Home Blog Page 115
ಬೆಂಗಳೂರು: ಕೃಷಿವಿಶ್ವವಿದ್ಯಾಲಯ, ಬೆಂಗಳೂರಿನ ಜಿಕೆವಿಕೆಯಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಕೃಷಿಮೇಳವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗಾಂಧಿ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಅಕ್ಟೋಬರ್ 24ರಂದು ಬೆಳಗ್ಗೆ 11.30ಕ್ಕೆ ಚಾಲನೆ ನೀಡುತ್ತಾರೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ‍ರಾಜೇಂದ್ರಪ್ರಸಾದ್ ತಿಳಿಸಿದರು.  ಗಾಂಧಿ ಕೃಷಿ ವಿಶ್ವವಿದ್ಯಾಲಯದಲ್ಲಿ ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು ಅಕ್ಟೋಬರ್ 24 ರಿಂದ 27ರವರೆಗೆ ಮೇಳ ನಡೆಯಲಿದೆ. 2019ರ ಕೃಷಿಮೇಳ ವಿಶೇಷತೆಗಳಿಂದ ಕೂಡಿದೆ. ಈ ಬಾರಿಯ  ಘೋಷವಾಕ್ಯ “ನಿಖರ ಕೃಷಿ ಸುಸ್ಥಿರ ಅಭಿವೃದ್ದಿ”  ಇದಲ್ಲದೇ ಏಳು ಹೊಸ ತಳಿಗಳನ್ನು ಬಿಡುಗಡೆ ಮಾಡುತ್ತಿದ್ದೇವೆ. ಇದೇ ಸಂದರ್ಭದಲ್ಲಿ...
ಇಂದಿಗೂ ಸಾಕಷ್ಟು ಮಂದಿ ಸಾವಯವಗೊಬ್ಬರಗಳಿಂದಾಗುವ ಪ್ರಯೋಜನಗಳೇನು ? ಅವುಗಳನ್ನು ಕೃಷಿಭೂಮಿಗೆ ಹಾಕದೇ ರಾಸಾಯನಿಕ ಗೊಬ್ಬರಗಳನ್ನಷ್ಟೇ ಹಾಕಿದರೆ ಸಾಕಲ್ಲವೇ ಎಂದು ಪ್ರಶ್ನೆ ಮಾಡುತ್ತಿರುತ್ತಾರೆ. ಮುಖ್ಯವಾಗಿ ಸಾವಯವ ಗೊಬ್ಬರಗಳು ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಗಳನ್ನು ಉತ್ತಮಗೊಳಿಸುತ್ತವೆ ಮತ್ತು ಬೆಳೆಗಳ ರೋಗ ನಿರೋಧಕತೆಯನ್ನು ಹೆಚ್ಚಿಸಿ ಕೀಟಗಳು ಹಾಗೂ ರೋಗಗಳ ಹಾವಳಿಯನ್ನು ಕಡಿಮೆಗೊಳಿಸುತ್ತವೆ. ಭೌತಿಕ ಗುಣಗಳು: ಮಣ್ಣಿನ ರಚನೆ (ಕಣಗಳ ಜೋಡಣೆ) ಉತ್ತಮಗೊಂಡು ಮಣ್ಣಿನಲ್ಲಿ ಗಾಳಿ ಮತ್ತು ನೀರಿನ ಚಲನೆಗೆ ಅನುಕೂಲವಾಗುತ್ತದೆ. ನೀರು, ಪೋಷಕಾಂಶಗಳು ಮಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆಯಾಗುತ್ತವೆ. ಜೇಡಿಯುಕ್ತ ಮಣ್ಣಿನಲ್ಲಿ, ಮಣ್ಣಿನ ಕಣಗಳ ನಡುವಣ ಅಂತರವನ್ನು...
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಕೃಷಿಕ್ಷೇತ್ರದಲ್ಲಿ ಆಗಿರುವ, ಆಗುತ್ತಿರುವ ಬೆಳವಣಿಗೆಗಳನ್ನು ತಿಳಿಸಲು ಕೃಷಿಮೇಳಗಳನ್ನು ಆಯೋಜಿಸುತ್ತಾ ಬಂದಿದೆ. 2019ರ ಅಕ್ಟೋಬರ್ 24 ರಿಂದ 27ರ ತನಕ ಬೆಂಗಳೂರಿನ ಜಿಕೆವಿಕೆಯಲ್ಲಿ ಮೇಳ ಆಯೋಜಿತವಾಗಿದೆ. ಇದರ ಘೋಷವಾಕ್ಯ "ಸುಸ್ಥಿರ ಅಭಿವೃದ್ಧಿಗಾಗಿ ನಿಖರಕೃಷಿ" ಹೀಗೆಂದರೇನು ಎಂಬುದನ್ನು ವಿಶ್ವವಿದ್ಯಾಲಯದ ಕುಲಪತಿ, ವಿಸ್ತರಣಾ ನಿರ್ದೇಶಕರು ವಿವರಿಸಿದ್ದಾರೆ. ಅವರ ಮಾತುಗಳನ್ನು ಆಲಿಸಲು ಮುಂದಿನ ಲಿಂಕ್ ಕ್ಲಿಕ್ ಮಾಡಿ... https://soundcloud.com/user-75081884-79945874/krishimela-2019
ಬೆಂಗಳೂರು ಕೃಷಿವಿಶ್ವವಿದ್ಯಾಲಯ ಇದೇ ಅಕ್ಟೋಬರ್ 24 ರಿಂದ 27ರವರೆಗೆ ರಾಜ್ಯಮಟ್ಟದ ಕೃಷಿಮೇಳ ಆಯೋಜಿಸಿದೆ. ಇದು ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆಯಲಿದೆ." ಅಗ್ರಿಕಲ್ಚರ್ ಇಂಡಿಯಾ"ಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಾರಿಯ ವಿಶೇಷತೆಗಳ ಬಗ್ಗೆ ವಿವಿಯ ಕುಲಪತಿ ಡಾ. ರಾಜೇಂದ್ರಪ್ರಸಾದ್, ವಿಸ್ತರಣಾ ನಿರ್ದೇಶಕ ಡಾ. ಎಂ.ಎಸ್. ನಟರಾಜ್ ತಿಳಿಸಿದ್ದಾರೆ. https://youtu.be/QAIDD_Q7qfY
ರಾಜ್ಯದ ಕೃಷಿಮೇಳಗಳಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಯೋಜಿಸುವ ಕೃಷಿಮೇಳ ತನ್ನದೇ ಆದ ವೈಶಿಷ್ಟತೆ, ಮಹತ್ವ ಹೊಂದಿದೆ. ಕೃಷಿಕ್ಷೇತ್ರದಲ್ಲಿ ಆಗಿರುವ, ಆಗುತ್ತಿರುವ ಸಮಗ್ರ ಬೆಳವಣಿಗೆಗಳನ್ನು ಪರಿಚಯಿಸುತ್ತದೆ. ಕೃಷಿಕರಾದವರಿಗೆ ಮತ್ತಷ್ಟು ನಿಖರ ಸುಸ್ಥಿರ ಕೃಷಿ ಮಾಡುವ ಹುಮ್ಮಸ್ಸು ನೀಡಿದರೆ ಕೃಷಿಕರಲ್ಲದವರಿಗೆ ತಾವೂ ಕೃಷಿಕಾರ್ಯ ಮಾಡಬೇಕು ಎಂಬ ಉತ್ಸಾಹ ಮೂಡಿಸುತ್ತದೆ. 2019ರ ಅಕ್ಟೋಬರ್ 24 ರಿಂದ 27ರವರೆಗೆ ನಡೆಯಲಿರುವ ಬೃಹತ್ ಕೃಷಿಮೇಳದ ಚಾಲನಾಶಕ್ತಿಯಾಗಿರುವ ಕುಲಪತಿ ಡಾ. ರಾಜೇಂದ್ರ ಪ್ರಸಾದ್ ಅವರು "ಅಗ್ರಿಕಲ್ವರ್ ಇಂಡಿಯಾ" ದೊಂದಿಗೆ ಮೇಳದ ಆಶಯಗಳ ಬಗ್ಗೆ ಮಾತನಾಡಿದ್ದಾರೆ. ಅಗ್ರಿಕಲ್ಚರ್ ಇಂಡಿಯಾ: ಬೆಂಗಳೂರು ಕೃಷಿವಿಶ್ವವಿದ್ಯಾಲಯದ ಈ ಬಾರಿ...
यदि खेती की प्रथाओं का उपयोग केवल फसल उगाने के लिए किया जाता है, तो यह एक सीमित दृष्टि होगी| खेती को केवल फसल के रूप में नहीं सोचा जाना चाहिए|यह बात कई लोगों को चौंका सकती है|सिर्फ खेती ही कृषि नहीं है क्या? इस प्रकार सी कई सवालों के जवाब देती है आई डी ऍफ़ . कृषि कार्योंको आसान...
ಸಾಮಾನ್ಯವಾಗಿ ಎಲ್ಲ ಕೃಷಿ ಸಮುದಾಯಗಳು (ಮೂಲದಲ್ಲಿ ಕೃಷಿ ಸಮುದಾಯಗಳಾಗಿದ್ದ ಸಮುದಾಯಗಳೂ ಸೇರಿಕೊಂಡಂತೆ) ತಮ್ಮ ಹಬ್ಬಾಚರಣೆಗಳಲ್ಲಿ ಕೃಷಿ ಸಂಬಂಧೀ ಆಚರಣೆಗಳನ್ನು ಹೊಂದಿವೆ. ಈ ಸಮುದಾಯಗಳ ಸಂಸ್ಕೃತಿಯಲ್ಲಿ ಅವುಗಳು ಹಾಸುಹೊಕ್ಕಾಗಿವೆ. ನಮ್ಮ ಕಡೆ ಬೂಮಣ್ಣಿ ಹಬ್ಬ ನಡೆಯುವುದು ಹೀಗೆ. ಬೂಮಣ್ಣಿ ಬುಟ್ಟಿ: ಹಬ್ಬಕ್ಕೆ ವಾರ ಹತ್ತು ದಿನ ಮೊದಲೇ ಹೆಣ್ಮಕ್ಕಳು ಬಿದಿರಿನ ಬುಟ್ಟಿಯನ್ನು ಸಾರಿಸಿ, ಒಣಗಿಸಿ ಅದಕ್ಕೆ ಕೆಮ್ಮಣ್ಣು ಹಚ್ಚಿ ಅದರ ಮೇಲೆ ಚಿತ್ತಾರ ಬರೆಯುತ್ತಾರೆ. ಒಂದು ದೊಡ್ಡ ಬುಟ್ಟಿ ಮತ್ತೊಂದು ಸಣ್ಣ ಬುಟ್ಟಿ ಇರುತ್ತವೆ. ಈ ಚಿತ್ತಾರದಲ್ಲಿ ಭತ್ತದ ಸಸಿ, ಭತ್ತದ ಬಣವೆ, ಕೋಳಿ, ಏಣಿ, ಬುಟ್ಟಿ...
ಇತ್ತೀಚೆಗೆ ನವದೆಹಲಿಯಲ್ಲಿ ನೆಡೆದ ಪತ್ರಿಕಾಗೋಷ್ಠಿಯಲ್ಲಿ, ಭಾರತದ ರೈತಸಂಘಗಳ ಪ್ರತಿನಿಧಿಗಳು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವವನ್ನು (ಆರ್‌ಸಿಇಪಿ) ಸರ್ವಾನುಮತದಿಂದ ತಿರಸ್ಕರಿಸಿದವು. RCEPಯ ಈ ಭಾರಿ-ವ್ಯಾಪಾರ ಒಪ್ಪಂದವು ಕೃಷಿಜೀವನೋಪಾಯ, ಬೀಜಗಳ ಮೇಲೆ ಸ್ವಾಯತ್ತತೆ ಮತ್ತು ದೇಶದ ಸ್ವಾವಲಂಬಿ ಸಹಕಾರಿ_ಡೈರಿಗೆ ಅಪಾಯವನ್ನುಂಟುಮಾಡುತ್ತದೆ ಎಂದು ರೈತಪರ ಸಂಘಟನೆಗಳು ಎಚ್ಚರಿಸಿದೆ. ಒಪ್ಪಂದಕ್ಕೆ ಸಹಿಮಾಡಿ ಮುಗಿಸಲು ಉತ್ಸುಕರಾಗಿರುವ ಚೀನಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಆಸಿಯಾನ್ ನಂತಹ ಇತರ 16 ಮಾತುಕತೆ ನಡೆಸುವ ದೇಶಗಳ ಒತ್ತಡಕ್ಕೆ ತಲೆಬಾಗಬೇಡಿ ಎಂದು ಭಾರತ ಸರ್ಕಾರವನ್ನು ರೈತ ಮುಖಂಡರು ಆಗ್ರಹಿಸುವ ಮೂಲಕ ಇಂಥ ಒಪ್ಪಂದ, ದೇಶದ ಸುಸ್ಥಿರತೆ ಮೇಲೆ...
"ಕಳೆದುಕೊಂಡ ವಸ್ತುವನ್ನು ಕಳೆದುಕೊಂಡ ಜಾಗದಲ್ಲಿಯೇ ಹುಡುಕಬೇಕು" ಈ ಮಾತು ಅರ್ಥಪೂರ್ಣ ತತ್ವ ಒಳಗೊಂಡಿದೆ. ಮೈಸೂರು ನಗರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದವರು ಚಿನ್ನಸ್ವಾಮಿ ವಡ್ಡಗೆರೆ. ರಾಜಕಾರಣದಲ್ಲಿಯೂ ಈಸಿ, ಜೈಯಿಸಲು ಹೊರಟವರು. ಅದು ಬೇಡವೆಂದು ಕುಟುಂಬದ ಪಾರಂಪಾರಿಕ ವೃತ್ತಿ ಕೃಷಿ ಆರಂಭಿಸಿದರು. ವಾಣಿಜ್ಯ ಬೆಳೆ ಬೆಳೆಯಲು ಹೋಗಿ ಕೈಸುಟ್ಟುಕೊಂಡರು. ಇದು ಅವರಿಗೆ ಆರ್ಥಿಕ ನಷ್ಟದ ಜೊತೆಗೆ ಮಾನಸಿಕ ಆಘಾತವನ್ನೂ ನೀಡಿತು. ===================== "ಕೃಷಿಪ್ರವಾಸದ ಪರಿಣಾಮ ನನ್ನ ಕೃಷಿ ಹಾದಿ ತಪ್ಪಿದ್ದು ಎಲ್ಲಿ ಎನ್ನುವುದು ಗೊತ್ತಾಯಿತು. ನನ್ನ ಜಮೀನಿಗೆ ಹೋಗಿ ನಿಂತರೆ ಎಲ್ಲೆಲ್ಲಿ ಅನಗತ್ಯವಾಗಿ ಹಣ ಕಳೆದುಕೊಂಡೆ ಎನ್ನುವುದು ಕಾಣತೊಡಗಿತು....
ಕೃಷಿ ಚಟುವಟಿಕೆಗಳನ್ನು ಸುಲಭಗೊಳಿಸುವ ಹಾಗೂ ಕೃಷಿ ಅವಲಂಬಿತರಾಗಿ ಬದುಕು ನಡೆಸುತ್ತಿರುವ ರೈತರ ಬಾಳಿನಲ್ಲಿ ಆಶಾಕಿರಣ ಮೂಡಿಸುವ ಕಾರ್ಯವನ್ನು "ಇನಿಶಿಯೇಟಿವ್ಸ್ ಫಾರ್ ಡೆವಲಪ್ಮೆಂಟ್ ಪೌಂಢೇಷನ್" (ಐಡಿಎಫ್) ಸಂಸ್ಥೆ ಮಾಡುತ್ತಿದೆ. ಸುಸ್ಥಿರಕೃಷಿ ಉತ್ತೇಜಿಸುವ ನಿಟ್ಟಿನಲ್ಲಿ ತೊಡಗಿಸಿಕೊಂಡಿರುವ ಈ ಸಂಸ್ಥೆ ಕಾರ್ಯಗಳಿಗೆ ರೈತ ಸಮುದಾಯಗಳಿಂದ ಸಕಾರಾತ್ಮಕ ಸ್ಪಂದನೆ ದೊರೆಯುತ್ತಿದೆ. ಸಾರ್ವಜನಿಕ ರಂಗದಲ್ಲಿಯೂ ಕೂಡ ತನ್ನ ಬದ್ಧತೆಯಿಂದಾಗಿ ವಿಶ್ವಾಸಾರ್ಹತೆ ಪಡೆದುಕೊಂಡಿದೆ. ಪಾಠಶಾಲೆ: ಐಡಿಎಫ್ ಇದು ಬರಿ ಸಂಸ್ಥೆಯಲ್ಲ; ಇದೊಂದು ಸುಸ್ಥಿರಕೃಷಿ ಅಭಿವೃದ್ಧಿ ಪಾಠಶಾಲೆ. ಅಪಾರ ಸಂಖ್ಯೆಯ ಕೃಷಿಕರಿಗೆ ಕೃಷಿಜ್ಯೋತಿಯಾಗಿದೆ ಎಂದರೆ ಬಹುಶಃ ಅತಿಶಯೋಕ್ತಿ ಆಗಲಾರದು. ಇದು ಸಂಸ್ಥೆಯ ಸಹಾಯ -...

Recent Posts