ಲಾಲ್ ಬಾಗ್ ; ಮತ್ತೆ ಸಾವಯವ ಹಬ್ಬ!

0

ಜೈವಿಕ್ ಕೃಷಿಕ್ ಸೊಸೈಟಿಯು 2004 ರಿಂದಲೂ  ಸಾವಯವ/ ಸಹಜ ಕೃಷಿಕರು ಮತ್ತು ಗ್ರಾಹಕರ ನಡುವಿನ ಸಂಪರ್ಕ ವೇದಿಕೆಯಾಗಿ ಸಾವಯವ ಕೃಷಿ  ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿರುವ ಒಂದು ಸಾರ್ವಜನಿಕ ಸಂಸ್ಥೆ.

ಈ ಚಟುವಟಿಕಗಳ ಭಾಗವಾಗಿ  ಸೊಸೈಯು  ಬೆಂಗಳೂರು ಮತ್ತು ರಾಜ್ಯದ ಇತರ ಜಿಲ್ಲಾ ಕೇಂದ್ರಗಳಲ್ಲಿ ಉತ್ಪಾದಕರು ಮತ್ತು ಗ್ರಾಹಕರನ್ನು ಒಟ್ಟಿಗೆ ಸೇರಿಸಲು ನಡೆಸುತ್ತಿದ್ದ ‘ಸಾವಯವ ಮೇಳ/ಹಬ್ಬ’ ವನ್ನು ಕೋವಿಡ್ ಕಾರಣದಿಂದ ನಿಲ್ಲಿಸಲಾಗಿತ್ತು.

ಈಗ ಅಕ್ಟೋಬರ್ 15, 16 ರಂದು ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಪ್ರದರ್ಶನ ಮತ್ತು ಮಾರಾಟದ  ‘ಸಾವಯವ ಹಬ್ಬ’ ನಡೆಸುವ ಮೂಲಕ ಮತ್ತೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ.

ಈ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಭಾಗವಹಿಸಿ ಸಾವಯವ ಕೃಷಿಕರಿಗೆ ಪ್ರೋತ್ಸಾಹ ನೀಡಲು ಕೋರಲಾಗಿದೆ.

ಅಲ್ಲದೆ ತಮ್ಮ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ತರಬಯಸುವ ರೈತರು ಮತ್ತು ಸಂಘ ಸಂಸ್ಥೆಯವರು  ಹರೀಶ್ , ಮ್ಯಾನೇಜರ್ , ಜೈವಿಕ್ ಸೊಸೈಟಿ (9972 553185) ರವರನ್ನು ಸಂಪರ್ಕಿಸಬಹುದು

LEAVE A REPLY

Please enter your comment!
Please enter your name here