ಆರ್ಕಿಡ್ಸ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ತೋಟಗಾರಿಕಾ ಪಾಠ

0

ಆರ್ಕಿಡ್ಸ್ ಅಂತರಾಷ್ಟ್ರೀಯ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ತೋಟಗಾರಿಕಾ ಪಠ್ಯಕ್ರಮವನ್ನು(Horticulture curriculum)  ಪರಿಚಯಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ – 2022 ರ ಅನುಸಾರವಾಗಿ, ತೋಟಗಾರಿಕೆಯನ್ನು ಒಂದು ವಿಷಯವಾಗಿ ಪರಿಚಯಿಸಿದೆ. ಈ ಮೂಲಕ ತೋಟಗಾರಿಕಾ ಪಠ್ಯಕ್ರವನ್ನು ಪರಿಚಯಿಸಿದ ಮೊದಲ ಶಾಲಾ ಸಮೂಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಆರ್ಕಿಡ್ಸ್ ಸಂಸ್ಥೆ ತನ್ನ ಎಲ್ಲಾ ಶಾಖೆಗಳಲ್ಲಿ 1 ರಿಂದ 8 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುತ್ತಿದ್ದಾರೆ.  ತೋಟಗಾರಿಕಾ ಪಠ್ಯಕ್ರಮಕ್ಕೆ  “ಲಿಟಲ್ ಗ್ರೀನ್ ಫಿಂಗರ್ಸ್” ಎಂದು ಹೆಸರಿಡಲಾಗಿದೆ.  ಈ ಸಲುವಾಗಿ ಶಾಲಾ ಆವರಣದಲ್ಲಿ ಪಾಲಿಹೌಸ್ ಅಳವಡಿಸಲಾಗಿದ್ದು, ಇದರಲ್ಲಿ ನಿಗದಿತ ತಾಪಮಾನವನ್ನು ನಿಯಂತ್ರಿಸಲಾಗುತ್ತದೆ.

ಪಾಲಿಹೌಸ್ ಎನ್ನುವುದು ನಿಯಂತ್ರಿತ ಹವಾಮಾನ ಪರಿಸ್ಥಿತಿಗಳಲ್ಲಿ ಸಸ್ಯಗಳನ್ನು ಬೆಳೆಸಲು ವಿಶೇಷವಾಗಿ ನಿರ್ಮಿಸಲಾದ ರಚನೆಯಾಗಿದೆ. ಇದರಲ್ಲಿ ಎಲ್ಲಾ ರೀತಿಯ ಸಸ್ಯಗಳನ್ನು ಬೆಳೆಸಬಹುದು.

ಪಾಲಿಹೌಸ್‌ ನ ವಿಶೇಷತೆಗಳು:

ಹೈಡ್ರೋಪೋನಿಕ್ಸ್

ಮಣ್ಣನ್ನು ಬಳಸದೆ ಸಸ್ಯಗಳನ್ನು ಬೆಳೆಸುವುದಕ್ಕೆ ಹೈಡ್ರೋಪೋನಿಕ್ಸ್ ಎನ್ನುತ್ತೇವೆ.  ಹೈಡ್ರೋಪೋನಿಕ್ ಹೂವುಗಳು, ಗಿಡಮೂಲಿಕೆಗಳು ಮತ್ತು ತರಕಾರಿಗಳನ್ನು ಬೆಳೆಯಲು ಸಸುಗಳಿಗೆ ಅಗತ್ಯವಿರುವ ಪೌಷ್ಟಿಕಾಂಶವನ್ನುನೀರಿನೊಂದಿಗೆ ಬೆರೆಸಿ ಗಿಡಗಳಿಗೆ ಪೂರೈಸಲಾಗುತ್ತದೆ.. ಈ ವ್ಯವಸ್ಥೆಯು ಸಸ್ಯಗಳ ಬೆಳವಣಿಗೆಯನ್ನು  ವೃದ್ದೀಸುವುದರ ಜೊತೆಗೆ ಇಳುವರಿ ಮತ್ತು ಗುಣಮಟ್ಟವನ್ನು ಹೆಚ್ಚಿಸುತ್ತದೆ.

ಸಸ್ಯದ ಉತ್ಪತ್ತಿ: ವಿವಿಧ ರೀತಿಯ ಸಸ್ಯ ಉತ್ಪತ್ತಿ ಮಾರ್ಗಗಳ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತದೆ.

ಸಸ್ಯ ಪೋಷಣೆ ಮತ್ತು ರಕ್ಷಣೆ: ವಿದ್ಯಾರ್ಥಿಗಳು ಸಸ್ಯಗಳ ಪೋಷಣೆ ಮತ್ತು ಅವುಗಳ ಬೆಳವಣಿಗೆಯ ಪರಿಸ್ಥಿತಿಗಳ ಬಗ್ಗೆ ಕಲಿಯುತ್ತಾರೆ.

ಎಡಿಬಲ್‌ ಗಾರ್ಡನಿಂಗ್ :ಟೆರೇಸ್‌ ನಲ್ಲಿ ಬೆಳೆಯಬಹುದಾದ ಎಡಿಬಲ್ ಗಾರ್ಡನಿಂಗ್ ವಿಧಾನಗಳನ್ನು ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ.

ಪ್ರಾಯೋಗಿಕ ವಿಧಾನ

ತೋಟಗಾರಿಕೆ ಪಠ್ಯಕ್ರಮವು ಪಾಠ ಹಾಗೂ ಪ್ರಾಯೋಗಿಕ ತರಗತಿಗಳನ್ನು ಒಳಗೊಂಡಿದೆ. ಸಸ್ಯ ಬೆಳವಣಿಗೆಯ ಚಟುವಟಿಕೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತದೆ ಮತ್ತು ಅತ್ಯಾಧುನಿಕ ಕೃಷಿ ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತದೆ. ಈ ಮೂಲಕ ವಿವಿಧ ರೀತಿಯ ಸಸ್ಯಗಳನ್ನು ಗುರುತಿಸಲು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡುತ್ತದೆ.

ವಿದ್ಯಾರ್ಥಿಗಳ ಮೇಲೆ ತೋಟಗಾರಿಕೆಯ ಪ್ರಭಾವ:

ಮಕ್ಕಳನ್ನು ಪ್ರಕೃತಿಯೊಂದಿಗೆ ಸಂಪರ್ಕಿಸುತ್ತದೆ

ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ

ಆಹಾರದ ಮೌಲ್ಯ

ಆಹಾರ ಉತ್ಪಾದನೆಯ ಜಾಗೃತಿ

ಪರಿಸರಕ್ಕೆ ಲಾಭ

ಮಕ್ಕಳಲ್ಲಿ ಕೃಷಿಯ ಬಗೆಗಿನ ಆಸಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ.

ಒಟ್ಟಿನಲ್ಲಿ ತೋಟಗಾರಿಕಾ ಪಠ್ಯಕ್ರಮವು ವಿದ್ಯಾರ್ಥಿಗಳಲ್ಲಿ ಪರಿಸರದ ಬಗೆಗಿನ ಕಾಳಜಿಯನ್ನು ದ್ವಿಗುಣಗೊಳಿಸುತ್ತದೆ. ಹಾಗೆಯೇ ತಮ್ಮ ಮನೆಗಳಲ್ಲಿ ಚಿಕ್ಕ ಟೆರೇಸ್‌ ಗಾರ್ಡನ್‌ ನಿರ್ಮಿಸಲು ಪ್ರೇರೇಪಿಸುತ್ತದೆ.

LEAVE A REPLY

Please enter your comment!
Please enter your name here