ಕೃಷಿಕರ ಸೆಳೆದ ಕೃಷಿಮೇಳ

0

 ಈ ಬಾರಿ ಬೆಂಗಳೂರು ಕೃಷಿವಿದ್ಯಾಲಯ ಮೇಳವನ್ನು ಅತ್ಯಂತ ವ್ಯವಸ್ಥಿತವಾಗಿ ಯೋಜಿಸಿದ್ದು ಗಮನಾರ್ಹ. ಮಳಿಗೆಗಳ ವ್ಯವಸ್ಥಾಪನೆ, ಕೃಷಿಕರ ಗಮನ ಸೆಳೆಯುವಿಕೆ ಹಿಂದಿನ ವರ್ಷಗಳಿಗಿತಲೂ ಅಚ್ಚುಕಟ್ಟು. ನಾಲ್ಕು ದಿನದ ಅವಧಿಯಲ್ಲಿ ಒಟ್ಟು ನಾಲ್ಕು ಲಕ್ಷ ಜನ ಭಾಗವಹಿದ್ದಾರೆಂಬ ಅಂದಾಜು.

ಪ್ರಾತ್ಯಕ್ಷಿಕೆ ತಾಕುಗಳಸನಿಹದಲ್ಲಿಯೇ ಮಳಿಗೆಗಳಿದ್ದವು.ಇದರಿಂದ ರೈತರು ಆಸಕ್ತರು ಹೆಚ್ಚು ದೂರ  ನಡೆಯುವ ಪ್ರಮೇಯವಿರಲಿಲ್ಲ. ಮಳಿಗೆಗಳ ಮಧ್ಯದಲ್ಲಿಯೇ ಸಭಾಂಗಣವಿದ್ದರಿಂದ  ಪ್ರೇಕ್ಷಕರಕೊರತೆಯಿರಲಿಲ್ಲ. ಸಾವಯವ ಕೃಷಿ ಬಗ್ಗೆ ಆದ್ಯತೆ ನೀಡಲಾಗಿತ್ತು. ಸಾವಯವ  ಕೃಷಿಯಲ್ಲಿ  ಸಾಧನೆಮಾಡಿದ  ರೈತರಿಂದ ಉಪನ್ಯಾಸಗಳನ್ನು ಏರ್ಪಡಿಸಿದ್ದರಿಂದ ಹೆಚ್ಚು ಪ್ರಯೋಜನವಾಯಿತು.  ಇಂಥಉಪನ್ಯಾಗಳ  ಸಂದರ್ಭದಲ್ಲಿ ರೈತರು  ತಮ್ಮ  ಸಂದೇಹಗಳನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿಚರ್ಚೆ-ಸಂವಾದದಲ್ಲಿ  ತೊಡಗಿಸಿಕೊಂಡಿದ್ದು ಅವರ  ಆಸಕ್ತಿಯನ್ನು ವ್ಯಕ್ತಪಡಿಸುತ್ತಿತ್ತು.

ಹೊಸತಳಿ:

ಕೃಷಿಮೇಳದ ಸಂದರ್ಭದಲ್ಲಿ ಹೊಸತಳಿಗಳನ್ನು ಬಿಡುಗಡೆ ಮಾಡಲಾಯಿತು. ಕಡಿಮೆ ಅವಧಿಯಭತ್ತದ ತಳಿಕೆಎಂಪಿ-105, ಅಧಿಕ ಇಳುವರಿಯೊಂದಿಗೆ ಜಾನುವಾರುಗಳಿಗೂ ಅಧಿಕ ಮೇವು ಒದಗಿಸುವ ಮುಸುಕಿನ ಜೋಳದ ಸಂಕರಣ ತಳಿ – ಎನ್.ಎ.ಹೆಚ್ 1137(ಹೇಮ), ಹೆಚ್ಚು ಇಳುವರಿ ನೀಡುವ ಶೇಂಗಾ ತಳಿಕೆ.ಸಿ.ಜಿ, ಸೋಯಾ ಅವರೆ ತಳಿ ಎಂ.ಎ.ಯು.ಎಸ್(ಪೂಜಾ), ಅಲಸಂದೆ ತಳಿ ಪಿ.ಕೆ.ಬಿ-4 ಲೋಕಾರ್ಪಣೆಯಾದವು. ಇದೇ ಸಂದರ್ಭದಲ್ಲಿ ಸಮೃದ್ದ ಇಳುವರಿ ನೀಡುವ ಸೂರ್ಯಕಾಂತಿ ತಳಿಗಳಪ್ರದರ್ಶನವಿತ್ತು.

ಸಾವಯವ ಕೃಷಿ:

ಮೇಳದಲ್ಲಿ ಸಾವಯವ ಕೃಷಿ ವಿಭಾಗ ಭಾಗವಹಿಸಿದವರ ಗಮನ ಸೆಳೆಯಿತು. ರಾಜ್ಯದ ವಿವಿಧ ಭಾಗಗಳಲ್ಲಿಸಾವಯವ ಗ್ರಾಮ ಯೋಜನೆಯಲ್ಲಿ ತೊಡಗಿಸಿಕೊಂಡ ಸ್ವಯಂ ಸೇವಾ ಸಂಸ್ಥೆಗಳು ತಮ್ಮ ಸಾಧನೆ ತೋರಿಸುವಅಂಶಗಳನ್ನು ಮಳಿಗೆಗಳಲ್ಲಿಟ್ಟಿದ್ದರು. ಕೃಷಿಕರ ಸಾಧನೆ ವಿವರಿಸುವ ಪುಸ್ತಕಗಳು, ನಾಟಿ ತಳಿಯ ಬಿತ್ತನೆಬೀಜಗಳು, ರೈತ ಮಹಿಳೆಯರೇ ತಯಾರಿಸಿದ ಮೌಲ್ಯಧಾರಿತ ಕೃಷಿ ಉತ್ಪನ್ನಗಳು ಅಲ್ಲಿದ್ದವು.

ಜಾನುವಾರು ಪ್ರದರ್ಶನ:

ಇದಕ್ಕಾಗಿಯೂ ಪ್ರತ್ಯೇಕ ವಿಭಾಗವಿತ್ತು. ವಿದೇಶಿ ತಳಿ ಕುರಿಗಳು, ಎಮು ಪಕ್ಷಿಗಳು, ಮಿಶ್ರ ತಳಿಯ ಕೋಳಿಗಳು,ಜವಾರಿ ಎತ್ತುಗಳು ಗಮನ ಸೆಳೆದವು. ನಾಟಿ ಎತ್ತು-ಹಸುಗಳನ್ನು  ಬಹಳ  ಚೆನ್ನಾಗಿ  ಸಾಕಿದ  ಕೃಷಿಕರು  ಅವುಗಳನ್ನು ಸಾಕಿದ  ಮತ್ತು  ಸಾಕುವ  ರೀತಿಯನ್ನು  ಆಸಕ್ತರಿಗೆ  ವಿವರಿಸುತ್ತಿದ್ದರು.  ಹೆಚ್ಚು  ತೂಕವಿರುವ  ಕುರಿಗಳನ್ನು ನೋಡಿ ಇದುಯಾವ ತಳಿ ಎಂದು ವಿಚಾರಿಸುತ್ತಿದದ್ದು ಸಾಮಾನ್ಯವಾಗಿತ್ತು. ಎಮು ಪಕ್ಷಿಯ ಮೊಟ್ಟೆ ಗಾತ್ರ ನೋಡಿ ಮತ್ತು ಅದರಬೆಲೆ ಕೇಳಿ ಜನ ಆಶ್ಚರ್ಯಪಡುತ್ತಿದ್ದರು. ಒಂದು ಮೊಟ್ಟೆಗೆ ಒಂದು ಸಾವಿರ ರೂಪಾಯಿ ನೀಡುವುದಕ್ಕೆಆಗುತ್ತದೆಯೇ, ಈ ಮೊಟ್ಟೆಯನ್ನು ಯಾವುದಕ್ಕೆ ಬಳಸುತ್ತಾರೆ ಎಂಬ ಪ್ರಶ್ನೆಗಳು ಸಾಕಾಣಿಕೆದಾರರಿಗೆಸಾಮಾನ್ಯವಾಗಿತ್ತು. ಎಮು ಹಕ್ಕಿಯ ಬಗ್ಗೆ ಸಾಧ್ಯವಿರುವಷ್ಟು ಮಾಹಿತಿಯನ್ನು ಕೃಷಿಕರು-ಕೃಷಿಯೇತರ ಉದ್ಯೋಗದ ಮಂದಿ ಆಸಕ್ತಿಯಿಂದ ಕಲೆ ಹಾಕುತ್ತಿದ್ದರು.

 ಬಾರಿ ಕೃಷಿಮೇಳದಲ್ಲಿ 540 ಮಳಿಗೆಗಳಿದ್ದವುಮೇಳ ಪ್ರಾರಂಭವಾದ ಎರಡನೇ ದಿನ ಅನೇಕ ಉದ್ಯಮಿಗಳುಮಳಿಗೆಗಾಗಿ ಮತ್ತು ಈಗಾಗಲೇ ಮಳಿಗೆ ಹಾಕಿದವರು ಹೆಚ್ಚುವರಿ ಮಳಿಗೆಗಳಿಗಾಗಿ ಸಂಘಟಕರಿಗೆ ಒತ್ತಾಯಮಾಡುತ್ತಿದ್ದ ದೃಶ್ಯವೂ ಕಂಡುಬಂತುಇದಕ್ಕೆ ಕಾರಣ ಬಹುತೇಕ ಎಲ್ಲ ಮಳಿಗೆಗಳಲ್ಲಿಯೂ ನಿರೀಕ್ಷೆಗೂ ಮೀರಿಕೃಷಿಕರ ಪ್ರತಿಕ್ರಿಯೆ ಕಂಡು ಬಂದಿದ್ದೇ ಆಗಿತ್ತುಕೃಷಿಗೆ ಸಂಬಂಧಿಸಿದ ಇಲಾಖೆಗಳೆಲ್ಲವೂ ತಮ್ಮ ಮಳಿಗೆಗಳನ್ನುತೆರೆದಿದ್ದವುತಮ್ಮ ಇಲಾಖೆಯಿಂದ ಕೃಷಿಕರಿಗೆ ದೊರೆಯುವ ವಿವಿಧ ರೀತಿಯ ಸೌಲಭ್ಯಗಳ ನೀಡುವಿಕೆ  ಅವುಗಳನ್ನು ಪಡೆಯಲು ಅನುಸರಿಸಬೇಕಾದ ಕ್ರಮ ವಿವರಿಸುವ ಕರಪತ್ರಗಳನ್ನು ಹಂಚಿದ್ದು ಮಾಹಿತಿಪಡೆಯುವವರಿಗೆ ಅನುಕೂಲಕರವಾಗಿತ್ತು.

ಜೈವಿಕ ಇಂಧನ:

ಈಗಾಗಲೇ ಜೈವಿಕ ಇಂಧನಕ್ಕೆ ಇರುವ ಬೇಡಿಕೆ ಮತ್ತು ಮುಂದಿನ ದಿನಗಳಲ್ಲಿ ಜೈವಿಕ ಇಂಧನಕ್ಕೆಬರುವ ಅಪಾರ ಬೇಡಿಕೆಜೈವಿಕ ಇಂಧನ ಸಸ್ಯಗಳ ಕೃಷಿಪರಿಚಯಬೀಜಗಳ ಸಂಗ್ರಹಣೆತೈಲ ಉತ್ಪಾದಿಸುವರೀತಿ ಪರಿಚಯಿಸುವ ಪ್ರಾತ್ಯಕ್ಷಿಕೆ ನೀಡುವ ಮಳಿಗೆಯಿತ್ತುಕೃಷಿವಿಶ್ವವಿದ್ಯಾಲಯದವರೇ  ಮಳಿಗೆ ಜವಾಬ್ದಾರಿನಿರ್ವಹಿಸುತ್ತಿದ್ದರುಇದಲ್ಲದೇ ಬೆಂಗಳೂರು ಕೃಷಿ ವಿವಿ ವ್ಯಾಪ್ತಿಯ 17 ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಇರುವ ಕೃಷಿಸಂಶೋಧನಾ ಕೇಂದ್ರಗಳುಕೃಷಿ ವಿಜ್ಞಾನ ಕೇಂದ್ರಗಳವರು ತಮ್ಮ ಸಾಧನೆಗಳನ್ನು ವಿವರಿಸುವ ಮಳಿಗೆಗಳಿದ್ದವು.ಭತ್ತದಲ್ಲಿ ಅನೇಕ ರೀತಿಯ ನಾಟಿ ಭತ್ತದ ಪೈರುಗಳುಬಿತ್ತನೆ ಬೀಜಗಳ ಪ್ರದರ್ಶನವನ್ನು ಶಿವಮೊಗ್ಗದ ನವಿಲೆಕೃಷಿಕೇಂದ್ರದವರು ಏರ್ಪಡಿಸಿದ್ದರುಸಾವಯವ ಕೃಷಿವಿಭಾಗದಲ್ಲಿದ್ದ  ಮಳಿಗೆ ರೈತರ ಗಮನ ಸೆಳೆಯವಲ್ಲಿಯಶಸ್ವಿಯಾಯಿತುದೊಡ್ಡದೊಡ್ಡ ಕುಂಡಗಳಲ್ಲಿ ವಿವಿಧ ರೀತಿಯ ನಾಟಿ ಭತ್ತದ ತಳಿಗಳನ್ನು ಬೆಳೆಸಿ ಅದರ ತಳಿಯಾವುದು ಎಂದು ತಿಳಿಸುವ ಫಲಕಗಳನ್ನು ಹಾಕಲಾಗಿತ್ತುಆಕರ್ಷಕವಾದ ಸಣ್ಣ ಸಣ್ಣ ಕೆಂಪನೆಯ ಮಣ್ಣಿನತಟ್ಟೆಗಳಲ್ಲಿ ಬಗೆಬಗೆಯ ನಾಟಿ ಭತ್ತದ ಬೀಜಗಳನ್ನು ಇಟ್ಟು ಅವುಗಳ ಮುಂದೆ ಹೆಸರುಗಳ ಫಲಕಗಳನ್ನು ಇಟ್ಟಿದ್ದು ಪ್ರಶಂಸೆಗೆ ಪಾತ್ರವಾಯಿತು.

ರಾಗಿ:

ಬೆಂಗಳೂರು ಕೃಷಿ ವಿವಿವ್ಯಾಪ್ತಿಯಲ್ಲಿ ರಾಗಿ ಬೆಳೆಯುವರೈತರ ಸಂಖ್ಯೆ ಹೆಚ್ಚು. ಇಂಥರೈತರು ವಿವಿ ಅಭಿವೃದ್ದಿಪಡಿಸಿದರೋಗನಿರೋಧಕ ರಾಗಿ ತಳಿಜಿ.ಪಿಯು-28 ಬಗ್ಗೆ ಹೆಚ್ಚುಕಾಳಜಿಯಿಂದ ವಿಚಾರಿಸಿ ಮಾಹಿತಿಪಡೆಯುತ್ತಿದ್ದರು.

ಕೃಷಿಪತ್ರಿಕೆ:

ಕನ್ನಡದಲ್ಲಿ ಪ್ರಕಟಣೆಯಾಗುವಎಲ್ಲ ಕೃಷಿಪತ್ರಿಕೆಗಳ ಮಳಿಗೆಗಳೂಇದ್ದವು. ಆಸಕ್ತರು ಇವುಗಳಸಂಚಿಕೆಗಳನ್ನು ಆಸಕ್ತಿಯಿಂದತಿರುವಿಹಾಕುತ್ತಿದ್ದರು.ಇಂಥವರಲ್ಲಿ ಅನೇಕರುಚಂದಾದಾರರೂ ಆಗುತ್ತಿದ್ದರು. ರಾಜ್ಯದ ಪ್ರಮುಖ ದಿನಪತ್ರಿಕೆಗಳೂ ತಮ್ಮ ಮಳಿಗೆಗಳನ್ನು ಹಾಕಿದ್ದರು. ಇಲ್ಲಿತಮ್ಮ ದಿನಪತ್ರಿಕೆಗಳನ್ನು ಉಚಿತವಾಗಿ ವಿತರಿಸುತ್ತಿದದ್ದು ಗಮನ ಸೆಳೆಯಿತು.

ಯಂತ್ರೋಪಕರಣ:

ಇತ್ತೀಚಿನ ವರ್ಷಗಳಲ್ಲಿ ಕೃಷಿರಂಗಕೃಷಿಕಾಮರ್ಿಕರ ಅಭಾವಎದುರಿಸುತ್ತಿದೆ. ಈ ಸಮಸ್ಯೆನಿವಾರಿವ ನಿಟ್ಟಿನಲ್ಲಿ ಸಹಕರಿಸುವವಿವಿಧ ಬಗೆಯಯಂತ್ರೋಪಕರಣಗಳ ಪ್ರದರ್ಶನಮತ್ತು ಮಾರಾಟದ ವ್ಯವಸ್ಥೆಯೂಇತ್ತು. ಹೊಸದಾಗಿ ಮಾರುಕಟ್ಟೆಗೆಪರಿಚಿತವಾದಯಂತ್ರೋಪಕರಣಗಳೂಕಂಡುಬಂದವು. ಅಚ್ಚುಕಟ್ಟಾಗಿಭತ್ತದ ಸಸಿಗಳನ್ನು ನಾಟಿಮಾಡುವ ಯಂತ್ರ,ತೆಂಗಿನಕಾಯಿ ಕೊಯ್ಯುವಯಂತ್ರ, ಎತ್ತುಗಳನ್ನು ಮೂಲಕಸರಕು ಸಾಗಾಣಿಕೆಗೆಅನುಕೂಲಕರವಾದ ಮಾದರಿಗಳು ಗಮನ ಸೆಳೆದವು.

LEAVE A REPLY

Please enter your comment!
Please enter your name here