ಮಣ್ಣೊಳಗಿನ ಮತ್ತು ಮಣ್ಣಿನ ಮೇಲಿನ ಜೀವಿ ಪ್ರಪಂಚ ಮತ್ತು ಬೇಸಾಯ

0
ಲೇಖಕಕರು: ಮಂಜುನಾಥ್ ಜಿ., ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಎಕೋಲಜಿ ಅಂಡ್ ದ ಎನ್ವಿರಾರ್ಮೆಂಟ್, (ಏಟ್ರಿ) ಬೆಂಗಳೂರು

ಭಾಗ – ೨
ಮಣ್ಣೊಳಗಿನ ಸೂಕ್ಷಾಣು ಪ್ರಾಣಿ ವರ್ಗ( ಸೂಕ್ಷ್ಮ ದರ್ಶಕದಲ್ಲಿ ಮಾತ್ರವೇ ಕಾಣುವ ವರ್ಗ):- Microfauna ಈ ವರ್ಗದಲ್ಲಿ ಅತೀ ಸೂಕ್ಷ್ಮ ಜೀವಿಗಳಾದ ಕೋಲೋಂಬೋಲಾ, ಮೈಟ್ಸ್, ನ್ಯಾಮಿಟೋಡ್ಸ್ ಮತ್ತು ಪ್ರೋಟೋಝೋವಾ ಮುಂತಾದವು ಬರುತ್ತವೆ, ಇವುಗಳನ್ನು ಸೂಕ್ಷ್ಮದರ್ಶಕದಲ್ಲಿ ಮಾತ್ರವೇ ನೋಡಬಹುದು.

ಮಣ್ಣೊಳಗಿನ ಮಧ್ಯಮ ಸೂಕ್ಷಾಣು ಪ್ರಾಣಿ ವರ್ಗ (ಬೂತಗನ್ನಡಿಯಲ್ಲಿ ನೋಡಿದರೆ ಕಾಣುವ ವರ್ಗ)- Mesofauna ಈ ವರ್ಗದಲ್ಲಿ ಸೂಡೋಸ್ಕಾರ್ಪಿಯನ್, ಪ್ರೋಟುರಾ, ಡಿಪ್ಲೂರಾ,ಸ್ಪ್ರಿಂಗ್ಟೇಲ್ಸ್, ಮೈಟ್ಸ್, ಸ್ಮಾಲ್ ಮೀರಿಯಾಪಾಡ್ಸ್ (ಪಾವೋಪಡ & ಸಿಂಪೈಲಾ) ರೀತಿಯ ಜೀವಿಗಳು ಈ ವರ್ಗಕ್ಕೆ ಸೇರುತ್ತವೆ. ಇವುಗಳನ್ನು ಬೂತಗನ್ನಡಿಯಲ್ಲಿ ನೋಡಬಹುದಾಗಿದೆ.

ಮಣ್ಣಿನಲ್ಲಿ ಕಣ್ಣಿಗೆ ಕಾಣುವ ಪ್ರಾಣಿ ವರ್ಗ (ಬರಿಗಣ್ಣಿನಲ್ಲಿ ಕಾಣುವ) Macrofauna – ಎರೆಹುಳು, ಶಂಕು, ಸಹಸ್ರಪಾದಿ, ಇರುವೆ, ಗೆದ್ದಲು ,ಕೋಲೋಪ್ಟೆರಾ( ವಯಸ್ಕ ಮತ್ತು ಲಾರ್ವಾ ಹಂತದವು), ಜೇಡ, ಶಂಕುಹುಳು, ಬಸವನಹುಳು, ಚೇಳು, ಇವೆಲ್ಲವೂ ಈ ವರ್ಗಕ್ಕೆ ಸೇರುತ್ತವೆ. ಇವುಗಳು ಬರೀ ಕಣ್ಣಿಗೆ ಕಾಣುತ್ತವೆ.

ಈ ಮೇಲಿನ 3 ವರ್ಗದ ಜೀವಿಗಳು ಮಣ್ಣೊಳಗಿನ ಕಸ ಕಡ್ಡಿಗಳನ್ನು ತಿಂದು ಫಲವತ್ತತೆಯನ್ನು ವೃದ್ಧಿ ಮಾಡುವ ಜೊತೆಗೆ ನೀರು ಮತ್ತು ಸಾವಯವ ವಸ್ತುಗಳನ್ನು ಹಿಡಿದಿಡಲು ಸಹಾಯ ಮಾಡುತ್ತವೆ. ಈ ಎಲ್ಲ ರೂಢಿಗಳೂ ಸಹ ಸಣ್ಣ ರೈತರಿಗೆ ಕಷ್ಟ ಏಕೆಂದರೆ ಇವುಗಳು ದೀರ್ಘಕಾಲದ ಅಭ್ಯಾಸಗಳು, ವಿಶೇಷವಾಗಿ ಸಣ್ಣ ಜಮೀನು ಹೊಂದಿರುವವರು ಈ ಎಲ್ಲ ಜವಾಬ್ದಾರಿಗಳನ್ನು ಹೊರಲು ಹಿಂಜರಿಯುತ್ತಾರೆ.

ರಾಯಚೂರಿನ ದೇವದುರ್ಗ ತಾಲೂಕಿನಲ್ಲಿ “ದುರ್ಬಲ ಮಣ್ಣಿಗೆ ಚೇತರಿಕೆ ಕೊಡುವ ಬೆಳೆಯುಳಿಕೆಗಳ ಕಾಂಪೋಸ್ಟ್ ಗೊಬ್ಬರ ಮತ್ತು ಹೊಲವನ್ನು ಸಜೀವಿಗೊಳಿಸುವ ಅಕ್ಕಡಿಸಾಲು ಕೃಷಿ” ಕುರಿತ ಕಾರ್ಯಾಗಾರ ನಡೆಯಿತು. ಏಟ್ರಿ ಸಂಸ್ಥೆ – ಸಾಯಿಲ್ ಸಹಭಾಗಿತ್ವದಲ್ಲಿ ಆಯೋಜಿತವಾಗಿದ್ದ ಕಾರ್ಯ್ರಕ್ರಮದಲ್ಲಿ ಮಣ್ಣಿನ ಫಲವತ್ತತೆ ವೃದ್ಧಿ ಮಾಡುವ ಮಾಹಿತಿಗಳನ್ನು ಪ್ರಾತ್ಯಕ್ಷಿಕೆ ಸಮೇತ ನೀಡಲಾಯಿತು.

ಲೇಖನ ರೂಪಿಸುವುದರಲ್ಲಿ ಸಹಕಾರ ನೀಡಿದವರು: ಸಂದೀಪ್‌ ಹಂಚನಾಳೆ CSEI-ATREE, Bangalore

ಮುಂದುವರಿಯುತ್ತದೆ

 

LEAVE A REPLY

Please enter your comment!
Please enter your name here