2022 /30 ನೇ ಶ್ರಾವಣ 1943 ಶಕ. ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ. ನೈರುತ್ಯ ಮುಂಗಾರು ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿಯ ಬಹುತೇಕ ಕಡೆಗಳಲ್ಲಿ ಮತ್ತು ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಭಾರಿ ಮಳೆಯ ಪ್ರಮಾಣ (ಸೆಂ.ಮೀನಲ್ಲಿ): ಉಡುಪಿ 11; ಕೋಟ, ಕಾರ್ಕಳ (ಎರಡೂ ಉಡುಪಿ ಜಿಲ್ಲೆ) ತಲಾ 8.
ಇತರ ಮುಖ್ಯ ಮಳೆಯ ಪ್ರಮ(ಸೆಂ.ಮೀನಲ್ಲಿ): ನಿಲ್ಕುಂದ ಎಆರ್ಜಿ (ಉತ್ತರ ಕನ್ನಡ ಜಿಲ್ಲೆ) 6; ಪಣಂಬೂರು (ದಕ್ಷಿಣ ಕನ್ನಡ ಜಿಲ್ಲೆ), ಶಿರಾಲಿ (ಉತ್ತರ ಕನ್ನಡ ಜಿಲ್ಲೆ) ತಲಾ 5; ಬೆಳ್ತಂಗಡಿ (ದಕ್ಷಿಣ ಕನ್ನಡ...
ಯುದ್ಧದ ಬಗ್ಗೆ ಹಲವರು ಭಾವೋದ್ವೇಗದಿಂದ ಮಾತನಾಡುತ್ತಿರುತ್ತಾರೆ. “ಆ ನೆರೆಯ ರಾಷ್ಟ್ರಕ್ಕೆ ಬುದ್ದಿ ಕಲಿಸಬೇಕಾದರೆ ಯುದ್ಧವಾಗಬೇಕು” ಎಂದು ಅಬ್ಬರಿಸಿ ಬೊಬ್ಬಿರಿಯುತ್ತಿರುತ್ತಾರೆ. ಒಂದುವೇಳೆ ಯುದ್ಧ ಸಂಭವಿಸಿದರೆ ಅದರ ಪರಿಣಾಮಗಳ ಬಗ್ಗೆ ಅವರು ಯೋಚಿಸಿರುವುದಿಲ್ಲ. ಇದು ವಿವಿಧ ಉತ್ಪಾದಕ ರಂಗಗಳ ಮೇಲೆ ಕೆಟ್ಟ ಪ್ರಭಾವ ಉಂಟು ಮಾಡುತ್ತದೆ. ಮುಖ್ಯವಾಗಿ ಕೃಷಿಕ್ಷೇತ್ರ ನಲುಗಿ ಹೋಗುತ್ತದೆ. ಯುದ್ಧಕ್ಕೂ ಕೃಷಿಗೂ ಏನು ಸಂಬಂಧ ಎಂದು ಅಚ್ಚರಿಯಾಯಿತೇ ?
ಇಂದು ಯುದ್ಧ ಸಾಂಪ್ರಾದಾಯಿಕ ನೆಲೆಗಟ್ಟಿನಲ್ಲಿ ನಡೆಯುವುದಿಲ್ಲ. ವಿಶಾಲವಾದ ರಣಾಂಗಣದಲ್ಲಿ ಎರಡು ಕಡೆಯ ಪಡೆಗಳು ಸೇರಿ ಕತ್ತಿ ಹಿಡಿದು ಅಥವಾ ಬದುಕು ಹಿಡಿದು ಪರಸ್ಪರರತ್ತ ಗುಂಡು...
ಬೆಂಗಳೂರು,ಆ.20: (ಯು.ಎನ್.ಐ.) ರೈತರನ್ನು ರಫ್ತುದಾರರನ್ನಾಗಿ ಮಾಡಿ ಅವರು ಶಕ್ತಿಶಾಲಿಯಾಗಿ ಲಾಭವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಎಕ್ಸ್ಪೋರ್ಟ್ ಲ್ಯಾಬ್ ಆರಂಭಿಸಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ಕೃಷಿ ಇಲಾಖೆ ಜಲಾನಯನ ಅಭಿವೃದ್ಧಿ ಇಲಾಖೆ ಅಪೆಡಾ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ಉತ್ಪಾದಕರ ಸಂಸ್ಥೆಗಳ ಹಾಗೂ ರಫ್ತುದಾರರ ಸಮಾವೇಶ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ಮೊದಲ ಹಂತದಲ್ಲಿ ಐದು ರೈತರ ಎಕ್ಸ್ಪೋರ್ಟ್ ಲ್ಯಾಬ್‌ಗಳನ್ನು ಗುರುತಿಸಲಾಗಿದೆ.ಇಂಡಿ, ಹನುಮನಮಟ್ಟಿ, ನಾಗೇನಹಳ್ಳಿ, ವರದಗೇರಾ ಬನವಾಸಿಗಳಲ್ಲಿ ರಫ್ತುದಾರರ ಲ್ಯಾಬ್ ಆರಂಭಿಸಲು ಗುರುತಿಸಲಾಗಿದೆ ಎಂದರು.
ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು.ಪ್ರೊಸೆಸ್ ಇಂಡಸ್ಟ್ರಿಯಿಂದ ರೈತ ಲಾಭ...
2022 /29 ನೇ ಶ್ರಾವಣ 1943 ಶಕ ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ನೈರುತ್ಯ ಮುಂಗಾರು ರಾಜ್ಯದಲ್ಲಿ ದುರ್ಬಲವಾಗಿತ್ತು. ಕರಾವಳಿಯ ಬಹುತೇಕ ಕಡೆಗಳಲ್ಲಿ ; ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ.
ಮುಖ್ಯ ಮಳೆಯ ಪ್ರಮಾಣ (ಸೆಂ.ಮೀನಲ್ಲಿ):
ಕ್ಯಾಸಲ್ ರಾಕ್ (ಉತ್ತರ ಕನ್ನಡ ಜಿಲ್ಲೆ) 6; ಸೈದಾಪುರ (ಯಾದಗಿರಿ ಜಿಲ್ಲೆ) 4; ಜಗಲಭೆಟ್, ಕದ್ರಾ (ಎರಡೂ ಉತ್ತರ ಕನ್ನಡ ಜಿಲ್ಲೆ) ತಲಾ 3; ಸಿದ್ದಾಪುರ (ಉಡುಪಿ ಜಿಲ್ಲೆ) 2; ಶಿರಾಲಿ, ಕಾರ್ಕಳ (ಉಡುಪಿ ಜಿಲ್ಲೆ), ಗೇರುಸೊಪ್ಪ...
ಅಸಮ ಮಳೆಯಿಂದಾಗಿ 2022-23ರಲ್ಲಿ ಭಾರತದಲ್ಲಿ ಅಕ್ಕಿ ಉತ್ಪಾದನೆಯು 0.9% ರಷ್ಟು ಕಡಿಮೆಯಾಗಬಹುದು ಎಂದು ಅಮೆರಿಕಾದ ಕೃಷಿ ಇಲಾಖೆ ಹೇಳಿದೆ.
ಭಾರತದಾದ್ಯಂತ ಅಕ್ಕಿ ಬೆಲೆಗಳು ಏರುತ್ತಿವೆ, ಭತ್ತದ ಬೆಳೆಯೇ ಪ್ರಧಾನವಾಗಿರುವ ಪ್ರದೇಶಗಳಲ್ಲಿಯೂ ಸಹ. ಈ ಬೆಳವಣಿಗೆಯು ದೇಶವು ಅಸಹಜ ಖಾರಿಫ್ ಋತುವಿನಲ್ಲಿ ಮಳೆಯ ಅಸಮಾನ ಹಂಚಿಕೆಯನ್ನು ಅನುಭವಿಸುತ್ತಿರುವಾಗಲೂ ಬರುತ್ತದೆ.
ಭಾರತದ ಅರ್ಧದಷ್ಟು ಜನಸಂಖ್ಯೆಯ ಪ್ರಧಾನ ಆಹಾರವಾಗಿರುವ ಈ ಏಕದಳ ಧಾನ್ಯ, ದೇಶದ ಅಕ್ಕಿ ಬೆಲ್ಟ್‌ನಲ್ಲಿಯೂ ಸಹ ದುಬಾರಿಯಾಗಿದೆ. ಉದಾಹರಣೆಗೆ, ಅಕ್ಕಿಯನ್ನು ಚೆನ್ನೈನಲ್ಲಿ 58 ರೂ.ಗೆ ಮತ್ತು ಕೋಲ್ಕತ್ತಾದಲ್ಲಿ ಕೆಜಿಗೆ 41 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಕಳೆದ ಒಂದು ತಿಂಗಳ...
ಕೃಷಿಗೆ ನೀರಿನ ಅವಶ್ಯಕತೆ ಎಷ್ಟಿದೆ? ಇದರ ಪೂರೈಕೆಗೆ ಯೋಜನೆಗಳು ಏನು? ಎಂಬ ಸ್ಪಷ್ಟ ಅರಿವು ಈಗ ಮರೆಯಾಗಿದೆ. ವೈಜ್ಞಾನಿಕತೆ ಮತ್ತು ಅಭಿವೃದ್ಧಿಯ ಹೆಸರಲ್ಲಿ ನೀರಾವರಿ ಯೋಜನೆಗಳು ವಿಸ್ತಾರವಾಗಿ ಬೆಳೆದವು. ಇಂದು ಭಾರತದಲ್ಲಿ ನೀರಾವರಿ ಯೋಜನೆಗಾಗಿಯೇ ಲಕ್ಷಾಂತರ ಎಕರೆ ಕಾಡು ಮುಳುಗಡೆಯಾಗಿದೆ. ಇನ್ನೂ ಆಗುತ್ತಿದೆ. ಇದರಿಂದ ಲಕ್ಷಾಂತರ ಜನರ ಬದುಕು, ಜೀವನ ಸಂಸ್ಕೃತಿ, ಸಂಪ್ರದಾಯಗಳು ನಾಶಗೊಂಡಿವೆ.
ಕೃಷಿ ಮಾಡಲು ಬೇಕಾಗಿರುವುದೇನು? ಇದು ಎಲ್ಲೆಲ್ಲಿಂದ ಸಿಗುತ್ತದೆ ? ನೈಸರ್ಗಿಕವಾಗಿ ನಾವು ಯಾವ ರೀತಿ ಪಡೆಯಬಹುದು? ಎಂಬ ಸ್ಪಷ್ಟತೆ ಬೇಕಾಗುತ್ತದೆ. ಈ ಜ್ಞಾನ ನಮ್ಮ ಪೂರ್ವಜರಿಗೆ ಇತ್ತು. ಈ...
ಬಿತ್ತನೆಯಾಗಿ 50-75 ದಿನಗಳ ಗೋವಿನಜೋಳ ಬೆಳೆಗೆ ತೇವಾಂಶ ಕೊರತೆ ಆಗುತ್ತಿದ್ದರೆ, ಸಾಲು ಬಿಟ್ಟು ಸಾಲಿಗೆ ನೀರು ಹಾಯಿಸುವುದು ಸೂಕ್ತ.
ಹೂವಾಡುವ ಹಂತದಲ್ಲಿ ಇರುವ ಸೋಯಾ ಅವರೆ, ಶೇಂಗಾ ಬೆಳೆಗಳಿಗೆ ತೇವಾಂಶ ಕೊರತೆ ಇದ್ದರೆ, ತುಂತುರು ನೀರಾವರಿ ಸೌಲಭ್ಯ ಇರುವಲ್ಲಿ ಅವುಗಳ ಬಳಕೆ ಮಾಡಬಹುದು.
ಈ ಬೆಳೆಗಳಿಗೆ ಇವು ಸಂದಿಗ್ಧ ಹಂತಗಳಾಗಿದ್ದು, ತೇವಾಂಶ ಕೊರತೆಯಿಂದ ಇಳುವರಿಯಲ್ಲಿ ಗಮನಾರ್ಹ ಕಡಿತ ಉಂಟಾಗುವ ಸಂಭವ ಹೆಚ್ಚು.
ಆಗಸ್ಟ್ ಕೊನೆಯ ವಾರದಲ್ಲಿ ಮಳೆಯ ಮುನ್ಸೂಚನೆ ಗಮನಿಸಿ ತಕ್ಷಣ ಮಾತ್ರ ಕೈಗೊಳ್ಳುವುದು ಸೂಕ್ತ ಎಂಬುದು ಈ ತಡ ಎಚ್ಚರಿಕೆಯ ಉದ್ದೇಶ.
(ವರದಾ ಕೃಷಿಕರ ವೇದಿಕೆಯ ಸೇವೆ)
ಗುರುವಾರ , 18ನೇ ಆಗಸ್ಟ್ 2022 /27 ನೇ ಶ್ರಾವಣ 1943 ಶಕ
ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ನೈರುತ್ಯ ಮುಂಗಾರು ರಾಜ್ಯದಲ್ಲಿ ದುರ್ಬಲವಾಗಿತ್ತು.
ಕರಾವಳಿಯ ಬಹುತೇಕ ಕಡೆಗಳಲ್ಲಿ ಮತ್ತು ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಮುಖ್ಯ ಮಳೆಯ ಪ್ರಮಾಣ (ಸೆಂ.ಮೀನಲ್ಲಿ): ಹೊನ್ನಾವರ 3; ಬಸಗೋಡು, ಬೇಲಿಕೇರಿ, ಭಟ್ಕಳ, ಅಂಕೋಲ (ಎಲ್ಲಾ ಉತ್ತರ ಕನ್ನಡ ಜಿಲ್ಲೆ) ತಲಾ 2; ಸಿದ್ದಾಪುರ, ಕುಮಟ, ಕದ್ರಾ (ಎಲ್ಲಾ ಉತ್ತರ ಕನ್ನಡ ಜಿಲ್ಲೆ), ಕಾರವಾರ, ಕುಂದಾಪುರ, ಬ್ರಹ್ಮಾವರ, ಸಿದ್ದಾಪುರ (ಎಲ್ಲಾ ಉಡುಪಿ ಜಿಲ್ಲೆ), ಪಣಂಬೂರು, ಮಂಗಳೂರು ವಿಮಾನ...
ಮುಂದಿನ ಐದು ದಶಕಗಳಲ್ಲಿ ಕರ್ನಾಟಕ ಸಹಿತ ಭಾರತದ ದಕ್ಷಿಣ ರಾಜ್ಯಗಳಲ್ಲಿ ಸೌರಶಕ್ತಿ ಮತ್ತು ಪವನ ಶಕ್ತಿ ಸಂವರ್ಧನೆಯ ಮೇಲೆ ಪರಿಣಾಮ ಬೀರಬಲ್ಲ ಹವಾಮಾನ ಬದಲಾವಣೆ ಮತ್ತಿತರ ಹಲವು ಅಂಶಗಳತ್ತ ಪುಣೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯರಾಲಜಿ (IITM) ಯ ಸಂಶೋಧನೆಯು ಬೆಳಕು ಚೆಲ್ಲಿದೆ. ಜೊತೆಗೆ ಹಲವು ಪ್ರಶ್ನೆಗಳನ್ನೂ ಎತ್ತಿದೆ.
ಕರ್ನಾಟಕ ಸಚಿವ ಸಂಪುಟವು ರಾಜ್ಯದ ನವೀಕರಿಸಬಹುದಾದ ಇಂಧನ ನೀತಿ 2022-2027 ಅನ್ನು ಏಪ್ರಿಲ್ ತಿಂಗಳಲ್ಲಿ ಅನುಮೋದಿಸಿತು. ಮುಂದಿನ ಐದು ವರ್ಷಗಳಲ್ಲಿ ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆಯಲ್ಲಿ 10 ಗಿಗಾ ವ್ಯಾಟ್ ಸಾಮಥ್ರ್ಯದ ಹೆಚ್ಚಳಕ್ಕೆ ಕರೆ...
"ಸರಿಯಾದ ಆಹಾರವನ್ನು ತೆಗೆದುಕೊಳ್ಳದೇ ಸರಿಯಾದ ಆರೋಗ್ಯ ಪಡೆಯಲಾಗುವುದಿಲ್ಲ, ಸರಿಯಾದ ಆರೋಗ್ಯ ಇಲ್ಲದೆ ಸರಿಯಾದ ಅನಂದ ಪಡೆಯಲಾಗುವುದಿಲ್ಲ"
"ನಮ್ಮ ಆಹಾರವನ್ನು ನಾವೇ ಬೆಳೆಯುವುದು ನಮ್ಮ ಹಣವನ್ನು ನಾವೇ ಮುದ್ರಿಸಿಕೊಂಡ ಹಾಗೆ"
*ಮೇಲಿನ ಇವೆರಡು ಮಾತುಗಳನ್ನು ಗಮನಿಸಿದಾಗ ಆಹಾರ,ಆರೋಗ್ಯ,ಅನಂದ,ಆದಾಯ ಒಂದಕ್ಕೊಂದು ಬೆಸೆದುಕೊಂಡಿದೆ,ಇವೆಲ್ಲವನ್ನೂ ಪ್ರತ್ಯೇಕವಾಗಿ ನೋಡಲಾಗುವುದಿಲ್ಲ ಮತ್ತು ಪ್ರತ್ಯೇಕವಾಗಿ ಅನುಭವಿಸಲು ಬರುವುದಿಲ್ಲ.ಇವೆಲ್ಲಾ ಒಟ್ಟಾರೆಯಾಗಿ ಇದ್ದಾಗ ಮಾತ್ರ ಮಾನಸಿಕ ನೆಮ್ಮದಿ ಮತ್ತು ದೈಹಿಕ ಆರೋಗ್ಯ ಪಡೆಯಲು ಸಾಧ್ಯ.ಇವುಗಳ ಮೂಲ ಮಣ್ಣು,ಅಂದರೆ ನಮ್ಮ ಕೃಷಿ ಭೂಮಿಯಲ್ಲಿ ನಮ್ಮ ಕುಟುಂಬಕ್ಕೆ ಬೇಕಾದ ಆಹಾರವನ್ನು ಸಣ್ಣ ಮಟ್ಟದಲ್ಲಿ ಉತ್ಪಾದನೆ ಮಾಡುವುದರಿಂದ ಉತ್ತಮ ಪೌಷ್ಟಿಕ ಆಹಾರ,ಶುದ್ಧ ಗಾಳಿ...