Home Blog Page 120
ಈ ಶೀರ್ಷಿಕೆ ಓದಿದ ಹಲವರಿಗಾದರೂ ಮಾವಿನಹಣ್ಣುಗಳು ಸಹಜವಾಗಿ ಮಾಗುತ್ತವೆ. ಅದರಲ್ಲೇನು ವಿಶೇಷ ಎನಿಸಿರಬಹುದು. ಆದರೆ ಮಾರುಕಟ್ಟೆಯ ಪೈಪೋಟಿಯಿಂದಾಗಿ ಮಾವಿನಹಣ್ಣುಗಳನ್ನು ಕಾರ್ಬೈಡ್ ಮೂಲಕ ಶೀಘ್ರವಾಗಿ ಹಣ್ಣಾಗಿಸಲಾಗುತ್ತದೆ. ಇಂಥ ಹಣ್ಣುಗಳ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಆದ್ದರಿಂದ ಈ ನಿಟ್ಟಿನಲ್ಲಿ ಕ್ರಮಕೈಗೊಂಡಿರುವ ರಾಜ್ಯದ ತೋಟಗಾರಿಕೆ ಇಲಾಖೆ ಮತ್ತು ಮಾವು ಮಂಡಳಿ "ವಿಷಮುಕ್ತ ಮಾವಿನಹಣ್ಣುಗಳನ್ನು ರೈತರ ಸಹಕಾರದಿಂದ ಗ್ರಾಹಕರಿಗೆ ತಲುಪಿಸಲು ಶ್ರಮಿಸುತ್ತಿದೆ. ================================ "ಇದೇ ಮೇ 30 ರಿಂದ ಜೂನ್ 24ರವರೆಗೆ ಬೆಂಗಳೂರು ಲಾಲ್ ಬಾಗಿನಲ್ಲಿ ಮಾವು-ಹಲಸು ಮಾರಾಟ ಮೇಳವಿರುತ್ತದೆ. ಈ ಸಂದರ್ಭದಲ್ಲಿ ವೈವಿಧ್ಯಮಯ ಮಾವಿನ ತಳಿಗಳು, ಹಲಸಿನ ತಳಿಗಳ ಪ್ರದರ್ಶನವೂ...
ಪತ್ರಕರ್ತ, ಕೃಷಿಕ ಚಿನ್ನಸ್ವಾಮಿ ವಡ್ಡಗೆರೆ ಅವರು ದಾರ್ಶನಿಕ, ಸಹಜ ಕೃಷಿಕ ಜಾನ್ ಜಾನ್ದಾಯ್ ಅವರನ್ನು ಥೈಲ್ಯಾಂಡಿನಲ್ಲಿ ಸಂದರ್ಶಿಸಿದ್ದರು. ತಂಪಾದ ಮಣ್ಣಿನ ಮನೆಗಳನ್ನು ನಿರ್ಮಿಸುವ ಕಲೆಗಾರನನ್ನು ಥೈಲ್ಯಾಂಡ್ ದೇಶದ ಚಾಂಗ್ ಮಾಯಿ ನಗರದ ಸಮೀಪವಿರುವ `ಪನ್ ಪನ್ ಸೆಂಟರ್' ನಲ್ಲಿ ಭೇಟಿಮಾಡಿ, ಇಡಿ ದಿನ ಅವರೊಂದಿಗಿದ್ದು ಅವರ ಜೀವನಾನುಭವಗಳನ್ನು ಕೇಳಿಸಿಕೊಂಡಿದ್ದರು. ಸಂವಾದ ನಡೆಸಿದ್ದರು. ಆ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೃಷಿ ಪ್ರವಾಸಗಳು ಹಲವು ಪಾಠ ಕಲಿಸುತ್ತವೆ. ಈ ಬಾರಿ ಹನ್ನೆರಡು ಮಂದಿ ರೈತ ತಂಡದೊಂದಿಗೆ ನಾನು ಹೋಗಿ ಬಂದದ್ದು `ಪ್ಯಾರಡೈಸ್ ಆಫ್ ಅಥರ್ ' ಎಂದೇ ಕರೆಯುವ...
ರಾಸಾಯನಿಕ ಮುಕ್ತ ಕೃಷಿ-ತೋಟಗಾರಿಕೆ ಪರಿಣಾಮಗಳು ಅನೇಕ. ಕೃಷಿ ಭೂಮಿಯ ಮಣ್ಣು ಭಾರಿ ಫ‌ಲವತ್ತತೆಯಿಂದ ಕೂಡಿರುತ್ತದೆ. ಇಳುವರಿಯಲ್ಲಿ ಸುಸ್ಥಿರತೆ ಇರುತ್ತದೆ. ಭೂಮಿಯಲ್ಲಿನ ಜೈವಿಕ ಚಟುವಟಿಕೆಗಳು ಅತ್ಯುತ್ತಮವಾಗಿರುತ್ತವೆ. ಇದಲ್ಲದೇ ಅಂತರ್ಜಲ ಶುದ್ಧವಾಗಿರುತ್ತದೆ. ವರ್ಷದಿಂದ ವರ್ಷಕ್ಕೆ ಸ್ವಾವಲಂಬನೆ ಹೆಚ್ಚುತ್ತಾ ಹೋಗುತ್ತದೆ. ಇಷ್ಟೆಲ್ಲ ಮಾಡಲು ದೃಢ ನಿರ್ಧಾರ ಬೇಕು. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹರಿಹಳ್ಳಿಯಲ್ಲಿ  ಡಾ. ವಿ.ಪಿ. ಹೆಗಡೆ ರಾಸಾಯನಿಕ ಮುಕ್ತ ಕೃಷಿ ಪದ್ಧತಿ ಅನುಸರಿಸುವ ನಿರ್ಧಾರ ಮಾಡಿದ್ದಾರೆ.  ಇವರು ಹಿರಿಯ ನಿವೃತ್ತ ಕೃಷಿವಿಜ್ಞಾನಿ. ವಿಜ್ಞಾನಿ ಆಗುವುದಕ್ಕೂ ಮೊದಲೂ, ಕೃಷಿ ಮಾಡುತ್ತಿದ್ದರು. ನಿವೃತ್ತಿ ಹೊಂದಿದ ನಂತರ ಪೂರ್ಣ ಪ್ರಮಾಣದಲ್ಲಿ...
ಟೊಮೆಟೊ ಹಣ್ಣು ಎಂದಾಕ್ಷಣ ನಮಗೆ ಅದರಲ್ಲಿರುವ 2-3 ತಳಿಗಳು ಕಣ್ಣಮುಂದೆ ಬಂದು ನಿಲ್ಲುತ್ತವೆ. ಆದರೆ ವಾಸ್ತವದಲ್ಲಿ ಟೊಮೆಟೊ ಹಣ್ಣಿನಲ್ಲಿ ಸುಮಾರು 700 ತಳಿಗಳು ಇವೆ. ಈ ತಳಿಗಳ ಪೈಕಿ ಚೆರ್ರಿ ಟೊಮೆಟೊ ತಳಿ ಕೂಡ ಒಂದು. ಬಹೂಪಯೋಗಿ ಆಗಿರುವ ಈ ತಳಿಯ ಪರಿಚಯ ಮಾತ್ರ ಅನೇಕ ರೈತಾಪಿ ವರ್ಗಕ್ಕೆ ಇಲ್ಲ. ಇಂಥದ್ದೊಂದು ಅಪರೂಪದ ತಳಿಯ ಬಗ್ಗೆ ಅಧ್ಯಯನ ನಡೆಸಿ, ರೈತಾಪಿ ವರ್ಗಕ್ಕೆ ಪರಿಚಯಿಸಿದೆ ‘ಪೀಪಲ್ ಟ್ರೀ’ ಸಂಸ್ಥೆ. ಅಕ್ಟೋಬರ್‌ನಿಂದ  ಏಪ್ರಿಲ್‌ವರೆಗೆ ಪಾಳುಭೂಮಿ, ತೋಟದ ಬೇಲಿಗಳ ಮೇಲೆ ಗೋಲಿ ಗಾತ್ರದ ಗೊಂಚಲು ಹಣ್ಣುಗಳನ್ನು ಬಿಟ್ಟು ಮಳೆಗಾಲದಲ್ಲಿ...
ನಾಗರಿಕತೆ ಬೆಳೆಯುತ್ತಾ ಹತ್ತು ಹಲವು ಬದಲಾವಣೆಗಳನ್ನು ಕಂಡಿದೆ. ಕೃಷಿಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ.  ನಿತ್ಯ ಹಲವು ರೈತರು ಕೃಷಿ ಉತ್ಪನ್ನಗಳನ್ನು ಬೆಳೆಯುವುದರ ಜೊತೆಗೆ ಸುಸ್ಥಿರ ಬದುಕು ಕಂಡುಕೊಳ್ಳಲು  ಪ್ರಯೋಗಗಳನ್ನು ಮಾಡುತ್ತಿದ್ದಾರೆ.  ಸಾಕಷ್ಟು ಮಂದಿ ಅಂತಹ ಪ್ರಯೋಗಗಳನ್ನು ಮಾಡಿ ಯಶಸ್ಸು ಕಂಡಿದ್ದಾರೆ.  ದಯಾನಂದ ಅಪ್ಪಯ್ಯನವರಮಠ ಅವರು ಬೈಲಹೊಂಗಲ ತಾಲೂಕಿನ ಕರುಗುಂದ ನಿವಾಸಿ . ಚಿತ್ರಕಲೆಯಲ್ಲಿ ಬಿ.ಎಫ್.ಎ ಪದವಿ ಪಡೆದಿದ್ದಾರೆ. ಕೃಷಿಯಲ್ಲಿ ಬದುಕಿನ ದಾರಿ ಕಂಡುಕೊಂಡಿದ್ದಾರೆ. ಇವರಿಗೆ 15 ಏಕರೆ ಜಮೀನಿದೆ. ಅದರಲ್ಲಿ ಮನೆಯ ಸುತ್ತ್ತಲಿನ 2 ಎಕರೆಯಲ್ಲಿ ವೃಕ್ಷಾಧಾರಿತ ಬೇಸಾಯ ಮಾಡುತ್ತಿದ್ದಾರೆ. ಜೇನುಕೃಷಿಯ ಜೊತೆ ಮಾವು ಚಿಕ್ಕು...
ರಾಜ್ಯದಲ್ಲಿ ವೈವಿಧ್ಯಮಯ ಮಾವು ತಳಿಗಳಿವೆ. ಬೆಳೆಗಾರರು ಇದನ್ನು ಶ್ರಮ-ಸಮಯ-ಹಣ ತೊಡಗಿಸಿ ಬೆಳೆಯುತ್ತಿದ್ದಾರೆ. ಇವರ ಪರಿಶ್ರಮಕ್ಕೆ ತಕ್ಕಮೌಲ್ಯ ಮತ್ತು ಗ್ರಾಹಕರಿಗೆ ಗುಣಮಟ್ಟದ ಹಣ್ಣುಗಳು ಲಭ್ಯವಾಗುವಂತೆ ಮಾಡಲು ರಾಜ್ಯ ಮಾವು ಮಂಡಳಿ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಈ ಬಗ್ಗೆ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಡಾ. ನಾಗರಾಜ್ ಅವರು “ಅಗ್ರಿಕಲ್ಚರ್ ಇಂಡಿಯಾ”ಕ್ಕೆ ವಿವರಿಸಿದ್ದಾರೆ.
ವಾಣಿಜ್ಯಿಕ ಹೈನುಗಾರಿಕೆಯಲ್ಲಿ  ಪಶು ಆಹಾರವನ್ನು(ಹಿಂಡಿ) ವ್ಯಾಪಕವಾಗಿ ಬಳಸಲಾಗುತ್ತದೆ.  ಆದರೆ ಇದೇ ಪಶು ಆಹಾರದಿಂದ ಹಸುಗಳಿಗೆ ಒಂದು ತರಹದ ಚರ್ಮರೋಗವೂ ಬರಬಹುದು. ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಹಿಂಡಿಯನ್ನು ಬದಲಿಸುವುದೇ ಇದಕ್ಕಿರುವ ಪರಿಹಾರ. “ನನ್ನ ಒಂದು ಹಸು ಯಾಕೋ ಪದೇ ಪದೇ ಹಿಂದಿನ ಕಾಲು ಕೊಡವಿಕೊಳ್ಳೋಕೆ ಶುರು ಮಾಡಿದೆ, ಕೊಂಚ ರಕ್ತಾನೂ ಬರ್ತಾ ಇದೆ. ಸ್ವಲ್ಪ ಬಂದು ನೋಡಬೇಕಾಗಿತ್ತು ಡಾಕ್ಟ್ರೇ ಅಂದು ಮಧ್ಯಾಹ್ನ ರೈತರೊಬ್ಬರ ಪೋನ್ ಕರೆ. ಹೋಗಿ ನೋಡಿದರೆ ಅದು ಬರೀ ಗಾಯದಿಂದ ಆಗುತ್ತಿದ್ದ ರಕ್ತಸ್ರಾವವಾಗಿರಲಿಲ್ಲ. ಎರಡೂ ಹಿಂಗಾಲುಗಳ ಗೊರಸಿನ ಸುತ್ತಲೂ ಚರ್ಮ ಬಿರುಕು ಬಿಟ್ಟಿತ್ತು....
ಕಾಂಕ್ರಿಟ್ ಕಾಡುಗಳ ನಡುವೆ ಕೈತೋಟಗಳು ಕಾಣಿಸುವುದು ಅಪರೂಪ. ಅದರಲ್ಲಿಯೂ ತುಂಬ ವ್ಯವಸ್ಥಿತವಾದ ಯೋಜನೆ ಮಾಡಿ ಸಾಧ್ಯವಿರುವಷ್ಟು ಸಸ್ಯಗಳನ್ನು ಬೆಳೆಸುವುದು ಸವಾಲೇ ಸರಿ. ಇಂಥ ಸವಾಲು ಸ್ವೀಕರಿಸಿ ಅತ್ಯುತ್ತಮ ಕೈತೋಟ ಮಾಡಿರುವ ಬೆಂಗಳೂರು, ಬನಶಂಕರಿ ನಿವಾಸಿ ಡಾ. ಮೈತ್ರಿ ಶಂಕರ್ ಅವರಿಗೆ ಪ್ರತಿಷ್ಠಿತ ಆಸ್ಪೀ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನಲ್ಲಿಂದು (ಮೇ 5, 2019) ಆಸ್ಪೀ ಪ್ರತಿಷ್ಠಾನ ಆಯೋಜಿಸಿದ ಸಮಾರಂಭದಲ್ಲಿ ಡಾ. ಮೈತ್ರಿ ಶಂಕರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೊತೆಗೆ ಇವರ ಪತಿ ಉದಯಶಂಕರ್ ಅವರನ್ನೂ ಪತ್ನಿಯ ಯಶಸ್ಸಿಗೆ ನಿರಂತರ ಪ್ರೋತ್ಸಾಹ, ಸಹಕಾರ ನೀಡುತ್ತಿರುವ ದೃಷ್ಟಿಯಿಂದ...
ಮಾನವನ ಉಳುವಿಗಾಗಿ ಜೇನುಹುಳುಗಳ ಸಂತತಿ ಅತಿಮುಖ್ಯ ಎಂದು ಖ್ಯಾತ ವಿಜ್ಞಾನಿ ಆಲ್ಬರ್ಟ ಐನ್ಸ್ಟೈನ್ ಹೇಳಿದ್ದಾರೆ. ಆಹಾರ ಉತ್ಪಾದನೆಯಲ್ಲಿ ಜೇನುಹುಳುಗಳ ಪಾತ್ರ ಅನನ್ಯ. ಜೇನುಹುಳುಗಳು ಸಂಘಜೀವಿಗಳು. ಒಂದೊಂದು ಸಂಸಾರವೂ ಒಂದೊಂದು ಹುಟ್ಟಿನಲ್ಲಿ ನೆಲೆಸುತ್ತವೆ. ಪ್ರತಿ ಕುಟುಂಬದಲ್ಲಿ ಮೂರು ಬಗೆಯ ಜೇನುಹುಳುಗಳಿವೆ. ಅವುಗಳು ರಾಣಿಜೇನು, ಗಂಡುಜೇನು ಹಾಗು ದುಡಿಮೆಗಾರ ಜೇನುಹುಳುಗಳು. ಹೀಗೆ ಒಂದು ಜೇನು ಕುಟುಂಬದಲ್ಲಿ ಕೇವಲ ಒಂದೇ ಒಂದು ರಾಣಿಜೇನು, ನೂರಾರು ಗಂಡುಹುಳುಗಳು ಹಾಗು ಹತ್ತಾರು ಸಾವಿರ ದುಡಿಮೆಗಾರ ಜೇನುಹುಳುಗಳಿರುತ್ತವೆ. ಜೇನುಕೃಷಿ ಉಳಿದೆಲ್ಲಾ ಕೃಷಿಗಿಂತ ಭಿನ್ನವಾಗಿದೆ. ಪರಿಸರದಲ್ಲಿನ ಸಸ್ಯ ಸಂಪತ್ತನ್ನು ಅವಲಂಭಿಸಿದೆ. ಮಕರಂದದಿಂದ ಜೇನುತುಪ್ಪ ಉತ್ಪತ್ತಿಯಾಗುತ್ತದೆ....
ಮನುಷ್ಯರಿಗೆ ಆರೋಗ್ಯ ಸಂಬಂಧಿತ ಸಮಸ್ಯೆಗಳು ಇದ್ದಾಗ ವೈದ್ಯರನ್ನು ಕಾಣುತ್ತೇವೆ. ಅವರು ವಿವರವಾದ ಪರಿಶೀಲನೆ ನಂತರ ಸೂಕ್ತವಾದ ಔಷಧವನ್ನು ಬರೆದುಕೊಟ್ಟು ನಿಯಮಿತವಾಗಿ ಇಂತಿಷ್ಟು ದಿನ ತೆಗೆದುಕೊಳ್ಳಲು ಹೇಳುತ್ತಾರೆ. ವಿಶೇಷವಾದ ಅಂಶವೆಂದರೆ ಬೇರೆಬೇರೆ ಆರೋಗ್ಯ ಸಮಸ್ಯೆಗಳಿಗೆ ಬೇರೆಬೇರೆ ರೀತಿಯ ಔಷಧಗಳು ಇರುತ್ತವೆ. ಇದೇ ಮಾದರಿ ಸಸ್ಯಗಳಿಗೂ ಅನ್ವಯಿಸುತ್ತದೆ. ಎಲ್ಲ ಸಸ್ಯಸಂಬಂಧಿ ತೊಂದರೆಗಳಿಗೂ ಒಂದೇ ಮಾದರಿಯ ಪರಿಹಾರ ಇರುವ ಬದಲು ಬೇರೆಬೇರೆ ರೀತಿಯ ಪರಿಹಾರಗಳು ಇರುತ್ತವೆ. ಅವುಗಳು ಏನೆಂದು ತಿಳಿಯಲು ಕೃಷಿವಿಜ್ಞಾನಿಗಳು ಸಸ್ಯವನ್ನು ವಿವರವಾಗಿ ಪರಿಶೀಲನೆ ನಡೆಸುತ್ತಾರೆ. ನಿಯಮಿತವಾಗಿ ಪೂರೈಕೆಯಾಗಬೇಕಾದ ಪೋಷಕಾಂಶಗಳನ್ನು ನೀಡಿದ ಸಂದರ್ಭಗಳಲ್ಲಿಯೂ ಕೆಲವೊಮ್ಮೆ ಸಸ್ಯಗಳು ಬೆಳವಣಿಗೆ...

Recent Posts