ಲಂಟಾನ; ಪ್ರಕೃತಿ ಲೋಕದ ವಿಷಕನ್ಯೆ !

0
ಲೇಖಕರು: ಸಂಜಯ್ ಹೊಯ್ಸಳ

           ‘ರೋಜಗಿಡ’ ಎಂದು ಸ್ಥಳೀಯವಾಗಿ ಕರೆಯಲ್ಪಡುವ ಅಮೇರಿಕಾ ಮೂಲದ ವಿದೇಶಿ ಸಸ್ಯವಾದ ಲಂಟಾನ, ಭಾರತಕ್ಕೆ ಒಂದು ಅಲಂಕಾರಿಕ ಸಸ್ಯ (Ornamental plant) ವಾಗಿ ಬಂದದ್ದು.  ಸದ್ಯ ಇದು ಭಾರತದ ಕಾಡುಗಳಿಗೆ ಇರುವ ಅಪಾಯಗಳಲ್ಲಿ ಅಗ್ರಸಾಲಿನಲ್ಲಿ ನಿಲ್ಲುತ್ತಿದೆ.

ವಿದೇಶಿ ಮೂಲದಿಂದ ಬಂದ, ಸ್ಥಳೀಯ ಪ್ರದೇಶದಲ್ಲಿ ಆಕ್ರಮಣಕಾರಿಯಾಗಿ ಬೆಳೆಯುವ ಕಳೆ ಗಿಡವಾದ Invasive ಸಸ್ಯವಾದ ಲಂಟಾನ ಇಂದು ಕರ್ನಾಟಕದ ಬಂಡೀಪುರ, ನಾಗರಹೊಳೆ, ಬಿ.ಆರ್.ಟಿ ಸೇರಿ ದೇಶದ ಬಹಳಷ್ಟು ಸಂರಕ್ಷಿತ ಅರಣ್ಯ ಪ್ರದೇಶಗಳ ಇಂಚಿಂಚು ಜಾಗವನ್ನು ದಿನೇ ದಿನೇ ‘ಅತಿಕ್ರಮಿಸುತ್ತಿದೆ’.

          ಲಂಟಾನ ಗಿಡದಿಂದ ಆಗುವ ಪ್ರಮುಖ ಹಾನಿ, ಕಾಡಿನ ಸಸ್ಯಹಾರಿ ಪ್ರಾಣಿಗಳ ಆಹಾರದ ಪ್ರಮುಖ ಮೂಲವಾದ ಹುಲ್ಲುಗಾವಲುಗಳ ನಾಶ. ಎರಡನೆ ಪ್ರಮುಖ ಹಾನಿಕಾರಕ ಅಂಶವೆಂದರೆ ಕಾಡ್ಗಿಚ್ಚಿನ ‘ಕಿಚ್ಚ’ನ್ನು ವೃದ್ದಿಸುವುದು (ತೀವ್ರತೆ). ಆ ಮೂಲಕ ಕೇವಲ Ground fire ಹಂತದ ಕಾಡ್ಗಿಚ್ಚನ Crown fire ಹಂತಕ್ಕೆ ಕೊಂಡೊಯ್ದು, ಕಾಡಿನ ಸಸ್ಯ ಸಂಪತ್ತಿಗೆ ಹೊಡೆತ ನೀಡುವುದು.

     ಲಂಟಾನ ನಮ್ಮ ದೇಶದ ಕಾಡಿಗೆ ನೆನ್ನೆ ಮೊನ್ನೆ ಬಂದಿದ್ದಲ್ಲ. 1920ರ ದಶಕದ ಜಿಮ್ ಕಾರ್ಬೆಟರ ಉತ್ತರಾಖಂಡದ ಕಾಡುಗಳಲ್ಲಿನ ಅನುಭವ ಕತೆಗಳಲ್ಲಿ, ನಮ್ಮ ತೇಜಸ್ವಿಯವರ ‘ಜುಗಾರಿ ಕ್ರಾಸ್’ ಕಾಡಿನ ಕಥನದಲ್ಲಿರಬಹುದು, ಅಲ್ಲೆಲ್ಲಾ ಈ ಲಂಟಾನ ಗುತ್ತಿಗಳ‌ ಉಲ್ಲೇಖ ಸಾಕಷ್ಟು ಕಡೆ ಆಗುತ್ತದೆ. ಆದರೆ ಆಗೆಲ್ಲಾ ಲಂಟನಾ ಈಗಿನಷ್ಟು ‘ಉಪದ್ರವಿ’ ಎನಿಸಿರಲಿಲ್ಲ ಅನ್ಸುತ್ತೆ. ಆದರೆ ಅಂದು ಕೇವಲ ಕಳೆಯಾಗಿದ್ದ ಲಂಟನಾ ಇಂದು ಆಕ್ರಮಣಕಾರಿ ಕಳೆ (Invasive weed) ಹಂತಕ್ಕೆ ತಲುಪಿದೆ.

LEAVE A REPLY

Please enter your comment!
Please enter your name here