ತರಕಾರಿ ಬೆಳೆಗಳ ನಡುವೆ ಚೆಂಡು ಹೂವು ಬೆಳೆಯಿರಿ !

0
ಲೇಖಕರು: ವಿದ್ಯಾ ಮಹೇಶ್

ಕಳೆದ ವಾರ ನಮ್ಮ ತೋಟದ ಬದುವಿನಲ್ಲಿ ನಡೆದು ಹೋಗುವಾಗ ಪಕ್ಕದ ಅಜ್ಜಯ್ಯನ ತೋಟವು ಟೊಮ್ಯಾಟೊ ಹಾಗು ದಪ್ಪ ಮೆಣಸಿನಕಾಯಿ ಮಧ್ಯೆ ಮಧ್ಯೆ ನಳನಳಿಸುವ ಹಳದಿ ಕೇಸರಿ ಚೆಂಡು ಹೂವುಗಳ ಗಿಡಗಳು ಗಮನ ಸೆಳೆದವು.
ತರಕಾರಿಯನ್ನು ಹೆಚ್ಚಾಗಿ ಬೆಳೆವ ಅಜ್ಜ ಈ ಬಾರಿ ಚೆಂಡು ಹೂವಿನ ಕೃಷಿಯನ್ನು ಮಾಡುತ್ತಿದ್ದಾರೆ. ಎಂದು ಭಾವಿಸಿದೆ. ಅಲ್ಲೇ ಕಳೆ ಕೀಳುತ್ತ ಇನ್ನಿತರರೊಂದಿಗೆ ಹರಟುತ್ತಿದ್ದ ಅಜ್ಜಯ್ಯನನ್ನ ಏನಜ್ಜ ತರಕಾರಿ ಜೋಡಿ ಚೆಂಡು ಹೂವಿನ ಕೃಷಿಯನ್ನು ಶುರು ಮಾಡಿದ್ರ ?
ಎಂದಿನಂತೆ ತಮ್ಮ ಅಂಗವಸ್ತ್ರ ಕೊಡುವುತ್ತ ನನ್ನನ್ನು ಅಲ್ಲೇ ಕೂರಲು ಸಂಜ್ಞೆ ಮಾಡಿ ಮಾತಿಗೆ ಶುರು ಮಾಡಿದರು. “ಕಳೆದ ಬಾರಿ ಟೊಮ್ಯಾಟೊ ಹಾಗು ದಪ್ಪ ಮೆಣಸಿನಕಾಯಿ ಬೆಳೆದಾಗ ಎಷ್ಟೇ ಮುತುರ್ವಜಿಯಿಂದ ತೋಟದ ನಿಗವಹಿಸಿದ್ರು ಈ ಕಾಂಡಕೊರಕ, ರಸ ಹೀರುವ ಕೀಟಗಳ ಭಾಧೆಯಿಂದ ಬೆಳೆ ಕೈ ಹತ್ತಲ್ಲಿಲ್ಲ. ಅದಕ್ಕೆಂದೇ ಕೃಷಿ ವಿಜ್ಞಾನಿಯ ಸಲಹೆ ಮೇರೆಗೆ ಈ ರೀತಿಯಾಗಿ ತರಕಾರಿ ಬೆಳೆಗಳ ನಡುವೆ ಚೆಂಡು ಹೂವಿನ ಗಿಡಗಳನ್ನು ನೆಡೆಸಿದೀನಿ” ಎಂದರು
ವಿಜ್ಞಾನಿಗಳು ಹೇಳುವ ಪ್ರಕಾರ ಚೆಂಡು ಹೂವಿನ ಗಿಡಗಳ ಬೇರಿನಲ್ಲಿ ಒಂದು ನೈಸರ್ಗಿಕ ರಾಸಾಯನಿಕವು ಮಣ್ಣಿನಲ್ಲಿರುವ ನೆಮಟೊಡ್ ಎಂಬ ಬೆಳೆಗಳ ಬೇರುಗಳನ್ನ ಹಾಳು ಮಾಡುವ ಅಪಾಯಕಾರಿ ಜೀವಿಗಳನ್ನು ನಾಶ ಮಾಡುತ್ತದೆ.
ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಈ ರಾಸಾಯನಿಕ ಆಲ್ಫಾ ಟೆರ್ತಿನೈಲ್  ಹಲವಾರು ಬಗೆಯ ಕೀಟಗಳಿಗೂ ಸಹ ವಿಷಕಾರಿ ಎಂದು ಧೃಡ ಪಟ್ಟಿದೆ.
ಚೆಂಡು ಹೂವಿನ ಗಿಡವು ಎಂಥ ಬಿಸಿಲಿನಲ್ಲಾದ್ರು ಬದುಕುತ್ತೆ. ಹಾಗೇ ನಿರ್ವಹಣಾ ಖರ್ಚು ಕಡಿಮೆ. ಅಹಮದಾಬಾದಿನ ಮನೀಷ್ ಹಾಗು ಬಾಪು ಚಂದ್ರ ಎಂಬುವರು ಸೇರಿ ಮಾಡಿದ ಅಧ್ಯಯನದ ಪ್ರಕಾರ ತೋಟಗಾರಿಕ ಬೆಳೆಗಳ ನಡುವೆ ಅಂತರ ಬೆಳೆಯಾಗಿ ಚೆಂಡು ಹೂವು ಬೆಳೆದಾಗ, ಅಧಿಕ ಇಳುವರಿಯನ್ನು ಪಡೆಯಬಹುದು.
ಗಾಢ ಬಣ್ಣದ ಚೆಂಡು ಹೂವುಗಳು ದುಂಬಿಗಳನ್ನು ಆಕರ್ಷಿಸುವುದರಿಂದ, ಇತರ ತರಕಾರಿ ಹೂವುಗಳನ್ನು ಸಂಧಿಸುವ ಮೂಲಕ ಪರಾಗ ಸ್ಪರ್ಶವು ಹೆಚ್ಚಾಗಿ, ಅಧಿಕ ಇಳುವರಿ ನೀಡುತ್ತದೆ. ಹೀಗೆ ಉತ್ಪಾದನೆಗೊಂಡ ಹಣ್ಣು ತರಕಾರಿ ಉತ್ಕೃಷ್ಟವಿರುತ್ತದೆ
ಬದನೆ, ಟೊಮೆಟೊ ಬೆಳೆಗಳ ನಡುವೆ ಚೆಂಡು ಹೂವಿನ ಗಿಡಗಳನ್ನು ಬೆಳೆಸುವುದರಿಂದ ತಾಯಿ ಕೀಟಗಳು ಗೊಂದಲದಲ್ಲಿ ಚೆಂಡು ಹೂವಿನ ಗಿಡಗಳ ಎಲೆಗಳ ಮೇಲೆಯೇ ಮೊಟ್ಟೆ ಉರ್ಚಿಬಿಡುತ್ತವೆ. ಮೊಟ್ಟೆಯೊಡೆದು ಬರುವ ಮರಿಹುಳುಗಳು ಇವೆ ಎಲೆಯನ್ನು ತಿಂದಾಗ ಅದು ಅವುಗಳಿಗೆ ವಿಷಕಾರಿಯಾಗಿ ಪರಿಣಮಿಸುತ್ತದೆ.
ಚೆಂಡು ಹೂವು ಪಸರಿಸುವ ಘಮವು ಇತರೆ ತರಕಾರಿ ಹಣ್ಣಿನ ಬೆಳೆಗಳು ಸೂಸುವ ಪರಿಮಳಕ್ಕಿಂತ ಗಾಢವಾಗಿದ್ದು ಹಾನಿಕಾರಕ ತಾಯಿ ಕೀಟಗಳು ತೋಟದಿಂದ ದೂರವೇ ಇರುತ್ತವೆ. ಆದ್ರೆ ಕೆಲವೊಂದು ಉಪಕಾರಿ ಲೇಡಿಬರ್ಡ್ ಆಕರ್ಷಿಸುವುದರಿಂದ ಅದು ಅಫೀಡ್ಸ್ ಎಂಬ ಕೀಟಗಳನ್ನು ನಾಶ ಮಾಡುತ್ತದೆ
ಇದೆಲ್ಲದರ ಜೊತೆಗೆ ಚೆಂಡು ಹೂವನ್ನು ಸಮಾರಂಭ, ದೇವಸ್ಥಾನಗಳಲ್ಲಿ ಅಲಂಕಾರಕ್ಕೆ ಬಳಸವುದರಿಂದ ಹೂವುಗಳ ಮಾರಾಟ ರೈತರಿಗೆ ಒಂದಷ್ಟು ಲಾಭವನ್ನು ತರುತ್ತದೆ

LEAVE A REPLY

Please enter your comment!
Please enter your name here