ಹವಾಮಾನ ಮುನ್ಸೂಚನೆ: ರಾಜ್ಯದಲ್ಲಿ ಒಣಹವೆ ಮುಂದುವರಿಕೆ

0

ಶನಿವಾರ,  17 ನೇ ಡಿಸೆಂಬರ್ 2022 / 26 ನೇ ಅಗ್ರಹಾಯಣ 1944 ಶಕ ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ರಾಜ್ಯದಾದ್ಯಂತ ಒಣಹವೆ ಇತ್ತು. ಮುಖ್ಯ ಮಳೆ ಪ್ರಮಾಣಗಳು (ಸೆಂ.ಮೀ ನಲ್ಲಿ):  ಇಲ್ಲ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕನಿಷ್ಠ ಉಷ್ಣಾಂಶ 13.8  ಡಿ.ಸೆ. ಬಾಗಲಕೋಟೆ ಯಲ್ಲಿ ದಾಖಲಾಗಿದೆ.

19 ನೇ ಡಿಸೆಂಬರ್ 2022 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ:  ಮುಂದಿನ 24 ಘಂಟೆಗಳು: ರಾಜ್ಯದಾದ್ಯಂತ ಒಣಹವೆ ಇರುವ ಸಾಧ್ಯತೆ ಇದೆ. ಮುಂದಿನ 48 ಘಂಟೆಗಳಲ್ಲಿ ರಾಜ್ಯದಾದ್ಯಂತ ಒಣಹವೆ ಇರುವ ಸಾಧ್ಯತೆ ಇದೆ. ಗುಡುಗು ಮುನ್ಸೂಚನೆ  ಮುಂದಿನ 48 ಘಂಟೆಗಳಲ್ಲಿ ಇಲ್ಲ.  ಭಾರೀ ಮಳೆಯ ಎಚ್ಚರಿಕೆ ಇಲ್ಲ.  ಮೀನುಗಾರರಿಗೆ ಎಚ್ಚರಿಕೆ  ಇಲ್ಲ.  ಮುಂದಿನ 24 ಘಂಟೆಗಳ ಹೊರನೋಟದ ಪ್ರಕಾರ ರಾಜ್ಯದ ಹವಾಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಇಲ್ಲ.

19 ನೇ ಡಿಸೆಂಬರ್ 2022 ರ ಬೆಳಗ್ಗೆ ವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ:

ಮುಂದಿನ 24 ಗಂಟೆಗಳು: ಬೆಂಗಳೂರು ನಗರದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು ಸಂಜೆ/ರಾತ್ರಿಯ ವೇಳೆಗೆ ನಿರ್ಮಲ ಆಕಾಶವಿರುತ್ತದೆ.  ಕೆಲವು ಕಡೆಗಳಲ್ಲಿ ಬೆಳಗಿನಜಾವ ಮಂಜು ಮುಸುಕುವ ಬಹಳಷ್ಟು ಸಾಧ್ಯತೆಗಳಿರುತ್ತದೆ.  ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಷಿಯಸ್ ಇರುವ ಸಾಧ್ಯತೆಗಳಿರುತ್ತದೆ.

ಮುಂದಿನ 48 ಗಂಟೆಗಳು:  ಬೆಂಗಳೂರು ನಗರದಲ್ಲಿ ಭಾಗಶಃ ಮೋಡ ಕವಿದ ವಾ ತಾವರಣವಿರಲಿದ್ದು ಸಂಜೆ/ರಾತ್ರಿಯ ವೇಳೆಗೆ ನಿರ್ಮಲ ಆಕಾಶವಿರುತ್ತದೆ.  ಕೆಲವು ಕಡೆಗಳಲ್ಲಿ ಬೆಳಗಿನಜಾವ ಮಂಜು ಮುಸುಕುವ ಬಹಳಷ್ಟು ಸಾಧ್ಯತೆಗಳಿರುತ್ತದೆ.  ಗರಿಷ್ಠ ಉಷ್ಣಾಂಶ 28 ಮತ್ತು ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಷಿಯಸ್ ಇರುವ ಸಾಧ್ಯತೆಗಳಿರುತ್ತದೆ.

LEAVE A REPLY

Please enter your comment!
Please enter your name here