ರಾಷ್ಟ್ರೀಯ ತೋಟಗಾರಿಕಾ ಮೇಳವು ಅಧಿಕ ಪೌಷ್ಠಿಕಾಂಶ ಹೊಂದಿರುವ ಬೆಳೆಗಳು ಮತ್ತು ಪೌಷ್ಠಿಕಾಂಶವನ್ನು ಹೆಚ್ಚಿಸಲು ಅಗತ್ಯವಾದ ಸುಧಾರಿತ ತಂತ್ರಜ್ಞಾನಗಳ ವಿವಿಧ ಅಂಶಗಳ ಮೇಲೆ ಕೇಂದ್ರೀಕರಿಸಿದೆ. “ವಿಕಸಿತ ಭಾರತಕ್ಕಾಗಿ ತೋಟಗಾರಿಕೆ” ಎನ್ನುವುದು ಮೇಳದ ಘೋಷವಾಕ್ಯವಾಗಿದೆ ಎಂದು ಭಾರತೀಯ ತೋಟಗಾರಿಕೆ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ತುಷಾರ್ ಕಾಂತಿ ಬೆಹೆರಾ ಹೇಳಿದರು.
ನವೀನ ಪರಿಹಾರಗಳು ಮತ್ತು ಕಾರ್ಯಕ್ರಮಗಳನ್ನು ಒದಗಿಸುವ ಮೂಲಕ ರೈತರನ್ನು ಸಬಲೀಕರಣಗೊಳಿಸುವ ಗುರಿಯನ್ನು ಮೇಳ ಹೊಂದಿದೆ. ತೋಟಗಾರರ ಜೀವನೋಪಾಯ ಸುಧಾರಣೆಗೆ ಸಹಕಾರಿಯಾಗಲಿದೆ. ಉತ್ಪಾದಕತೆ, ಆದಾಯ ಮತ್ತು ಜೀವನೋಪಾಯವನ್ನು ಹೆಚ್ಚಿಸುವ ತೋಟಗಾರಿಕಾ ತಂತ್ರಜ್ಞಾನಗಳನ್ನು ಉತ್ತೇಜಿಸುವ ಉದ್ದೇಶವನ್ನು ಈ ಮೇಳವು ಹೊಂದಿದೆ. ವಿಶೇಷವಾಗಿ ಸಾಮಾಜಿಕ-ಆರ್ಥಿಕ ಹಿಂದುಳಿದ ಗುಂಪುಗಳಿಗೆ ಸಹಕಾರಿಯಾಗಲಿದೆ. ಆರ್ಥಿಕವಾಗಿ ಕಾರ್ಯಸಾಧ್ಯವಾದ ಮತ್ತು ಪರಿಸರ ಸುಸ್ಥಿರ ಪರಿಹಾರಗಳನ್ನು ತಿಳಿಸಿಕೊಡಲಿದೆ. ಈ ಮೇಳದಲ್ಲಿ ತೋಟಗಾರಿಕೆ ಸಂಬಂಧಿತ ಸಂಸ್ಥೆಗಳ ಪ್ರದರ್ಶನ ಮಳಿಗೆಗಳು ಇರುತ್ತವೆ ಎಂದು ತಿಳಿಸಿದರು.
ಇವುಗಳು ತೋಟಗಾರಿಕಾ ತಂತ್ರಜ್ಞಾನಗಳಲ್ಲಿ ತಮ್ಮ ಅವಿಷ್ಕಾರಗಳನ್ನು ಪ್ರದರ್ಶಿಸುತ್ತವೆ. ವೈವಿಧ್ಯಮಯ ಸುಧಾರಣೆ, ಬೆಳೆ ಉತ್ಪಾದನೆ, ಬೆಳೆ ಸಂರಕ್ಷಣೆ, ಸುಗ್ಗಿಯ ನಂತರದ ನಿರ್ವಹಣೆ. ಮೌಲ್ಯವರ್ಧನೆ, ಮತ್ತು ತೋಟಗಾರಿಕಾ ಯಂತ್ರೋಪಕರಣಗಳು ಮತ್ತು ಉಪಕರಣಗಳನ್ನು ಒಳಗೊಂಡಂತೆ ವೈವಿಧ್ಯಮಯ ಹೆಚ್ಚು ಪ್ರಭೇದಗಳು ಮತ್ತು ತಂತ್ರಜ್ಞಾನಗಳನ್ನು ಪ್ರಸ್ತುತಪಡಿಸಲಾಗುತ್ತಿದೆ ಎಂದು ಹೇಳಿದರು.
ಐಸಿಎಆರ್ ಸಂಸ್ಥೆಗಳು, ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು (SAUs), ಖಾಸಗಿ ಕೈಗಾರಿಕೆಗಳು, ರೈತ ಉತ್ಪಾದಕ ಸಂಸ್ಥೆಗಳು (ಎಫ್ಪಿಒಗಳು), ಎನ್ಜಿಒಗಳು ಮತ್ತು ಉದ್ಯಮಿಗಳ ಮಳಿಗೆಗಳು ಇರುತ್ತವೆ. ಇವುಗಳು ತೋಟಗಾರಿಕೆಯಲ್ಲಿ ತಮ್ಮ ಇತ್ತೀಚಿನ ಆವಿಷ್ಕಾರಗಳು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸುತ್ತವೆ. ಈ ಮೇಳದಲ್ಲಿ ತೋಟಗಾರಿಕೆ ಕ್ಷೇತ್ರದ 75,000 ಕ್ಕೂ ಹೆಚ್ಚು ರೈತರು ಮತ್ತು ಭಾಗೀದಾರರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ತೋಟಗಾರಿಕೆ ಮೇಳದ ಪ್ರಮುಖ ಅಂಶಗಳು
ಪೋಷಣೆ, ಸಬಲೀಕರಣ ಮತ್ತು ಜೀವನೋಪಾಯ, ಜೈವಿಕ-ಬಲವರ್ಧಿತ ಕಲ್ಲಂಗಡಿ-ಸೆಲೆಕ್ಷನ್-4, ಅಂಟು ಕಾಂಡ ಕೊಳೆ ರೋಗ ನಿರೋಧಕ ಸೋರೆಕಾಯಿ ತಳಿ – ಅರ್ಕಾ ಶ್ರೇಯಸ್, ಎಲೆ ಸುರುಳಿ ನಂಜಾಣು ರೋಗ ನಿರೋಧಕ ಮೆಣಸಿನಕಾಯಿ ತಳಿಗಳು- ಅರ್ಕಾ ಧೃತಿ ಮತ್ತು ಅರ್ಕಾ ನಿಹಿರಾ, ಆವಕಾಡೊ (ಬೆಣ್ಣೆ ಹಣ್ಣು) ತಳಿ – ಅರ್ಕಾ ಕೂರ್ಗ್ ರವಿ, ರೆಡ್ ಡ್ರಾಗನ್ ಹಣ್ಣಿನ ಪುಡಿ ತಂತ್ರಜ್ಞಾನ, ಅರ್ಕಾ ಟೆಂಡರ್ ಹಲಸಿನ ಕಾಯಿ ಫೋಜನ್ ಹ್ಯಾಟೀಸ್ ಮತ್ತು ಕಬಾಬ್, ಭಾ.ಕ್ಯ.ಸಂ.ಪ.ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದ ಪ್ರಬೆಳೆಗಳ ತಳಿಗಳು ಮತ್ತು ತಂತ್ರಜ್ಞಾನಗಳ ನೇರ ಪ್ರದರ್ಶನ, ಸಂರಕ್ಷಿತ ಬೇಸಾಯ ಮತ್ತು ಮಣ್ಣುರಹಿತ ಬೇಸಾಯ, ಮಳಿಗೆಗಳಲ್ಲಿ ತೋಟಗಾರಿಕೆ ಬೆಳೆಗಳ ತಂತ್ರಜ್ಞಾನಗಳು ಮತ್ತು ಇತರ ಸಂಬಂಧಿತ ಉದ್ಯಮಗಳ ಪ್ರದರ್ಶನ, ಕೌಶಲ್ಯಾಧಾರಿತ ಕಾರ್ಯಾಗಾರಗಳು, ಬೆಳೆ ಸಂಬಂಧಿತ ಸಮಸ್ಯೆಗಳ ಕುರಿತು ಸಮಾಲೋಚನೆ ಮತ್ತು ಸಲಹೆ, ಬಿತ್ತನೆ ಬೀಜ, ಸಸ್ಯಗಳು, ಹೊಸ ತಳಿಗಳ ಬೀಜಗಳು, ಸಂಸ್ಕರಿಸಿದ ಉತ್ಪನ್ನಗಳು ಮತ್ತು ಯಂತ್ರೋಪಕರಣಗಳ ಮಾರಾಟ, ಬಿತ್ತನೆ ಬೀಜ, ಹೂವು ಮತ್ತು ತರಕಾರಿ ಹಣ್ಣಿನ ಸಂಶೋಧನೆ ಮತ್ತು ಅಭಿವೃದ್ಧಿ, ನೀರಾವರಿ ವ್ಯವಸ್ಥೆಗಳು, ಆಹಾರ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್, ಕೃಷಿ ರಫ್ತು ಸೇವೆಗಳು, ಸಾವಯವ ಮತ್ತು ಸಮಗ್ರ ಕೃಷಿ
ಸ್ಥಳ: ಭಾರತೀಯ ತೋಟಗಾರಿಕೆ ಮತ್ತು ಸಂಶೋಧನಾ ಸಂಸ್ಥ, ಹೆಸರಘಟ್ಟ, ಬೆಂಗಳೂರು. ಫೆಬ್ರವರಿ 27 ರಿಂದ ಮಾರ್ಚ್ 1ರ ತನಕ ಮೇಳ ನಡೆಯಲಿದೆ