ರಸಗೊಬ್ಬರ, ಬಿತ್ತನೆ ಬೀಜ ಕೊರತೆಯಾಗದಂತೆ ಕ್ರಮವಹಿಸಿ ; ಮುಖ್ಯಮಂತ್ರಿ

0

ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜಗಳು ಸಕಾಲದಲ್ಲಿ ದೊರೆಯಬೇಕು. ಯಾವುದೇ ಕಾರಣಕ್ಕೂ ಇವುಗಳಿಗೆ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.

ಅವರಿಂದು ಮೈಸೂರು  ಜಿಪಂನಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕೃಷಿ ಇಲಾಖೆಯಿಂದ ನೀಡುವ ಅಂಕಿ ಅಂಶಗಳಲ್ಲಿ ಫಲಾನುಭವಿಗಳಿಗೆ ಯೋಜನೆ ತಲುಪಿರುವ ಬಗ್ಗೆ ಮಾಹಿತಿ ಇರಬೇಕು. ಇಲಾಖೆಯ ಅಂಕಿ ಅಂಶಗಳು ನಿರ್ದಿಷ್ಠವಾಗಿರಬೇಕು ಎಂದು ಸೂಚನೆ  ನೀಡಿದರು.

ಜನವರಿಯಿಂದ ಡಿಸೆಂಬರವರೆಗೆ ವಾರ್ಷಿಕ ವಾಡಿಕೆ ಮಳೆಯಂತೆ  ಶೇ18 ರಷ್ಟು ಕಡಿಮೆಯಾಗಿದೆ.  ಮೈಸೂರು ಜಿಲ್ಲೆಯಲ್ಲಿ ಬಿತ್ತನೆ ಪ್ರದೇಶದಲ್ಲಿ 398 ಲಕ್ಷ ಬಿತ್ತನೆಯ ಗುರಿ ಇಟ್ಟು ಕೊಳ್ಳಲಾಗಿದ್ದು 2.33 ಲಕ್ಷ ಎಕರೆ ಬಿತ್ತನೆಯಾಗಿದೆ- ಎಂದು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಕಳೆದ ವರ್ಷ ಶೇ 75 ಪ್ರದೇಶ ಬಿತ್ತನೆಯಾಗಿತ್ತು ಈ ಬಾರಿ ಶೇ 58 ರಷ್ಟು ಬಿತ್ತನೆಯಾಗಿದ್ದು 18 ರಿಂದ 20 ರಷ್ಟು ಬೆಳೆ ಸಿಕ್ಕಿದೆ  ಎಂದು ಜಿಂಟಿ ಕೃಷಿ ನಿರ್ದೇಶಕರು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ ಅರಿವು ಮೂಡಿಸಬೇಕು, ಪರ್ಯಾಯ ಬೆಳೆಗಳನ್ನು ಬೆಳೆಯಲು ಅಧಿಕಾರಿಗಳು ಹಳ್ಳಿಗಳನ್ನು ಭೇಟಿ ಅರಿವು ಮೂಡಿಸಬೇಕು ಎಂದು ಹೇಳಿದರು.

ಪೂರ್ವ ಮುಂಗಾರು ಹಂಗಾಮಿನ ಬೆಳೆಗಳಾದ ಹತ್ತಿ, ಸೂರ್ಯಕಾಂತಿ ಮುಸುಕಿನ ಜೋಳ ಬೆಳೆಗಳ ಇಳುವರಿ  ಮಳೆಯ ಕೊರತೆಯಿಂದ ಕಡಿಮೆಯಾಗಿದೆ ಎಂದು  ಜಂಟಿ ಕೃಷಿ ನಿರ್ದೇಶಕರು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ  ಮುಖ್ಯಮಂತ್ರಿ,  ಕೃಷಿ ಇಲಾಖೆಯಿಂದ ಕೃಷಿ ಬೆಳೆಗಳಿಗೆ ಕೀಟಭಾದೆಯಾಗದಂತೆ ಅಗತ್ಯ ಕ್ರಮವಹಿಸಬೇಕು. ಈ ಸಂಬಂಧ ತಾಲ್ಲೂಕು ಮಟ್ಟದ ಅಧಿಕಾರಿಗಳು ಸ್ಧಳಕ್ಕೆ ಭೇಟಿ ನೀಡಿ ರೈತರಿಗೆ ಅಗತ್ಯ ಕ್ರಮವಹಿಸಬೇಕು ಎಂದರು.

ಈ ಸಂಬಂಧ ಕೃಷಿ ವಿಜ್ಞಾನಿಗಳನ್ನು ರೈತರ ಜಮೀನುಗಳಿಗೆ ಕರೆದು ಕೀಟಗಳ ಭಾದೆಗೆ ಪರಿಹಾರ ಕಂಡುಕೊಳ್ಳಲಾಗಿದ್ದು ಈ ಸಂಬಂಧ ರೈತರಿಗೆ ಅರಿವು ಮೂಡಿಸಲಾಗಿದೆ. ಕೀಟಬಾಧೆಯಿಂದ ಬೆಳೆ ಹಾನಿಯಾಗದಂತೆ ಕ್ರಮವಹಿಸವಾಗಿದೆ-  ಪರ್ಯಾಯ ಬೆಳೆಗಳಾದ ರಾಗಿ, ಜೋಳ, ನೆಲಗಡಲೆ ಈ ಬೆಳೆಗಳನ್ನು ಬೆಳೆಯಲು ಅರಿವು ಮೂಡಿಸಲಾಗಿದೆ  ಎಂದು  ಜಂಟಿ ಕೃಷಿ ನಿರ್ದೇಶಕರು ವಿವರಿಸಿದರು

ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ರೈತರಿಗೆ ತೊಂದರೆ ಯಾಗಬಾರದು, ರಸಗೊಬ್ಬರ, ಬಿತ್ತನೆ ಬೀಜ ಕೊರತೆಯಾಗದಂತೆ ಕ್ರಮವಹಿಸಬೇಕು. ರೈತರನ್ನು ಬಹಳ ಗೌರವಯುತವಾಗಿ ಕಾಣಬೇಕು. ರೈತರ ಸಮಸ್ಯೆಗಳನ್ನ ಆಲಿಸಿ. ಅದಕ್ಕೆ ಸಮಸ್ಯೆ ಬಗೆಹರಿಸಬೇಕು. ರೈತರೊಂದಿಗೆ ಸಭೆ ನಡೆಸಬೇಕು. ಪರ್ಯಾಯ ಬೆಳೆಗಳನ್ನು ಬೆಳೆಯಲು ರೈತರಿಗೆ ತಿಳಿಸಬೇಕು ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದರು.

LEAVE A REPLY

Please enter your comment!
Please enter your name here