ಬೆಳೆ ಪರಿಹಾರ 2435 ಕೋಟಿ ರೂ. ರೈತರ ಖಾತೆಗೆ  ವರ್ಗಾವಣೆ

0

ವಿಧಾನ ಪರಿಷತ್ ನಲ್ಲಿ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಸಚಿವ ಆರ್. ಅಶೋಕ್ ಅವರು  ಪರಿಹಾರ ಮಧ್ಯವರ್ತಿಗಳ ಪಾಲಾಗಬಾರದು. ಹಾಗಾಗಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹಣವನ್ನು ಪರಿಷ್ಕೃತ ಮಾರ್ಗಸೂಚಿಯಂತೆ ವರ್ಗಾಯಿಲಾಗಿದೆ ಎಂದು ಹೇಳಿದ್ದಾರೆ.

ಜುಲೈನಿಂದ ಈವರೆಗೆ ಸುರಿದ ಮಳೆಯಿಂದ ಆದ ಬೆಳೆಹಾನಿಗೆ 2435.57 ಕೋಟಿ ಹಣವನ್ನು ರೈತರಿಗೆ ನೀಡಿದ್ದೇವೆ. ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆ ನಷ್ಟಕ್ಕೆ ಇದ್ದ 6800 ರೂಪಾಯಿಯನ್ನು ಪ್ರತಿ ಹೆಕ್ಟೇರ್‌ಗೆ 13600 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ನೀರಾವರಿ ಜಮೀನಿಗೆ 13,500 ರೂ.ಗಳಿಂದ 25 ರೂ.ಗಳಿಗೆ ಹಾಗೂ ಬಹು ವಾರ್ಷಿಕ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ ನೀಡುವ 18 ಸಾವಿರ ರೂ. ಪರಿಹಾರವನ್ನು 28 ಸಾವಿರ ರೂ ಗಳಿಗೆ ಹೆಚ್ಚಿಸಲಾಗಿದೆ.

ರಾಜ್ಯ ವಿಪತ್ತು ನಿರ್ವಹಣಾ ನಿಧಿ ಮತ್ತು ರಾಷ್ಟ್ರೀಯ ವಿಪತ್ತು ನಿಧಿ ಮಾರ್ಗಸೂಚಿಯ ಎರಡರಷ್ಟು ಪರಿಹಾರ ನೀಡಲಾಗಿದೆ. ಕೃಷಿ, ತೋಟಗಾರಿಕೆ, ಕಾಫಿ ಬೆಳೆಗಳಿಗೆ ಸಂಬಂಧಿಸಿದಂತೆ ಪರಿಹಾರ ನೀಡಲಾಗಿದೆ.

ಹಾನಿಯಾದ ಮನೆಗಳ ಪೈಕಿ ಪರಿಹಾರಕ್ಕೆ ಅರ್ಹ ಇರುವ ಪ್ರಕರಣಗಳನ್ನು ರಾಜೀವ್‌ಗಾಂಧಿ ವಸತಿ ನಿಗಮದ ತಂತ್ರಾಂಶದಲ್ಲಿ ದಾಖಲಿಸಿ ಪರಿಹಾರ ನೀಡುವ ಕೆಲಸ ಮಾಡಲಾಗುತ್ತಿದೆ. ರಾಜ್ಯದ ರೈತರ ಪರವಾಗಿ ಬೊಮ್ಮಾಯಿ ಸರ್ಕಾರ ಕೆಲಸ ಮಾಡಲಿದೆ. ರೈತರ ಸಮಸ್ಯೆಗೆ ಶೀಘ್ರವಾಗಿ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಹಿಂದೆಲ್ಲ 6 ತಿಂಗಳು, 1 ವರ್ಷ ಆದರೂ ಪರಿಹಾರ ಬರುತ್ತಿರಲಿಲ್ಲ. ಈಗ ತ್ವರಿತವಾಗಿ ನಾವು ನೀಡುತ್ತಿದ್ದೇವೆ ಎಂದು ಅಶೋಕ ಹೇಳಿದ್ದಾರೆ.

LEAVE A REPLY

Please enter your comment!
Please enter your name here