ಬಡ್ಡಿರಹಿತ ಶಿಕ್ಷಣ ಸಾಲ

0
ಲೇಖಕರು: ಲಿಂಗರಾಜ್ ರೊಡ್ಡಣನವರ್
ಕೆವಿಜಿ ಬ್ಯಾಂಕ್, ಹಾವೇರಿ

ಲಕ್ಷಾಂತರ ಯುವ ವಿದ್ಯಾರ್ಥಿಗಳು ತಮ್ಮ ಕನಸಿನ ಕೋರ್ಸಿಗೋ, ತಮ್ಮಿಷ್ಟದ ಕಾಲೇಜಿಗೋ/ ಯೂನಿವರ್ಸಿಟಿ/ ಸಂಸ್ಥೆಗೋ ಪ್ರವೇಶ ಪಡೆಯಲು ತಯಾರಿ ನಡೆಸಿರುತ್ತಾರೆ. ಎಷ್ಟೋ ವಿದ್ಯಾರ್ಥಿಗಳಿಗೆ ಸೀಟು ಸಿಕ್ಕರೂ ಆರ್ಥಿಕ ಚೈತನ್ಯವಿಲ್ಲದೇ ಕಡಿಮೆ ಫೀಜಿನ ಕೋರ್ಸು/ ಕಾಲೇಜಿಗೆ ಸೇರಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕುತ್ತಾರೆ.

ಅಂಥವರಿಗೆ ದಯವಿಟ್ಟು ಈ ಮೆಸೇಜನ್ನ ತಿಳಿಸಿರಿ. ಬಹುತೇಕ ಎಲ್ಲಾ ಬ್ಯಾಂಕುಗಳೂ ಅವರು ಇಷ್ಟಪಟ್ಟು ಪ್ರವೇಶ ಪಡೆದ   ಕೋರ್ಸು/ಕಾಲೇಜುಗಳಲ್ಲಿ ಓದಲು ಹಣದ ಸಹಾಯ, ಸಾಲದ ರೂಪದಲ್ಲಿ ನೀಡುತ್ತವೆ.

ಯಾವ ಯಾವ ಕೋರ್ಸುಗಳಿಗೆ…??

ವೃತ್ತಿಪರ ಕೋರ್ಸುಗಳಿಗೆ ಮಾತ್ರ

B.Sc Agri, Horti, Forestry, Fisheries, BVSc, BE, B.Tech, B.Ed., LLB, MBBS, BAMS, BHMS, JOURNALISM, DIPLOMA Course ಗಳು, NTTF, BBA/MBA

ಯಾವ ಬ್ಯಾಂಕುಗಳಲ್ಲಿ ಪಡೆಯುಬಹುದು

ಎಲ್ಲ ರಾಷ್ಟ್ರೀಕೃತ/ಸರಕಾರಿ ಬ್ಯಾಂಕುಗಳಲ್ಲಿ (ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, SBI, PNB, ಯೂನಿಯನ್ ಬ್ಯಾಂಕು), ನಿಮ್ಮ ಹತ್ತಿರದ ಗ್ರಾಮೀಣ ಬ್ಯಾಂಕು (KVGB ಅಥವಾ KGB) ಅಥವಾ ಯಾವುದೇ ಖಾಸಗಿ ಬ್ಯಾಂಕುಗಳಲ್ಲೂ  (Karantaka Bank, HDFC, AXIS, ICICI, Federal Bank) ಆದಷ್ಟೂ ಸರಕಾರಿ ಬ್ಯಾಂಕುಗಳಲ್ಲಿ ಪಡೆಯುವುದೇ ಒಳಿತು.

ಸಾಲ ಪಡೆಯಲು ಯಾವ ಯಾವ ದಾಖಲೆ ಪತ್ರಗಳಗಳನ್ನ ಒಟ್ಟು ಮಾಡಿಟ್ಟುಕೊಳ್ಳಬೇಕು

1) 10th/ 12th Exam marks Card

2) NEET/CET Ranking certificate

3)NEET/CET ಯವರು ನಿಮಗೆ ಯಾವ ಕಾಲೇಜು/ಕೋರ್ಸಿಗೆ allot ಮಾಡಿದಾರೆ ಅನ್ನುವ Allotment Letter

4) ಆಧಾರ ಕಾರ್ಡ್, ಪ್ಯಾನ್ ಕಾರ್ಡ್

5 ) ನೀವು ಹದಿನೆಂಟು ವರ್ಷದ ಒಳಗಿನವರಾಗಿದ್ದರೆ ನಿಮ್ಮ ಪಾಲಕರು ನಿಮ್ಮ ಜೊತೆ ಜಂಟಿಯಾಗಿ ಸಾಲ ಪಡೆಯಬೇಕು (ಪಾಲಕರ ಆಧಾರ್/ವೋಟರ್/ಪ್ಯಾನ್ ಕಾರ್ಡ್)

6) ನೀವು ಪ್ರವೇಶ ಪಡೆದಿರುವ ಕಾಲೇಜಿನ Principal/Dean ಕಡೆಯಿಂದ Bonafide Certificate/ ಪ್ರವೇಶ ಪಡೆದಿರುವ ಬಗ್ಗೆ ದೃಢೀಕರಣ ಪತ್ರ

7) ನೀವು ಪ್ರವೇಶ ಪಡೆದಿರುವ ಕಾಲೇಜಿನ Principal/Dean ಕಡೆಯಿಂದ ನಿಮ್ಮ ಕೋರ್ಸು ಮುಗಿಸಲು ಬೇಕಾಗುವ ಒಟ್ಟು ಖರ್ಚು ವೆಚ್ಚಗಳ

(ಹಾಸ್ಟೆಲ್, ಮೆಸ್, ಕಾಲೇಜ್ ಫೀ, ಬಸ್ ಪಾಸ್, ಲ್ಯಾಪ್ ಟಾಪ್, ಅಗತ್ಯ ಪುಸ್ತಕಗಳ) ಕುರಿತಾಗಿ ಒಂದು ಅಂದಾಜು ಪತ್ರ Expenditure estimation letter.

ಸಾಲಕ್ಕೆ ಜಾಮೀನು ಹಾಗೂ security ….???

₹ 4,00,000/- ರೂಪಾಯಿಗಳವರೆಗೆ ಯಾವುದೇ ತರಹದ ಜಾಮೀನು ಅವಶ್ಯಕತೆ ಇಲ್ಲ, ಯಾವುದೇ Security (ಆಸ್ತಿ ಅಡ) ಅವಶ್ಯಕತೆ ಇಲ್ಲ. ನಿಮ್ಮ ಪಾಲಕರ ಜೊತೆ ಜಂಟಿಯಾಗಿ ಸಾಲವನ್ನ ನೀಡುತ್ತಾರೆ.

₹ 4,00,000/- ಮೇಲಿನ 7,50,000/- ವರೆಗಿನ ಸಾಲಕ್ಕೆ ಯಾವುದೇ ತರಹದ ಆಸ್ತಿ security ಯ ಅವಶ್ಯಕತೆ ಇಲ್ಲ, ಆದರೆ ಜಾಮೀನು(Guarantor ) ಬೇಕು.

₹ 7,00,000/-  ಕ್ಕಿಂತ ಹೆಚ್ಚಿನ ಸಾಲಕ್ಕೆ ಜಾಮೀನು ಹಾಗೂ ಆಸ್ತಿ ಅಡಮಾನ ಬೇಕಾಗಬಹುದು

ಸಾಲವನ್ನ ತೀರಿಸುವುದು ಹೇಗೆ

ಸಾಲವನ್ನು ನಿಮ್ಮ ಶಿಕ್ಷಣ ಮುಗಿದು, ಕೆಲಸ ಸಿಕ್ಕ 6 ತಿಂಗಳಿಗೆ ಅಥವಾ ಶಿಕ್ಷಣ ಮುಗಿದು (ಕೆಲಸ ಸಿಗದೇ ಇದ್ದರೂ) 1 ವರ್ಷಕ್ಕೆ ಸಾಲದ ಕಂತನ್ನ ತುಂಬಲು ಪ್ರಾರಂಭಿಸಲೇಬೇಕು.

ಬಡ್ಡಿ…???

ಬ್ಯಾಂಕುಗಳು ವಾರ್ಷಿಕ 12% ರಿಂದ14% ವರೆಗೂ ವಿಧಿಸುತ್ತವೆ.  ನಿಮ್ಮ ಸಾಲದ ಮರುಪಾವತಿ ಕಂತು ಸುರೂ ಆಗುವವರೆಗೂ ತಗುಲುವ ಬಡ್ಡಿಯನ್ನು ಸಂಪೂರ್ಣವಾಗಿ ಕೇಂದ್ರ ಸರಕಾರ (ಹೆಚ್ಚಿನ ಮಾಹಿತಿಗೆ CSIS ಯನ್ನು Google ಮಾಡಿ ನೋಡಿ) ಬಡ್ಡಿ ಸಬ್ಸಿಡಿಯಾಗಿ ನೀಡುತ್ತದೆ. 2022-23 ಶೈಕ್ಷಣಿಕ ವರ್ಷದಿಂದ ಎಲ್ಲಾ (ಪೋಷಕರ ಆದಾಯಕ್ಕೆ ಮಿತಿ ಇದೆ) ಪ್ರತಿಭಾವಂತ ವಿದ್ಯಾರ್ಥಿಗಳು ತಾಂತ್ರಿಕ/ವೃತ್ತಿಪರರ ಕೋರ್ಸುಗಳಿಗೆ ಬಡ್ಡಿ ರಹಿತ ಸಾಲವನ್ನ ಪಡೆಯಬಹುದು.

ಕೊನೆಯದಾಗಿ

ನೀವು CET/ಪ್ರವೇಶ ಪರೀಕ್ಷೆಯ ಮುಖಾಂತರ ಯಾವುದೇ ವೃತ್ತಿಪರ/   professional course ಗೆ ಮೆರಿಟ್ ಸೀಟ್ ಪಡೆದಿದ್ದೇ ಆದಲ್ಲಿ, ನಿಮಗೆ ಯಾವುದೇ ಬ್ಯಾಂಕಿನವರೂ ಶಿಕ್ಷಣ ಸಾಲವನ್ನ ನಿರಾಕರಿಸುವಂತಿಲ್ಲ. ಮೇಲೆ ನೀಡಿದ ವಿದ್ಯಾ ಲಕ್ಷ್ಮೀ ಪೋರ್ಟಲ್ ನಲ್ಲಿ ನಿಮ್ಮ (SB Account) ಉಳಿತಾಯ ಖಾತೆ ಇರುವ ಬ್ಯಾಂಕಿಗೆ ಅರ್ಜಿ ಹಾಕಬಹುದು.

ನೆನಪಿಡಿ, ಹಣದ ಕೊರತೆಯಿಂದಾಗಿ ಯಾವ ಪ್ರತಿಭಾವಂತ ವಿದ್ಯಾರ್ಥಿಯೂ ಶಿಕ್ಷಣದಿಂದ ವಂಚಿತನಾಗದಂತೆ ನೋಡಿಕೊಳ್ಳುವುದು ಒಂದು ಸಮಾಜದ/ ಸರಕಾರದ ಜವಾಬ್ದಾರಿ….

ಹಾಗೇ, ಪಡೆದ ಸಾಲವನ್ನು ಸರಿಯಾಗಿ ಸಕಾಲದಲ್ಲಿ ತುಂಬಿ ಸಮಾಜದ ಋಣ ತೀರಿಸುವುದೂ ಆ ವಿದ್ಯಾರ್ಥಿಗಳ ಕರ್ತವ್ಯ.

ಶಿಕ್ಷಣ ಸಾಲ ಪಡೆಯುವ ಕ್ರಗಳ ಕುರಿತು ಹೆಚ್ಚಿನ ಮಾಹಿತಿಗೆ ನೋಡಿ: https://www.vidyalakshmi.co.in/Students/

LEAVE A REPLY

Please enter your comment!
Please enter your name here