ಕರ್ನಾಟಕ ರಾಜ್ಯದ ಹವಾಮಾನ ಮುನ್ಸೂಚನೆ  

0

ಭಾನುವಾರ, 27 ನೇ  ಆಗಸ್ಟ್ 2023 / 5ನೇ  ಭಾದ್ರಪದ 1945 ಶಕ. ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ನೈರುತ್ಯ ಮುಂಗಾರು  ಕರಾವಳಿಯಲ್ಲಿ ದುರ್ಬಲವಾಗಿತ್ತು ಮತ್ತು ಒಳನಾಡಿನಲ್ಲಿ ಸಾದಾರಣವಾಗಿತ್ತು. ರಾಜ್ಯದ ಕೆಲವು ಕಡೆಗಳಲ್ಲಿ ಮಳೆಯಾಗಿದೆ.

ಮುಖ್ಯ ಮಳೆ ಪ್ರಮಾಣಗಳು (ಸೆಂ.ಮೀ.ನಲ್ಲಿ):  ಸಿಂಧನೂರು (ರಾಯಚೂರು ಜಿಲ್ಲೆ) 5; ಗುಬ್ಬಿ , ಚಿಕ್ಕನಹಳ್ಳಿ AWS (ಎರಡೂ ತುಮಕೂರು ಜಿಲ್ಲೆ) ತಲಾ 3; ಬೇವೂರು, ಯಲಬುರ್ಗಾ (ಎರಡೂ ಕೊಪ್ಪಳ ಜಿಲ್ಲೆ), ಕವಡಿಮಟ್ಟಿ ARG (ಯಾದಗಿರಿ ಜಿಲ್ಲೆ), ಹೊಸಕೋಟೆ (ಬೆಂಗಳೂರು ಗ್ರಾಮಾಂತರ ಜಿಲ್ಲೆ), ಶೃಂಗೇರಿ ಎಚ್‌ಎಂಎಸ್ (ಚಿಕ್ಕಮಗಳೂರು ಜಿಲ್ಲೆ), ಬೆಳ್ಳೂರು (ಮಂಡ್ಯ ಜಿಲ್ಲೆ), ದಾವಣಗೆರೆ ತಲಾ 2; ಕುಕ್ಕನೂರು, ಮುನಿರಾಬಾದ್ (ಎರಡೂ ಕೊಪ್ಪಳ ಜಿಲ್ಲೆ), ರಾಯಚೂರು, ದೇವದುರ್ಗ (ರಾಯಚೂರು ಜಿಲ್ಲೆ) , ಶೋರಾಪುರ (ಯಾದಗಿರಿ ಜಿಲ್ಲೆ), ಚನ್ನಗಿರಿ (ದಾವಣಗೆರೆ ಜಿಲ್ಲೆ) , ಶಿವಮೊಗ್ಗ  , ಕಡೂರು (ಚಿಕ್ಕಮಗಳೂರು ಜಿಲ್ಲೆ), ಕೊಟ್ಟೂರು(ವಿಜಯನಗರ ಜಿಲ್ಲೆ) ತಲಾ 1

29 ನೇ ಆಗಸ್ಟ್ 2023 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ:

ಮುಂದಿನ 24 ಘಂಟೆಗಳು: ದಕ್ಷಿಣ ಒಳನಾಡಿನ ಕೆಲವು  ಸ್ಥಳಗಳಲ್ಲಿ ಮಳೆ/ಗುಡುಗುಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು  ಉತ್ತರ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಮುಂದಿನ 48 ಘಂಟೆಗಳು: ದಕ್ಷಿಣ ಒಳನಾಡಿನ ಕೆಲವು  ಸ್ಥಳಗಳಲ್ಲಿ ಮಳೆ/ಗುಡುಗುಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು  ಉತ್ತರ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಭಾರೀ ಮಳೆ ಮುನ್ನೆಚ್ಚರಿಕೆ:

ಮುಂದಿನ 48 ಘಂಟೆಗಳು: ಇಲ್ಲ.

ಗುಡುಗು ಮುನ್ನೆಚ್ಚರಿಕೆ:

ಮುಂದಿನ 48 ಘಂಟೆಗಳು: ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಸಾಧ್ಯತೆ ಇದೆ.

ಮೀನುಗಾರರಿಗೆ ಎಚ್ಚರಿಕೆ: ಇಲ್ಲ.

ಮುಂದಿನ 24 ಘಂಟೆಗಳ ಹೊರನೋಟ: ರಾಜ್ಯದ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆ ಇಲ್ಲ.

29ನೇ ಆಗಸ್ಟ್ 2023 ರ ಬೆಳಗ್ಗೆವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ:

ಮುಂದಿನ 24 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಮಳೆ/ಗುಡುಗುಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.  ಬಹಳಷ್ಟು ಸಾಧ್ಯತೆ ಇದೆ.  ಗರಿಷ್ಠ ಉಷ್ಣಾಂಶ 32  ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಷಿಯಸ್ ಇರುವ ಸಾಧ್ಯತೆಗಳಿರುತ್ತದೆ.

ಮುಂದಿನ 48 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಮಳೆ/ಗುಡುಗುಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.  ಬಹಳಷ್ಟು ಸಾಧ್ಯತೆ ಇದೆ.  ಗರಿಷ್ಠ ಉಷ್ಣಾಂಶ 32  ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಷಿಯಸ್ ಇರುವ ಸಾಧ್ಯತೆಗಳಿರುತ್ತದೆ.

LEAVE A REPLY

Please enter your comment!
Please enter your name here