ಉತ್ತಮ ಆದಾಯ ಗಳಿಸಲು ಕುರಿಮರಿಗಳ ಸಾಕಣೆ

0

ಸಣ್ಣ ಪ್ರಮಾಣದಲ್ಲಿ ನೀರಾವರಿ ಸೌಲಭ್ಯ ವಿರುವವರು ” ಕುರಿ ಸಾಕಾಣಿಕೆ” ಮಾಡುವ ಮೂಲಕ ಉತ್ತಮ ಆದಾಯ ಗಳಿಸಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಅತಿ ಸಣ್ಣ ರೈತರು, ರೈತ ಯುವಕರು ಎಂದಿನ ತಮ್ಮ ವೃತ್ತಿಯಿಂದ ವಿಮುಖರಾಗಿ, ಉದ್ಯೋಗವನ್ನರಿಸಿ ಪಟ್ಟಣಗಳ ಕಡೆ ಮುಖಮಾಡಿರುವುದನ್ನು ಕಂಡಿರುತ್ತೇವೆ.

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ” ಎನ್ನುವ ಹಾಗೆ, ಇಲ್ಲಿ ಬಹುತೇಕ ರೈತರು ಗಳಿಸುವ ಆದಾಯ , ಹೊಟ್ಟೆ ಬಟ್ಟೆಗೂ ಸಾಕಾಗದೇ ಇರುವ ಕಾರಣ, ಇನ್ನು ಉಳಿಸುವುದು ದೂರದ ಮಾತು. ಇದು ಇತ್ತೀಚಿನ ಲಾಕ್ ಡೌನ್ ಸಮಯದಲ್ಲಿ ಹಲವರು ವ್ಯಕ್ತಪಡಿಸಿದ ಆತಂಕ.

ಹೀಗಾಗಿ, ನೀರಿನ ಸೌಲಭ್ಯವಿರುವ , ಸಣ್ಣಪ್ರಮಾಣದ ಭೂಮಿ ಹೊಂದಿರುವ ರೈತ ಯುವಕರು ಹಳ್ಳಿಗಳಲ್ಲಿ ನೆಲೆಸಿ, ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳಲು ಹಲವಾರು ಮಾರ್ಗಗಳು ತೆರೆದಿವೆ. ಇವುಗಳಲ್ಲಿ ಸಣ್ಣಪ್ರಮಾಣದಲ್ಲಿ ಕುರಿಮರಿ ಸಾಕಾಣಿಕೆ ಹೆಚ್ಚು ಸಹಕಾರಿಯೆಂದು ಈಗಾಗಲೇ ಈ ಪದ್ಧತಿಯನ್ನು ಅನುಸರಿಸಿ, ಯಶಸ್ವಿಯಾದವರ ಅನುಭವ.

ಕುರಿಮರಿಗಳ ಸಾಕಣೆಗೆ ಪೂರ್ವ ಸಿದ್ಧತೆ ಅಗತ್ಯ.
* ಹೊಲದ ಸುತ್ತ ಮೇವಿನ ಮೂಲಗಳಾದ, ತೊಗಚೆ, ನುಗ್ಗೆ, ಹಾಲವಾಣ, ಸುಬಾಬುಲ್, ದಶರತ್, ಕುದುರೆ ಮೆಂತೆ, ಅಲಸಂದೆ, ಮೆಕ್ಕೆ ಜೋಳ, ಸಿಹಿ ಜೋಳದ ಮೇವನ್ನು ಬೆಳೆದಿರಬೇಕು ಅಥವಾ ಬೆಳೆಯಲು ಮುಂದಾಗಬೇಕು
* ಮಳೆ,ಚಳಿಗಾಳಿ, ಬಿಸಿಲಿನಿಂದ ರಕ್ಷಣೆ ನೀಡಬಲ್ಲಂತಹ ಸರಳ ಕೊಟ್ಟಿಗೆಯನ್ನು ನಿರ್ಮಿಸಬೇಕು.
* ನೆಲದ ತೇವಾಂಶ ಹೆಚ್ಚಾಗದಂತೆ, ನೀರು ನಿಲ್ಲದ ರೀತಿ ಗಮನಿಸಬೇಕು.
* ಹಟ್ಟಿಯೊಳಗೆ ಧಾರಾಳವಾಗಿ ಗಾಳಿ ಪ್ರವೇಶಿಸುವಂತೆ ದೊಡ್ಡ ಕಿಟಕಿಗಳನ್ನು ಅಳವಡಿಸಬೇಕು.
* ಮರಿಗಳನ್ನು ಕನಿಷ್ಠ 2 ತಾಸು ಹೊರಗೆ ಬಿಡಲು ಬೇಲಿ ಅಳವಡಿಸಿದ ಬಯಲು ನಿರ್ಮಿಸಬೇಕು.
* 3-4 ತಿಂಗಳ, ತಾಯಿ ಹಾಲು ಬಿಡಿಸಿದ, ಆರೋಗ್ಯವಂತ ಕುರಿ ಮರಿಗಳನ್ನು ಕೊಂಡು ತರಬೇಕು.
* ಇದು ಅತ್ಯಂತ ಕಾಳಜಿ ವಹಿಸಬೇಕಾದ ಸಮಯ.
* ಮರಿಗಳನ್ನು ತಂದ ನಂತರ, ಕೆಲದಿನಗಳ ತೀಕ್ಷ್ಣ ನಿಗಾದಲ್ಲಿರಿಸಬೇಕು.
* ಅನಾರೋಗ್ಯಕ್ಕೆ ಗುರಿಯಾದ ಮರಿಗಳನ್ನು ಬೇರ್ಪಡಿಸಿ, ಚಿಕಿತ್ಸೆ ಕೊಡಿಸಬೇಕು.
* ಹೊಸ ಪರಿಸರ, ಹೊಸ ನಿರ್ವಹಣೆ, ನಿರ್ವಹಣೆದಾರರು, ಹೊಸ ಆಹಾರ ಪದ್ಧತಿಗೆ ಹೊಂದಿಕೊಳ್ಳಲು ಕೆಲ ಸಮಯ ಆಗತ್ಯ.
* ಮರಿಗಳಿಗೆ ಮೊದಮೊದಲು ಮಿತಿ ಹಾಗೂ ಸುಲಭವಾಗಿ ಜೀರ್ಣವಾಗುವಂತಹ ಮಿತ ಪ್ರಮಾಣದಲ್ಲಿ ಆಹಾರ ನೀಡಬೇಕು.
* ದಿನಕಳೆದಂತೆ, ಅವು ಬದಲಾದ ಪರಿಸರ, ಆಹಾರಕ್ಕೆ ಒಗ್ಗಿಕೊಂಡಿರುವುದು ಖಾತ್ರಿಯಾದ ನಂತರ , ಬೆಳೆದಿರುವ ಮೇವಿನ ಮರದ ಸೊಪ್ಪು, ಇತರ ಏಕದಳ- ದ್ವಿದಳ ಮೇವನ್ನು 3:1 ಪ್ರಮಾಣದಲ್ಲಿ ನೀಡಬೇಕು.
* ಮೇವನ್ನು ಕತ್ತರಿಸಿ, ನಿಯಮಿತವಾಗಿ ಮೇವಿನ ಚರಣಿಯಲ್ಲೇ ಹಾಕಿ.
* ಒಣಮೇವುಗಳಾದ ರಾಗಿ ಹುಲ್ಲು , ಹುರುಳಿ ಹೊಟ್ಟು, ಕಡಲೇ ಹೊಟ್ಟು, ಮುಂತಾದ ಮೇವನ್ನು ಸರಿಯಾದ ರೀತಿಯಲ್ಲಿ ಶೇಖರಿಸಿ, ಬಳಸುವ ಮುನ್ನ ಒಣಗಿಸಿ, ನೀಡಬೇಕು.
* ಪ್ರತಿದಿನ ಕನಿಷ್ಠ 150-200 ಗ್ರಾಂ. ಸಮತೋಲನ ಆಹಾರದ ಮಿಶ್ರಣ, ಖನಿಜ ಜೀವಸತ್ವ ಮಿಶ್ರಣವನ್ನು ಬೆರೆಸಿ ನೀಡಬೇಕು.
* ಇದಕ್ಕಾಗಿ ದೊಡ್ಡ ಅಳತೆಯ ವ್ಯಾಸವುಳ್ಳ ಟಿ.ವಿ.ಸಿ. ಪೈಪುಗಳನ್ನು ಅಡ್ಡಸೀಳಿ, ಮೇವಿನ ಚರಣಿಯನ್ನು ನಿರ್ಮಾಣ ಮಾಡಿಕೊಳ್ಳಬಹುದು.
* ಶುಚಿಯಾದ ನೀರನ್ನು ದಿನಗಳಲ್ಲಿ 2 ಸಲ ನೀಡಬೇಕು.
* ತಂದ ಕುರಿಮರಿ ಗಳಿಗೆ ರೋಗ ನಿರೋಧಕ ಲಸಿಕೆಯನ್ನು ಹಾಕದಿದ್ದರೆ, ನಿಯಮಿತವಾಗಿ ಈ ಕೆಳಗಿನಂತೆ ಹಾಕಿಸಬೇಕು.

– ಕರಳುಬೇನೆ – 3 ನೇ ತಿಂಗಳ ನಂತರ.
– ಗಂಟಲು ಬೇನೆ- 4 ನೇ ತಿಂಗಳ ನಂತರ.
– ಪಿ.ಪಿ.ಆರ್. -. 5 ನೇ ತಿಂಗಳ ನಂತರ.

* ಲಸಿಕೆ ಹಾಕಿಸುವ ಮುನ್ನ ಜಂತುನಾಶಕ ಕುಡಿಸಬೇಕು.

* ಮರಿಗಳು ಬೆಳೆದಂತೆ, ಮೇವು, ಸಮತೋಲನ ಆಹಾರ ನೀಡಿಕೆಯನ್ನು ಹಂತ ಹಂತವಾಗಿ ಹೆಚ್ಚಿಸಬೇಕು.
* ಕುರಿಗಳಲ್ಲಿ ಕಂಡುಬರುವ ಸಾಂಕ್ರಾಮಿಕ ರೋಗಗಳು.
– ಕರುಳು ಬೇನೆ
– ಗಂಟಲು ಬೇನೆ
– ನೆರಡಿ ಬೇನೆ
– ಪಿ.ಪಿ.ಆರ್. ಬೇನೆ
– ನೀಲಿ ನಾಲಿಗೆ ಬೇನೆ
– ಕುರಿ ಸಿಡುಬು ಬೇನೆ
ಇವುಗಳಿಂದ ರಕ್ಷಿಸಲು ರೋಗ ಪ್ರತಿಬಂಧಕ ಕ್ರಮಳನ್ನು ಅನುಸರಿಸಬೇಕು. ಕುರಿ ಮರಿಗಳನ್ನು 10-12 ನೇ ತಿಂಗಳ ನಂತರ ಮಾರಾಟ ಮಾಡಬಹುದು.

LEAVE A REPLY

Please enter your comment!
Please enter your name here