ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ; ಕುಲಪತಿ ಶ್ಲಾಘನೆ

0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 2023-24ನೇ ಸಾಲಿನ ಪೂರಕ ಬಜೆಟ್ ಬಗ್ಗೆ ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಇಲ್ಲಿನ ಕುಲಪತಿ ಎಸ್. ವಿ. ಸುರೇಶ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇವರ ಅಭಿಪ್ರಾಯ ಮುಂದಿದೆ.

ಕುಲಪತಿ ಎಸ್. ವಿ. ಸುರೇಶ್

ಕರ್ನಾಟಕ ಸರ್ಕಾರದ ಸನ್ಮಾನ್ಯ ಮುಖ್ಯ ಮಂತ್ರಿಗಳು ದಿನಾಂಕ: 07.07.2023 ರಂದು ಮಂಡಿಸಿದ 2023-24ನೇ ಸಾಲಿನ ರಾಜ್ಯ ಮುಂಗಡ ಪತ್ರವು ಒಟ್ಟು ರೂ. 3,27,747 ಕೋಟಿ ಗಳಾಗಿದ್ದು ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ರೂ. 8884 ಕೋಟಿ ಮೀಸಲಿಟ್ಟಿರುವುದು ಸ್ವಾಗತಾರ್ಹ. ಈ ಮುಂಗಡ ಪತ್ರವು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದೆ.

ರೂ. 100. ಕೋಟಿ ವೆಚ್ಚದಲ್ಲಿ ಕೃಷಿ ಭಾಗ್ಯ ಯೋಜನೆ ಮರುಜಾರಿ

ನವೋದ್ಯಮ ಹೊಸ ಯೋಜನೆಯಡಿ ಕೃಷಿ ಉದ್ಯಮಗಳಿಗೆ ನಾವೀನ್ಯತೆಯನ್ನು ಪ್ರೋತ್ಸಾಹಿಸಲು ರೂ. 10 ಕೋಟಿ ನೆರವು

ರೈತ ಉತ್ಪಾದಕ ಸಂಸ್ಥೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ರೈತ ಉತ್ಪಾದಕ ಸಂಸ್ಥೆಗಳ ಕೃಷಿ ಉತ್ಪನ್ನಗಳ ಏಕೀಕೃತ ಬ್ರಾಂಡಿAಗ್‌ಗಾಗಿ ರೂ 10 ಕೋಟಿ ಮೀಸಲು

ಹಿಂದುಳಿದ ತಾಲ್ಲೂಕುಗಳ ರೈತ ಉತ್ಪಾದಕ ಸಂಸ್ಥೆಗಳಿಗೆ ತಲಾ ರೂ. 20 ಲಕ್ಷ ವರೆಗಿನ ಸಾಲಕ್ಕೆ ಶೇ. 4 ಬಡ್ಡಿ ಸಹಾಯಧನ ಸೌಲಭ್ಯ

ರೈತ ಉತ್ಪಾದಕ ಸಂಸ್ಥೆಗಳು ನಿರ್ಮಿಸುವ ಗೋದಾಮು, ಶೀತಲಗೃಹ ನಿರ್ಮಾಣ ಮತ್ತಿತರ ಮೂಲಸೌಕರ್ಯ ಸೃಜನೆಗೆ ಯೋಜನಾ ವೆಚ್ಚದ ಗರಿಷ್ಠ ಶೇ. 20 ರಷ್ಟು, 1 ಕೋಟಿ ರೂ ಮೀರದಂತೆ ಸೀಡ್ ಕ್ಯಾಪಿಟಲ್ ಸೌಲಭ್ಯ

ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ಉತ್ತೇಜನಕ್ಕೆ ರೂ. 5 ಕೋಟಿ ನೆರವು. ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಬಲಪಡಿಸಲು 100 ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆಗೆ ರೂ. 50 ಕೋಟಿ ಅನುದಾನ

ಶಿಡ್ಲಘಟ್ಟದಲ್ಲಿ ರೂ. 75 ಕೋಟಿ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆಯಾಗಿ ಅಭಿವೃದ್ಧಿಪಡಿಸಲು ಕ್ರಮ. ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ 5 ಲಕ್ಷ ರೂ. ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ವಾಣಿಜ್ಯ ಹೂವಿನ ತಳಿಗಳ ರಫ್ತಿಗೆ ಉತ್ತೇಜನ

ನಂದಿನಿ ಹೈನು ಉತ್ಪನ್ನಗಳ ಬ್ರಾಂಡನ್ನು ಇನ್ನಷ್ಟು ವಿಸ್ತರಿಸಿ ಬೆಳೆಸಲು ಸರ್ಕಾರದ ಆಧ್ಯತೆ

ಮೀನುಗಾರ ಮಹಿಳೆಯರಿಗೆ ಬ್ಯಾಂಕುಗಳಲ್ಲಿ ಬಡ್ಡಿರಹಿತವಾಗಿ ನೀಡುವ ಸಾಲದ ಮಿತಿ 50000 ರೂಗಳಿಂದ ಮೂರು ಲಕ್ಷ ರೂಗಳಿಗೆ ಹೆಚ್ಚಳ

ರೂ. 770 ಕೋಟಿ ರೂ ವೆಚ್ಚದಲ್ಲಿ 899 ಕೆರೆ ತುಂಬಿಸುವ 19 ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ

ಹೊಸ ಸೆಂಟರ್ ಆಫ್ ಎಕ್ಸಲೆನ್ಸ್ ಗಳ ಸ್ಥಾಪನೆಗೆ ಹೆಚ್ಚು ಒತ್ತು ಹಾಗೂ ರೂ 5 ಕೋಟಿ ವೆಚ್ಚದಲ್ಲಿ ಜೈವಿಕ ಬ್ಯಾಂಕ್ ಸ್ಥಾಪನೆ

ಕರ್ನಾಟಕ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ ನೀತಿಯ ಅನುಷ್ಠಾನಕ್ಕೆ ಕರ್ನಾಟಕ ರಾಜ್ಯ ಸಂಶೋಧನಾ ಪ್ರತಿಷ್ಠಾನ ರಚನೆ

2023-24 ನೇ ಸಾಲಿನ ರಾಜ್ಯ ಮುಂಗಡ ಪತ್ರವು ಕೃಷಿ ಮತ್ತು ಪೂರಕ ಚಟುವಟಿಕೆಗಳು, ನೀರಾವರಿ, ಕೃಷಿ ಸಾಲ, ಸ್ಟಾರ್ಟಪ್, ಹೊಸ ಸೆಂಟರ್ ಆಫ್ ಎಕ್ಸಲೆನ್ಸ್ಗಳ ಸ್ಥಾಪನೆ, ಕೃಷಿ ಸಂಶೋಧನೆಗೆ ಉತ್ತೇಜನ, ಕೃಷಿಯಲ್ಲಿ ಯಾಂತ್ರೀಕರಣಕ್ಕೆ ಒತ್ತು ಹಾಗೂ ಕರ್ನಾಟಕ ರಾಜ್ಯ ಸಂಶೋಧನಾ ಪ್ರತಿಷ್ಠಾನ ರಚನೆಗೆ ಕ್ರಮ ಕೈಗೊಂಡಿರುವುದು ಪ್ರಶಂಸನೀಯ.

ಒಟ್ಟಾರೆಯಾಗಿ ಹೇಳುವುದಾದರೆ ರಾಜ್ಯ ಮುಂಗಡ ಪತ್ರವು ರಾಜ್ಯದ ಕೃಷಿ ಉತ್ಪಾಧನೆ, ಉತ್ಪಾದಕತೆ ಹೆಚ್ಚಿಸುವಲ್ಲಿ ನೆರವಾಗಲಿದ್ದು ತನ್ಮೂಲಕ ಕೃಷಿಕರ ಆದಾಯ ವೃದ್ಧಿಗೆ ಪೂರಕವಾಗಿದೆ. ರೈತರ ಸಾಲದ ಮಿತಿಯನ್ನು ಹೆಚ್ಚಿಸಿರುವುದರಿಂದ ಕೃಷಿಯಲ್ಲಿ ಬೆಳೆ ವೈವಿಧ್ಯತೆ ಹಾಗೂ ನೂತನ ತಂತ್ರಜ್ಞಾನಗಳ ಅಳವಡಿಕೆಗೂ ನೆರವಾಗಲಿದೆ.

LEAVE A REPLY

Please enter your comment!
Please enter your name here