ಸಜೀವಿ ಮಣ್ಣು ನಿರ್ಮಾಣಕ್ಕಾಗಿ ಹತ್ತು ಸೂತ್ರ

ಮಣ್ಣಲ್ಲಿ ಸಾವಯವ ಅಂಶ - ತೇವಾಂಶ - ಜೀವಾಂಶ ಸದಾಕಾಲ ಇರುವಂತೆ ಮಾಡುವುದೇ ಮಣ್ಣನ್ನು ಬೆಳೆಸುವುದು ಎಂದರ್ಥ. ಇವೆಲ್ಲವನ್ನೂ ಮಣ್ಣು ಹೊದಿಕೆ ಮೂಲಕ ಮಾಡಬಹುದು. ನಮಗೆ ಗೊತ್ತಿರಲಿ. ಮಣ್ಣುಜೀವಾಣುಗಳಿಗೆ ಸೂರ್ಯನೇ ಮೊದಲ ವೈರಿ. ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು, ಕಳೆನಾಶಕಗಳೇ ಎರಡನೇ ವೈರಿ. ಹೊಲ - ಗದ್ದೆ - ತೋಟಗಳಲ್ಲಿ ಸದಾಕಾಲ ನಿಂತುಬಿಡುವ ಕೆಸರು ನೀರೇ ಮೂರನೇ ವೈರಿ. ಗಿಡಗಳನ್ನು ಬೆಳೆಸಲು ಮಣ್ಣಲ್ಲಿ ತೇವಾಂಶ ಇರಬೇಕೇ ಹೊರತು ನೀರಲ್ಲ.

0

ಬೆಳೆಗಳನ್ನು ಬೆಳೆಯುವ ಜವಾಬ್ದಾರಿ ಮಣ್ಣಿನದು. ಮಣ್ಣಲ್ಲಿ ಆ ಸಾಮರ್ಥ್ಯ ಇರುವಂತೆ ಮಾಡುವ ಜವಾಬ್ದಾರಿ ನಮ್ಮದು. ಅಲ್ಲವೇ. . . ಹಾಗಿದ್ದಲ್ಲಿ ಮಣ್ಣಲ್ಲಿ ಬೆಳೆ ಬೆಳೆಸುವ ಸಾಮರ್ಥ್ಯ ಬರುವಂತೆ ಮಾಡುವುದು ಹೇಗೆ ? ಮಣ್ಣಲ್ಲಿ ಸಾವಯವ ಅಂಶ – ತೇವಾಂಶ – ಜೀವಾಂಶ ಸದಾಕಾಲ ಇರುವಂತೆ ಮಾಡುವುದೇ ಮಣ್ಣನ್ನು ಬೆಳೆಸುವುದು ಎಂದರ್ಥ. ಇವೆಲ್ಲವನ್ನೂ ಮಣ್ಣು ಹೊದಿಕೆ ಮೂಲಕ ಮಾಡಬಹುದು. ನಮಗೆ ಗೊತ್ತಿರಲಿ. ಮಣ್ಣುಜೀವಾಣುಗಳಿಗೆ ಸೂರ್ಯನೇ ಮೊದಲ ವೈರಿ. ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು, ಕಳೆನಾಶಕಗಳೇ ಎರಡನೇ ವೈರಿ. ಹೊಲ – ಗದ್ದೆ – ತೋಟಗಳಲ್ಲಿ ಸದಾಕಾಲ ನಿಂತುಬಿಡುವ ಕೆಸರು ನೀರೇ ಮೂರನೇ ವೈರಿ. ಗಿಡಗಳನ್ನು ಬೆಳೆಸಲು ಮಣ್ಣಲ್ಲಿ ತೇವಾಂಶ ಇರಬೇಕೇ ಹೊರತು ನೀರಲ್ಲ.

1. ಆದಷ್ಟೂ ಯಾಂತ್ರಿಕ ಉಳುಮೆ ಮಾಡುವುದನ್ನು ನಿಲ್ಲಿಸಿ. ಕೆಳಮಣ್ಣನ್ನು ಕದಲಿಸಬೇಡಿ. ಮಣ್ಣು ಜೀವಿಗಳು ಮಣ್ಣಲ್ಲಿ ಸಂಚರಿಸುತ್ತಾ ತಾವೇ ಸಹಜವಾಗಿ ಉಳುಮೆ ಮಾಡಿಬಿಡುತ್ತವೆ. ಇದನ್ನೇ ಮಣ್ಣಿನ ಜೈವಿಕ ಉಳುಮೆ ಎನ್ನುವುದು.
2. ಮಣ್ಣಲ್ಲಿ ಜೀವಮಂಡಲ ಇರುವಂತೆ ಮಾಡಲು ಕಾಂಪೋಸ್ಟ್ ಬಳಸಿ
3. ಮಣ್ಣಲ್ಲಿ ಸಾವಯವ ವಸ್ತುಗಳು ಸದಾ ಇರುವಂತೆ ಮಾಡಲು ಮಣ್ಣು ಹೊದಿಕೆ ಮಾಡಿ
4. ಆದಷ್ಟೂ ಬಹುಬೆಳೆಗಳನ್ನು ಬೆಳೆಸಿ – ಮಣ್ಣ ಮೇಲೆ ವೈವಿಧ್ಯಮಯ ಬೆಳೆಗಳಿದ್ದಷ್ಟೂ ಮಣ್ಣೊಳಗೆ ವೈವಿಧ್ಯಮಯ ಜೀವಜಂತುಗಳಿರುತ್ತವೆ.
5. ಮಣ್ಣ ಮೇಲೆ ಸದಾಕಾಲ ಯಾವುದಾದರೂ ಗಿಡಗಳು ಇರುವಂತೆ ನೋಡಿಕೊಳ್ಳಿ. ಅವು ‘ ಕಳೆ ಗಿಡಗಳಾಗಿದ್ದರೂ ಸರಿಯೇ.
7. ಮಣ್ಣಿನ ಸ್ಥಿತಿಯನ್ನು ಸುಧಾರಿಸಲು ಹಸಿರೆಲೆ ಗೊಬ್ಬರವನ್ನು ಬಳಸಿ
8. ಮಣ್ಣಿಗೆ ಮೈಕೋರೀಝಾ ಫಂಗೀ ಜೀವಾಣುವನ್ನು ಸೇರಿಸಿ
9. ಫಂಗೀಗಳಿಗೆ ಆಹಾರವಾಗಿ ಮರದ ಹೊಟ್ಟು – ತೊಗಟೆ ಇತ್ಯಾದಿಗಳನ್ನು ಬಳಸಿ
10. ಮಣ್ಣು ತನ್ನಷ್ಟಕ್ಕೇ ತಾನೇ ಫಲವತ್ತುಗೊಳ್ಳುವಂತಹ ವ್ಯವಸ್ಥೆಯನ್ನು ನಿಮ್ಮ ಹೊಲ – ತೋಟಗಳಲ್ಲಿ ನಿರ್ಮಿಸಿ.

LEAVE A REPLY

Please enter your comment!
Please enter your name here