ಬಿತ್ತನೆಯಾಗಿ 50-75 ದಿನಗಳ ಗೋವಿನಜೋಳ ಬೆಳೆಗೆ ತೇವಾಂಶ ಕೊರತೆ ಆಗುತ್ತಿದ್ದರೆ, ಸಾಲು ಬಿಟ್ಟು ಸಾಲಿಗೆ ನೀರು ಹಾಯಿಸುವುದು ಸೂಕ್ತ.
ಹೂವಾಡುವ ಹಂತದಲ್ಲಿ ಇರುವ ಸೋಯಾ ಅವರೆ, ಶೇಂಗಾ ಬೆಳೆಗಳಿಗೆ ತೇವಾಂಶ ಕೊರತೆ ಇದ್ದರೆ, ತುಂತುರು ನೀರಾವರಿ ಸೌಲಭ್ಯ ಇರುವಲ್ಲಿ ಅವುಗಳ ಬಳಕೆ ಮಾಡಬಹುದು.
ಈ ಬೆಳೆಗಳಿಗೆ ಇವು ಸಂದಿಗ್ಧ ಹಂತಗಳಾಗಿದ್ದು, ತೇವಾಂಶ ಕೊರತೆಯಿಂದ ಇಳುವರಿಯಲ್ಲಿ ಗಮನಾರ್ಹ ಕಡಿತ ಉಂಟಾಗುವ ಸಂಭವ ಹೆಚ್ಚು.
ಆಗಸ್ಟ್ ಕೊನೆಯ ವಾರದಲ್ಲಿ ಮಳೆಯ ಮುನ್ಸೂಚನೆ ಗಮನಿಸಿ ತಕ್ಷಣ ಮಾತ್ರ ಕೈಗೊಳ್ಳುವುದು ಸೂಕ್ತ ಎಂಬುದು ಈ ತಡ ಎಚ್ಚರಿಕೆಯ ಉದ್ದೇಶ.
(ವರದಾ ಕೃಷಿಕರ ವೇದಿಕೆಯ ಸೇವೆ)