ಕೇಂದ್ರ ಸರ್ಕಾರ “ Operation Greens” ಹೆಸರಿನಲ್ಲಿ ಟೊಮ್ಯಾಟೋ ಮತ್ತು ಈರುಳ್ಳಿ ಬೆಳೆಗಳ ಸಮಗ್ರ ಅಭಿವೃದ್ಧಿ ಹಾಗೂ ಮೌಲ್ಯವರ್ಧನೆಗಾಗಿ ಯೋಜನೆಯನ್ನು ಹಮ್ಮಿಕೊಂಡಿದೆ. ಆಹಾರ ಸಂಸ್ಕರಣಾ ಮಂತ್ರಾಲಯ; 2018-19 ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಟೊಮ್ಯಾಟೋ, ಈರುಳ್ಳಿ ಹಾಗೂ ಆಲೂಗಡ್ಡೆ ತರಕಾರಿಗಳ ಹೊಸ ಮಹತ್ವಾಕಾಂಕ್ಷೆ  ಯೋಜನೆಯನ್ನು ಘೋಷಿಸಿತ್ತು, ಅದರಂತೆ,  ಕಾರ್ಯಾತ್ಮಕ ಮಾರ್ಗಸೂಚಿಗಳನ್ನು

[email protected]ನಲ್ಲಿ ಪ್ರಕಟಿಸಿದೆ.      ಯೋಜನೆಯ ಅನುಷ್ಠಾನ ಅವಧಿ 2 ವರ್ಷಗಳು. (2018-19 ಮತ್ತು 2019-20)  ಈರುಳ್ಳಿ ಬೆಳೆ ಮೌಲ್ಯವರ್ಧನೆ ಕಾರ್ಯಕ್ಕಾಗಿ ಗದಗ ಮತ್ತು ಧಾರವಾಡ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಈ ಜಿಲ್ಲೆಗಳ   FPOs/NGOs / Co-operatives / complains / self-help groups / universities/ food processes / supply chain operations / central of state entires / organization ಇವರುಗಳು ಸಂಬಂಧಿತ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು. ಸಮಗ್ರ ಮೌಲ್ಯವರ್ಧನೆ ಅಭಿವೃದ್ಧಿಗಾಗಿ ಸಲ್ಲಿಸಿ; ಆಯ್ಕೆಯಾಗುವ ಪ್ರಸ್ತಾವನೆಗಳ ಅರ್ಹ ಯೋಜನಾ ವೆಚ್ಚಕ್ಕೆ      ಶೇ 50 ರಂತೆ (ರೈತ ಉತ್ಪಾದನಾ ಸಂಸ್ಥೆಗಳಿಗೆ ಶೇ 70 ರಂತೆ) ಗರಿಷ್ಠ ರೂ 50.00 ಕೋಟಿಗಳವರೆಗೆ ಸಹಾಯಧನ ಪಡೆಯಬಹುದು.

ಸದರಿ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಲಾಲ್‍ಬಾಗ್‍ನ ತೋಟಗಾರಿಕೆ ನಿರ್ದೇಶನಾಲಯದ ತೋಟಗಾರಿಕೆ ಜಂಟಿ ನಿರ್ದೇಶಕರು (ತರಕಾರಿಗಳು) ಅಥವಾ ತೋಟಗಾರಿಕೆ ಉಪ ನಿರ್ದೇಶಕರು (ಜಿ.ಪಂ) ಚಿಕ್ಕಬಳ್ಳಾಪುರ/ಕೋಲಾರ/ಗದಗ/ಧಾರವಾಡ ಮತ್ತು ಈ ಜಿಲ್ಲೆಗಳ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ರವರುಗಳನ್ನು ಸಂಪರ್ಕಿಸಬಹುದಾಗಿದೆ ಅಧಿಕೃತ ಪ್ರಕಟಣೆ ತಿಳಿಸಿದೆ

1 COMMENT

LEAVE A REPLY

Please enter your comment!
Please enter your name here