ವಾರಾಹಿ ಅಣೆಕಟ್ಟೆ; ಆಗುತ್ತಿರುವ ತೊಂದರೆಗಳೆಷ್ಟು ?

0
ವಾರಾಹಿ ಅಣೆಕಟ್ಟೆ

ಇದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ನಾಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆದ್ಲುಗುಡ್ಡೆ ಎಂಬ ಚಿಕ್ಕ ಊರಿನ ಹಿಂಬಾಗದ ನಿತ್ಯ ಹರಿದ್ವರ್ಣದ ಅರಣ್ಯದಲ್ಲಿ ಹುಟ್ಟುವ ಪವಿತ್ರ “ವಾರಾಹಿ ” ನದಿ.

ವಾರಾಹಿ ನದಿಗೆ ಹೊಸನಗರ ತಾಲೂಕಿನ ಯಡೂರಿನ “ಮಾಣಿ ” ಎಂಬ ಊರಿನಲ್ಲಿ ಒಂದು ಆಣೆಕಟ್ಟು ನಿರ್ಮಾಣ ಮಾಡಲಾಗಿದೆ. ಮುಂದೆ ಉಡುಪಿ ಯ ಹೊಸಂಗಡಿಯಲ್ಲಿ ಬಂಡೆ ಕೊರೆದು ನಿರ್ಮಾಣ ಮಾಡಿರುವ ಗುಹೆಯೊಳಗಿನ ಜಲವಿದ್ಯುತ್ ಸ್ಥಾವರ ನಿರ್ಮಾಣ ಮಾಡಲಾಗಿದೆ. ಈ ಮಾಣಿ ವರಾಹಿ  ವಿದ್ಯುತ್ ಸ್ಥಾವರದಿಂದ  ಧಕ್ಷಿಣ ಕನ್ನಡ ಜಿಲ್ಲೆಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ.

ವಾರಾಹಿ ನದಿ ಆಣೆಕಟ್ಟು ಹಲವಾರು ಅಚ್ಚರಿ ಮತ್ತು ಇಂಜಿನಿಯರಿಂಗ್ ಕೌಶಲಗಳನ್ನು ಹೊಂದಿದೆ. ಈ ನದಿ ಹುಟ್ಟಿ ಕೇವಲ ನಾಲ್ಕು ಕಿಲೋಮೀಟರ್ ಹರಿಯುವುದರೊಳಗೆ ನವಾರಾಹಿ ಆಣೆಕಟ್ಟಿನ ಹಿನ್ನೀರು ಒದ್ದು ನಿಲ್ಲುತ್ತದೆ.  ಇಲ್ಲಿ ನಾನು ಪ್ರಕಟಿಸಿದ ವೀಡಿಯೋದ  ಚಿತ್ರಕಲೆಯಲ್ಲಿ ಧುಮ್ಮಿಕ್ಕುವ ಜಲಪಾತದ ತಳ ದ ತನಕವೂ ವಾರಾಹಿ ಹಿನ್ನೀರು ಬಂದು ನಿಲ್ಲುತ್ತದೆ.

ಇಷ್ಟು ಚಿಕ್ಕ ಅಂತರದಲ್ಲಿ ಹಿನ್ನೀರು ಬಂದು ನಿಲ್ಲುವುದು ಬಹುಶಃ ವಾರಾಹಿ ನದಿ ಮಾತ್ರ ಇರಬೇಕು…!! ಬಂಡೆಯೊಳಗೆ ಗುಹೆ ಕೊರೆದು ಅಂತರ್ಗತ ಜಲ ವಿದ್ಯುತ್ ಸ್ಥಾವರ ನಿರ್ಮಾಣ ಮಾಡಿ ರುವುದು ಇನ್ನೊಂದು ವಿಶೇಷ. ಇದೂ ಬಲು ಅಪರೂಪ.

ವಾರಾಹಿ ಆಣೆಕಟ್ಟಿನ ನಿರ್ಮಾಣ ದಲ್ಲಿ ಪ್ಯಾಸ್ಕಲ್ ಒತ್ತಡ ನಿರ್ವಹಣಾ ತಂತ್ರಜ್ಞಾನ ಅಳವಡಿಸಿರುವುದೂ ವಿಶೇಷ. ವಾರಾಹಿ ಜಲಪಾತ ಏಷ್ಯಾದ ಅತಿ‌ ಎತ್ತರದ ಜಲಪಾತವಾಗಿದೆ..!! ಇದೂ ಬಹಳ ಜನರಿಗೆ ಗೊತ್ತಿಲ್ಲ.. !!

ಇಷ್ಟೆಲ್ಲಾ ವೈಶಿಷ್ಟ್ಯ ಗಳಿರುವ ವಾರಾಹಿ ಯೋಜನೆ ಯನ್ನು ಯೋಜಿಸಿದ ಅಧಿಕಾರಿಗಳು ಇಂಜಿನಿಯರ್ ಗಳು  ಹಿರೋಷಿಮಾ ನಾಗಸಾಕಿ ಗೆ ಅಣು ಬಾಂಬ್ ಹಾಕಿದ ಸೈನಿಕರಂತೆ ನನಗೆ ಭಾವಿಸುತ್ತಾರೆ.

1982 ನೇ ಇಸವಿಯಿಂದ ಕಾರ್ಯ ನಿರ್ವಹಣೆ ಮಾಡಲು ಆರಂಭಿಸಿದ ವಾರಾಹಿ ಯೋಜನೆ ಯಲ್ಲಿ  ಇದುವರೆಗೂ ಈ ಆಣೆಕಟ್ಟು ಸಂಪೂರ್ಣ ಭರ್ತಿ ಯಾಗಿ ರುವುದು ಕೆಲವೇ ಕೆಲವು ಸರ್ತಿ…!! ಇಂಜಿನಿಯರ್ ಗಳು ಅದ್ಯಾವ ಐಡಿಯಾಲಜಿ ಮೂಲಕ ವಾರಾಹಿ ನದಿ ಗೆ ಆಣೆಕಟ್ಟು ನಿರ್ಮಾಣ ಮಾಡಬಹುದು ಎಂದು ಅಂದಾಜಿಸಿದರೋ ಗೊತ್ತಿಲ್ಲ…

ಈ ವರ್ಷ ವಂತೂ ಸಾಮಾನ್ಯ ಮಟ್ಟಕ್ಕೂ ವಾರಾಹಿ ಆಣೆಕಟ್ಟಿನಲ್ಲಿ ನೀರು ತುಂಬಿಲ್ಲ…!! 1990 ರ ದಶಕದ ತನಕವೂ ಆಗುಂಬೆ ಯಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿತ್ತು. ಆಗುಂಬೆ ಧಕ್ಷಿಣ ದ ಚಿರಾಪುಂಜಿ ಎಂದು ಕರೆಸಿಕೊಳ್ಳುತ್ತಿತ್ತು.

ಈ‌ ಆಣೆಕಟ್ಟು ನಿರ್ಮಾಣ ಮಾಡಿದ ದುಷ್ಪರಿಣಾಮವಾಗಿ ಇದೀಗ ಈ ಅಣೆಕಟ್ಟಿನ ಒಳಗಿನ ಪಾತ್ರ ದ ಅಪಾರ, ಅಮೂಲ್ಯ ಅರಣ್ಯ ನಾಶದಿಂದ ಆಗುಂಬೆ ಗೆ ಪೋಸ್ಟ್ ಆಗುತ್ತಿದ್ದ ಕೇರಳ ವಯಾ ಆಗುಂಬೆ ಮಾನ್ ಸೂನ್ ಮಾರುತ ಗಳು ಇದೀಗ ದಿಕ್ಕುತಪ್ಪಿ  ದಿಕ್ಕಾಪಾಲಾಗುತ್ತಿದೆ.

ಅಳಿದುಳಿದ ತೆವಳುವ ಮಳೆಯ ಮಾರುತಗಳು ಹೊಸನಗರ ತಾಲೂಕಿನ “ಮಾಸ್ತಿಕಟ್ಟೆ” ಗ್ರಾಮಕ್ಕೆ ಬಂದು ಅಪ್ಪಳಿಸಿ ಅದೀಗ ಧಕ್ಷಿಣದ ಚಿರಾಪುಂಜಿ ಯಾಗು ತ್ತಿದೆ…!!! ಈ ವಾರಾಹಿ ಆಣೆಕಟ್ಟು ತೀರಾ ಅನಾವಶ್ಯಕ ಮತ್ತು ಕಟ್ಟಲೇ ಬಾರದಾದ ಆಣೆಕಟ್ಟು. ಈ ಭಾಗದ ಅರಣ್ಯ ಅದೆಷ್ಟು ಸೂಕ್ಷ್ಮ ಎಂದು ಅರಿವಿಲ್ಲದ  ರಾಜಕೀಯ ಮತ್ತು ಅಧಿಕಾರಿ ವರ್ಗದವರು ಮಾಡಿದ ಅನಾಹುತ ಇದಾಗಿದೆ.

ಈ ಆಣೆಕಟ್ಟಿನಿಂದ ಪಾಪದ ಮುಗ್ದ ಜನರು ಈ ನಲವತ್ತು ವರ್ಷಗಳಿಂದ ಸರಿಯಾದ ರಸ್ತೆ ವಿದ್ಯುತ್ ಇತರ ನಾಗರೀಕ ಸೌಲಭ್ಯ ಗಳಿಲ್ಲದೇ ಪರಿತಪಿಸುತ್ತಿದ್ದಾರೆ. ಶರಾವತಿ ಹಿನ್ನೀರಿನ ದ್ವಿಪ ಪ್ರದೇಶದ ಸಿಗಂದೂರಿಗೆ ನೂರಾರು ಕೋಟಿ ವೆಚ್ಚದ ಸೇತುವೆ ನಿರ್ಮಾಣ ಮಾಡುತ್ತಿದೆ ಸರ್ಕಾರ.

ಆದರೆ ವಾರಾಹಿ ಹಿನ್ನೀರಿನಿಂದಾದ ಕೃತಕವಾಗಿ ದ್ವೀಪವಾಗಿ ಪರಿವರ್ತನೆ ಯಾದ ನಾಲೂರು , ಯಡೂರು, ಕೈಮರ, ಸುಳಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಅನೇಕ ಊರುಗಳು ದ್ವೀಪ ವಾಗಿ ಸರಿಯಾದ ಮಾರ್ಗ ಇಲ್ಲದೇ ಪಡಿ ಪಾಟಿಲು ಪಟ್ಟಿವೆ…ಜನರಿಗೆ ಮಂಕುಬೂದಿ ಎರಚಿ ಸರ್ಕಾರ ಗಳು ಇಂತಹ ಹಿಂದು‌ಮುಂದಿನ ಚಿಂತನೆ ಇಲ್ಲದೆ ಯೋಜನೆ ನಿರ್ಮಾಣ ಮಾಡಿ ಬಿಡುತ್ತದೆ…!!! ಆದರೆ ಜನ ಇದರಿಂದ  ತೊಂದರೆ ಅನುಭವಿಸಬೇಕು.

ಹೊಸನಗರ ತಾಲೂಕಿನ ಸುಳುಗೋಡು ಗ್ರಾಮ ಪಂಚಾಯತಿಯ ಕೊರನ ಕೋಟೆ ಎಂಬೂರಿನ ಗ್ರಾಮಸ್ಥರೊಬ್ಬರು ತಮ್ಮ ಜಮೀನು ಇತರ ಸಮಸ್ಯೆ ಗೆ ತಾಲೂಕು ಕಛೇರಿಗೆ ಬರುವುದಾದಲ್ಲಿ ಸುಮಾರು  80 ಕಿಲೋಮೀಟರ್ ಸುತ್ತಿ ಹೊಸನಗರ ಕ್ಕೆ ಬರಬೇಕು…!! ಮೇಲು ಸುಂಕ ಎಂಬ ಊರಿಗೆ  ಆಣೆಕಟ್ಟು ನಿರ್ಮಾಣ ವಾಗಿ ನಲವತ್ತು ವರ್ಷಗಳಾದರೂ ಇನ್ನೂ ಸಮರ್ಪಕ‌ ರಸ್ತೆ ಸಂಪೂರ್ಣ ವಾಗಿಲ್ಲ.

ಇವರು ದಶಕಗಟ್ಟಲೇ ಮಳೆಗಾಲ ಇತ್ಯಾದಿ ಕಠಿಣ ಹವಾಮಾನ ವೈಪರೀತ್ಯದಿಂದ ಕೂಡಿದ ದಿನಗಳಲ್ಲಿ ಅನಾರೋಗ್ಯ ಇತ್ಯಾದಿ ತುರ್ತಿನ ಸಂಧರ್ಭದಲ್ಲಿ ಅತಿ ಕಷ್ಟ ಪಟ್ಟಿದ್ದಾರೆ. ಆಣೆಕಟ್ಟು ನಿರ್ಮಾಣ ವಾಗಿ ನೀರು ನಿಂತ ಮೇಲೆ ಒಂದಷ್ಟು ವರ್ಷ ಹೆಬ್ಬಾಗಿಲು ಕೆದ್ಲುಗುಡ್ಡೆ ಕೊಕ್ಕೋಡು ಕೊರನ‌ಕೋಟೆ  ತೈರೊಳ್ಳಿ ಗ್ರಾಮಸ್ಥರಿಗೆ ಸರ್ಕಾರ‌ ದೋಣಿ ವಿಹಾರ ಮಾಡಿಸಿತು. ನಂತರದ ಕೆಲ ವರ್ಷಗಳ ಕಾಲ ಈ ಗ್ರಾಮಸ್ಥರಿಗೆ ಸರ್ಕಾರದ ಲಾರಿ ವ್ಯವಸ್ಥೆ ಮಾಡಿತು. ಅದರಲ್ಲಿ ಜನರನ್ನ  ಸರಕಿನಂತೆ ತುಂಬಿ ಪೇಟೆ ಪಟ್ಟಣಗಳಿಗೆ ತಲುಪಿಸ ಲಾಗುತ್ತಿತ್ತು.

ಆ ಗ್ರಾಮದ ಮಕ್ಕಳಿಗೆ ಸರಿಯಾದ ವಿಧ್ಯಾಭ್ಯಾಸ ಮಾಡಲು ಅನುಕೂಲ ಇರಲಿಲ್ಲ. ಆಸ್ಪತ್ರೆ ಇಲ್ಲ…. ನಿಧಾನವಾಗಿ ಖಾಸಗಿ ಬಸ್ ಆಯಿತು. ಅದೆಷ್ಟೋ ವರ್ಷ ಕಾದ ನಂತರ ನಾಲೂರು ಗ್ರಾಮದ ಶಿವಮೊಗ್ಗ ಉಡುಪಿ ಮುಖ್ಯ ರಸ್ತೆಯಿಂದ ಟಾರ್ ರೋಡ್ ನಿರ್ಮಾಣ ವಾಯಿತು.

ಎಷ್ಟು ವಿಚಿತ್ರ ನೋಡಿ… ಇಲ್ಲಿನ ಅತಿ ಮಳೆಗೆ ಗುಣಮಟ್ಟದ ಟಾರು ರಸ್ತೆ ಬೇಕು. ಈ ನಲವತ್ತು ಐವತ್ತು ಪರ್ಸೆಂಟ್ ನ ಕಳಪೆ ರಸ್ತೆ ಗಳು ಒಂದು ಮಳೆಗಾಲವೂ ಬಾಳಿಕೆ ಬರದು…!! ನಾನು ನೋಡುತ್ತಿದ್ದಂತೆ ನಾಲೂರಿನಿಂದ ಶುಂಠಿ ಹೆಕ್ಕಲು ಊರಿನ ತನಕ‌ ಇದುವರೆಗೂ ಇಪ್ಪತ್ತು ವರ್ಷಕ್ಕೆ ಒಂದು ಏಳೆಂಟು ಬಾರಿಯಾದರೂ ರಸ್ತೆ ನಿರ್ಮಾಣ ವಾಗಿರಬಹುದು.

ಆದರೆ ತಾಳಿಕೆಯಿಲ್ಲ…!! ಇಂಜಿನಿಯರ್ ಮತ್ತು ಶಾಸಕರು ಒಟ್ಟು ಕೂತು ಈ ನತದೃಷ್ಟ ಊರಿಗೆ ಒಂದು ಉತ್ತಮ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿಸಲು ಸಾದ್ಯವಿಲ್ಲವ…? ಎರಡೆರೆಡು ವರ್ಷ ಕ್ಕೆ ಐವತ್ತು ಲಕ್ಷ ದ ಟಾರು ರೋಡು ನಿರ್ಮಾಣ ಮಾಡುವುದರ ಬದಲಿಗೆ ಒಂದು ಮೂರೋ ನಾಲ್ಕೋ ಕೋಟಿ‌ ರೂಪಾಯಿ ವೆಚ್ಚದಲ್ಲಿ ಸರ್ವ ಋತು ಕಾಂಕ್ರೀಟ್ ರಸ್ತೆ ಮಾಡಬಾರದೇಕೆ…?

ಸಿಗಂದೂರಿನಂತೆ ವಾರಾಹಿ ಹಿನ್ನೀರಿನ ತಪ್ಪಲಿನಲ್ಲಿ ಪುರಾಣ ಪ್ರಸಿದ್ಧ ಚಿಂತಾಮಣಿ ನರಸಿಂಹ ಸ್ವಾಮಿ ದೇವಸ್ಥಾನ ವಿದೆ.   ಅತ್ತ ಕಡೆಯಲ್ಲಿ ಮೇಲುಸುಂಕ‌ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವೂ ಇದೆ. ಸರ್ಕಾರ ಸಿಗಂದೂರಿಗೆ ನೂರಾರು ಕೋಟಿ ವೆಚ್ಚದ ಸೇತುವೆ ರಸ್ತೆ ನಿರ್ಮಾಣ ಮಾಡುವಾಗ ಅದೇ ಸರ್ಕಾರ ಸಿಗಂದೂರಿನ ಮಾದರಿಯ ಹುರುಳಿ , ಮೇಲುಸುಂಕ , ಶುಂಠಿ ಹೆಕ್ಕಲು ಇತ್ಯಾದಿ ಊರುಗಳನ್ನೂ ನೋಡಬೇಕು ಅಲ್ವಾ..?

ಇವತ್ತು ಶುಂಠಿಹೆಕ್ಕಲು ಊರಿಗೆ ಸರಿಯಾಗಿ ಬಸ್ ಇಲ್ಲ… ಸಾವಿರಾರು ಜನ ಇರುವ ಈ ಭಾಗಕ್ಕೆ ಬಸ್ ಇಲ್ಲ… ಎಲ್ಲರೂ ಸ್ವಂತ ವಾಹನ ಇಟ್ಟುಕೊಳ್ಳಲು ಸಾದ್ಯವೇ…? ಎಲ್ಲರೂ ಆಟೋ ರಿಕ್ಷಾ ದಲ್ಲಿ ಓಡಾಡಲು ಸಾದ್ಯವೇ…? ಇಂತಹ ಆಣೆಕಟ್ಟು ಯೋಜನೆ ಮಾಡುವ ಸರ್ಕಾರಗಳು ಇಂತಹ ಯೋಜನೆಯಿಂದಾಗುವ ಸಾಧಕ ಬಾಧಕ ಗಳ ಅಧ್ಯಯನ ಮಾಡಬೇಕು ಅಲ್ವಾ..?

ಈ ವಾರಾಹಿ ಆಣೆಕಟ್ಟು ಯೋಜನೆ ಯಿಂದ ಸಂಬಂಧ ಸಾರಿಗೆಯಿಲ್ಲದ ನಾಲೂರು ಗ್ರಾಮ ಪಂಚಾಯತಿ ಯ  ಶುಂಠಿ ಹೆಕ್ಕಲು, ಗಾರ್ಡ್ರುಗಧ್ದೆ , ಹೆಬ್ಬಾಗಿಲು, ‌ಕೆದ್ಲುಗುಡ್ಡೆ, ಮಲ್ಲಕ್ಕಿ, ಕೊರನ ಕೋಟೆ , ತೈರೊಳ್ಳಿ , ಮೇಲು ಸುಂಕ  ಇತ್ಯಾದಿ ಊರುಗಳ ಜನರು ಯಾಕೆ ಪರಿತಪನೆ ಪಡಬೇಕು…? ಸರ್ಕಾರ ತನ್ನ ಯೋಜನೆ ಯ ಸ್ವಾರ್ಥ ಕ್ಕೆ ಈ ಜನಗಳ ಜೀವನಕ್ಕೆ ಯಾಕೆ ತೊಂದರೆ ಕೊಡಬೇಕು…?

ಇದು ಸರ್ಕಾರದ ಯೋಜನೆ ಯಡವಟ್ಟಿ‌ ನಿಂದಾದ ಅನಾಹುತವಲ್ವ…? ಸಾಮಾನ್ಯ ಜನ ಯಾಕೆ ಇದರಿಂದ ತೊಂದರೆ ಅನುಭವಿಸಬೇಕು…? ಹೋಗಲಿ ಈ ಯೋಜನೆಯಿಂದ ಸಮಾಜಕ್ಕೆ ಸಿಕ್ಕ ಲಾಭ ಎಷ್ಟು..? ಈ ಸಮಾಜ ಕಳೆದುಕೊಂಡಿದ್ದೆಷ್ಟು…?

ಸರಿಯಾದ ಸಮಯಕ್ಕೆ ಸರಿಯಾಗಿ ಬರುತ್ತಿದ್ದ ಮಾನ್ ಸೂನ್ ಮಾರುತ ವನ್ನೇ  ದಿಕ್ಕಾಪಾಲು ಮಾಡಿದ ಈ ಯೋಜನೆ ಮಾಡಿದ ಅನಾಹುತಕ್ಕೆ ಹೊಣೆ ಗಾರರು ಯಾರು….? ಇಂತಹ ವಿಫಲ ಯೋಜನೆ ಗಳಿಂದ  ನಿಸರ್ಗದ ಮೇಲೆ ಆಗುತ್ತಿರುವ ಆದ ಅನಾಹುತಗಳಿಂದ ಸರ್ಕಾರ ಯಾಕೆ ಪಾಠ ಕಲಿಯುತ್ತಿಲ್ಲ…?

ಇಂತಹದ್ದೇ ಯೋಜನೆ ಯಾದ ಎತ್ತಿನ ಹೊಳೆ ,ಕೆಂಪು ಹೊಳೆ ಯೋಜನೆ ಗಳು  ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವ ಯೋಜನೆ ಗಳು  ಮುಂದಿನ ದಿನಗಳಲ್ಲಿ ಆ ಭಾಗದ ಮಳೆ ಮಾರುತಗಳ ದಿಕ್ಕುತಪ್ಪಿಸಿ ಜನ ಜೀವನ ಅಸ್ತವ್ಯಸ್ತತೆ ಮಾಡುತ್ತದೆ… ಇಂತಹ ಯೋಜನೆ ಬೇಡ ಎನ್ನುವುದಕ್ಕೆ ಜೀವಂತ ಉದಾಹರಣೆ ಈ ವಾರಾಹಿ ಯೋಜನೆ….!! ಈ ಬಗ್ಗೆ ಇನ್ನಷ್ಟು ಚಿಂತನೆ ಗಳು ನೆಡೆಯಲಿ..

LEAVE A REPLY

Please enter your comment!
Please enter your name here