ರೈತರ ಪರಿಶ್ರಮ ಮತ್ತು ಕೃಷಿ ಕ್ಷೇತ್ರದಲ್ಲಿನ ನಾವೀನ್ಯತೆಯನ್ನು ಗುರುತಿಸಿ ಗೌರವಿಸಲು ‘ಆಸ್ಪಿ ಅಗ್ರಿಕಲ್ಚರಲ್ ರಿಸರ್ಚ್ & ಡೆವಲಪ್‌ಮೆಂಟ್ ಫೌಂಡೇಶನ್’ (Aspee Agricultural Research & Development Foundation) ವತಿಯಿಂದ *”ಆಸ್ಪಿ ಎಲ್. ಎಮ್. ಪಟೇಲ್ ವರ್ಷದ ಅತ್ಯುತ್ತಮ ರೈತ ಪ್ರಶಸ್ತಿ 2026″ (Aspee L M Patel Farmer of The Year Award 2026)ಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಒಟ್ಟು 3 ವಿಭಾಗಗಳಲ್ಲಿ ತಲಾ 1 ಲಕ್ಷ ರೂಪಾಯಿ ನಗದು ಬಹುಮಾನ, ಟ್ರೋಫಿ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಅರ್ಹ ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಪ್ರಶಸ್ತಿಯ ವಿಭಾಗಗಳು ಮತ್ತು ಅರ್ಹತೆಗಳು:
- ತೋಟಗಾರಿಕೆ ವಿಭಾಗ: ಶುಂಠಿ ಬೇಸಾಯ (Ginger Cultivation)
ಬಹುಮಾನ: ₹1,00,000/- (ಒಂದು ಲಕ್ಷ ರೂಪಾಯಿ)
ಅರ್ಹತೆಗಳು:
- ಬೆಳೆಯು ಹೊಸದಾಗಿ ಮಾಡಿರಬೇಕು.
- ಒಂದೇ ಸ್ಥಳದಲ್ಲಿ ಕನಿಷ್ಠ 1 ಎಕರೆ ಪ್ರದೇಶದಲ್ಲಿ ಶುಂಠಿ ಬೆಳೆದಿರಬೇಕು.
- ಕನಿಷ್ಠ ಕಳೆದ ೩ ವರ್ಷಗಳಿಂದ ಈ ಬೆಳೆಯನ್ನು ಬೆಳೆಯುತ್ತಿರಬೇಕು.
ಆಧುನಿಕ ಕೃಷಿ ಪದ್ಧತಿಗಳಾದ ಸೂಕ್ಷ್ಮ ನೀರಾವರಿ (Micro irrigation), ರಸಾವರಿ (Fertigation), ಸೂಕ್ಷ್ಮ ಪ್ರಸರಣ (Micro propagation) ಮತ್ತು ಮೌಲ್ಯವರ್ಧನೆ (Value addition) ಇತ್ಯಾದಿಗಳನ್ನು ಅಳವಡಿಸಿಕೊಂಡಿರಬೇಕು.
- ಮಳೆ ಆಶ್ರಿತ / ಚಳಿಗಾಲದ ಬೇಸಾಯ ವಿಭಾಗ: ಕಡಲೇಕಾಯಿ ಬೇಸಾಯ (Groundnut)
ಬಹುಮಾನ ₹1,00,000/- (ಒಂದು ಲಕ್ಷ ರೂಪಾಯಿ)
ಅರ್ಹತೆಗಳು:
- ಒಂದೇ ಸ್ಥಳದಲ್ಲಿ ಕನಿಷ್ಠ 1 ಎಕರೆ ಪ್ರದೇಶದಲ್ಲಿ ಸಂಪೂರ್ಣವಾಗಿ ಕಡಲೇಕಾಯಿ ಬೆಳೆದಿರಬೇಕು.
- ಕನಿಷ್ಠ ಕಳೆದ 3 ವರ್ಷಗಳಿಂದ ಈ ಬೆಳೆಯನ್ನು ಬೆಳೆಯುತ್ತಿರಬೇಕು.
- ಸೂಕ್ಷ್ಮ ನೀರಾವರಿ ಮತ್ತು ರಸಾವರಿ, ಸುಧಾರಿತ ತಳಿಗಳ ಬಳಕೆ, ಮೌಲ್ಯವರ್ಧನೆ ಹಾಗೂ ಉಪ ಉತ್ಪನ್ನಗಳ ಬಳಕೆ ಮುಂತಾದ ಆಧುನಿಕ ಕೃಷಿ ಪದ್ಧತಿಗಳನ್ನು ಬಳಸಿರಬೇಕು.
- ಮಹಿಳಾ ರೈತ ವಿಭಾಗ: ತರಕಾರಿ ಬೇಸಾಯ (Vegetable Cultivation)
ಬಹುಮಾನ: ₹1,00,000/- (ಒಂದು ಲಕ್ಷ ರೂಪಾಯಿ)
ಅರ್ಹತೆಗಳು:
- ಒಂದೇ ಸ್ಥಳದಲ್ಲಿ ಕನಿಷ್ಠ ಅರ್ಧ (0.5) ಎಕರೆ ಪ್ರದೇಶದಲ್ಲಿ ಯಾವುದೇ ರೀತಿಯ ತರಕಾರಿ ಬೆಳೆಯುತ್ತಿರುವ ಉದ್ಯಮಶೀಲ ಮಹಿಳೆಯಾಗಿರಬೇಕು.
- ಕನಿಷ್ಠ ಕಳೆದ 3 ವರ್ಷಗಳಿಂದ ತರಕಾರಿಗಳನ್ನು ಬೆಳೆಯುತ್ತಿರಬೇಕು
ಪ್ರಮುಖ ಮಾಹಿತಿ ಮತ್ತು ಅರ್ಜಿ ಸಲ್ಲಿಸುವ ವಿಧಾನ:ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-06-2026 (ಭರ್ತಿ ಮಾಡಿದ ಫಾರ್ಮ್‌ಗಳನ್ನು ತಲುಪಿಸಲು ಕೊನೆಯ ದಿನ)
ಅರ್ಜಿ ಫಾರ್ಮ್ ಪಡೆಯುವುದು ಹೇಗೆ?
ಪ್ರಶಸ್ತಿಯ ಅರ್ಜಿ ಫಾರ್ಮ್ ಅಥವಾ ಪ್ರಾಥಮಿಕ ಪ್ರೊಫಾರ್ಮಾವನ್ನು (Preliminary Proforma) ವಾಟ್ಸಾಪ್ ಮೂಲಕ ಪಡೆಯಲು, ನಿಮ್ಮ ವಿಳಾಸವನ್ನು 9448707675 ಸಂಖ್ಯೆಗೆ ವಾಟ್ಸಾಪ್ ಮಾಡಬಹುದು ಅಥವಾ [email protected] ಈ ಇಮೇಲ್ ವಿಳಾಸಕ್ಕೆ ಇಮೇಲ್ ಕಳುಹಿಸುವ ಮೂಲಕವೂ ಅರ್ಜಿಯನ್ನು ಪಡೆದುಕೊಳ್ಳಬಹುದು.
ನಿಮ್ಮ ಸುತ್ತಮುತ್ತಲಿರುವ ಪ್ರಗತಿಪರ ರೈತರು ಹಾಗೂ ಮಹಿಳಾ ರೈತರಿಗೆ ಈ ಮಾಹಿತಿಯನ್ನು ತಲುಪಿಸಿ, ಅವರು ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸಿ.

































