ಇದು ಸೀಮೆ ಬದನೆಯ ಜಾತಿಯಂತೆ ತೋರುತ್ತಿದೆ. ಆದರೆ ಅಷ್ಟು ಧಾರೆಗಳಿಲ್ಲ. ಬಲುಬೇಗ ಬೇಯುತ್ತದೆ. ಅಷ್ಟು ಮೆತ್ತಗೆ. ಹಿಟ್ಟು ಹಿಟ್ಟಾಗಿ ರುಚಿಯಾಗಿದೆ. ಇದರಿಂದ ಪಲ್ಯ, ಸಾಂಬಾರು, ಮಜ್ಜಿಗೆಹುಳಿ, ಹಲ್ವ ತಯಾರಿಸಬಹುದು. ಒಂದು ಬಳ್ಳಿ ಸುಮಾರು ವರ್ಷ ಬಾಳಿಕೆ ಬರುತ್ತದೆ. ನಮ್ಮಲ್ಲಿ ನೆಟ್ಟು 5 ವರ್ಷಗಳಾಯಿತು. ಹೂ ಬಿಟ್ಟು ಕಾಯಿ ಕೊಡುತ್ತಿದೆ. ತೊಂಡೆಬಳ್ಳಿಯಂತೆ ಬಳ್ಳಿ ನೆಟ್ಟರೂ ಬರುತ್ತದೆ.
ನೇಕ ವಿಜ್ಞಾನಿಗಳು ಮತ್ತು ರೈತ ವಿಜ್ಞಾನಿ ಕೃಷಿಕರು 'ಸಾವಯವ-ಸಹಜ' ಕೃಷಿವಿಧಾನಗಳ ಬಗ್ಗೆ ಗೊಂದಲಗೊಂಡಿದ್ದಾರೆ. ಯಾವುದು ಸಾವಯವ ಯಾವುದು ಸಹಜ ಎನ್ನುವುದರ ಬಗ್ಗೆ ಸಂಶಯಗೊಂಡಿದ್ದಾರೆ. ಇದರ ಬಗ್ಗೆ ನಾವೊಂದಷ್ಟು ಸ್ವಷ್ಟವಾಗಿ ತಿಳಿಯುವುದು ಸೂಕ್ತವೆನ್ನಿಸುತ್ತದೆ.
Chandra Bhushan A decade later, the carbon market has collapsed and the developed countries’ funding commitments for REDD+ have also been much lower than expected.Land degradation and deforestation are responsible for more than 20% of the global greenhouse gas (GHG) emissions. The one thing that worries climate scientists the most is the positive feedback loop. This is a process...
ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬಾಧಿಸುವ ರೋಗಗಳಿಗೆ ಕಾರಣವಾದ ರೋಗಾಣುಗಳು ಬೀಜ, ಮಣ್ಣು, ಕೀಟ, ನೀರು ಮತ್ತು ಗಾಳಿಯ ಮೂಲಕ ಪಸರಿಸುತ್ತವೆ. ಈ ರೋಗಗಳನ್ನು ತಡೆಗಟ್ಟಲು ವಿವಿಧ ರೀತಿಯ ಬೇಸಾಯ ಪದ್ದತಿಗಳು, ರಾಸಾಯನಿಕ, ಜೈವಿಕ ಹಾಗೂ ಇತರೆ ರೋಗನಾಶಕ ವಸ್ತುಗಳನ್ನು ಬಳಸುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ. ಆದರೆ ಅತಿಯಾದ ಮತ್ತು ಅಸಮರ್ಪಕವಾದ ರಾಸಾಯನಿಕ ರೋಗನಾಶಕಗಳ ಬಳಕೆಯಿಂದಾಗಿ ದುಷ್ಪರಿಣಾಮಗಳು ಉಂಟಾಗುತ್ತಿವೆ. ಆದ್ದರಿಂದ ಪರಿಸರ ಹಾಗೂ ಆರೋಗ್ಯ ಪ್ರಜ್ಞೆಯಿಂದ ದೃಷ್ಟಿಯಿಂದ ಸಸ್ಯಗಳಿಗೆ ತಗಲುವ ರೋಗಗಳ ನಿರ್ವಹಣೆಯಲ್ಲಿ ಸಾವಯವ ಪದ್ಧತಿ ಹೆಚ್ಚು ಪರಿಣಾಮಕಾರಿ.
ಇದರಲ್ಲಿ ಜೈವಿಕ ವಿಧಾನಗಳನ್ನು ಬಹಳ...
ಕಡಿಮೆ ಅವಧಿಯಲ್ಲಿ ಪಪ್ಪಾಯ ಹಣ್ಣುಗಳು ಲಭ್ಯ ಆಗುವುದರಿಂದ ಮತ್ತು ವರ್ಷದ ಎಲ್ಲ ಸಮಯದಲ್ಲೂ ಬೆಳೆಯಬಹುದಾಗಿರುವುದರಿಂದಲೂ ಇದು ಲಾಭದಾಯಕ ಎನಿಸಿದೆ. ಕೆಲವಾರು ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಪಪ್ಪಾಯ ಹಣ್ಣಿಗೆ ಅತ್ಯಧಿಕ ಬೇಡಿಕೆ ಇರುತ್ತದೆ. ಆ ಸಮಯಕ್ಕೆ ಫಸಲು ದೊರೆಯುವ ಹಾಗೆ ಯೋಜನೆ ಮಾಡಬಹುದು
ಕಾಯಿಪಲ್ಲೆಗಳನ್ನೇ ಪ್ರಮುಖವಾಗಿ ಬೆಳೆಯುವ ಪದ್ದತಿ ಕೃಷಿ ಕ್ಷೇತ್ರದಲ್ಲಿ ಇತ್ತೀಚೆಗೆ ಪ್ರಚಲಿತದಲ್ಲಿದೆ. ಮೊದಲೆಲ್ಲಾ ಬಹುತೇಕ ರೈತರು ತಮ್ಮ ಬೆಳೆಗಳ ನಡುವೆ ಅದರಲ್ಲಿಯೂ ಮುಖ್ಯವಾಗಿ ಅರಕಲು ಆಗಿದ್ದ ಜಾಗದಲ್ಲಿ ಸೊಪ್ಪು, ತರಕಾರಿ ಬೀಜಗಳನ್ನು ನೆಟ್ಟು ಫಲ ಉಣ್ಣುವುದನ್ನು ಕಂಡಿದ್ದೇವೆ. ಇನ್ನೂ ಕೆಲವರು ಮನೆ ಸಲುವಾಗಿ ಮಡಿ ಮಾಡಿ ಕಾಯಿ-ಪಲ್ಲೆಗಳನ್ನು ಬೆಳೆಯುವುದು ಸಹಜ. ಆದರೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಿಂದ ಕೂಗಳೆತೆಯ ದೂರದಲ್ಲಿರುವ ಕೆರೆಕಾವಲರಹಟ್ಟಿಯ ಕೃಷಿಕರಿಗೆ ಮಾತ್ರ ಇದು ಕೃಷಿಯಲ್ಲಿ ಲಾಭಂಶವನ್ನು ನಿರ್ಧರಿಸುವ ಬೆಳೆಯಾಗಿಬಿಟ್ಟಿದೆ.
ಈ ಪದ್ದತಿಯನ್ನು ಕಳೆದ ಮೂರು ದಶಕಗಳಿಂದ ಮಾಡುತ್ತಾ ಬಂದಿರುವುದು ವಿಶೇಷವಾಗಿದೆ. ಇಲ್ಲಿನ ರೈತರು...
ದಾಳಿಂಬೆಯನ್ನು ಉಷ್ಣವಲಯ ಹಾಗೂ ಉಪೋಷ್ಣವಲಯದ ಭಾಗಗಳಲ್ಲಿ ಬೆಳೆಯಲಾಗುತ್ತದೆ. ಈ ಬೆಳೆಯು ಪೋಷಾಕಾಂಶ ಹಾಗೂ ಔಷಧಿಯ ಗುಣಗಳಿಂದ ಹೆಚ್ಚು ಜನಪ್ರಿಯ. ಇದರಲ್ಲಿ ಅಧಿಕ ಪ್ರಮಾಣದ ಶರ್ಕರಪಿಷ್ಠಗಳು, ಸಸಾರಜನಕ, ಖನಿಜ ಪದಾರ್ಥಗಳು, ನಾರು, ಸಿ-ಜೀವಾಸತ್ವ ಮತ್ತು ಆಕ್ಸಾಲಿಕ ಆಮ್ಲಗಳಿವೆ ಈ ಬೆಳೆಯನ್ನು ಮುಖ್ಯವಾಗಿ ಮಹಾರಾಷ್ಟ್ರ, ಗುಜುರಾತ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಇದು ಔಷಧಿಯ ಗುಣಗಳನ್ನು ಹೊಂದಿದ್ದು ಗಿಡದ ಎಲೆ, ಬೇರು, ಕಾಂಡ ಹಣ್ಣಿನ ತೊಗಟೆ ಮತ್ತು ಹಣ್ಣಿನ ರಸವನ್ನು ಔಷಧಿ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
ದಾಳಿಂಬೆ ಬೆಳೆಯು ಹಲವಾರು ರೋಗಗಳಿಂದ ಬಳಲುತ್ತಿದೆ. ಅದರಲ್ಲಿಯೂ ಅತೀ...
ದೇಸಿ ಸವತೆಯ ಗುಣವಿಶೇಷತೆ: ಸವತೆ ದೇಸಿ ತಳಿಯಾಗಿದೆ.ಇಲ್ಲಿಯ ಸಮೀಪದ ಮುಚ್ಚಂಡಿ ಉರಿನಿಂದ ಬೀಜನ್ನು ತರಲಾಗಿದೆ.ಎಕರೆಗೆ 200 ಗ್ರಾಂ ಬೀಜ ಬೇಕಾಗುತ್ತದೆ, ಕಪ್ಪುಭೂಮಿಗೆ ಇದು ಯೋಗ್ಯ ತಳಿಯಾಗಿದೆ.ಒಂದು ತಿಂಗಳ 10 ದಿನದಿಂದ ಇದು ಕೊಯ್ಲಿಗೆ ಬರುವುದು. ವಾರಕ್ಕೆ 3 ಬಾರಿ ಕೊಯ್ಲು ಮಾಡುತ್ತಾರೆ.ಇನ್ನು ಎಲೆಚುಕ್ಕಿ ರೋಗದ ನಿಯಂತ್ರಣವನ್ನು ಆಕಳ ಗೋಮೂತ್ರ ಸಿಂಪಡಣೆ ಮಾಡಿ ಹತೋಟಿ ಮಾಡಲಾಗುತ್ತದೆ.
ಹೇಳಿ ಕೇಳಿ ಇದು ತಂತ್ರಜ್ಷಾನದ ಯುಗ. ಮಕ್ಕಳ ಕೈಯಲ್ಲಿ ಮೊಬೈಲ್, ಟ್ಯಾಬ್, ವೀಡಿಯೋ ಗೇಮ್ ಸಾಧನಗಳು ಮಾಮೂಲಿ. ಕಂಪ್ಯೂಟರ್ ಮುಂದೆಯೇ ಊಟ, ನಿದ್ದೆ ಇತ್ಯಾದಿ. ಇಂದಿನ ವಿದ್ಯೆಯೂ ತಾಂತ್ರಿಕತೆಯನ್ನೇ ಒಳಗೊಂಡಿದ್ದು ಡಿಜಿಟಲ್ ಇಂಡಿಯಾದ ಸಾಕಾರದಲ್ಲಿ ಪರಿಸರವನ್ನು ಮರೆತು ಯಂತ್ರಮಾನವರಾಗುತ್ತಿದ್ದೇವೆ.
ಮಕ್ಕಳಲ್ಲಿ ಪರಿಸರದ ಕಾಳಜಿ ಬೆಳೆಸುವ ಸಲುವಾಗಿ 'ಹಸಿರು ಆರ್ಗ್ಯಾನಿಕ್' ಸಂಸ್ಥೆಯು ಮಕ್ಕಳಿಗಾಗಿ ನೂತನ 'ಹಸಿರು ಗ್ರೋಕಿಟ್' ಅನ್ನು ಪರಿಚಯಿಸುತ್ತಿದೆ. ಈಗಿನ ಆಧುನಿಕ ಯುಗದಲ್ಲಿ ಮಕ್ಕಳಿಗೂ ಸಮಯವಿಲ್ಲದ ಸಂದರ್ಭದಲ್ಲಿ ಕೇವಲ 5 ನಿಮಿಷದಲ್ಲಿ ಕೈತೋಟದ ಕಲ್ಪನೆ ತರುವ ಇದು ಮಕ್ಕಳಿಗೆ ತನ್ನ ಮೊದಲ ಮೊಗ್ಗನ್ನು ತನ್ನ...
"ಕರ್ನಾಟಕ ಸರ್ಕಾರ 2007ರಲ್ಲಿ "ಕರ್ನಾಟಕ ದ್ರಾಕ್ಷಿ ಸಂಸ್ಕರಣೆ ಮತ್ತು ದ್ರಾಕ್ಷಾರಸ ನೀತಿ" ಜಾರಿಗೆ ತಂದಿದೆ. ಇದು ರಾಜ್ಯದ ವೈನ್ ಉದ್ಯಮದ ಮೇಲೆ ಸಕಾರಾತ್ಮಕ ಪರಿಣಾಮವನ್ನೇ ಬೀರಿದೆ. ಪಾಲಿಸಿ ತರುವುದಕ್ಕೂ ಮುನ್ನ ರಾಜ್ಯದಲ್ಲಿ ಇದ್ದ ವೈನರಿಗಳ ಸಂಖ್ಯೆ ಕೇವಲ 2 ಮಾತ್ರ. ಆನಂತರ ಇವುಗಳ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಈ ಮೊದಲು ವೈನ್ ಟಾವರಿನ್ಸ್ ಇರಲಿಲ್ಲ. ಈಗ ಇವುಗಳ ಸಂಖ್ಯೆ 190ಕ್ಕೆ ಏರಿದೆ. ಬೋಟಿಕ್ಸ್ ಕೂಡ ಇರಲಿಲ್ಲ. ಈಗ ಇವುಗಳ ಸಂಖ್ಯೆ 39 ಕ್ಕೆ ಏರಿಕೆಯಾಗಿದೆ. ಮೊದಲು ದ್ರಾಕ್ಷಿ ಬೆಳೆಯುವ ಪ್ರದೇಶದ ಒಟ್ಟು ವಿಸ್ತೀರ್ಣ...