ಸ್ವಾವಲಂಬಿ ಬದುಕಿನ ಮಾರ್ಗದ ಶಿಕ್ಷಣ

0

ಪದವಿ, ಸ್ನಾತಕೋತ್ತರ ಪದವಿ ನಂತರ ಸಾಧ್ಯವಾದರೆ ಪಿಎಚ್.ಡಿ ಇಷ್ಟೆಲ್ಲ ಪೂರೈಸುವ ವೇಳೆಗೆ ವಯಸ್ಸು 26 ದಾಟಿರುತ್ತದೆ. ನಂತರ ಓದಿರುವ ವಿಷಯದಲ್ಲಿಯೇ ಉದ್ಯೋಗಕ್ಕೆ ಅಲೆದಾಟ. ದಿನದಿಂದ ದಿನಕ್ಕೆ ಹೆಚ್ಚುವ ನಿರುದ್ಯೋಗದ ಆತಂಕ. ಯಾವುದಾದರೊಂದು ಉದ್ಯೋಗ ಸಿಕ್ಕರೆ ಸಾಕು ಎಂಬ ಭಾವನೆ. ಹೀಗಾಗಿ ಓದಿಗೆ ಸಂಬಂಧವಿಲ್ಲದ ಕೆಲಸದಲ್ಲಿ ತೊಡಗಿಸಿಕೊಳ್ಳುವುದು.

ಬಹುತೇಕ ಪದವೀಧರರ ಬದುಕು ಹೀಗೆಯೇ ಸಾಗುತ್ತದೆ. ವಿದ್ಯೆ ಮತ್ತು ಬದುಕಿನ ವಿವಿಧ ಆಯಾಮಗಳನ್ನು ಸಮನ್ವಯಗೊಳಿಸುವ ಮಾರ್ಗೋಪಾಯಗಳ ಬಗ್ಗೆ ಅರಿವಿಲ್ಲದೇ ಹೀಗೆ ಆಗುತ್ತದೆ. ಡಿಗ್ರಿ, ಡಬ್ಬಲ್ ಡಿಗ್ರಿ ಪಡೆದ ಮೇಲೆಯೇ ಉದ್ಯೋಗ ಅರಸಬೇಕೆಂದೇನೂ ಕಾನೂನಿಲ್ಲ. ಉದ್ಯೋಗದ ಆಸರೆ ಪಡೆದು ಸಹ ಉನ್ನತ ವಿದ್ಯಾಭ್ಯಾಸ ಮಾಡಲು ಈಗ ಅನೇಕಾನೇಕ ಅವಕಾಶಗಳಿವೆ. ಹೀಗೆ ಮಾಡಿ  ಸರ್ಕಾರಿ, ಖಾಸಗಿ ರಂಗದಲ್ಲಿ ಹಿರಿಯ ಹುದ್ದೆಗಳನ್ನು ಪರಿಶ್ರಮದಿಂದ ಪಡೆದರು ಸಾಕಷ್ಟು ಮಂದಿ ಇದ್ದಾರೆ.

ವಯಸ್ಸು 18 ಕಳೆಯುತ್ತಿದ್ದಂತೆ ದೈನಂದಿನ ಖರ್ಚುವೆಚ್ಚಕ್ಕೆ ಪೋಷಕರ ಮುಂದೆ ಕೈಯೊಡ್ಡದೇ ಇರಲು ಬಯಸುವವರ ಸಂಖ್ಯೆ ಅಧಿಕವಾಗಿದೆ.  ಸ್ವಾವಲಂಬಿಯಾಗಿ ಬದುಕುತ್ತಾ ತಾವು ದುಡಿದ ಹಣದಲ್ಲಿಯೇ ಉನ್ನತ ವ್ಯಾಸಂಗ ಮಾಡಿ ಬದುಕು ಕಟ್ಟಿಕೊಳ್ಳಬೇಕೆಂದು ಬಯಸುವವರ ಸಂಖ್ಯೆಯೂ ಹೆಚ್ಚಾಗಿದೆ. ಏನು ಮಾಡಬೇಕು, ಯಾವ ದಾರಿಯಲ್ಲಿ ಹೋಗಬೇಕು ? ದಾರಿ ತೋರಿಸುವವರಿಗೆ ಪರದಾಡ ಬೇಕಾದ ಸ್ಥಿತಿ ಇದೆ.

ಇಂಥ ಸಂದರ್ಭದಲ್ಲಿ ಮೇಲುಕೊಟೆಯ ಜನಪದ ಸೇವಾ ಟ್ರಸ್ಟ್ ವಿನೂತನವಾಗಿ ಚಿಂತಿಸಿದೆ. ಸ್ವಾವಲಂಬಿ ಬದುಕಿಗೆ ಅಗತ್ಯವಾದ ಉದ್ಯೋಗ ಹುಡುಕಲು ಅಥವಾ ಸ್ವಂತ ಆರಂಭಿಸಿಲು ಸಾಧ್ಯವಾಗುವ ಕೌಶಲ ಕಲಿಸುವ ಪ್ರಾಯೋಗಿಕ ಶಿಕ್ಷಣ ಆರಂಭಿಸುತ್ತಿದೆ. ಅದರ ವಿವರಗಳು ಮುಂದಿವೆ.

ಕೋರ್ಸಿನ ವಿವರ:

  1. ರಚನಾತ್ಮಕ ಜೀವನೋಪಾಯಗಳಲ್ಲ (Constructhe livelihoods) ನಾಲ್ಕು ವರ್ಷದ ಡಿಪ್ಲೊಮಾ ಕೋರ್ಸ್
  2. ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ಪಾಠ, ವಸತಿ, ಮತ್ತು ಊಟದ ವ್ಯವಸ್ಥೆ
  3. ಕೋರ್ಸಿನಲ್ಲಿ ಗ್ರಾಮೋದ್ಯೋಗಗಳು, ಕನ್ನಡ, ಇಂಗ್ಲೀಷ್ ಮತ್ತು ಕಂಪ್ಯೂಟರ್ ತರಬೇತಿ ನೀಡಲಾಗುವುದು.
  4. ಅಭ್ಯರ್ಥಿಗಳು ಕ್ರೀಡೆ, ಹಾಡು, ನಾಟಕ, ಪ್ರವಾಸ, ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿ
  5. ಅಭ್ಯರ್ಥಿಗಳು ತರಬೇತಿಗಳಲ್ಲಿ ಭಾಗವಹಿಸುವ ಆಧಾರದ ಮೇಲೆ ಮೌಲ್ಯಮಾಪನ
  6. ಕೋರ್ಸನ್ನು ಯಶಸ್ವಿಯಾಗಿ ಮುಗಿಸಿದವರಿಗೆ ಸರ್ಟಿಫಿಕೇಟ್ ನೀಡಲಾಗುವುದು.

ಯಾರಿಗೆ ಈ ಕೋರ್ಸ್?

ವಯಸ್ಸು 18 ಪೂರೈಸುತ್ತಿದ್ದಂತೆ ಉದ್ಯೋಗ ಪಡೆದುಕೊಂಡು ತಮ್ಮ ಕಾಲ ಮೇಲೆ ತಾವು ನಿಲ್ಲಲು ಇಚ್ಛಿಸುವ 14 ವರ್ಷದ ಗಂಡು ಮಕ್ಕಳಿಗೆ.

ಆರಂಭದಲ್ಲಿ ಶಿಕ್ಷಣ ಕೇಂದ್ರದ ಸನಿಹದಲ್ಲಿಯೇ ಇರುವ ಆಸಕ್ತರಿಗೆ ಅವಕಾಶ ನೀಡಲು ಆಯೋಜಕರು ಯೋಚಿಸಿದ್ದಾರೆ. ಆದ್ದರಿಂದ ಮಂಡ್ಯ ಜಿಲ್ಲೆಯ ಮೇಲುಕೋಟೆ ಹಾಗೂ ಚಿನಕುರುಳಿ ಹೋಬಳಿಗಳಿಗೆ ಸೇರಿದ ಮಕ್ಕಳಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.

ಈ ಕೋರ್ಸಿನ ಕಲಿಕೆ ನಂತರ ಮುಂದೇನು ಎಂಬ ಪ್ರಶ್ನೆ ಉದ್ಬವಿಸುವುದು ಸಹಜ. ಸ್ವ ಉದ್ಯೋಗಿಗಳಾಗಲು ಬಯಸುವವರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಇಚ್ಚಿಸುವವರಿಗೆ ಕೆಲಸಗಳನ್ನು ದೊರಕಿಸಿಕೊಡಲಾಗುವುದು. ಈ ಮೂಲಕ ನೆಮ್ಮದಿಯ ಬದುಕನ್ನು ಸಾಗಿಸುವಂತೆ ಮಾಡಲಾಗುವುದು ಎಂದು ಆಯೋಜಕರು ಹೇಳಿದ್ದಾರೆ.

ಬದುಕುವ ಮಾರ್ಗ ತಿಳಿಸಿಕೊಡುವ ಶಿಕ್ಷಣ ಎಲ್ಲಿ ನಡೆಯುತ್ತದೆ ?

ನಾಲ್ಕು ವರ್ಷದ ಡಿಪ್ಲೊಮ ಕೋರ್ಸ್ ಜನಪದ ಸೇವಾ ಟ್ರಸ್ಟಿನ “ಹೊಸ ಜೀವನ ದಾರಿ” ಕೇಂದ್ರದಲ್ಲಿ ನಡೆಯಲಿದೆ. ಈ ಕೇಂದ್ರವು ಮೇಲುಕೋಟೆ – ಚಿನಕುರಳಿ ರಸ್ತೆಯಲ್ಲಿದೆ.

ಪ್ರವೇಶಾತಿ ಪ್ರಕ್ರಿಯೆ:

  1. ಮೊದಲು ಪ್ರವೇಶಾತಿ ಅರ್ಜಿಯನ್ನು ನೀಡುವುದು.
  2. ಅರ್ಜಿಯ ಆಧಾರದ ಮೇಲೆ ಅಭ್ಯರ್ಥಿಯ ಮತ್ತು ಆತನ ಪೋಷಕರ ಸಂದರ್ಶನ ಮಾಡಲಾಗುವುದು.
  3. ಆಯ್ದ ಕೇವಲ ಹತ್ತು ಅಭ್ಯರ್ಥಿಗಳಿಗೆ ಮಾತ್ರ ಅವಕಾಶ

ಆಸಕ್ತರು ಸಂಪರ್ಕಿಸಬೇಕಾದ ವಿಳಾಸ:

ಜನಪದ ಸೇವಾ ಟ್ರಸ್ಟ್,

ಮೇಲುಕೋಟೆ, ಮಂಡ್ಯ ಜಿಲ್ಲೆ

ಮೊಬೈಲ್ ಪೋನ್ : 9663406366

LEAVE A REPLY

Please enter your comment!
Please enter your name here