್ಲಿ ಬೆಳೆಯಲಾಗುತ್ತಿದೆ. ಹಲಸಿನ ಕೃಷಿ ಅತಿ ಪುರಾತನ ಹಲಸಿನ ಹಣ್ಣನ್ನು “ರಾಷ್ಟಿಯ ಹಣ್ಣು” ಎಂದು ಘೋಷಿಸಲಾಗಿದೆ. ಭಾರತದಲ್ಲಿ ಹೆಚ್ಚಾಗಿ ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಅಸ್ಸಾಂ, ಪಶ್ಚಿಮಬಂಗಾಳ, ಪೂರ್ವಉತ್ತರ ರಾಜ್ಯಗಳು ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಬೆಳೆಯಲಾಗುತ್ತಿದೆ....
ಪರಿಚಯ ತ್ಯಾಜ್ಯ ವಿಘಟನೆಯು ಉತ್ತರ ಪ್ರದೇಶದ ಗಾಜಿಯಾಬಾದ್‌ನ ನ್ಯಾಷನಲ್ ಸೆಂಟರ್ ಆಫ್ ಆರ್ಗ್ಯಾನಿಕ್ ಫಾರ್ಮಿಂಗ್ (NCOF) ಅಭಿವೃದ್ಧಿಪಡಿಸಿದ ಉತ್ಪನ್ನವಾಗಿದೆ. ಇದು ಪ್ರಯೋಜನಕಾರಿ ಸೂಕ್ಷ್ಮಜೀವಿಗಳ ಒಕ್ಕೂಟವಾಗಿದೆ, ಇದನ್ನು ಕ್ರಿಶನ್ ಚಂದ್ರ ಅವರು 2004 ರಲ್ಲಿ ಸ್ಥಳೀಯ ಹಸುವಿನ ಸಗಣಿಯಿಂದ ಪ್ರತ್ಯೇಕಿಸಿದರು. ಹೆಚ್ಚುವರಿಯಾಗಿ,  ಪ್ರಾದೇಶಿಕ ಸಾವಯವ ಕೃಷಿ ಕೇಂದ್ರಗಳ  ಮೂಲಕ 20 ಗ್ರಾಂ ಬಾಟಲ್ ಅನ್ನು ನೀಡಲಾಗುತ್ತಿದೆ. ಇದು 3 ವರ್ಷಗಳ ಶೆಲ್ಫ್-ಲೈಫ್ ಹೊಂದಿದೆ.  ಇದನ್ನು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಸಹ ಮಾನ್ಯ ಮಾಡಿದೆ. ಕುತೂಹಲಕಾರಿ ವಿಷಯವೆಂದರೆ ವೇಸ್ಟ್ ಡಿಕಂಪೋಸರ್‌ನ ಒಂದು ಬಾಟಲಿಯು 30...
ಹಸಿ ತೆಂಗಿನೆಣ್ಣೆ ಮಾಡುವ ವಿಧಾನವನ್ನು ಬಹಳಷ್ಟು ಜನ ಕೇಳುತ್ತಿರುತ್ತಾರೆ. ಆದ್ದರಿಂದ ಈ ಮುಂದಿನ ಮಾಹಿತಿಯನ್ನು ನೀಡಲಾಗಿದೆ. 1. ನಿಮಗೆ ಲಭ್ಯ ಇರುವಷ್ಟು ಬಲಿತ ಹಸಿ ತೆಂಗಿನಕಾಯಿ ತಿರುಳನ್ನು ತೀರಾ ನುಣ್ಣಗೆಯೂ ಅಲ್ಲದೆ, ತರಿತರಿಯಾಗಿಯೂ ಅಲ್ಲದೆ ನೀರು ಬೆರೆಸಿ ರುಬ್ಬಿಕೊಳ್ಳಿ, ನಂತರ ಒಂದು ಸ್ಟೀಲ್ ಪಾತ್ರೆಗೆ ಅದನ್ನು ಹಾಕಿಕೊಳ್ಳಿ. ಮಿಕ್ಸಿ ಜಾರಿನೊಳಗೆ ಇರುವ ಕಾಯಿಹಾಲಿಗೆ ಸ್ವಲ್ಪ ನೀರು ಸೇರಿಸಿ ಅಲ್ಲಾಡಿಸಿ ಅದನ್ನೂ ಸ್ಟೀಲ್ ಪಾತ್ರೆಗೆ ಸೇರಿಸಿಕೊಂಡು ಚೆನ್ನಾಗಿ ಚೌಡಿನಿಂದ ತಿರುವಿ ಒಂದು ರಾತ್ರಿ ಮುಚ್ಚಿಡಿ. 2. ಬೆಳಗೆದ್ದು ನೋಡಿದರೇ ತೆಂಗಿನ ಬೆಣ್ಣೆ ಆವರಿಸಿರುತ್ತದೆ. ಅದನ್ನು ಮತ್ತೊಂದು ಸ್ಟೀಲ್...
ಗದ್ಯ ಹಾಲು ಉತ್ಪಾದನೆಗಾಗಿ ಹೈನು ರಾಸುಗಳಿಗೆ ಆತ್ಯಂತ ಪ್ರಿಯವಾದ ಆಫ್ರಿಕನ್ ಟಾಲ್ ಮುಸುಕಿನ ಜೋಳ ಬೆಳೆದು ಅದರ ಮೇವು ನೀಡಬಹುದು. ನೀರಾವರಿ ಅನುಕೂಲವಿದ್ದಲ್ಲಿ ವರ್ಷದ ಎಲ್ಲ ಹಂತಗಳಲ್ಲಿಯೂ ಇದನ್ನು ಬೆಳೆಯಬಹುದು. ಈ ಜೋಳ ಅಧಿಕ ಪ್ರಮಾಣದಲ್ಲಿ ಕಚ್ಚಾ ಸಾರಜನಕ ಹೊಂದಿದೆ. ಈ ಎಲ್ಲ ಕಾರಣಗಳಿಂದ ಈ ಮೇವನ್ನು 'ಹಸಿರು ಮೇವಿನ ದಿಗ್ಗಜ' ಎಂದು ಕರೆಯಲಾಗುತ್ತದೆ. ಇದನ್ನು ಮತ್ತು ವೆಲ್ವೇಟ್ ಬೀನ್ಸ್ ಅನ್ನು ಒಟ್ಟಿಗೆ ಬೆಳೆದಾಗ ಹೆಚ್ಚು ಇಳುವರಿ ನಿರೀಕ್ಷಿಸಬಹುದು. ಇದಲ್ಲದೇ ಇವೆರಡರ ಸೂಕ್ತ ಸಂಮಿಶ್ರಣದ ಮೇವು ಸೇವಿಸಿದ ಹೈನುರಾಸುಗಳು: ಅಧಿಕ ಪ್ರಮಾಣದಲ್ಲಿ ಹಾಲು ಉತ್ಪಾದಿಸುತ್ತವೆ. ಒಂದು...
ಪರಿಚಯ ಭಾರತೀಯ ಆರ್ಥಿಕತೆಗೆ ಕೃಷಿಯು ಒಂದಾಗಿದೆ ಮತ್ತು ಭಾರತದ ಭೌಗೋಳಿಕ ಪ್ರದೇಶದ ಸುಮಾರು 43% ಕೃಷಿ ಚಟುವಟಿಕೆಗೆ ಬಳಸಲ್ಪಡುತ್ತದೆ ಆದರೆ ಜಿಡಿಪಿಯಲ್ಲಿ ಭಾರತೀಯ ಕೃಷಿಯ ಪಾಲು ಇತ್ತೀಚಿನ ವರ್ಷಗಳಲ್ಲಿ ಸ್ಥಿರವಾಗಿ ಕುಸಿದಿದೆ ಮತ್ತು ಕೃಷಿ ಕ್ಷೇತ್ರಗಳು ಅಶಕ್ತವಾಗುತ್ತಿವೆ. ಆದ್ದರಿಂದ, ತಂತ್ರಜ್ಞಾನದ ವರ್ಗಾವಣೆ, ಇನ್‌ಪುಟ್ ಬಳಕೆಯ ದಕ್ಷತೆಯನ್ನು ಸುಧಾರಿಸಲು, ಖಾಸಗಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಕೃಷಿ ಮತ್ತು ಅರಣ್ಯದಲ್ಲಿ ಹೂಡಿಕೆಯನ್ನು ಉತ್ತೇಜಿಸಲು ಮತ್ತು ಅನುಕೂಲಕರ ಮತ್ತು ಆರ್ಥಿಕ ವಾತಾವರಣವನ್ನು ಸೃಷ್ಟಿಸಲು ಉಪಕ್ರಮಗಳ ಪ್ಯಾಕೇಜ್ ಅನ್ನು ಒದಗಿಸುವ ತುರ್ತಿದೆ. ಕೃಷಿ ವಲಯದಲ್ಲಿ ಉದಯೋನ್ಮುಖ ಅಗತ್ಯಗಳಲ್ಲಿ ಸ್ಥಳ ನಿರ್ದಿಷ್ಟ ಕೌಶಲ್ಯ...
Introduction Agriculture is one of the most important sectors for Indian economy and about 43% of India's geographical area is used for farming activity but the share of Indian agriculture in the GDP has steadily declined over the years and the farming sectors are becoming unviable. There is, therefore, an urgent need to provide package of initiatives for transfer of...
ಜೈವಿಕ ನಿಯಂತ್ರಣ ವಿಧಾನ ಗುಣಮಟ್ಟದ ಬೆಳೆಗಳನ್ನು ಬೆಳೆಯಬೇಕಾದರೆ ನಾಟಿ/ಬಿತ್ತನೆ ಹಂತದಿಂದಲೇ ಜಾಗರೂಕತೆ ವಹಿಸಬೇಕು. ಕೀಟ-ನೊಣಗಳಿಂದ ಬೆಳೆ ರಕ್ಷಿಸಿಕೊಳ್ಳಲು ಸೂಕ್ತ ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಇದಕ್ಕಾಗಿ ಜೈವಿಕ ನಿಯಂತ್ರಣ ವಿಧಾನಗಳನ್ನು ಅನುಸರಿಸಬೇಕು. ಹೀಗೆ ಮಾಡುವುದರಿಂದ ಅಧಿಕ ಇಳುವರಿ ಪಡೆಯುವುದರ ಜೊತೆಗೆ ಗುಣಮಟ್ಟದ ಫಸಲು ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ನೀಲಿ ಬಣ್ಣದ ಜಿಗುಟಾದ ಹಾಳೆಗಳು, ಹಳದಿ ಬಣ್ಣದ ಅಂಟು ಬಲೆಗಳು ಸಹಾಯಕ. ಹಣ್ಣಿನ ನೊಣಗಳನ್ನು ಮತ್ತು ತರಕಾರಿ ನೊಣಗಳನ್ನು ಹಿಡಿಯಲು ಅತ್ಯಾಧುನಿಕ ಫೆರೊಮೊನ್ ಟ್ರಾಪ್ಗಳು, ಲ್ಯೂರ್ಗಳು ಉಪಯುಕ್ತ. ಮಣ್ಣಿನ ಆರೋಗ್ಯ: ರಾಸಾಯನಿಕ ಕೀಟನಾಶಕಗಳು ದುಬಾರಿ. ಇವುಗಳನ್ನು ಬಳಕೆ...
ಪರಿಸರ ಅಸಮತೋಲನ ಬೆಳೆಗಳಿಗೆ ಉಪಕಾರಿಯಾದ ಕೀಟಗಳು ಇರುವಂತೆ ಬಾಧೆ ನೀಡುವ ಕೀಟಗಳೂ ಇವೆ. ಈ ಕೀಟಗಳು ಆಹಾರ ಅರಸುವುದು ಅತ್ಯಂತ ಸಹಜ ಕ್ರಿಯೆ. ಬಾಧೆ ನೀಡುವ ಕೀಟಗಳಿಗೆ ಬದಲಿ ಆಹಾರದ ಬೆಳೆ ನೀಡಿದಾಗ ಸಮಸ್ಯೆ ಇರುವುದಿಲ್ಲ. ಇಂಥ ಸರಳ ಅಂಶವನ್ನು ಅರ್ಥಮಾಡಿಕೊಳ್ಳದೇ ರಾಸಾಯನಿಕ ಕೀಟನಾಶಕ ಬಳಸಿದಾಗ ಆಗುವ ಅನಾಹುತ ಅಪಾರ. ಇದರಿಂದ ಬೆಳೆಗಳಿಗೆ ಉಪಕಾರಿಯಾದ ಕೀಟಗಳೂ ಸಾವನ್ನಪ್ಪುತ್ತವೆ. ಫಸಲು ಮತ್ತು ಅಂತರ್ಜಲ ಕಲುಷಿತವಾಗುತ್ತದೆ. ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳೂ ಇಲ್ಲವಾಗುತ್ತವೆ. ಇದರಿಂದ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತದೆ. ಇಂಥ ತೊಂದರೆಗಳನ್ನು ಅತ್ಯಂತ ಸರಳ ಕ್ರಮ ಅನುಸರಿಸುವುದರಿಂದ ನಿವಾರಿಸಿಕೊಳ್ಳಬಹುದು. ಚೆಂಡು ಹೂವು...
ರಾಷ್ಟ್ರೀಯ ಕೃಷಿ ಯಂತ್ರೋಪಕರಣ ಕ್ಷೇತ್ರದಲ್ಲಿ ರತ್ಬಗಿರಿ ಇಂಪೆಕ್ಸ್‌ ಪ್ರೈವೇಟ್‌ ಲಿಮಿಟೆಡ್‌ ಪ್ರಮುಖ ಹೆಸರು. ಇದರ ಸಂಸ್ಥಾಪಕರು. ಚೇರ್ಮನ್‌ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಎಸ್.ಎ. ವಾಸುದೇವಮೂರ್ತಿ. ಕೃಷಿಕ್ಷೇತ್ರದ ಆಳವಾದ ಜ್ಞಾನ ಹೊಂದಿರುವವರು. ಈ ಕಾರಣದಿಂದ ಇವರ ಸಂಸ್ಥೆಯಿಂದ ಭಾರತೀಯ ಕೃಷಿ-ತೋಟಗಾರಿಕೆಗೆ ಅಗತ್ಯವಾದ ಯಂತ್ರೋಪಕರಣಗಳು ಸಣ್ಣ ಪ್ರಮಾಣದ ರೈತರಿಗೂ ಕೈಗೆಟುಕುವ ಬೆಲೆಯಲ್ಲಿ ದೊರೆಯುತ್ತಿದೆ. ಇವರೊಂದಿಗೆ "ಅಗ್ರಿಕಲ್ಚರ್‌ ಇಂಡಿಯಾ" ಪ್ರತಿನಿಧಿ ನಡೆಸಿದ ಮಾತುಕತೆ ನಿಮ್ಮ ಮುಂದಿದೆ. ಅಗ್ರಿಕಲ್ಚರ್‌ ಇಂಡಿಯಾ: ನೀವು ಕೃಷಿ ಯಂತ್ರೋಪಕರಣ ಉದ್ಯಮಕ್ಕೆ ಬಂದಿದ್ದು ಹೇಗೆ ? ನಿಮ್ಮ ಉದ್ಯಮ ಪಯಣದ ಬಗ್ಗೆ ತಿಳಿಸಿಕೊಡಿ ಎಸ್.ಎ. ವಾಸುದೇವಮೂರ್ತಿ: ಮೂಲತಃ...

Recent Posts