Home Blog Page 10
ಹವಾಮಾನ ಮುನ್ಸೂಚನೆ: ದಿನಾಂಕ: ಶುಕ್ರವಾರ, 09ನೇ ಆಗಸ್ಟ್ 2024. ವಿತರಣೆಯ ಸಮಯ ಭಾರತೀಯ ಕಾಲಮಾನ 14:00 ಗಂಟೆ. ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ: ಸಿನೋಪ್ಟಿಕ್ ಹವಾಮಾನಶಾಸ್ತ್ರದ ವೈಶಿಷ್ಟ್ಯ: ದಕ್ಷಿಣ ಗುಜರಾತ್‌ನಿಂದ ಉತ್ತರ ಕೇರಳದ ಕರಾವಳಿಯ ಸಮುದ್ರ ಮಟ್ಟದಲ್ಲಿ ದುರ್ಬಲವಾದ ಆಫ್-ಶೋರ್ ತೃಪ್ಹ್  ಕಡಿಮೆ ಗುರುತಿಸಲ್ಪಟ್ಟಿದೆ. ಶನಿವಾರ  (10.08.2024):  ಕರಾವಳಿ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.  ಉತ್ತರ ಒಳನಾಡು ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಭಾನುವಾರ  (11.08.2024) : ಕರಾವಳಿ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ...
ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ  ಪಂಜಾಬ್ ರಾಜ್ಯದ ಸಾಧಕ ರೈತರು ಕಾರ್ಬನ್ ಕ್ರೆಡಿಟ್ ಪರಿಹಾರವಾಗಿ ರೂ 1.75 ಕೋಟಿ ಮೌಲ್ಯದ ಚೆಕ್ ಪಡೆದಿದ್ದಾರೆ.  ಹೋಶಿಯಾರ್‌ಪುರ, ರೋಪರ್, ಮೊಹಾಲಿ, ಪಠಾಣ್‌ಕೋಟ್ ಮತ್ತು ನವನ್‌ಶಹರ್‌ನ 3,686 ರೈತರು  ಅಲ್ಲಿನ ರಾಜ್ಯ ಸರ್ಕಾರದ ಕೋಟಿ ಪೈಲಟ್ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ ಇತ್ತೀಚೆಗೆ ಹೋಶಿಯಾರ್‌ಪುರದಲ್ಲಿ 73ನೇ ವನ ಮಹೋತ್ಸವದ ಸಂದರ್ಭದಲ್ಲಿ ಹೋಶಿಯಾರ್‌ಪುರದ 818 ರೈತರ ಖಾತೆಗಳಿಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಒಟ್ಟು  ರೂ 1.75 ಕೋಟಿ ರೂಪಾಯಿ ಮೊತ್ತದ ಚೆಕ್ ಗಳನ್ನು ವಿತರಿಸಿದರು. ಪರಿಸರವನ್ನು ಸಂರಕ್ಷಿಸಲು ಮತ್ತು ಜಾಗತಿಕ ತಾಪಮಾನವನ್ನು...
ಭಾರತೀಯ ವಿಜ್ಞಾನಿಗಳು ರಸಗೊಬ್ಬರ ಬಳಕೆಯನ್ನುಗಣನೀಯವಾಗಿ  ಕಡಿಮೆ ಮಾಡುವ, ಪರಿಸರ ಮತ್ತು ಆರ್ಥಿಕ ಲಾಭಗಳನ್ನು ಪಡೆಯಲು ಅವಕಾಶ ಇರುವ  ಭತ್ತದ ತಳಿಗಳನ್ನು ಗುರುತಿಸಿದ್ದಾರೆ. ಈ ತಳಿಗಳು ಸಾರಜನಕವನ್ನು ಸಮರ್ಥವಾಗಿ ಬಳಸುವುದನ್ನು ಅಧ್ಯಯನದಿಂದ ಕಂಡು ಕೊಂಡಿದ್ದಾರೆ. ಈ ಅಧ್ಯಯನದ ವಿವರವು “ಜರ್ನಲ್ ಆಫ್ ಪ್ಲಾಂಟ್ ಗ್ರೋತ್ ರೆಗ್ಯುಲೇಶನ್‌”ನಲ್ಲಿ ಪ್ರಕಟವಾಗಿದೆ. ತಳಿಗಳಾದ ಖಿರಾ ಮತ್ತು ಸಿಆರ್ ಧನ್ 301 ದೀರ್ಘಾವಧಿಯ ಬೆಳೆಗಳಾಗಿದ್ದರೆ, ಧಲಾ ಹೀರಾ ತಳಿಯು ಕಡಿಮೆ ಅವಧಿಯದ್ದಾಗಿದೆ.  ಇದು ರೈತರಿಗೆ ಗಮನಾರ್ಹ ಪ್ರಯೋಜನವನ್ನು ನೀಡುತ್ತದೆ. ಧಾನ್ಯಗಳಲ್ಲಿನ ಸಾರಜನಕದ ಸಮರ್ಥ ಬಳಕೆಯು ಬಹು ಪ್ರಾಮುಖ್ಯತೆಯನ್ನು ಪಡೆಯುತ್ತದೆ. ವಿಶೇಷವಾಗಿ ಭತ್ತದ ಬೆಳೆಯಲ್ಲಿ...
06.08.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಉಡುಪಿ ಜಿಲ್ಲೆಯಲ್ಲಿ ಮಧ್ಯಾಹ್ನ ನಂತರ ಉತ್ತಮ ಮಳೆಯ ಮುನ್ಸೂಚೆನೆ ಇದೆ. ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಮಧ್ಯಾಹ್ನ ನಂತರ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಮಂಗಳೂರು ಮತ್ತು ಕಾಸರಗೋಡು ಸುತ್ತಮುತ್ತ ಸ್ವಲ್ಪ ಜಾಸ್ತಿ ಇರಬಹುದು. ಗಾಳಿ ಹಾಗೂ ಅಲ್ಲಲ್ಲಿ ಗುಡುಗು ಸಾಧ್ಯತೆ ಇದೆ. (ದಕ್ಷಿಣ ಒಳನಾಡು ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆಯಾದ್ದರಿಂದ ಕರಾವಳಿ ಭಾಗಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುವ ಲಕ್ಷಣಗಳಿಲ್ಲ) ಕೊಡಗು ಒಂದೆರಡು ಕಡೆ ಸಾಮಾನ್ಯ ಮಳೆಯ ಮುನ್ಸೂಚನೆ ಇದ್ದು....
ಮುಂಗಾರು ಹಂಗಾಮು   ಸಕ್ರಿಯ ಹಂತವನ್ನು ಪ್ರವೇಶಿಸುತ್ತಿದೆ.  ಅತ್ಯಂತ ಭಾರೀ ಮಳೆಯು ಪ್ರಸ್ತುತ ಭಾರತದ ಹಲವಾರು ಪ್ರದೇಶಗಳ ಮೇಲೆ ಪರಿಣಾಮ ಬೀರುತ್ತಿದೆ. ಪಶ್ಚಿಮ ಮಧ್ಯಪ್ರದೇಶ, ಪೂರ್ವ ರಾಜಸ್ಥಾನ, ಗುಜರಾತ್, ಕೊಂಕಣ ಪ್ರದೇಶ, ಗೋವಾ ಮತ್ತು ಮಹಾರಾಷ್ಟ್ರದಲ್ಲಿ ತೀವ್ರ ಎಚ್ಚರಿಕೆ ವಹಿಸಲಾಗಿದೆ.  ಈ ಪ್ರದೇಶಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಡಾ.ನರೇಶ್ ಕುಮಾರ್ ಹೇಳಿದರು. ಅತೀ ಭಾರಿ ಮಳೆ ನಿರೀಕ್ಷೆ ನಡುವೆಯೂ  ದೆಹಲಿ-ಎನ್‌ಸಿಆರ್ ಪ್ರದೇಶವು ಮುಂದಿನ ಎರಡು ದಿನಗಳವರೆಗೆ ಶುಷ್ಕವಾಗಿರುವ ಸಾಧ್ಯತೆ ಇದೆ. ಉತ್ತರ ಮತ್ತು ಮಧ್ಯ ಭಾರತದಲ್ಲಿ ಭಾರೀ ಮಳೆ ಉತ್ತರ ಮತ್ತು...
ಭಾರತದ ಹಲವು  ರಾಜ್ಯಗಳಲ್ಲಿ ಮಳೆ ಪ್ರಮಾಣವು ಆಗಸ್ಟ್ 3 ರ 5.7% ಕ್ಕೆ ಹೆಚ್ಚಾಗಿದೆ. ಹದಿನೆಂಟು ರಾಜ್ಯಗಳಲ್ಲಿ ಇಂಥ ಅತೀವೃಷ್ಟಿ ಉಂಟಾಗಿದೆ. ಇನ್ನೂ ಕೆಲವು ರಾಜ್ಯಗಳಲ್ಲಿ ಮಳೆ ಕೊರತೆ ಉಂಟಾಗಿದೆ.  ಮುಂಗಾರು ಹಂಗಾಮಿನ  ಎರಡನೇ ಹಂತದಲ್ಲಿ (ಆಗಸ್ಟ್-ಸೆಪ್ಟೆಂಬರ್) ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್‌ನಲ್ಲಿ ಮುಂಗಾರು ಆರಂಭವಾದ ನಂತರ ಹಲವೆಡೆ  ಅತಿ ಹೆಚ್ಚು ಹೆಚ್ಚು ಮಳೆಯಾಗಿದೆ.   ಆಗಸ್ಟ್ 3 ರಂದು ಒಟ್ಟಾರೆಯಾಗಿ ರಾಷ್ಟ್ರದಲ್ಲಿ ಶೇಕಡ  74 ರಷ್ಟು ಅಧಿಕ ಮಳೆಯಾಗಿದೆ. ಮಳೆಯ ಸಂದರ್ಭದಲ್ಲಿ, ಒಂಬತ್ತು ರಾಜ್ಯಗಳು ಮತ್ತುಕೆಲವು...
ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ. ದಿನಾಂಕ: ಭಾನುವಾರ, 04ನೇ ಆಗಸ್ಟ್ 2024. ವಿತರಣೆಯ ಸಮಯ ಭಾರತೀಯ ಕಾಲಮಾನ 1200 ಗಂಟೆ ಕರ್ನಾಟಕಕ್ಕೆ ಮುನ್ಸೂಚನೆ  ದಿನ 1 (04.08.2024): ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರತ್ಯೇಕವಾದ ಭಾರೀ ಮಳೆ ಮತ್ತು ನಿರಂತರ ಗಾಳಿಯ ವೇಗ (30-40 kmph) ಸಂಭವಿಸುವ ಸಾಧ್ಯತೆಯಿದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು  ಉಳಿದ ಜಿಲ್ಲೆಗಳ ಮೇಲೆ ಕೆಲವು ಕಡೆಗಳಲ್ಲಿ ಲಘುವಾಗಿ ಮಧ್ಯಮ ಮಳೆ ಮತ್ತು ನಿರಂತರ ಗಾಳಿಯ ವೇಗ (30-40 kmph) ಸಂಭವಿಸುವ ಸಾಧ್ಯತೆಯಿದೆ. ದಿನ...
ಮನುಷ್ಯನಿಗೆ ಎಲ್ಲ ಭಾಗ್ಯಗಳಿಗಿಂತ “ಆರೋಗ್ಯ ಭಾಗ್ಯ”ವೇ  ಮೇಲು.  ಪ್ರತಿನಿತ್ಯ ಸೇವಿಸುವ ಆಹಾರಕ್ಕೂ ಆರೋಗ್ಯಕ್ಕೂ ನಿಕಟವಾದ ಸಂಬಂಧವಿದೆ. ಶೈವಾವಸ್ಥೆಯಿಂದ ಜೀವಾಂತ್ಯದವರೆಗೂ ಉತ್ತಮ ಆರೋಗ್ಯ ಹೊಂದಬೇಕಾದರೆ ವಯಸ್ಸಿಗನುಗುಣವಾಗಿ ಪೌಷ್ಟಿಕ ಆಹಾರ/ಸಮತೋಲನ ಆಹಾರ ಬೇಕು. ಭಾರತೀಯರ ಆಹಾರ ಪದ್ಧತಿಯು ಏಕದಳ ಧಾನ್ಯ ಆಧಾರಿತವಾಗಿದೆ.  ನಾವು ಸೇವಿಸುವ ಬೆಳಗಿನ ಉಪಹಾರವಿರಲಿ, ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟವಿರಲಿ, ಇವರ ಊಟದ ತಟ್ಟೆಯಲ್ಲಿ ಏಕದಳ ಧಾನ್ಯದಿಂದ ತಯಾರಿಸಿದ ಪದಾರ್ಥಗಳಾದ ಅನ್ನ, ಚಪಾತಿ, ರೊಟ್ಟಿ ಮುಂತಾದವುಗಳೆ ಪ್ರಧಾನವಾಗಿರುತ್ತವೆ.  ಶೇಕಡ 60 ರಷ್ಟು ಪ್ರೋಟೀನ್‌ನ್ನು ಏಕದಳ ಧಾನ್ಯವೇ ಪೂರೈಸುತ್ತವೆ (ಓಓಒಃ ವರದಿ). ಆದರೆ, ಏಕದಳ ಧಾನ್ಯದಲ್ಲಿರುವ...
ಸೂರ್ಯಕಾಂತಿ ನಮ್ಮ ದೇಶದ ಹಾಗೂ ರಾಜ್ಯದ ಪ್ರಮುಖವಾದ ಎಣ್ಣೆಕಾಳು ಬೆಳೆ. ಇದನ್ನು ಕರ್ನಾಟಕ ರಾಜ್ಯದಲ್ಲಿ 1.62 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಸುಮಾರು 1.36 ಲಕ್ಷ ಟನ್ ಉತ್ಪಾದಿಸಲಾಗುತ್ತಿದೆ, ಹಾಗೂ ಇದರ ಉತ್ಪಾದಕತೆ ಪ್ರತಿ ಹೆಕ್ಟೇರಿಗೆ 850 ಕೆ.ಜಿ./ ಹೆಕ್ಟೇರ್‌ಯಷ್ಟಿದೆ. ಈ ಬೆಳೆಯನ್ನು ಭಾರತದಲ್ಲಿ ಸುಮಾರು 2.86 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಭಾರತದಲ್ಲ್ಲಿ ಸೂರ್ಯಕಾಂತಿ ಬೆಳೆಯ ಉತ್ಪಾದಕತೆ ಪ್ರತಿ ಹೆಕ್ಟೇರಿಗೆ ಸರಾಸರಿ 923 ಕೆ.ಜಿ./ ಇದ್ದು ಸೂರ್ಯಕಾಂತಿ ಬೆಳೆಯುವ ಇತರ ಪ್ರಗತಿ ಪರ ರಾಷ್ಟ್ರಗಳಿಗೆ ಹೋಲಿಸಿದರೆ ಬಹಳ ಕಡಿಮೆ. ದೇಶದ ಸೂರ್ಯಕಾಂತಿ ಬೆಳೆಯ...
ಕರ್ನಾಟಕಕ್ಕೆ ಮುನ್ಸೂಚನೆ ಮತ್ತು ಎಚ್ಚರಿಕೆ: ದಿನ 1 (03.08.2024): ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರೀಯಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಮತ್ತು ನಿರಂತರ ಗಾಳಿಯ ವೇಗವು (30-40 ಕಿಮೀ) ತಲುಪುವ ಸಾಧ್ಯತೆಯಿದೆ. ಶಿವಮೊಗ್ಗ ಜಿಲ್ಲೆಯ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀಯಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಮತ್ತು ನಿರಂತರ ಗಾಳಿಯ ವೇಗವು (30-40 ಕಿಮೀ) ತಲುಪುವ ಸಾಧ್ಯತೆಯಿದೆ. ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಮತ್ತು...

Recent Posts