ಲೇಖಕರು: ಬಿ.ಸಿ. ಅರವಿಂದ್, ಸಾವಯವ ಕೃಷಿಕರು

ಹೇಳಿ ಕೇಳಿ ಇದು ತಂತ್ರಜ್ಷಾನದ ಯುಗ. ಮಕ್ಕಳ ಕೈಯಲ್ಲಿ ಮೊಬೈಲ್, ಟ್ಯಾಬ್, ವೀಡಿಯೋ ಗೇಮ್ ಸಾಧನಗಳು ಮಾಮೂಲಿ. ಕಂಪ್ಯೂಟರ್ ಮುಂದೆಯೇ ಊಟ, ನಿದ್ದೆ ಇತ್ಯಾದಿ. ಇಂದಿನ ವಿದ್ಯೆಯೂ ತಾಂತ್ರಿಕತೆಯನ್ನೇ ಒಳಗೊಂಡಿದ್ದು ಡಿಜಿಟಲ್ ಇಂಡಿಯಾದ ಸಾಕಾರದಲ್ಲಿ ಪರಿಸರವನ್ನು ಮರೆತು ಯಂತ್ರಮಾನವರಾಗುತ್ತಿದ್ದೇವೆ.

ಮಕ್ಕಳಲ್ಲಿ ಪರಿಸರದ ಕಾಳಜಿ ಬೆಳೆಸುವ ಸಲುವಾಗಿ ‘ಹಸಿರು ಆರ್ಗ್ಯಾನಿಕ್’ ಸಂಸ್ಥೆಯು ಮಕ್ಕಳಿಗಾಗಿ ನೂತನ ‘ಹಸಿರು ಗ್ರೋಕಿಟ್’ ಅನ್ನು ಪರಿಚಯಿಸುತ್ತಿದೆ. ಈಗಿನ ಆಧುನಿಕ ಯುಗದಲ್ಲಿ ಮಕ್ಕಳಿಗೂ ಸಮಯವಿಲ್ಲದ ಸಂದರ್ಭದಲ್ಲಿ ಕೇವಲ 5 ನಿಮಿಷದಲ್ಲಿ ಕೈತೋಟದ ಕಲ್ಪನೆ ತರುವ ಇದು ಮಕ್ಕಳಿಗೆ ತನ್ನ ಮೊದಲ ಮೊಗ್ಗನ್ನು ತನ್ನ ಕಾರ್ಯದಿಂದಲೇ ಪರಿಸರಪ್ರಿಯ ರೀತಿಯಿಂದ ನೋಡುವ ಪ್ರಕ್ರಿಯೆಯನ್ನು ಪರಿಚಯಿಸುತ್ತದೆ. ಈ ಚಟುವಟಿಕೆ ಮಕ್ಕಳಿಗೆ ಗಿಡಗಳು ಬೀಜದಿಂದ ಕೊಯ್ಲಿನವರೆಗೂ ಬೆಳೆಯುವ ಹಂತಗಳನ್ನು ಗಮನಿಸಲು ಮತ್ತು ಕಲಿಯಲು ಸಹಾಯ ಮಾಡುತ್ತದೆ. ಈ ಕಿಟ್-ಗ್ರೋ ಟ್ರೇ, ಗಿಡ ನೆಡಲು ಸಾವಯವ ಗೊಬ್ಬರ ಮಿಶ್ರಣ, ಸೂಕ್ಷ್ಮ ದ್ರವ ಪೋಷಕಾಂಶ, ಸಾವಯವ ತರಕಾರಿ ಬೀಜಗಳು ಹಾಗೂ ಟ್ರ್ಯಾಕರ್ನ್ನು ಒಳಗೊಂಡಿದೆ.

ತಿನ್ನುವ ತರಕಾರಿ ಎಲ್ಲಿಂದ ಬರುತ್ತದೆ ಎಂಬ ಕಲ್ಪನೆಯೆ ಇಲ್ಲದ ಮಕ್ಕಳಿಗೆ ಪ್ರಾಯೋಗಿಕವಾಗಿ ಸಸ್ಯ ಬೆಳವಣಿಗೆಯ ಮೊಳಕೆಯಿಂದ ಕೊಯ್ಲಿನವರೆಗಿನ ಹಂತಗಳನ್ನು ಪರಿಚಯಿಸುವ ಯೋಜನೆ ಇದಾಗಿದೆ. ಮಕ್ಕಳ ಮನಸ್ಸನ್ನು ಕಂಪ್ಯೂಟರ್ನಿಂದ ಸ್ವಲ್ಪ ಹೊರತಂದು ಸಾಂಪ್ರದಾಯಿಕ ಬದುಕಿಗೆ ಪರಿಚಯಿಸುವ ಯೋಜನೆ ಹಾಕಿಕೊಂಡಿದೆ.

ಹಿಂದೆ ಮಕ್ಕಳು ಮನೆಯಲ್ಲಿರುತ್ತಿದ್ದುದೇ ಕಡಿಮೆ. ಮಣ್ಣಾಟವಾಡಲೋ, ಊರು ತಿರುಗಲೋ, ತೋಟಗಳಿಗೆ ಹಣ್ಣು ಕದಿಯಲೋ ಹೋದರೆ ಮನೆಯನ್ನು ಮರೆತೇ ಬಿಡುತ್ತಿದ್ದರು. ಊಟಕ್ಕೆ ತಾಯಂದಿರು ಬಲವಂತವಾಗಿ ಎಳೆತರಬೇಕಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಮಕ್ಕಳು ಮನೆಯಿಂದ ಹೊರಹೊರಡುತ್ತಿಲ್ಲ. ತಾಯಂದಿರೇ ಬಲವಂತವಾಗಿ ಆಟವಾಡಲು ಹೊರದಬ್ಬುವ ಪರಿಸ್ಥಿತಿ ಬಂದಿದೆ. ಪರಿಸರ ಬೇಕಿಲ್ಲ. ಕಾರ್ಟೂನಿನ ಕೃತಕ ಚಟುವಟಿಕೆಯ ಕಾಡು, ಜೀವಜಗತ್ತೇ ನಿಜವೆಂದುಕೊಂಡಿದ್ದಾರೆ. ಮಕ್ಕಳಂತೂ ಹುಟ್ಟುವಾಗಲೇ ಮೊಬೈಲ್, ಕಂಪ್ಯೂಟರ್ ಕೈಯಲ್ಲಿ ಹಿಡಿದು ಹುಟ್ಟಿ ಬೆಳೆಯುತ್ತಿದ್ದಾರೆ.

ಬೆಳೆದ ನಂತರದ ದಿನಗಳಲ್ಲಿ ಎಲ್ಲವನ್ನೂ ಮರೆತು ತಾಂತ್ರಿಕ ಲೋಕದೊಳಗೆ ಲೀನವಾಗುವುದೇ ಹೆಚ್ಚು. ಭತ್ತದ ಗದ್ದೆಯ ಕಲ್ಪನೆಯೇ ಇರದ ಮಕ್ಕಳಿಗೆ ಅಕ್ಕಿ ಎಲ್ಲಿಂದ ಬರುತ್ತದೆ ಎಂಬ ಜ್ಞಾನವಿರಲು ಸಾಧ್ಯವೇ? ಗದ್ದೆಯಲ್ಲಿ ನೀರೊಳಗಿನ ಭತ್ತದ ಸಸಿಗಳ ಕಂಡು ‘ಭತ್ತದ ಹೂವಿನ ಗಿಡಗಳು ನೀರಿನಲ್ಲಿ ಮುಳುಗಿ ಹೋಗಿವೆ.’, ‘ಭತ್ತದ ಗಿಡ ಹೂ ಬಿಡುವುದು ಯಾವಾಗ’, ಏಲಕ್ಕಿ ಬಿಡುವುದು ಮರದಲ್ಲಿ, ತರಕಾರಿ ಬೆಳೆಯುವುದು ಸೂಪರ್ ಮಾರ್ಕೇಟ್ನಲ್ಲಿ ಎನ್ನುತ್ತವೆ ಮಕ್ಕಳು. ಅಲ್ಲದೆ ಇಂದಿನ ದಿನಗಳಲ್ಲಿ ಹಳ್ಳಿಗಳಲ್ಲೂ ತರಕಾರಿ ಬೆಳೆಯುವುದು ಅಪರೂಪವಾಗಿದೆ. ಮುಂದೊಂದು ದಿನ ತರಕಾರಿ ಬೆಳೆಯುವುದೇ ದೊಡ್ಡ ಉದ್ಯಮವಾದರೂ ಆಶ್ಚರ್ಯವಿಲ್ಲ.

ಈ ಕಿಟ್ನಿಂದ ಮಕ್ಕಳಲ್ಲಿ ಸಣ್ಣ ಮಟ್ಟದಲ್ಲಿ ಆರಂಭಗೊಳ್ಳುವ ಗಿಡ ಬೆಳೆಸುವ ಉತ್ಸಾಹ ಮುಂದೊಂದು ದಿನ ಅರಣ್ಯ ಬೆಳೆಸಿ ಸಂರಕ್ಷಿಸುವ ಮನೋಭಾವ ಬೆಳೆದರೂ ಆಶ್ಚರ್ಯವಲ್ಲ. ತಾಯಿ ತನ್ನ ಮಗುವಿಗೆ ಇದನ್ನು ನೀಡಿ ಅದರ ಉಪಯೋಗ ಅರಿತ ಮಗು ತನ್ನ ಗೆಳೆಯರಿಗೆ ತಿಳಿಸುತ್ತದೆ. ಜೊತೆಗೆ ಅವರಿಗೂ ಇದನ್ನು ಹಂಚುತ್ತದೆ. ತನ್ಮೂಲಕ ಪರಿಸರ ಸ್ನೇಹ ಬೆಳೆಯುತ್ತದೆ. ಈ ಕಿಟ್ ಆಕರ್ಷಕ, ಉಪಯೋಗಿ ಗುಣವುಳ್ಳದ್ದಾಗಿದ್ದು, ದುಬಾರಿ ಗೊಂಬೆಯಂತಹ ನಿರುಪಯೋಗಿ ವಸ್ತುಗಳ ಉಡುಗೊರೆ ನೀಡುವ ಬದಲಿಗೆ ಪರಿಸರ ಸ್ನೇಹಿ, ಸಾಮಾಜಿಕ ಕಳಕಳಿ ಒಳಗೊಂಡ ಇದನ್ನು ಉಡುಗೊರೆಯಾಗಿ ನೀಡಬಹುದು.
ಆಸಕ್ತರು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದು: 7259410274, 08263220473

LEAVE A REPLY

Please enter your comment!
Please enter your name here