Home Blog Page 122
Originally, rats and bandicoots are suspicious animals.  They quickly detect the furious poisons smell and abandoned.  So, the chemical poisons are not so successful in killing rats.  Instead, bandicoots can be effectively controlled by using fertilizer plant. gliricidia is known for all farmers.  It is called as fertilizer plant. In fact, Greek people used this plant to control rats-bandicoots.  In Greek,...
ಗೇರು ಕೃಷಿಯು  ಬರೀ ಬರಡು ಭೂಮಿಯನ್ನು ಹಸಿರಾಗಿಸಲು ಉಪಯೋಗಿಸುವ ವೃಕ್ಷಗಳು ಮಾತ್ರವಲ್ಲ;ಕೃಷಿಕನ ಆರ್ಥಿಕ ಭದ್ರತೆಗೆ ಬುನಾಧಿಯಾಗುವಂತಹ  ವರಮಾನದ ಕೊಡುಗೆಯೂ ಹೌದು. ಅಲ್ಲದೇ ಹಲವಾರು ಪ್ರಾಣಿ ಪಕ್ಷಿಗಳಿಗೆ,  ಆಹಾರ ಒದಗಿಸುವ ಈ ಹಣ್ಣಿನ ಮರ. ಬಂಜರು ಭೂಮಿಗೆ  ವರದಾನ. ಪೋಷಕಾಂಶಗಳು: ಗೇರು ಗಿಡಗಳನ್ನು ನಾಟಿ ಮಾಡುವ ಮೊದಲು ಮಣ್ಣಿಗೆ ಸಾಕಷ್ಟು ಸಾವಯವ ಗೊಬ್ಬರವನ್ನು ಸೇರಿಸಿರಬೇಕು. ಗಿಡಗಳು ಬೆಳೆದು ನಾಲ್ಕು ವರ್ಷವಾದಾಗ  ಪ್ರತಿ ಮರಕ್ಕೆ 10 ರಿಂದ 15 kg ಹಟ್ಟಿಗೊಬ್ಬರವನ್ನು ಒದಗಿಸಬೇಕು . ಇದನ್ನು  ಮರದ ಬುಡದಿಂದ 2 ರಿಂದ 3 ಅಡಿ ಅಂತರದಲ್ಲಿ ವೃತ್ತಾಕಾರವಾಗಿ...
ಹೌದು, ಕೇಳಿದರೆ ಆಶ್ಚರ್ಯ, ನಂಬವುದು ಕಷ್ಟ. ಆದರೂ, ಸತ್ಯ. ಸಾಧ್ಯವೆಂದು ತೋರಿಸಿದ್ದು ಶಂಕರೇಗೌಡ್ರು. ಮೈಸೂರು ತಾಲ್ಲೂಕಿನ ದೇವಗಳ್ಳಿಯವರು. ದಶಕದಿಂದ ಸಾವಯವದ ನಂಟು. ಆರೆಕರೆಯಲ್ಲಿ ಅರವತ್ತಕ್ಕೂ ಹೆಚ್ಚು ಬೆಳೆ. ಏಳು ಗುಂಟೆ, ಆರೆಕರೆ, ಏನಿದು? ಇರಿ, ನಾನು ಹೇಳ ಹೊರಟಿರುವುದು, ಇವರು ಏಳು ಗುಂಟೆಯಲ್ಲಿ ಬೆಳೆವ ಅರಿಶಿಣದ ಬಗೆಗೆ ಮಾತ್ರ. ಅರಿಶಿಣವೇ ಏಕೆ: ಗೌಡರು ಬೆಳೆವ ಬೆಳೆಗಳಲ್ಲಿ ಅರಿಶಿಣವೂ ಒಂದು. ಸದ್ಯ ಇವರು ಬೆಳೆಯುತ್ತಿರುವ ತಳಿ 'ಈರೋಡ್ ಲೋಕಲ್'. ಮೊನ್ನೆ ತಾಯೂರಿನಲ್ಲಿ ಅರಿಶಿಣ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಗೌಡರು ಸಹ ಕೃಷಿಕರೊಟ್ಟಿಗೆ ತಮ್ಮ ಲಕ್ಷ ಗಳಿಕೆಯ ಬಗೆಗೆ...
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ ಅಕ್ಲೂಜ್ ಗ್ರಾಮದ ಯುವಕೃಷಿಕ ಶಂಕರ್ ಪಾಟೀಲ್ ಮೊಗದಲ್ಲಿ ಮಂದಹಾಸ ಮಿನುಗುತ್ತಿತ್ತು. ಎರಡುವರ್ಷದ ಹಿಂದೆ ಇದೇ ಸಮಯದಲ್ಲಿ ಇದೇಖುಷಿ ಅವರಲ್ಲಿ ಕಾಣುತ್ತಿರಲಿಲ್ಲ. "ಏನು ಭಾರಿ ಖುಷಿಯಲ್ಲಿದ್ದೀರಾ" ಎಂದಾಗ ಮುಗುಳ್ನಗೆಯೊಡನೆ ಮಾತು ಆರಂಭಿಸಿದರು. "ಕಳೆದ ಹತ್ತು ವರ್ಷಗಳಿಂದ ಬಾಳೆ ಬೆಳೆಯುತ್ತಿದ್ದೇವೆ. ಪ್ರತಿವರ್ಷ ಏನಾದರೊಂದು ತೊಂದರೆ. ಅಷ್ಟು ಉತ್ತಮವಾದ ಇಳುವರಿ ಸಿಗುತ್ತಿರಲಿಲ್ಲ. ಕೀಟಬಾಧೆ, ರೋಗಬಾಧೆ ಹೀಗೆ ಏನಾದರೊಂದು ಸಮಸ್ಯೆ ಇದ್ದೇಇರುತ್ತಿತ್ತು. ಆದರೆ ಈ ಬಾರಿಯ ಬಾಳೆ ಇವೆಲ್ಲದರಿಂದ ಮುಕ್ತವಾಗಿದೆ. ಮುಖ್ಯವಾಗಿ ಗಣನೀಯ ಪ್ರಮಾಣದಲ್ಲಿ ಖರ್ಚು ಕಡಿಮೆಯಾಗಿದೆ" ಎಂದರು. ಮಾತನಾಡುತ್ತಲೇ ಬಾಳೆತೋಟದಲ್ಲಿ ಮೂರು ಸುತ್ತು ಬಂದಾಗಿತ್ತು. ನಾಲ್ಕು...
ನೆಮ್ಮದಿಗೆ ಕಂಟಕ ಬಂದಿದ್ದು ಮನುಷ್ಯರಿಂದಲ್ಲ. ಮಂಗಗಳಿಂದ. ಇವುಗಳಿಂದ ತೋಟಗಾರಿಕೆ ಬೆಳೆಗಳನ್ನು ರಕ್ಷಿಸಿಕೊಳ್ಳು ಇವರು ಮಾಡದ ಉಪಾಯಗಳೇ ಇರಲಿಲ್ಲ. ಕೆಲವು ಸಮಯ ಕೆಲಸ ಮಾಡುತ್ತಿದ್ದ ಅವುಗಳು ನಂತರ ನಿಷ್ಪ್ರಯೋಜಕವಾಗುತ್ತಿದ್ದವು. ಆಗ ಮಂಗಗಳನ್ನು ಹತೋಟಿ ಮಾಡಲು ಲೇಸರ್ ಗನ್ ಪರಿಣಾಮಕಾರಿ ಎಂದು ತಿಳಿಯಿತು.
ಇಲಿ ಮತ್ತು ಹೆಗ್ಗಣಗಳು ಮೂಲತಃ ಅನುಮಾನದ ಪ್ರಾಣಿಗಳು. ಉಗ್ರ ವಾಸನೆಯ ವಿಷಗಳನ್ನು ಬೇಗ ಪತ್ತೆಹಚ್ಚಿ ದೂರ ಉಳಿಯುತ್ತವೆ. ಆದ್ದರಿಂದಲೇ ಇಲಿಗಳನ್ನು ಕೊಲ್ಲಲ್ಲು ಉಪಯೋಗಿಸುವ ರಾಸಾಯನಿಕ ವಿಷಗಳು ಅಷ್ಟೊಂದು ಯಶಸ್ವಿಯಾಗುವುದಿಲ್ಲ. ಇದರ ಬದಲಿಗೆ ಗೊಬ್ಬರಗಿಡ ಬಳಸಿ ಇಲಿ – ಹೆಗ್ಗಣಗಳನ್ನು ಸಮರ್ಥವಾಗಿ ನಿಯಂತ್ರಿಸಬಹುದು. ಕೃಷಿಕರೆಲ್ಲರಿಗೂ ಗ್ಲಿರಿಸೀಡಿಯಾ ಸೊಪ್ಪು ಪರಿಚತ. ಇದನ್ನು ಗೊಬ್ಬರದಗಿಡ ಎಂದು ಕರೆಯುತ್ತಾರೆ. ವಾಸ್ತವವಾಗಿ ಈ ಸಸ್ಯವನ್ನು ಗ್ರೀಕ್ ದೇಶದ ಜನರು ಇಲಿ – ಹೆಗ್ಗಣಗಳನ್ನು ನಿಯಂತ್ರಿಸಲು ಬಳಸುತ್ತಿದ್ದರು. ಗ್ರೀಕ್ ಭಾಷೆಯಲ್ಲಿ ಗ್ಲಿರಿ ಎಂದರೆ ಇಲಿ ಎಂದರ್ಥ. ಇಂಥ ಗುಣ ಹೊಂದಿರುವುದರಿಂದಲೇ ಗೊಬ್ಬರದ ಗಿಡವನ್ನು...
'ಹಿತಮಿತ ನೀರು, ಪೋಷಕಾಂಶ ಮತ್ತು ಕೀಟ ನಿರ್ವಹಣೆಗೆ ಜೈವಿಕ ವಿಧಾನ ಅಳವಡಿಸಿಕೊಂಡರೆ ಅತ್ಯುತ್ತಮವಾಗಿ ಮಾವು ಬೆಳೆಯಬಹುದು. ಈ ಮೂರು ತತ್ವಗಳನ್ನು ಅಳವಡಿಸಿಕೊಂಡು ಸಾವಯವ ಪದ್ಧತಿಯಲ್ಲಿ ಮಾವು ಬೆಳೆಯುತ್ತಿದ್ದೇನೆ. ಫಸಲು ಬರುತ್ತಿದ್ದಂತೆಯೇ ಬೇಡಿಕೆ ಹೆಚ್ಚುತ್ತದೆ' ಎಂದು ಆತ್ಮವಿಶ್ವಾಸದಿಂದ ಗಂಗಾಧರಯ್ಯ ಸ್ವಾಮಿ ಹೇಳುತ್ತಾರೆ. ಇವರು ತುಮಕೂರು ಜಿಲ್ಲೆ, ಕುಣಿಗಲ್ ತಾಲೂಕಿನ ಗಿಡದಪಾಳ್ಯ ಗ್ರಾಮದ ತೋಟಗಾರಿಕೆ ಬೆಳೆಗಾರರು. ಹದಿನೈದು ಎಕರೆ ಜಮೀನಿನಲ್ಲಿ ಮಾವು ತೋಟ ಇದೆ. ರಸಪೂರಿ, ಬಾದಾಮಿ, ಮಲ್ಲಿಕಾ, ದಶೇರಿ ಇತ್ಯಾದಿ ತಳಿ ಮರಗಳಿವೆ. ಗಂಗಾಧರಯ್ಯ ಸ್ವಾಮಿ ಅವರ ತಂದೆ ಸಸಿಯಿಂದ ಸಸಿಗೆ 30 ಅಡಿ ಅಂತರ...
ಟಿಶ್ಯೂಕಲ್ಚರ್ ಅಭಿವೃದ್ಧಿ ಅತ್ಯಂತ ಸೂಕ್ಷ್ಮತೆಯ ಕೆಲಸ. ಈ ಸರಣಿಯ ಯಾವುದೇ ಹಂತದಲ್ಲಿ ಲೋಪ ಉಂಟಾದರೂ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂಥ ಸ್ಥಿತಿ. ನುರಿತ ತಂತ್ರಜ್ಞರು, ಕಾರ್ಮಿಕರ ಅವಶ್ಯಕತೆ. ಅಪಾರ ಸಂಖ್ಯೆಯಲ್ಲಿ ಅಭಿವೃದ್ಧಿಪಡಿಸಿದ ಸಸಿಗಳಿಗೆ ಶೀಘ್ರವಾಗಿ ಮಾರುಕಟ್ಟೆ ಒದಗಿಸುವಿಕೆ ಇವೆಲ್ಲದಕ್ಕೂ ಅವಶ್ಯಕವಾಗಿರುವ ಭಾರಿ ಬಂಡವಾಳ, ಇವೆಲ್ಲದರ ಜೊತೆಗೆ ಬಹುದೊಡ್ಡದೊಡ್ಡ ಕಂಪನಿಗಳ ಜೊತೆಯಲ್ಲಿ ನಿರಂತರ ಸ್ಪರ್ಧೆ. ಇವೆಲ್ಲವನ್ನೂ ಸಮನ್ವಯಗೊಳಿಸಿಕೊಂಡು ಅಚ್ಚರಿಪಡುವಂಥ ಸಾಧನೆ ಮಾಡುವುದು ಸಾಧಾರಣ ಸಂಗತಿಯಲ್ಲ. ಇಳಕಲ್ ಸೀರೆ ಜಗತ್ಪ್ರಸಿದ್ಧ. ಬಾಗಲಕೋಟೆ ಜಿಲ್ಲೆಯ ಈ ಊರಿನ ಯುವಕ ಶೈಲೇಶ್ ಅವರು ಕಂಡ ಕನಸುಗಳು ಅಪಾರ....
ಗೇರು ಅಥವಾ ಗೋಡಂಬಿ ಕೃಷಿ. ಪ್ರಯೋಜನಗಳು ಅನೇಕ. ಕರಾವಳಿಗರಿಗೆ ಗೇರು ಕೃಷಿಯು ಒಂದು ವರದಾನ. ಹಲವಾರು ಮಹಿಳೆಯರಿಗೆ ಜೀವನಾಧಾರ; ಬದುಕಿಗೆ ದಾರಿದೀಪ. ಬಹುತೇಕ ಹೆಣ್ಣುಮಕ್ಕಳು ಗೇರು ಸಂಸ್ಕರಣೆಯನ್ನು ಗುಡಿ ಕೈಗಾರಿಕೆಯಾಗಿ ಮಾಡಿಕೊಂಡು ಜೀವನ ನಿರ್ವಹಿಸುತ್ತಿರುವ  ಹಲವಾರು ಉದಾಹರಣೆಗಳನ್ನು  ನೋಡಬಹುದು. ಗೇರು ಸಂಸ್ಕರಣೆಯ ದೊಡ್ಡ ದೊಡ್ಡ ಉದ್ಯಮಗಳಿಂದು ಮೌಲ್ಯವರ್ಧಿತ  ಉತ್ಪನ್ನಗಳಲ್ಲಿ ತೊಡಗಿಸಿಕೊಂಡಿವೆ. ಬಹುಶಃ  ಈ ನಡುವೆ ಗೇರು ಸಂಸ್ಕರಣೆಯನ್ನು ವ್ಯಾಪಾರೀಕರಣಗೊಳಿಸಿದ ಕಾರಣದಿಂದ ಅವರಿಗೆ ಸರಕಾರದಿಂದ ಸಿಗುವ ಹೆಚ್ಚಿನ ಸವಲತ್ತುಗಳಿಗೆ ಕಡಿವಾಣ ಬಿದ್ದಿದೆ. ಆದರೆ ಕೃಷಿ ವಲಯಕ್ಕೆ ಸಿಗುವ ಎಲ್ಲಾ ಸವಲತ್ತುಗಳು ಸಿಗುತ್ತಿವೆ.  ಗೇರು ಬೀಜಕ್ಕೆ, ಅದರ...
ಕಳೆದೆ ಮೂರು ದಶಕಗಳಿಂದ ಬೆಳೆಗಳಿಗೆ ಸಸ್ಯರೋಗ-ಕೀಟ ರೋಗ ಬಾಧೆ ಹೆಚ್ಚಾಗುತ್ತಿದೆ. ಇದಕ್ಕೆ  ಕಾರಣವಾದ ಸಂಗತಿಗಳು ಸಾಕಷ್ಟಿವೆ. ಇವುಗಳಲ್ಲಿ  ಬಹುತೇಕ ರೈತರು ಮಾಗಿ ಉಳುಮೆ ಮಾಡುವುದನ್ನು ಮರೆತಿರುವುದು ಪ್ರಮುಖ ಕಾರಣ. ಇದನ್ನು ಮಾಡುವುದರಿಂದ ಅನೇಕ ರೀತಿಯ ಪ್ರಯೋಜನಗಳಿವೆ. ಆದ್ದರಿಂದಲೇ ಹಿರಿಯರು ' ಬಡವನ ಮಾಗಿ ಉಳುಮೆ ಸಾಹುಕಾರನ ಗೊಬ್ಬರಕ್ಕೆ ಸಮಾನ' ಎಂದೇ ಕರೆಯುತ್ತಿದ್ದರು. ಬಿರುಸಾದ ಬೇಸಿಗೆ ಮಳೆ ಬರುವುದಕ್ಕೆ ಮುಂಚೆ ಜಮೀನನ್ನು ಚೆನ್ನಾಗಿ ಉಳುಮೆ ಮಾಡುವುದು ಸೂಕ್ತ. ಮಾರ್ಚ್ 15 ರಿಂದ ಏಪ್ರಿಲ್ 15 ಇದಕ್ಕೆ ಸೂಕ್ತ ಕಾಲಘಟ್ಟ ಎನ್ನಬಹುದು. ಏಪ್ರಿಲ್ 15ರ ಅಸುಪಾಸಿನಲ್ಲಿ ಸಾಮಾನ್ಯವಾಗಿ...

Recent Posts