ಇದು ಗೆಳೆಯ ಆನಂದತೀರ್ಥ ಪ್ಯಾಟಿ ಕಳಿಸಿದ ಫೋಟೋ. ಅವರು ತಾವು ಬೆಳೆದ ಬೆಳೆಗಳ ಖಟಾವಾದ ನಂತರ ಉಳಿದ ಗಿಡಗಳನ್ನು ಕಿತ್ತು,, ಅವುಗಳ ಬೇರುಗಳಲ್ಲಿದ್ದ ಮಣ್ಣನ್ನು ತೆಗೆದು ಶುದ್ಧಿ ಮಾಡಿ ತೆಗೆದ ಚಿತ್ರ.
ಇದು ಅಕ್ಕಡಿ ಬೆಳೆಗಳ ಬೇರುಗಳ ರಚನೆ. ಕಾಳು ಬೆಳೆಗಳ ಬೇರುಗಳು ಮಣ್ಣಿನಾಳಕ್ಕೆ ಇಳಿದಿರುವುದನ್ನು ಗಮನಿಸಬಹುದು. ಮಣ್ಣಿನಾಳದಲ್ಲಿ ಅಡಕವಾಗಿರುವ ಖನಿಜಾಂಶಗಳನ್ನು ಕಾಳು ಬೆಳೆಯ ಬೇರು ಹೀರಿ ಮೇಲ್ಭಾಗಕ್ಕೆ ರವಾನಿಸುತ್ತೇವೆ. ಇದರ ಮೂಲಕ ಅಲ್ಪ ಆಳವಿರುವ ಗಿಡದ ಬೇರುಗಳ ಮೂಲಕ ಆ ಗಿಡಗಳಿಗೆ ತಲುಪುವಂತೆ ಮಾಡುತ್ತವೆ.
ಅಕ್ಕಡಿ ಸಾಲು ಬೆಳೆಗಳ ಕೊಡುಗೆಗಳಲ್ಲಿ ಇದು ಪ್ರಮುಖ ಅಂಶ. ಇದರ ಮಹತ್ವ ಅರ್ಥಮಾಡಿಕೊಂಡಿದ್ದ ನಮ್ಮ ಹಿರಿಯರು ಬಹುಬೆಳೆಗೆ ಆದ್ಯತೆ ಕೊಟ್ಟಿದ್ದು ಈ ಕಾರಣಕ್ಕಾಗಿಯೇ.
ಪ್ರಕೃತಿಯ ಸೋಜಿಗಗಳಲ್ಲಿ ಇದೂ ಒಂದು. ನಮ್ಮ ಹಿರಿಯರಲ್ಲಿದ್ದ ಅನುಭವ – ತಾಳ್ಮೆ – ಜಾಣ್ಮೆ – ತಿಳಿವಳಿಕೆಗೆ ನಮ್ಮ ನಮನ ಸಲ್ಲಿಸಬೇಕಲ್ಲವೆ ? ಈ ವಿಧಾನ ಅಳವಡಿಸಿಕೊಳ್ಳಬೇಕಲ್ಲವೇ.