ಕಡಕನಾಥ್ ಕಪ್ಪುಕೋಳಿಯ ಬಗ್ಗೆ ತಿಳಿದಿದ್ದಾಯ್ತು. ಈಗ ಅವುಗಳ ಸಾಕಣೆ ವಿವರ ಗಮನಿಸೋಣ. ಒಂದೇ ಮಾತಿನಲ್ಲಿ ಹೇಳುವುದಾದರೆ ಕಡಿಮೆ ರಿಸ್ಕ್, ಲಾಭ ಅಧಿಕ ಎನ್ನಬಹುದು. ದೇಶದಾದ್ಯಂತ ಕಡಕನಾಥ್ ಕೋಳಿ ಮಾಂಸಕ್ಕೆ ಹೆಚ್ಚಾಗುತ್ತಿರುವ ಬೇಡಿಕೆ ಗಮನಿಸಿ ಮಧ್ಯಪ್ರದೇಶ ಸರ್ಕಾರ MPKadakNath ಹೆಸರಿನ ಆ್ಯಪ್ ಶುರು ಮಾಡಿದೆ.
ಈ ಕೋಳಿಯ ಅಧಿಕ ರುಚಿಯಷ್ಟೇ ಬೆಲೆಯೂ ಕೂಡ ಸದ್ಯಕ್ಕೆ ಅಧಿಕ. ಹ್ಯಾಚರಿಗಳಲ್ಲಿ ಕಪ್ಪುಕೋಳಿಗಳನ್ನು ಸಾಕಣೆ ಮಾಡಲಾಗುತ್ತಿದೆ. ಕೋಳಿಮರಿಗಳನ್ನು 80 ರಿಂದ 90 ರೂ.ಗಳವರೆಗೂ ಮಾರಲಾಗುತ್ತಿದೆ. ನಕ್ಸಲ್ ಪೀಡಿತ ಪ್ರದೇಶ ಛತ್ತೀಸಗಡ್ ದಲ್ಲೂ ಇದು ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಇಲ್ಲಿಯ ದಾಂತೇವಾಡದಲ್ಲಿ ‘ಕಾಲಿಮಾಸಿ’ನ...
“ಕರ್ನಾಟಕ ರಾಜ್ಯ ಮಾವು ಮಂಡಳಿ, ಬೆಳೆಗಾರರು ಗುಣಮಟ್ಟದ ಮಾವು ಬೆಳೆಯುವ ದಿಶೆಯಲ್ಲಿ ಅಗತ್ಯವಾದ ಪ್ರೋತ್ಸಾಹ ನೀಡುತ್ತಿದೆ. ಇದರ ಜೊತೆಗೆ ಮಾರುಕಟ್ಟೆ ವಿಸ್ತರಿಸಲೂ ಕ್ರಮ ಕೈಗೊಳ್ಳುತ್ತಿದೆ. ಇದರ ಗರಿಷ್ಠ ಪ್ರಯೋಜನಗಳನ್ನು ಬೆಳೆಗಾರರು ಪಡೆದುಕೊಳ್ಳಬೇಕಾದ ಅಗತ್ಯವಿದೆ” ಹೀಗೆಂದು ಮಾವು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಡಾ. ನಾಗರಾಜು ಅಭಿಪ್ರಾಯಪಡುತ್ತಾರೆ.
“ಕರ್ನಾಟಕ ರಾಜ್ಯ ಮಾವು ಮಂಡಳಿ, ಬೆಳೆಗಾರರು ಗುಣಮಟ್ಟದ ಮಾವು ಬೆಳೆಯುವ ದಿಶೆಯಲ್ಲಿ ಅಗತ್ಯವಾದ ಪ್ರೋತ್ಸಾಹ ನೀಡುತ್ತಿದೆ. ಇದರ ಜೊತೆಗೆ ಮಾರುಕಟ್ಟೆ ವಿಸ್ತರಿಸಲೂ ಕ್ರಮ ಕೈಗೊಳ್ಳುತ್ತಿದೆ. ಇದರ ಗರಿಷ್ಠ ಪ್ರಯೋಜನಗಳನ್ನು ಬೆಳೆಗಾರರು ಪಡೆದುಕೊಳ್ಳಬೇಕಾದ ಅಗತ್ಯವಿದೆ” ಹೀಗೆಂದು ಮಾವು ಮಂಡಳಿಯ ವ್ಯವಸ್ಥಾಪಕ...
ಕರಾವಳಿ ಪ್ರದೇಶದಲ್ಲಿ ಸಂಚರಿಸುವಾಗ ಗೇರುತೋಟಗಳು ಕಾಣಸಿಗುತ್ತವೆ. ಅಲ್ಲಿ ಇದು ಪಾರಂಪಾರಿಕವಾಗಿ ಮಾಡಿಕೊಂಡು ಬಂದ ಕೃಷಿ. ಮುಖ್ಯವಾಗಿ ಮಳೆಯಾಶ್ರಿತದಲ್ಲಿ ಇದನ್ನು ಮಾಡಲಾಗುತ್ತಿತ್ತು. ಆದರೆ ಇದನ್ನೇ ಪ್ರಧಾನವಾಗಿ ಮಾಡುತ್ತಿರಲಿಲ್ಲ. ಭತ್ತ, ಅಡಿಕೆ ಕೃಷಿ ಮಾಡುತ್ತಿದ್ದವರು ಹೆಚ್ಚುವರಿ ಗುಡ್ಡ ಪ್ರದೇಶವಿದ್ದರೆ ಅಲ್ಲಿ ಇದನ್ನು ಬೆಳೆಯುತ್ತಿದ್ದರು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ...
ಕರಾವಳಿ ಪ್ರದೇಶದಲ್ಲಿ ಸಾಂಪ್ರದಾಯಿಕವಾಗಿ ಭತ್ತ ಬೆಳೆಯುತ್ತಿದ್ದ ಬಹುತೇಕ ಪ್ರದೇಶಗಳನ್ನು ವಾಣಿಜ್ಯ ಬೆಳೆ ಅಡಿಕೆ ಆಕ್ರಮಿಸಿಕೊಂಡಿತ್ತು. ಇದಕ್ಕೆ ಬೇರೆಬೇರೆ ಕಾರಣಗಳಿವೆ. ಅಡಿಕೆಗೆ ಬೆಳೆ ಕಡಿಮೆಯಾದಾಗ ಕೃಷಿಕರು ರಬ್ಬರಿನತ್ತ ತಿರುಗಿದರು. ಆದರೆ ಇಂದು ರಬ್ಬರಿಗೆ ಉತ್ತಮ ಧಾರಣೆ ಇಲ್ಲ. ಬಹಳಷ್ಟು...
ಪ್ರತಿವರ್ಷವೂ ಮಾವು ಬೆಳೆ ಇಳುವರಿ ಏಕಪ್ರಕಾರವಾಗಿರುವುದಿಲ್ಲ. ಒಂದು ವರ್ಷ ಏರುಹಂಗಾಮು ಅಂದರೆ ಅಧಿಕ ಇಳುವರಿ ಬಂದರೆ ಮರುವರ್ಷ ಇಳಿಹಂಗಾಮು ಉಂಟಾಗುತ್ತದೆ. ಏರುಹಂಗಾಮು ಇಳುವರಿಯ ಶೇಕಡ 50ರಷ್ಟು ಇಳುವರಿ ಮಾತ್ರ ಬರಬಹುದು. ಅದೂ ಸೂಕ್ತರೀತಿಯಲ್ಲಿ ಸಸ್ಯಸಂರಕ್ಷಣ ಕ್ರಮಗಳನ್ನು ತೆಗೆದುಕೊಂಡಾಗ ಮಾತ್ರ. ಸೂಕ್ತಹಂತದಲ್ಲಿ ಇಂಥ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕ. ಈ ಹಂತಗಳು ಎಲ್ಲ ಜಿಲ್ಲೆಯಲ್ಲಿಯೂ ಒಂದೇರೀತಿ ಆಗಿರುವುದಿಲ್ಲ ಎಂಬುದು ಗಮನಾರ್ಹ. ಈ ವರ್ಷ ಮಾವಿಗೆ ಇಳಿಹಂಗಾಮು ಆಗಿರುತ್ತದೆ.
ಮಾವು ಹೂ ಬಿಡುವ ಹಂಗಾಮಿನಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳು.
ಮಾವು ಹೂ ಬಿಡುವ ಹಂತದಲ್ಲಿ ಹೂ ಮೊಗ್ಗು, ಅರಳಿದ ಹೂತೆನೆ ಮತ್ತು...
ನವೆಂಬರ್ 15 ರಿಂದ 18ರವರೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಯೋಜಿಸಿರುವ ಕೃಷಿಮೇಳ-2018 ನಡೆಯಲಿದೆ. ಕೃಷಿ-ತೋಟಗಾರಿಕೆ-ಹೈನುಗಾರಿಕೆ-ರೇಷ್ಮೆ ಮತ್ತು ಜಾನುವಾರು ಸಾಕಣೆ ವಿಭಾಗಗಳಲ್ಲಿ ಆಗಿರುವ ಪ್ರಗತಿಗಳ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ದೊರೆಯಲಿದೆ. ಈ ಬಾರಿಯ ಕೃಷಿಮೇಳ ಹಿಂದಿಗಿಂತಲೂ ಹೆಚ್ಚು ವಿಶೇಷತೆಗಳನ್ನು ಒಳಗೊಂಡಿದೆ. 12 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಗಾಂಧಿ ಕೃಷಿವಿಜ್ಞಾನ ಕೇಂದ್ರದ ಆವರಣದಲ್ಲಿ ಸುಸಜ್ಜಿತ ಮಳಿಗೆಗಳನ್ನು ನಿರ್ಮಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ. ರಾಜೇಂದ್ರ ಪ್ರಸಾದ್ ಅವರು ತಿಳಿಸಿದರು. ಈ ಸಂದರ್ಭದಲ್ಲಿ ವಿಸ್ತರಣಾ ವಿಭಾಗದ ನಟರಾಜು, ಸಂಶೋಧನಾ...
ಬೆಂಗಳೂರು ನಗರ ಜಿಲ್ಲೆ ಹೆಸರಘಟ್ಟ ಹೋಬಳಿಯ ದೊಡ್ಡವೆಂಕಟಪ್ಪ ಅವರಿಗೆ ಹಳ್ಳಿಕಾರ್ ರಾಸುಗಳನ್ನು ಸಾಕುವ ಖಾಯಷ್. ‘ರಾಸುಗಳು ಚೆನ್ನಾಗಿರಬೇಕಾದರೆ ತಳಿಯೂ ಶುದ್ದವಾಗಿರಬೇಕು’ ಎಂಬುದು ಇವರ ಮಾತು. ಈ ನಿಟ್ಟಿನಲ್ಲಿ ಹಳ್ಳಿಕಾರ್ ತಳಿ ಸಂವರ್ಧನೆ ಪ್ರವೃತ್ತಿ ರೂಢಿಸಿಕೊಂಡಿದ್ದಾರೆ. ಈ ತಳಿಯ ಹೋರಿಗಳು, ಹೈನುರಾಸುಗಳು ಮತ್ತು ಎತ್ತುಗಳು ಇವರಲ್ಲಿವೆ. ಹಳ್ಳಿಕಾರ್ ತಳಿಯ ರಾಸುಗಳು ಕಡಿಮೆಯಾಗುತ್ತಿವೆ. ಬಹಳ ಚೆಂದನೆಯ ರಾಸುಗಳಿವು. ದುಡಿಮೆಗೆ-ಹೊರೆ ಎಳೆಯುವುದಕ್ಕೆ ಇವುಗಳಿಗೆ ಸರಿಸಾಟಿಯಿಲ್ಲ. ಚೆನ್ನಾಗಿ ಸಾಕಾಣಿಕೆ ಮಾಡಿದರೆ ನೋಡುವುದೇ ಒಂದು ಸಂತೋಷ. ಇಂಥ ತಳಿ ಕಣ್ಮರೆಯಾಗಲು ಬಿಡಬಾರದು. ಈ ನಿಟ್ಟಿನಲ್ಲಿ ನನ್ನ ಕೈಲಾದ ಸೇವೆ ಮಾಡಲು...
ಜಗತ್ತಿನ ಶಕ್ತಿಯೇ ಸೂರ್ಯಕಿರಣ. ಇದರ ಕಾಸ್ಮಿಕ್ ಕಿರಣಗಳಿಂದ ಭೂಮಿಯ ಸಕಲ ಜೀವರಾಶಿಗಳೂ ಚೈತನ್ಯ ಪಡೆಯುತ್ತವೆ. ಈ ಕಿರಣಗಳ ಗರಿಷ್ಠ ಪ್ರಯೋಜನ ಪಡೆಯಬೇಕೆಂದರೆ ಇದರ ಸಂಪರ್ಕ ಜಾಸ್ತಿ ಮಾಡಿಕೊಳ್ಳಬೇಕಾಗುತ್ತದೆ. ಕೃಷಿಯಲ್ಲಿ ಇದರ ಸದುಪಯೋಗ ಬಹುಮಹಡಿ ಪದ್ಧತಿಯಿಂದ ದೊರೆಯುತ್ತದೆ. ಎಲ್ಲ ಗಿಡಮರಗಳಿಗೂ ಒಂದೇ ಪ್ರಮಾಣದ ಸೂರ್ಯಶಕ್ತಿ ಅಗತ್ಯ ಇರುವುದಿಲ್ಲ. ಕೆಲವಕ್ಕೆ ಹೆಚ್ಚು; ಕೆಲವಕ್ಕೆ ಕಡಿಮೆ ಬೇಕಾಗುತ್ತದೆ. ಅನಾದಿ ಕಾಲದಿಂದಲೂ ಭಾರತೀಯ ಕೃಷಿಕರು ಇವುಗಳನ್ನೆಲ್ಲ ಅಧ್ಯಯನ ಮಾಡಿ ಬಹುಮಹಡಿ ಕೃಷಿಯನ್ನು ಬಳಕೆಗೆ ತಂದು ಅಭಿವೃದ್ಧಿಪಡಿಸಿದ್ದಾರೆ.
ಈ ಪದ್ಧತಿ ಸಸ್ಯಗಳ ಸಾಂದ್ರತೆ ಹೊಂದಿಕೊಂಡಿರುತ್ತದೆ. ಉದಾಹರಣೆಗೆ ಹೇಳುವುದಾದರೆ ಮಲೆನಾಡಿನಲ್ಲಿ ಬಹಳ ಉತ್ತಮವಾಗಿ...
ಕೆಲವೇ ದಶಕಗಳ ಹಿಂದೆ ಕರ್ನಾಟಕದ ದೇಸೀಪಶು ಸಂಪತ್ತು ಹೇರಳ. ಅದರಲ್ಲೂ ಹಳ್ಳಿಕಾರ್, ಅಮೃತ್ ಮಹಲ್ ಮತ್ತು ಖಿಲಾರಿ ತಳಿ ರಾಸುಗಳು ಇಡೀ ದೇಶದಲ್ಲಿ ನಮ್ಮ ರಾಜ್ಯದ ಘನತೆಗೆ ಮತ್ತೊಂದು ಪ್ರತೀಕ. ಇದಕ್ಕೆ ಕಾರಣ ಹಲವು. ಇವುಗಳ ಬಿರುಸು, ಗತ್ತು-ಗಾಂಭೀರ್ಯ. ಚುರುಕುತನ, ಕಷ್ಟ ಸಹಿಷ್ಣುತೆ ಮತ್ತು ಅಪರಿಮಿತ ದುಡಿಮೆ ಅಪಾರ. ಉತ್ತರ ಪ್ರದೇಶದ ಸಿಂಧಿ, ಹರಿಯಾಣ, ಗೀರ್ ಮತ್ತು ಶಾಹಿವಾಲ್ ತಳಿಯ ರಾಸುಗಳು ಹೈನಿಗೆ ಹೆಸರುವಾಸಿಯಾದರೆ ಈ ರಾಸುಗಳು ವ್ಯವಸಾಯ ಮತ್ತು ಸಾರಿಗೆಗೆ ಪ್ರಖ್ಯಾತ.
ಹಳ್ಳಿಕಾರ್ ಎತ್ತುಗಳದೂ ಮತ್ತೂ ವೈಶಿಷ್ಟ. ಇವು ಷೋಕಿಗೆ ಎತ್ತು ಸಾಕುವವರಿಗೂ...
ಎತ್ತು ಎಮ್ಮೆ ಹಿಂಬದಿ ಕಾಲು ಎಳೆದು ಹಾಕುತ್ತಾ ಸಾಗುವುದನ್ನು ಗಮನಿಸಿರುತ್ತೀರಿ. ಇಂಥ ಎತ್ತುಗಳು ಹೊರೆ ಎಳೆಯಲು ಅಸಮರ್ಥವಾಗಿರುತ್ತವೆ. ಜಾನುವಾರುಗಳ ಇಂಥ ತೊಂದರೆಯನ್ನು ‘ಸಿಡಿಗಾಲು’ ಎನ್ನುತ್ತಾರೆ. ಇದು ಒಂದು ಕಾಯಿಲೆಯಲ್ಲ. ತೊಂದರೆ. ಸಿಡಿಗಾಲು ಉಂಟಾದ ಜಾನುವಾರು ತನ್ನ ಕಾಲನ್ನು ಸರಾಗವಾಗಿ ಮುಂದಿಡಲು ಆಗುವುದಿಲ್ಲ. ಕಾಲು ಮಡಚಲು ಆಗುವುದಿಲ್ಲ. ಹಿಂಬದಿ ಕಾಲನ್ನು ಎಳೆದೆಳೆದು ಹಾಕುತ್ತಿರುತ್ತದೆ. ಸರಾಗವಾಗಿ ಕೂರಲು-ಎದ್ದೇಳಲೂ ಇವುಗಳಿಗೆ ಆಗುವುದಿಲ್ಲ. ಹಿಂಬದಿಯ ಎರಡೂ ಕಾಲುಗಳಿಗೂ ಸಿಡಿಗಾಲು ಉಂಟಾದರೆ ಆ ಜಾನುವಾರು ಪಡುವ ಯಾತನೆ ಅಪಾರ ಜಾನುವಾರು ತನ್ನ ಹಿಂದಿನ ಕಾಲನ್ನು ಅಗತ್ಯಕ್ಕಿಂತ ಹೆಚ್ಚಾಗಿ ಹಿಂದಕ್ಕೆ ನೀವಿದಾಗ...
ಅಣಬೆ ಅತ್ಯುತ್ತಮ ಆಹಾರ. ಆದರೆ ಇದು ಇದುವರೆಗೂ ಜನಸಾಮಾನ್ಯರ ನಡುವೆ ಜನಪ್ರಿಯವಾಗದಿರುವುದೇ ಆಶ್ಚರ್ಯದ ಸಂಗತಿ. ಗ್ರಾಮೀಣ ಪ್ರದೇಶಗಳಲ್ಲಿ ಸಹಜವಾಗಿ ಬೆಳೆಯುವ ಅಣಬೆ ಆರಿಸಿ ತಿನ್ನುತ್ತಾರಾದರೂ ಇದು ಅಪಾಯಕಾರಿಯೂ ಆಗಬಹುದು. ಆಯ್ಕೆಮಾಡುವುದು ತಿಳಿಯದಿದ್ದಾಗ ವಿಷಕಾರಿ ಅಣಬೆ ತಿಂದು ತೀವ್ರ ತೊಂದರೆಗಳಿಗೆ ಸಿಲುಕಿದವರ ಉದಾಹರಣೆಗಳು ಅಪಾರ.ನಗರಪ್ರದೇಶಗಳಲ್ಲಿ ಕೃತಕ ರೀತಿ ಅಣಬೆ ಕೃಷಿಯಿದೆ. ಇಂಥ ಕೃಷಿ ಹೆಚ್ಚಾಗಬೇಕಿತ್ತು. ಆದರೆ ಪ್ರಚಾರದ ಕೊರತೆ, ಜನಸಾಮಾನ್ಯರ ಒಲವು ಅತ್ತ ಬೆಳೆಯದ ಕಾರಣ ಅಣಬೆ ಕೃಷಿವೃತ್ತಿಯೂ ಜನಪ್ರಿಯವಾಗಿಲ್ಲ. ಹೆಚ್ಚಾಗಿಯೂ ಇಲ್ಲ. ಎಲ್ಲೋ ಅಲ್ಲೊಬರು ಇಲ್ಲೊಬ್ಬರು ಅಣಬೆ ಕೃಷಿಕರು ಕಾಣಸಿಗುತ್ತಾರೆ. ಸ್ವಾದಿಷ್ಟ ಅಣಬೆ...