“ನೋಡಿ ಸರ್, ಸರ್ಕಾರ ಇತ್ತಿತ್ತಲಾಗೆ ಆಗೊಮ್ಮೆ ಈಗೊಮ್ಮೆ ಟೀಚರ್ಸ್ ಪೋಸ್ಟ್ ಕಾಲ್ಫಾರ್ ಮಾಡ್ತಿದೆ. ಪ್ರತಿ ಬಾರಿಯೂ ಹೊಸ ಹೊಸ ರೂಲ್ಸ್ ಬರ್ತಿದೆ. ಜೊತೆಗೆ ಹೊಸದಾಗಿ ಪದವಿ ಪಡೆದವರ ಸಿಕ್ಕಾಪಟ್ಟೆ ಪೈಪೋಟಿ ಬೇರೆ. ಆದುದರಿಂದ ಪ್ರವೈಟ್ ಸ್ಕೂಲ್ನಲ್ಲಿ ಗೆಸ್ಟ್ ಟೀಚರ್ ಆಗಿ ಹೋದೆ. ಅಲ್ಲಿಯ ಅಲ್ಪ ಸಂಬಳ ಜೀವನಕ್ಕೆ ಸಾಲಲಿಲ್ಲ. ಈ ಕಾರಣಕ್ಕೆ ಟೀಚಿಂಗ್ ಕೆಲಸಕ್ಕೆ ಗುಡ್ ಬೈ ಹೇಳಿ ನಾಟಿ ಕೋಳಿ ಸಾಕಲಿಕ್ಕೆ ಶುರು ಮಾಡಿದೆ” ಎಂದರು ಪ್ರಸನ್ನ
“ಈಗ ಕೈ ತುಂಬಾ ಕಾಸಿನ ಜೊತೆಗೆ ಬದುಕಿನಲ್ಲಿ ನೆಮ್ಮದಿ ಮತ್ತು ಸಂತೃಪ್ತಿ ಸಿಗುತ್ತಿದೆ” ಎನ್ನುತ್ತಾ...
ಭಾರತ ಸರ್ಕಾರದ 2002 ರಲ್ಲಿ ಭಾರತೀಯ ವೈದ್ಯಕೀಯ ಪರಿಷತ್ತಿನ ಮೂಲಕ 6-4-2002 ಕಾನೂನು, ಇದಕ್ಕೆ 2016 ರ ತಿದ್ದುಪಡಿ ಮತ್ತು ಭಾರತೀಯ ವೈದ್ಯಕೀಯ ಪರಿಷತ್ತಿನ 2017 ರ ಸುತ್ತೋಲೆಯ ಪ್ರಕಾರ “ ಪ್ರತಿಯೊಬ್ಬ ವೈದ್ಯರೂ ಎಷ್ಟರ ಮಟ್ಟಿಗೆ ಸಾಧ್ಯವೋ ಅಷ್ಟರ ಮಟ್ಟಿಗೆ ಸ್ಪಷ್ಟವಾಗಿ ಔಷಧಗಳನ್ನು ಜನರಿಕ್ ಹೆಸರಿನಲ್ಲಿಯೇ ಮತ್ತು ದೊಡ್ಡಕ್ಷರದಲ್ಲಿ ಬರೆದುಕೊಡಬೇಕು. ಅದು ತರ್ಕಬದ್ಧವಾಗಿದ್ದು ಉಪಯೋಗವಾಗಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು ಮತ್ತು ಎಲ್ಲಾ ವೈದ್ಯರೂ ಸಹ ಜನರಿಕ್ ಔಷಧಿಗಳನ್ನೇ ಬರೆದುಕೊಡಬೇಕು” ಎಂಬ ನಿಯಮವೇ ಜಾರಿಯಲ್ಲಿದೆ.
ಸರಳವಾಗಿ ಹೇಳಬೇಕೆಂದರೆ “ಆಧುನಿಕ ಪದ್ಧತಿಯ ಎಲ್ಲಾ ನೋಂದಾಯಿತ ವೈದ್ಯರು...
Technique & Machinery
ಭಾರಿಮಳೆಯಿಂದ ಅಮೂಲ್ಯ ಮಣ್ಣು, ಬೆಳೆಗಳನ್ನು ರಕ್ಷಿಸಿಕೊಳ್ಳುವ ಮಾರ್ಗಗಳು
Agriculture India - 0
ಇತ್ತೀಚಿನ ವರ್ಷಗಳಲ್ಲಿ ಮಳೆಗಾಲದ ಅವಧಿಯಲ್ಲಿ ಭಾರಿಮಳೆಗಳು ಸಂಭವಿಸುತ್ತಿವೆ. ಒಂದು ವಾರದ ಅವಧಿಗೆ ಹಂಚಿಕೆಯಾಗಬೇಕಾದ ಮಳೆ ಪ್ರಮಾಣ ಒಂದೆರಡು ಗಂಟೆ ಅಥವಾ ಒಂದೇ ದಿನದಲ್ಲಿ ಆಗುತ್ತಿದೆ. ಇದಲ್ಲದೇ ಬಂಗಾಳಕೊಲ್ಲಿ ಮತ್ತು ಅರಬ್ಬೀ ಸಮುದ್ರದಲ್ಲಿ ಉಂಟಾಗುವ ಅನೇಕ ಚಂಡಮಾರುತಗಳ ಪರಿಣಾಮಗಳು ಕರ್ನಾಟಕದ ರೈತ ಸಮುದಾಯ ಮತ್ತು ಜನರ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತಿದೆ.
ಇವೆಲ್ಲದರಿಂದ ಅಮೂಲ್ಯ ಮಣ್ಣು ಕೊಚ್ಚಿ ಹೋಗದಂತೆ ಜೊತೆಗೆ ಬೆಳೆಹಾನಿ ಆಗದಂತೆ ತಡೆಗಟ್ಟುವುದು ಪ್ರಮುಖ ಸವಾಲಾಗಿದೆ. ಭಾರಿಮಳೆಯ ಹೊಡೆತವನ್ನು ತಡೆದುಕೊಳ್ಳಬಲ್ಲ ಬೆಳೆಗಳ ದೇಸೀ ತಳಿಗಳಿವೆ. ಇದಲ್ಲದೇ ಸಂಶೋಧಕರು ಅಭಿವೃದ್ಧಿಪಡಿಸಿದ ಹಲವು ಹೊಸ ಪ್ರಭೇದಗಳಿವೆ. ಆದರೆ ಇಂಥವುಗಳಲ್ಲಿ...
ನಿಮ್ಮ ಜೀವನಶೈಲಿ ಮೇಲೆ ಪರಿಣಾಮ
ಮನೆಗೊಂದು ನಾಯಿಮರಿ ತರಬೇಕೆಂದು ನಿರ್ಧರಿಸುವ ಮುನ್ನ ನೀವು ಗಮನದಲ್ಲಿರಿಸಬೇಕಾದ ಮುಖ್ಯವಾದ ಸಂಗತಿಯೇನೆಂದರೆ ನಿಮ್ಮ ಈ ನಿರ್ಧಾರ ಅತ್ಯಂತ ಪ್ರಮುಖ. ಇದು ನಿಮ್ಮ ಮುಂದಿನ 10-12 ವರ್ಷಗಳ ಜೀವನ ಶೈಲಿಯ ಮೇಲೆ ಪರಿಣಾಮ ಬೀರುತ್ತದೆ, ಎಂದು. ಏಕೆಂದರೆ ನಾಯಿಮರಿಯನ್ನು ಮನೆಗೆ ಕರೆ ತರುವುದು ಒಂದು ಗೃಹೋಪಯೋಗಿ ವಸ್ತುವನ್ನು ತಂದ೦ತಲ್ಲ. ಆ ನಾಯಿ ಮರಿಯೂ ಒಂದು ಜೀವಿ. ಅದಕ್ಕೂ ತನ್ನದೇ ಆದ ಬೇಕು-ಬೇಡಗಳು ಇರುತ್ತವೆ. ನಿಮ್ಮಿಂದ ಅವೆಲ್ಲವನ್ನೂ ಒದಗಿಸುವ ಜವಾಬ್ದಾರಿ ಹೊರಲು ಸಾಧ್ಯವೇ ಎಂದು ಯೋಚಿಸಿ. ಅದರ ಲಾಲನೆ-ಪಾಲನೆಯನ್ನು ನಿಭಾಯಿಸುವವರು ಯಾರು...
ಕೃಷಿ ಸಮಸ್ಯೆಗಳಿಗೆ ಡ್ರೋನ್ ತಂತ್ರಜ್ಞಾನ ಹೇಗೆ ಪರಿಹಾರವಾಗಬಹುದು ? ಈ ಪ್ರಶ್ನೆ ಈ ಲೇಖನ ಓದುವ ಕೆಲವರಲ್ಲಿ ಮೂಡಿರಬಹುದು. ಇಂದು ಭಾರತೀಯ ಕೃಷಿ ರಂಗವನ್ನು ಹಲವು ಸಮಸ್ಯೆಗಳು ಕಾಡುತ್ತಿವೆ. ಕೀಟ ಬಾಧೆ-ರೋಗಬಾಧೆ- ಇಳುವರಿ ಕೊರತೆ - ಸಕಾಲದಲ್ಲಿ ಕೃಷಿ ಕಾರ್ಮಿಕರ ಅಲಭ್ಯತೆ ಇತ್ಯಾದಿ ಸಮಸ್ಯೆಗಳಿವೆ. ಇವುಗಳಿಗೆ ಸರ್ಕಾರ - ಸಂಘಸಂಸ್ಥೆಗಳು - ಸಂಬಂಧಿಸಿದ ಇಲಾಖೆಗಳು ಪರಿಹಾರಗಳನ್ನು ಹುಡುಕುತ್ತಿವೆ. ಈ ದಿಶೆಯಲ್ಲಿ ಸದ್ಯ ನೆರವಿಗೆ ಬಂದ ತಂತ್ರಜ್ಞಾನವೆಂದರೆ ಡ್ರೋನ್
ಡ್ರೋನ್ ಎಲ್ಲರಿಗೂ ಚಿರಪರಿಚಿತ. ಪುಟ್ಟ ಹೆಲಿಕ್ಯಾಪ್ಟರ್ ಗಳಂತ ಇವುಗಳನ್ನು ಬಳಸಿ ಹಲವಾರು ಉಪಯುಕ್ತ ಕೆಲಸಗಳನ್ನು ಮಾಡಬಹುದು....
ಲಾಭದಾಯಕ ಉದ್ದಿಮೆ
ಜೇನು ಕೃಷಿ ಎಲ್ಲಾ ಪ್ರದೇಶಗಳ ರೈತರು ಉಪಕಸುಬಾಗಿ ಅಥವಾ ಮುಖ್ಯ ಕಸುಬಾಗಿ ಕಡಿಮೆ ಬಂಡವಾಳದಿAದ ನಿರ್ವಹಿಸಬಹುದಾದ ಒಂದು ಲಾಭದಾಯಕ ಉದ್ಧಿಮೆಯಾಗಿದೆ. ಜೇನು ಕೃಷಿಗೆಂದೇ ಪ್ರತ್ಯೇಕ ಜಮೀನು, ನೀರು ವಿದ್ಯುತ್‌ಶಕ್ತಿಯ ಅವಶ್ಯಕತೆ ಇರುವುದಿಲ್ಲ.
ಮಕರಂದ
ಈ ಉದ್ಧಿಮೆಯು ಕೃಷಿ , ತೋಟಗಾರಿಕೆ, ಕೃಷಿ ಅರಣ್ಯ , ಕೃಷಿ ಪಶುಪಾಲನೆ ಮುಂತಾದ ಯಾವುದೇ ಸಮ್ಮಿಶ್ರ ಕೃಷಿ ಪದ್ಧತಿಗಳ ಸಂಪನ್ಮೂಲಗಳಿಗೆ ಸ್ಪರ್ಧೆಯೊಡ್ಡದೇ ನಿಸರ್ಗದಲ್ಲಿ ವ್ಯರ್ಥವಾಗಬಹುದಾದ ಸಂಪನ್ಮೂಲಗಳಾದ ಪರಾಗ ಮತ್ತು ಮಕರಂದವನ್ನು ಬಳಸಿಕೊಂಡು ಕೃಷಿಕರಿಗೆ ಲಾಭವನ್ನು ತಂದುಕೊಡುತ್ತದೆ. ಸುಲಭ ತಾಂತ್ರಿಕತೆಯಿರುವ ಇದನ್ನು ಆಸಕ್ತಿ ಇರುವ ಯಾರು ಬೇಕಾದರೂ ಮಾಡಬಹುದು.
ಔಷಧಗುಣ
ಜೇನು ಕುಟುಂಬದ...
ಯಕೃತ್ತಿನ ಬಲವರ್ಧಕ
ನೆಲ್ಲಿಯು ಭಾರತದ ಒಂದು ಪ್ರಮುಖವಾದ ಔಷಧ ಹಾಗು ಹಣ್ಣಿನ ಬೆಳೆಯಾಗಿದೆ. ಇದನ್ನು ‘ಆಮ್ಲ’ ಅಥವಾ ‘ಇಂಡಿಯನ್ ಗೂಸ್ ಬರ‍್ರಿ’ ಎಂದು ಕರೆಯಲಾಗುತ್ತದೆ. ಇದು ಯುಪೊರಿಯೇಸಿ ಕುಟುಂಬಕ್ಕೆ ಸೇರಿರುತ್ತದೆ. ನೆಲ್ಲಿ ಕಾಯಿಯ ಅತಿ ಹೆಚ್ಚಿನ ಸಿ-ಜೀವಸತ್ವ (ಪ್ರತಿ 100 ಗ್ರಾಂ ಕಾಯಿಯಲ್ಲಿ 700 ಮಿ.ಗ್ರಾಂ) ಹೊಂದಿರುವುದರಿಂದ ಯಕೃತ್ತಿನ ಬಲವರ್ಧಕವಾಗಿ ಬಳಸಲಾಗುತ್ತದೆ.
ನೆಲ್ಲಿ ಔಷಧಗಳು
ನೆಲ್ಲಿಯನ್ನೂಳಗೊಂಡ ಔಷಧಗಳೆಂದರೆ ಚ್ಯವನ್‌ಪ್ರಾಶ್, ತ್ರಿಫಲ ಚೂರ್ಣ, ಬ್ರಹ್ಮ ರಸಾಯನ ಮತ್ತು ಮಧುಮೇಹ ಚೂರ್ಣ, ನೆಲ್ಲಿಯು ವಿರೇಚಕ, ಮೂತ್ರವರ್ಧಕ ಗುಣಗಳುಳ್ಳ ಅಪರೂಪದ ಬೆಳೆ. ಹಣ್ಣಿನ ತಿರುಳಿನಲ್ಲಿರುವ ಪಿಲ್ವೆöನ್ ಸಸ್ಯಾಸಾರವನ್ನು ನರಗಳ ದೌರ್ಬಲ್ಯಗಳಲ್ಲಿ ಬಳಸಲಾಗುತ್ತದೆ....
ಶೀರ್ಷಿಕೆ ಓದಿ ಅಚ್ಚರಿಯಾಯಿತೇ ? ಹವಾಮಾನ ಮುನ್ಸೂಚನೆ ತಿಳಿಯಲು ಹವಾಮಾನ ಬದಲಾವಣೆ ಅಡ್ಡಿಯಾಗುವುದು ಹೇಗೆ ಎನಿಸಿತೇ ? ಈ ಮಾತನ್ನು ಆಡಿರುವವರು ಸ್ವತಃ ಭಾರತೀಯ ಹವಾಮಾನ ಇಲಾಖೆಯ ರಾಷ್ಟ್ರೀಯ ಮಟ್ಟದ ಮುಖ್ಯಸ್ಥರು ಎಂದರೆ ಮತ್ತಷ್ಟು ಅಚ್ಚರಿಯಾಗುತ್ತದೆ ಅಲ್ಲವೇ ? ಅವರು ಹೇಳಿದ ಮಾತು ಜಾಗತಿಕ ಹವಾಮಾನದಲ್ಲಿ ಉಂಟಾಗುತ್ತಿರುವ ಭಾರಿ ಬದಲಾವಣೆಯನ್ನು ಸಂಕೇತಿಸುತ್ತದೆ.
ಹವಾಮಾನ ಬದಲಾವಣೆಯು ತೀವ್ರವಾದ ಘಟನೆಗಳನ್ನು ನಿಖರವಾಗಿ ಊಹಿಸಲು ಮುನ್ಸೂಚಕ ಏಜೆನ್ಸಿಗಳ ಸಾಮರ್ಥ್ಯಕ್ಕೆ ಅಡ್ಡಿಯುಂಟು ಮಾಡಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ್ ಮಹಾಪಾತ್ರ ಹೇಳಿದ್ದಾರೆ.
ಈ ಅಡ್ಡಿಗಳನ್ನು ನಿವಾರಿಸುವ ನಿಟ್ಟಿನಲ್ಲಿ ಭಾರತೀಯ...
ಕೃಷಿಯ ಇತಿಹಾಸದಲ್ಲಿ ಆಗಿರುವ ಅನುಭವಗಳು ಪಾಠವಾಗಬೇಕು. ಬಂಗಾಳ ಕ್ಷಾಮ, ಐರನ್ ದೇಶದ ಕ್ಷಾಮ, ಬ್ರೇಜೀಲ್ ದೇಶದಲ್ಲಿ ನಿಂಬೆ ಗಿಡಕ್ಕೆ ತಾಗಿದ ಕ್ಯಾಕಂರ್, ತೆಂಗಿನ ಬೆಳೆಗೆ ಅಂಟಿದ ನುಶಿಪೀಡೆಗಳಿಂದ ಕಲಿಯಬೇಕಾದ ಪಾಠ ಅಪಾರ.
ಜೀವಸಾರವಿರುವುದು ಚರದಲ್ಲಿ, ಸ್ಥಿರದಲ್ಲಲ್ಲ;
ನಿರಂತರತೆಯಲ್ಲಿ, ಜಡದಲ್ಲಲ್ಲ
ನೀತಿಕತೆ - ಆರ್ಥಿಕತೆ
ಆಧುನಿಕ ಕೃಷಿ ವಿಜ್ಞಾನ ಹಾಗು ಅರ್ಥಶಾಸ್ತ ಈ ಮೇಲಿನ ಸಾಲುಗಳ ಗಾಂಭೀರ್ಯತೆಯನ್ನು ಅರ್ಥೈಸಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ನಮ್ಮ ಪಾರಂಪರಿಕ ಕೃಷಿಯು ‘ನೀತಿಕತೆ’ ಹಾಗು ‘ಆರ್ಥಿಕತೆ’ ತತ್ವದ ಅಡಿಯಲ್ಲಿ ಲೀನವಾಗಿತ್ತು. ಎರಡು ತತ್ವಗಳಿಗೂ ಸಮಾನ ಅವಕಾಶ ನೀಡಲಾಗಿತ್ತು. ತದನಂತರದ ಜಾಗತೀಕರಣ ವವ್ಯಸ್ಥೆಯಲ್ಲಿ ಆರ್ಥಿಕತೆಗೆ ಹೆಚ್ಚಿನ ಒತ್ತು...
ವಿವಿಧ ರೀತಿಯ ಕೃಷಿ ಹೆಸರೇಳಿಕೊಂಡು ಕೃಷಿ ಕಾರ್ಯಕ್ರಮಗಳನ್ನು ಮಾಡುವುದು ಇತ್ತೀಚಿಗೆ ಒಂದು ಫ್ಯಾಷನ್ ಆಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಕೃಷಿ ಮಾಡಿ ಎಂದು ಉಪದೇಶ ನೀಡುವ ಬಹುತೇಕರು ಬೇರೆ ಕಡೆ ಜೀತಕ್ಕಿರುತ್ತಾರೆ ಅಥವಾ ಅವರು ಅಥವಾ ಅವರ ಮಕ್ಕಳು ಕೃಷಿ ಮಾಡಲು ಹಳ್ಳಿಗೆ ಹೋಗುವುದಿಲ್ಲ, ಇರುವ ಸ್ವಂತ ಭೂಮಿಯನ್ನು ಬೇರೆಯವರಿಗೆ ಗುತ್ತಿಗೆ ನೀಡಿ ಕೃಷಿ ಜೀವನ, ನೆಮ್ಮದಿ ಮತ್ತು ಆದಾಯದ ಬಗ್ಗೆ ಪಾಠ ಮಾಡುತ್ತಿರುತ್ತಾರೆ ಅಥವಾ ಪತ್ರಿಕೆಗಳಿಗೆ ಲೇಖನ ಬರೆಯುತ್ತಿರುತ್ತಾರೆ!
ಯಾರು ಕೃಷಿಯನ್ನು ಅನುಭವಿಸದೇ,ಕೃಷಿ ಆದಾಯದಲ್ಲಿ ಬದುಕುತ್ತಿಲ್ಲವೋ ಅವರುಗಳು ಕೃಷಿ ಬಗ್ಗೆ ಆಡುವ ಮಾತು ಅವರ...