ದೂರದಿಂದ ನೋಡಿದಾಗ ಕಲ್ಲುಬಂಡೆಯ ಮೇಲೆ ಅರಳಿರುವ “ಪಾಚಿ” ಯಂತೆ ಕಂಡುಬರುವ ಈ ಸಸ್ಯದ ಹೆಸರು ಲ್ಲಾರೆಟಾ( Llareta) ಎಂದು .ಇದರ ವೈಜ್ಞಾನಿಕ ಹೆಸರು “ಅಜೆರೊಲಾ ಕಾಂಪ್ಯಾಕ್ಟಾ” ( Azorella compacta ) [Azorella yareta and Laretia acaulis (Apiaceae)]
ಈ ಸಸ್ಯ ಜಗತ್ತಿನ ಅತ್ಯಂತ ಹಳೆಯ ಸಸ್ಯ ಎನ್ನುತ್ತಾರೆ. ಹೆಚ್ಚಾಗಿ ಮರಳು ಮಿಶ್ರಿತ ಅರೆ ಮರುಭೂಮಿಯಲ್ಲಿ ಬೆಳೆಯುವ ಈ ಸಸ್ಯ ವರ್ಷಕ್ಕೆ ಕೇವಲ ಒಂದು ಮಿಲಿ ಮೀಟರ್ ವರೆಗೆ ಮಾತ್ರ ಬೆಳೆಯುತ್ತದೆ. ಇವುಗಳ ಸರಾಸರಿ ಆಯುಸ್ಸು ಮೂರು ಸಾವಿರ ವರ್ಷಗಳು. ಇದೊಂದು “ಹರ್ಮೋಪ್ರೋಡೈಟ್” (hermaphrodite).ಅಂದರೇ ಗಂಡು ಮತ್ತು ಹೆಣ್ಣಿನ ಸಂತಾನೋತ್ಪತ್ತಿಯ ಅಂಗಗಳು ಒಂದೇ ಸಸ್ಯದಲ್ಲಿದೆ ಎಂದರ್ಥ !
ಕಾಂಡದಿಂದ ಹೊರಹೊಮ್ಮುವ ಎಲೆಗಳು ಒಂದರ ಪಕ್ಕ ಇನ್ನೊಂದು ಕೊಂಚವೂ ಖಾಲಿ ಜಾಗವಿಲ್ಲದಂತೆ ಗಟ್ಟಿಯಾದ ರಬ್ಬರ್ ನಂತೆ ಅತ್ಯಂತ ಒತ್ತೊತ್ತಾಗಿ ಬೆಳೆದು ಸಸ್ಯದ ಹೊರಮೈ ಕಠೀನ ರಬ್ಬರ್ ನಂತೆ ಗಟ್ಟಿಯಾದ ಹುಲ್ಲುಹಾಸಿದ ಬಂಡೆಯಂತಾಗಿರುತ್ತದೆ. ಈ ಹೊರ ಮೈ ಮೇಲೆ ಕುಣಿದು ಕುಪ್ಪಳಿಸಿದರೂ ಈ ಸಸ್ಯಕ್ಕೆ ಏನೂ ಆಗದು. ಇದರ ಹೊರ ಮೈಯನ್ನು ಉದ್ದನೆ ಹರಿತವಾದ ಚಾಕುವಿನಿಂದ ಕತ್ತರಿಸುತ್ತಾರೆ .
ಇದನ್ನು ಅಸ್ತಮಾ, ಬ್ರೋಂಕಿಯಾಟಿಸ್ ನೋವು ನಿವಾರಕ ಮತ್ತು ಇತರ ಖಾಯಿಲೆಗಳ ಚಿಕಿತ್ಸೆಗಾಗಿ ಬಳಸಲಾಗುತ್ತದೆ . ಇದೀಗ ಈ ಸಸ್ಯ ಅಳಿವಿನ ಅಂಚಿಗೆ ಬಂದಿದೆ . ರಹಸ್ಯಮಯವಾಗಿ ಕಾಣುವ ಈ ಸಸ್ಯ ಬೆಳೆಯವುದು “ದಿ ಮೆಜೆಸ್ಟಿಕ್ ಆಂಡಿಸ್ ಮೌಂಟೇನ್ಸ್” ಪರ್ವತಶ್ರೇಣಿಯಲ್ಲಿ. (ನಮ್ಮ ಪಶ್ಚಿಮ ಘಟ್ಟಗಳಂತೆ)
ದಕ್ಷಿಣ ಅಮೇರಿಕದ ಪಶ್ಚಿಮ ತುದಿಯಲ್ಲಿ ಆನಿಕೊಂಡು ವೆನಿಜ್ಯುವೆಲಾದ ಮುಖಾಂತರ ಅದೇ ದಕ್ಷಿಣ ಅಮೇರಿಕದ ದಕ್ಷಿಣ ತುತ್ತತುದಿ ಸೇರಿ ಚಿಲಿ, ಇಕ್ವೆಡಾರ್ ,ಪೆರು,ಅರ್ಜೆಂಟೀನಾ ಮತ್ತು ಬೊಲಿವಿಯ ತನಕ ವಿಸ್ತರಿಸಿಕೊಂಡಿದೆ . ಸರಿಸುಮಾರು 7000 ಕಿಮೀ ಉದ್ದದಲ್ಲಿ ಏಳು ದೇಶಗಳನ್ನ ಹಾಯ್ದು ಆಲಂಗಿಸಿ ವಿಸ್ತರಿಸಿಕೊಂಡಿವೆ.
ಆಂಡಿಸ ಪರ್ವತಶ್ರೇಣಿಗಳ ಕಾಡುಗಳ ನಂತರ ಬಿಸಿನೀರಿನ ಬುಗ್ಗೆಗಳ ಪ್ರದೇಶ ಆರಂಭವಾಗುತ್ತದೆ. ಆ ನಂತರ “ಅಟಕಾಮಾ”(Atacama desert) ಅರೆ ಮರುಭೂಮಿ ಮತ್ತು ಅಟಕಾಮಾ ಮರುಭೂಮಿ ಶುರುವಾಗುತ್ತದೆ.
ಆ ನಂತರ ಅಟಕಾಮಾ ಮರುಭೂಮಿ ಪ್ಯಾಸಿಫಿಕ್ ಸಮುದ್ರ ತೀರದ ವರೆಗೂ ವಿಸ್ತರಿಸಿದೆ.
ಒಂದೆಡೆ ಪರ್ವತಶ್ರೇಣಿಗಳು ಸಾಲು ಅದರ ನಂತರ ಬಿಸಿನೀರಿನ ಬುಗ್ಗೆಗಳ ಪ್ರದೇಶ ಅದರ ಪಕ್ಕ ಅರೆ ಮರುಭೂಮಿ ನಂತರ ಸಮದ್ರದವರೆಗೂ ವಿಸ್ತರಿಸಿರುವ ಅಟಕಾಮಾ ಮರುಭೂಮಿ . ಈ ಲ್ಲಾರೆಟಾ ( Llareta) ಸಸ್ಯಗಳು ಇಲ್ಲಿನ ಅಟಕಾಮಾ ಅರೆ ಮರುಭೂಮಿಯ ಪ್ರದೇಶದಲ್ಲಿ ಬೆಳೆಯುತ್ತವೆ !!