ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಪಂಜಾಬ್ ರಾಜ್ಯದ ಸಾಧಕ ರೈತರು ಕಾರ್ಬನ್ ಕ್ರೆಡಿಟ್ ಪರಿಹಾರವಾಗಿ ರೂ 1.75 ಕೋಟಿ ಮೌಲ್ಯದ ಚೆಕ್ ಪಡೆದಿದ್ದಾರೆ. ಹೋಶಿಯಾರ್‌ಪುರ, ರೋಪರ್, ಮೊಹಾಲಿ, ಪಠಾಣ್‌ಕೋಟ್ ಮತ್ತು ನವನ್‌ಶಹರ್‌ನ 3,686 ರೈತರು ಅಲ್ಲಿನ ರಾಜ್ಯ ಸರ್ಕಾರದ ಕೋಟಿ ಪೈಲಟ್ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ
ಇತ್ತೀಚೆಗೆ ಹೋಶಿಯಾರ್‌ಪುರದಲ್ಲಿ 73ನೇ ವನ ಮಹೋತ್ಸವದ ಸಂದರ್ಭದಲ್ಲಿ ಹೋಶಿಯಾರ್‌ಪುರದ 818 ರೈತರ ಖಾತೆಗಳಿಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಒಟ್ಟು ರೂ 1.75 ಕೋಟಿ ರೂಪಾಯಿ ಮೊತ್ತದ ಚೆಕ್ ಗಳನ್ನು ವಿತರಿಸಿದರು.
ಪರಿಸರವನ್ನು ಸಂರಕ್ಷಿಸಲು ಮತ್ತು ಜಾಗತಿಕ ತಾಪಮಾನವನ್ನು ತಡೆಯಲು ಕಾರ್ಬನ್ ಕ್ರೆಡಿಟ್ ಯೋಜನೆಯನ್ನು ಪ್ರಾರಂಭಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಯನ್ನು ಪಂಜಾಬ್ ಪಡೆದಿದೆ ಎಂದು ಮುಖ್ಯಮಂತ್ರಿ ಮಾನ್ ಹೇಳಿದ್ದಾರೆ.
ಹೋಶಿಯಾರ್‌ಪುರದ ಪುರ್ ಹಿರಾನ್ ಗ್ರಾಮದ ರೈತ ಪರ್ಮಿಂದರ್ಜಿತ್ ಸಿಂಗ್ ಚೀಮಾ ಅವರು ಮಂಗಳವಾರ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಂದ 20,985 ರೂ. ಚೆಕ್ ಪಡೆದರು. ಪಂಜಾಬ್ ಸರ್ಕಾರವು ಅವರಿಗೆ ಕಾರ್ಬನ್ ಕ್ರೆಡಿಟ್ ಪರಿಹಾರವಾಗಿ ಪಾವತಿಸಲಿರುವ ಒಟ್ಟು ನಾಲ್ಕು ಇದು ಮೊದಲ ಕಂತು ಆಗಿದೆ.
ಸಲೇರನ್ ಗ್ರಾಮದ ರೈತ ನವಜೀಂದರ್ ಸಿಂಗ್ 94,772 ರೂ ಚೆಕ್ ಪಡೆದರು. ಚಕ್ ಸಾಧುವಿನ ರಾಮ್ ಪಾಲ್ ಮತ್ತು ಪುನಿತ್ ಕುಮಾರ್ ಕ್ರಮವಾಗಿ 49,417 ಮತ್ತು 47,386 ರೂ.ಗಳನ್ನು ಪಡೆದರೆ, ಡಾ.ವಿಕಾಸ್ ಸೂದ್ 6,702 ರೂ. ಚೆಕ್ ಅನ್ನು ಪಡೆದರು.
ಇದು, ಹೋಶಿಯಾರ್‌ಪುರ, ರೋಪರ್, ಮೊಹಾಲಿ, ಪಠಾಣ್‌ಕೋಟ್ ಮತ್ತು ನವನ್‌ಶಹರ್ ಸೇರಿದಂತೆ ಕಂಡಿ ಪ್ರದೇಶದಾದ್ಯಂತ 3,686 ರೈತರನ್ನು ಒಳಗೊಳ್ಳುವ ಪ್ರಾಯೋಗಿಕ ಯೋಜನೆಯ ಭಾಗವಾಗಿದೆ. ಈ ಯೋಜನೆಯು ಈ ನೋಂದಾಯಿತ ರೈತರಿಗೆ ನಾಲ್ಕು ಕಂತುಗಳಲ್ಲಿ ಒಟ್ಟು 45 ಕೋಟಿ ರೂಪಾಯಿ ಕಾರ್ಬನ್ ಕ್ರೆಡಿಟ್ ಪರಿಹಾರವನ್ನು ವಿತರಿಸುತ್ತದೆ.
ಪರಿಸರ ಸುಸ್ಥಿರತೆ ಮತ್ತು ರೈತರ ಕಲ್ಯಾಣದ ಕಡೆಗೆ ಮಹತ್ವದ ಹೆಜ್ಜೆಯಲ್ಲಿ, ಪಂಜಾಬ್‌ನ ಅರಣ್ಯ ಇಲಾಖೆ, ದಿ ಎನರ್ಜಿ ಅಂಡ್ ಸೋರ್ಸ್ ಇನ್‌ಸ್ಟಿಟ್ಯೂಟ್ (TERI) ಮತ್ತು ಅಂತರರಾಷ್ಟ್ರೀಯ ಕಂಪನಿಯ ಸಹಯೋಗದೊಂದಿಗೆ ಕಾರ್ಬನ್ ಕ್ರೆಡಿಟ್ ಪರಿಹಾರ ಕಾರ್ಯಕ್ರಮವನ್ನು ಪ್ರಾರಂಭವಾಗಿದೆ. ಈ ಯೋಜನೆ ಅಡಿಯಲ್ಲಿ, ರೈತರು ತಮ್ಮ ಕೃಷಿ ಭೂಮಿಯಲ್ಲಿ ಮರಗಳನ್ನು ನೆಡಲು ಮತ್ತು ಅವುಗಳ ನಿರ್ವಹಣೆಗೆ ಆರ್ಥಿಕ ಪರಿಹಾರವನ್ನು ಪಡೆಯುತ್ತಿದ್ದಾರೆ. CO2 ಕಡಿತಕ್ಕೆ ರೈತರು ನೀಡುವ ಗಣನೀಯ ಕೊಡುಗೆ ಗಮನಿಸಿ ನಗದು ರೂಪದ ಪುರಸ್ಕಾರ ನೀಡಲಾಗುತ್ತಿದೆ.
ಕಾರ್ಬನ್ ಕ್ರೆಡಿಟ್‌ಗೆ ಅರ್ಹರಾಗಲು ರೈತರು ಮರಗಳನ್ನು ನೆಡಬೇಕು ಮತ್ತು ಕನಿಷ್ಠ ಐದು ವರ್ಷಗಳವರೆಗೆ ಅವುಗಳನ್ನು ನಿರ್ವಹಿಸಬೇಕು. ಇದು ಕಾರ್ಯಕ್ರಮದ ಮುಖ್ಯ ಅಂಶವಾಗಿದೆ. . ಈ ಅವಧಿಯ ನಂತರ ರೈತರು ತಮ್ಮತಮ್ಮ ಕೃಷಿಭೂಮಿಯಲ್ಲಿರುವ ಮರಗಳನ್ನು ಮಾರಾಟ ಮಾಡಬಹುದು. ಇದರಿಂದಲೂ ಅವರಿಗೆ ಆದಾಯವನ್ನು ಬರುತ್ತದೆ.
ಈ ಮರಗಳನ್ನು ಕಾಗದ ತಯಾರಿಕೆ, ಪೀಠೋಪಕರಣ ತಯಾರಿಕೆ ಮತ್ತು ಪ್ಲೈವುಡ್ ಕಾರ್ಖಾನೆಗಳಿಗೆ ಮಾರಾಟ ಮಾಡಿದರೆ, ಪೀಠೋಪಕರಣಗಳು ಮತ್ತು ಕಾಗದದ ಉತ್ಪನ್ನಗಳು ಇಂಗಾಲವನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಮರದ ಸುಡುವಿಕೆಯಿಂದ ಉಂಟಾಗುವ ಹೆಚ್ಚುವರಿ ಮಾಲಿನ್ಯವನ್ನು ತಡೆಯಬಹುದು.
ಪರಮಿಂದರ್ಜಿತ್ ಸಿಂಗ್ ಚೀಮಾ, ಅವರು ತಮ್ಮ 17 ಎಕರೆ ಕೃಷಿಭೂಮಿಯಲ್ಲಿ ಸಾಂಪ್ರದಾಯಿಕ ಗೋಧಿ ಮತ್ತು ಭತ್ತದ ಕೃಷಿ ಮಾಡುವ ಬದಲು 5 ರಿಂದ 6 ವರ್ಷಗಳಲ್ಲಿ ಕಟಾವಿಗೆ ಬರುವ ತಳಿಗಳ ಮರಗಳನ್ನು ಬೆಳೆಯುತ್ತಿದ್ದಾರೆ. ಇವುಗಳಲ್ಲಿ ನೀಲಗಿರಿ ಮತ್ತು ಪೋಪ್ಲರ್ ಮರಗಳೂ ಸೇರಿವೆ. ಇವುಗಳನ್ನು ಕಟಾವು ಮಾಡಿದ ನಂತರ ಮತ್ತೆ ಹೊಸ ಗಿಡಗಳನ್ನು ನೆಡುವುದು ಅವರ ಜವಾಬ್ದಾರಿಯಾಗಿದೆ.
“ಈ ಕಾರ್ಯಕ್ರಮ, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ರೈತರಿಗೆ ಐದು ವರ್ಷಗಳ ನಂತರ ತಮ್ಮ ಮರಗಳನ್ನು ಮಾರಾಟ ಮಾಡುವ ಮೂಲಕ ಮತ್ತು ಕಾರ್ಬನ್ ಕ್ರೆಡಿಟ್ ಪಾವತಿಗಳನ್ನು ಸ್ವೀಕರಿಸುವ ಅವಕಾಶವನ್ನು ಒದಗಿಸುತ್ತದೆ.