ಹಲಸನ್ನು ಆರ್ಥಿಕ ಬೆಳೆಯಾಗಿ ನೋಡಿ !

0
ಲೇಖಕರು: ಡಾ. ಉಷಾ ರವೀಂದ್ರ

ಹಣ್ಣುಗಳಲ್ಲಿ ಹಲಸು ಅತಿ ದೊಡ್ಡದು. ವೈಜ್ಙಾನಿಕವಾಗಿ ಮೊರೆಸಿಯೇ ಕುಟುಂಬಕ್ಕೆ ಸೇರಿದೆ. ಜಗತ್ತಿನಲ್ಲಿಯೇ ಮರದಲ್ಲಿ ಬಿಡುವ ಅತಿ ದೊಡ್ಡ ಹಣ್ಣೆಂಬ  ಖ್ಯಾತಿ ಇದೆ. ಈ ಹಣ್ಣಿನ ಮೂಲ ದಕ್ಷಿಣ  ಏಷ್ಯಾದ ದಕ್ಷಿಣ ಭಾಗದ ಪಶ್ಛಿಮ ಘಟ್ಟಗಳು. ಅದರಲ್ಲೂ ಮುಖ್ಯವಾಗಿ ಬಾಂಗ್ಲಾದೇಶ, ಭಾರತ ಮಲೇಶಿಯಾ, ಮ್ಯಾನ್ಮಾರ್, ಶ್ರೀಲಂಕಾ, ಬ್ರೇಜಿಲ್, ಪಾಕಿಸ್ತಾನ ಮುಂತಾದ ದೇಶಗಳ್ಲಿ ಬೆಳೆಯಲಾಗುತ್ತಿದೆ.

ಹಲಸಿನ ಕೃಷಿ ಅತಿ ಪುರಾತನ

ಹಲಸಿನ ಹಣ್ಣನ್ನು “ರಾಷ್ಟಿಯ ಹಣ್ಣು” ಎಂದು ಘೋಷಿಸಲಾಗಿದೆ. ಭಾರತದಲ್ಲಿ ಹೆಚ್ಚಾಗಿ ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಅಸ್ಸಾಂ, ಪಶ್ಚಿಮಬಂಗಾಳ, ಪೂರ್ವಉತ್ತರ ರಾಜ್ಯಗಳು ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಬೆಳೆಯಲಾಗುತ್ತಿದೆ. ಭಾರತದ ಕೃಷಿಯಲ್ಲಿ ಹಲಸಿನ ಕೃಷಿ ಅತಿ ಪುರಾತನ. ಅಂದರೆ ೩೦೦೦ ದಿಂದ ೬೦೦೦ ವರ್ಷಗಳ ಹಿಂದೆಯೇ ಹಲಸಿನ ಕೃಷಿ ಇತ್ತು. ಪುರಾತತ್ವ ಇಲಾಖೆಯ ಪ್ರಕಾರ ರಾಜ ಅಶೋಕನ ಕಾಲದಲ್ಲಿ(೨೭೪-೨೩೭ ಬಿ.ಸಿ) ಹಲಸಿನ ಕಸಿಮಾಡುವ ವಿಧಾನದ ಬಗ್ಗೆ ಉಲ್ಲೇಖವಿದೆ.

ಎಲ್ಲಬಗೆಯ ಮಣ್ಣಿಗೂ ಹೊಂದಿಕೆ:

ಎಲ್ಲ ಮಣ್ನಿನಲ್ಲಿ ಬೆಳೆಯುವ ಗುಣವುಳ್ಳ ಹಲಸು, ಫಲವತ್ತು  ಮಣ್ಣಿನಲ್ಲಿ ಹೆಚ್ಚಿನ ಇಳುವರಿ ಕೊಡಬಲ್ಲದು. ಆದಾಗ್ಯೂ ಹಲಸನ್ನು ಆರ್ಥಿಕ ಬೆಳೆಯಾಗಿ ನೋಡುವ ಪರಿ ಇತ್ತೀಚೆಗಷ್ಟೇ ರೈತ ಸಮುದಾಯದಲ್ಲಿ ಬೆಳೆಯುತ್ತಿದೆ. ನೆರೆಯ ಕೇರಳದಲ್ಲಿ ಹಲಸು ಬೆಳೆ ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳಿಂದ ಆರ್ಥಿಕ ಸ್ವಾವಲಂಬನೆ ಸಾಧಿಸಿರುವ ರೈತರ ಸಂಖ್ಯೆ ಅತ್ಯಧಿಕ.

ಕಸಿ ಮಾಡಿದ ಹಲಸನ್ನು ನೆಟ್ಟು ನಾಲ್ಕ ರಿಂದ ಐದು ವರ್ಷ ತುಂಬಿದಾಗ ಕಾಯಿ ಬೆಡಲು ಪ್ರಾರಂಭವಾಗುತ್ತದೆ.  ಇಲ್ಲವೇ ಆರೇಳು ವರ್ಷಗಳಿಂದ ಕಾಯಿ ಬಿಡಲು ಪ್ರಾರಂಭವಾಗುತ್ತದೆ. ಹಳದಿ ಮಿಶ್ರಿತ ಹಸಿರಾಗಿರುವ ಹೂವುಗಳನ್ನು ಜನವರಿ-ಮಾರ್ಚ್ ತಿಂಗಳಲ್ಲಿ ಕಾಣಬಹುದು ಮತ್ತು ಹಣ್ಣುಗಳು ಎಪ್ರಿಲ್ ನಿಂದ ಜೂನ್ ವರೆಗೂ ಲಭ್ಯವಾಗುತ್ತವೆ.

ಹಲಸಿನ ಸಸ್ಯಾಭಿವೃದ್ಧಿ :

ಹಲಸಿನ ಬೀಜದಿಂದ ವಂಶಾಭಿವೃಧಿಯಾಗವುದರಿಂದ ತೇವಾಂಶ ಆರಿಹೋಗದ ಬೀಜಗಳನ್ನು ಪಾಲಿಥಿನ್ ಬ್ಯಾಗ್ ಗಳನ್ನು ಬೇಗನೆ ಬಿತ್ತನೆ ಮಾಡಿಬೇಕು. ಸುಮಾರು ೧೫-೨೦ ದಿನಗಳಲ್ಲಿ ಮೊಳಕೆಯೊಡೆದು ಮೇಲೆ ಬರುತ್ತದೆ. ಪಾಲೆಗಳಲ್ಲಿ ಕಳೆಗಳನ್ನು ಆಗಾಗ್ಗೆ ತೆಗೆದು ನೀರು ಹಾಕಬೇಕು. ಪ್ರತಿ ಪಾಲೆಗೂ ೧/೩ ಘನ ಮೀಟರ್ ಕೊಟ್ಟಗೆ ಗೊಬ್ಬರ, ಮರಳು, ಕೆಂಪುಮಣ್ಣು ಮಿಶ್ರಮಾಡಿದರೆ ಉತ್ತಮ ಸಸಿಗಳು ಲಭ್ಯ.

ಕಸಿ ವಿಧಾನ:

೧. ಕತ್ತರಿಸಿದ ಕಡ್ಡಿ ವಿಧಾನ ೨. ಗೂಚ ವಿಧಾನ ೩. ಕಣ್ಣು ಕಸಿ ೪. ಮೃದುಕಾಂಡ ಕಸಿ ೫. ಎಪಿಕಾಡರ್ ಕಸಿ ೬. ಹಲಸಿನ ಗಿಡದಲ್ಲಿ ಮೊಗ್ಗಿನ ಕಸಿ ಸೂಕ್ತ ಅಂದರೆ ಹೆಚ್ಚಿನ ಫಲ ನೀಡುವ ಮರದ ಗಿಣ್ಣು ಕತ್ತರಿಸಿ ಸರಿಹೊಂದುವ ಮರಕ್ಕೆ “ಸ್ಟಾಕ್” ಜೋಡಿಸಬೇಕು.

ಕರ್ನಾಟಕದಲ್ಲಿ ಕಂಡುಬರುವ ತಳಿಗಳು
೧. ಜಾಣಗೆರೆ -೧
೨. ಜಾಣಗೆರೆ -೨
೩. ಮಣಿಪುರ
೪. ತೂಬಗೆರೆ
೫. ಮಾರನಗೆರೆ
೬. ಸುಗ್ಗನ ಪಾಳ್ಯ
೭. ಚೆನ್ನಿಗನ ಹೊಸಹಳ್ಳಿ
೮. ಹಾಲ್ಗುಣ
೯. ಅಂಟುರಹಿತ ಹಲಸು
೧೦. ಟಮಕ
೧೧. ಸಿರಿಗಪುರ
೧೨. ರುದ್ರಾಕ್ಷಿ
೧೩. ರುದ್ರಾಕ್ಷಿ ಹಲಸು-ಬಕ್ಕೆ
೧೪. ಹಳ್ಳಿ ಮೈಸೂರು ಹಲಸು

ರುದ್ರಾಕ್ಷಿ ಹಲಸು ೨೦೦-೩೦೦ ಹಣ್ಣಿನ ಇಳುವರಿ ಕೊಡುತ್ತದೆ. ಒಂದು ಹಣ್ಣಿನಲ್ಲಿ ಹೆಚ್ಚೆಂದರೆ, ೧೦-೧೨ ತೊಳೆಗಳು ಮಾತ್ರ ಸಿಗುತ್ತವೆ.

ಬೇಸಾಯ ಕ್ರಮಗಳು:

ಹಲಸಿನ ಗಿಡಗಳನ್ನು ನಾಟಿ ಮಾಡಲು ಜೂನ್-ಜುಲೈ ಸೂಕ್ತ ಕಾಲ ೩ x ೩x ೩ ಅಡಿ ಅಳತೆಯ ಗುಂಡಿಗಳನ್ನು ಮೇ ಆಥವಾ ಜೂನ್ ತಿಂಗಳಿನಲ್ಲಿ ತೆಗೆದು ಪಲೆ ಗುಂಡಿಗೆ ೨೦ ಕೆ.ಜಿ. ಕೊಟ್ಟಿಗೆ ಗೊಬನ್ಬರ ತುಂಬಿಸಿ ನಂತರ ೫೦೦ ಗ್ರಾಂ ಸೂಪರ್ ಫಾಸ್ಫೇಟ್ ಮತ್ತು ೫೦ ಗ್ರಾಂ ಬಿ.ಎಚ್.ಸಿ.ಪುಡಿ ಬೆರೆಸಿ ೨-೩ ವಾರ ಬಿಟ್ಟು೭ ಮಳೆಯಾದ ನಂತರ ನಾಟಿ ಮಾಡಬೇಕು. ಸುಮಾರು ೩೦ ೩೦ ಅಡಿ ಅಂತರದಲ್ಲಿ ಒಂದು ಎಕರೆಗೆ ೪೦ ಗಿಡಗಳನ್ನು ನಾಟಿ ಮಾಡಬಹುದು.

ಅಂತರ ಬೆಳೆ:

ಹೆಚ್ಚು ಫಸಲು ಬರಲು ಮತ್ತು ಗಿಡಗಳು ವೃದ್ಧಿಯಾಗಲು ೪-೫ ವರ್ಷಗಳು ತೆಗೆದುಕೊಳ್ಳುವುದರಿಂದ, ಹಲಸಿನಲ್ಲಿ ಅಂತರ ಬೆಳೆಯಾಗಿ ಬಾಳೆ, ಪಪ್ಪಾಯ, ನಿಂಬೆ ಹಾಗೂ ತರಕಾರಿಗಳನ್ನು(ಬದನೆ, ಮೂಲಂಗಿ, ಮೆಣಸಿನಕಾಯಿ, ಇತ್ಯಾದಿಗಳೂ) ಬೆಳೆದು ಅಧಿಕ ಲಾಭ ಗಳಿಸಬಹುದು. ಇದರ ಜೊತೆಗೆ ದ್ವಿದಳ ಧಾನ್ಯಗಳಾದ ಅಲಸಂದೆ, ಉದ್ದು, ಅವರೆ ಮುಂತಾದವುಗಳನ್ನು ಬೆಳೆಯಬಹುದು. ಇದರಿಂದಾಗಿ ಸಾವಯವ ಇಂಗಾಲಾಂಶ ಹೆಚ್ಚಿಸಬಹುದು.

ಹೂ ಬಿಡುವಿಕೆ:

ಹಳದಿ ಮಿಶ್ರಿತ ಹಸಿರು ಹೂಗಳು ನವೆಂಬರ್‌ ನಿಂದ ಫೆಬ್ರವರಿ ತನಕ ಅರಳಿ ನಂತರ ಕಾಯಿಯಾಗಿ ಬಲಿಯಲು ೧೨೦-೧೪೦ ದಿನಗಳು ಬೇಕಾಗುತ್ತದೆ. ಮರದ ಕಾಂಡ ಮತ್ತು ದಪ್ಪ ರೆಂಬೆಗಳಲ್ಲಿ ಹಣ್ಣುಗಳನ್ನು ಕಾಣುತ್ತೇವೆ.

ಇಳುವರಿ:
ಒಂದು ಮರದಿಂದ ೫೦ ರಿಂದ ೫೦೦ ಹಣ್ಣುಗಳು ದೊರೆಯುತ್ತವೆ. ಸಾಮಾನ್ಯವಾಗಿ ಒಂದು ಹಣ್ಣು ಕನಿಷ್ಟ ಒಂದು ಕೆ.ಜಿ.ಯಿಂದ ಗರಷ್ಟ ೨೦ ಕೆ.ಜಿವರೆಗೂ ತೂಗುತ್ತದೆ. ಒಂದು ಎಕರೆಗೆ ೧೨೦೦ ರಿಂ ೩೨೦೦ ಮಾರಾಟ ಯೋಗ್ಯ ಹಣ್ಣು ದೊರೆಯುತ್ತವೆ.

ಕೊಯ್ಲು ಮಾಡಲು ಅನುಸರಿಸಬೇಕಾದ ಕ್ರಮಗಳು:
೧. ಹಣ್ಣನ್ನು ಬೆರಳಿಂದ ಬಡಿದರೆ ‘ಢಬ್’ ಎಂಬ ಶಬ್ಧ ಬಂದರೆ ಹಣ್ಣು ಬಲಿತಿದೆ ಎಂದು ಸೂಚನೆ
೨. ಹೂವ್ವಿನ ತುಂಬು ((penduncle)   ಕೊನೆಯ ಎಲೆ ಹಳದಿ ಬಣ್ಣಕ್ಕೆ ತಿರುಗಿದರೆ
೩. ಹಣ್ಣಿನ ಹೊರ ಮೈ ಮೃದುವಾಗುವುದು
೪. ಹಣ್ಣಿನಿಂದ ಹೊರಸೂಸುವ ಸುವಾಸನೆ.

ಮಾರುಕಟ್ಟೆ:

ದೂರದ ಮಾರುಕಟ್ಟೆಗೆ ತಲುಪಬೇಕಾದರೆ, ಸಾಗಿಸಲು ಚೆನ್ನಾಗಿ ಬಲಿತ ಹಾಗು ಸುವಾಸನೆ ಬರುವ ಮುನ್ನವೇ ಕೊಯ್ಲು ಮಾಡಬೇಕು. ಈ ಬೆಳೆಗೆ ಉತ್ತಮ ಬೆಲೆ ಸಿಗಬೇಕಾದರೆ ರೈತರು ಸಂಘಟಿತರಾಗಿ ಹಣ್ಣು ಮಾರಾಟ ಮತ್ತು ಸಂಸ್ಕರಣೆ ಮಾಡಿದರೆ ಉತ್ತಮ ಬೆಲೆ ದೊರೆಯುತ್ತದೆ.

ಕೀಟ ರೋಗ ನಿರ್ವಹಣೆ:

೧. ೧೦ ಲೀಟರ್ ನೀರಿಗೆ ೪೦ ಗ್ರಾಂ ಸೆವಿನ್ ಹೂ ಬಿಡುವ ಕಾಲದಲ್ಲಿ ಸಿಂಪಡಿಸಿದರೆ ಕಾಂಡ ದೊರೆಯುವ ಹುಳುವಿನಾ ಬಾಧೆ ತಪ್ಪಿಸಬಹುದು.
೨. ಎಳೆ ಮೊಗ್ಗಲ್ಲಿ ಕಾಯಿಗಳನ್ನು ಕೊರೆಯುವ ಕಂದು ಮೂತಿ ಹುವಿನಿಂದ ಗಿಡಗಳನ್ನು ರಕ್ಷಿಸಲು ಬಿದ್ದ ಹೂ, ಕಾಯಿಗಳನ್ನು ಕೂಡಲೇ ಸುಡಬೇಕು
೩. ಎಲೆ ರೆಂಬೆಯ ರಸ ಹೀರುವ ಕೀಟಗಳನ್ನು ನಿಯಂತ್ರಿಸಲು ೪೦ ಗ್ರಾಮ್ ಕಾರ್ಬರಿಲ್ ನ್ನು ೧೦ ಲೀ ನೀರಿಗೆ ಬೆರೆಸಿ ಸಿಂಪಡಿಸಬೇಕು.
೪. ಹಣ್ಣು ಕೊಳೆಯುವುದನ್ನು ತಪ್ಪಿಸಲು ಶೇ.೧ರ ಮೋರ್ಡೋ ದ್ರಾವಣವನ್ನು ಸಿಂಪಡಿಸಬೇಕು.

ಹಲಸಿನ ವಿವಿಧ ಉಪಯೋಗಗಳು:
೧. ಮರದಿಂದ ಹಣ್ಣು, ಕಾಯಿ, ಬೀಜ, ನಾರು ಮತ್ತು ಇವುಗಳ ಸಂಸ್ಕರಣೆ ಆಹಾರೋತ್ಪನ್ನಗಳು
೨. ಎಲೆ ಹಣ್ಣಿನ ತೊಗಟೆಯಿಂದ ಕಾಂಪೋಸ್ಟ್
೩. ಹಲಸಿನ ಕಾಂಡ, ಕಾಯಿಯಿಂದ ಪೆಶ್ಟಿನ್ ಎಂಬ ರಾಸಾಯನಿಕ ಉತ್ಪಾದಿಸಿ ಜಾಮ್ ತಯಾರಿಕೆಗೆ ಬಳಸುತ್ತಾರೆ.
೪.ಹಲಸಿನ ಮರವನ್ನು ಪೀಠೋಪಕರಣಗಳ ತಯಾರಿ
೫. ಹಲಸಿನ ಕಾಂಡವನ್ನು ನಾಟಿವಾಗಿ ಸಹ ಬಳಸಲಾಗುತ್ತದೆ.
೬.ಪಶು ಆಹಾರ (ಜಾನುವಾರುಗಳಿಗೆ ಬೇಕಾದ ಪೋಷಕಾಂಶಗಳು ಈ ಹಣ್ಣಿನ ಸಿಪ್ಪೆಯಲ್ಲಿ ಲಭ್ಯ)

ಪೌಷ್ಠಿಕತೆ:
ಹಸಿದು ಹಲಸು ತಿನ್ನು ಎಂಬ ಮಾತಿನಂತೆ, ಹಲಸಿನ ಹಣ್ಣು ತಿನ್ನುವುದರಿಂದ ಹಸಿವು ನೀಗಿಸುವುದರೊಂದಿಗೆ, ಹೆಚ್ಚು ಪೌಷ್ಠಿಕಾಂಶಗಳು ನಮ್ಮ ಶರೀರಕ್ಕೆ ದೊರೆಯುತ್ತವೆ. ಅಲ್ಲದೇ ಹಲಸಿನ ನಾರು ಕೂಡ ಉತ್ತಮ ಪ್ರಮಾಣದಲ್ಲಿ ಪೋಶಕಾಂಶಗಳನ್ನು ಒದಗಿಸುತ್ತವೆ. ಪ್ರೋಟಿನ್, ಪಷ್ಠ, ಸಕ್ಕರೆ, ಕ್ಯಾಲ್ಸಿಯಂ, ಮ್ಯಾಗ್ನೆಸಿಯಂ, ರಂಜಕ, ಪೋಟಾಸಿಯಂ, ಜೀವಸತ್ವ-ಎ ಅಲ್ಲದೇ ಅತಿಮುಖ್ಯವಾಗಿ ನಾರಿನಾಂಶ ಹೇರಳವಾಗಿದೆ.

ಔಷಧಗುಣ

ಹಲಸಿನ ಹಣ್ಣು ಅಧಿಕ ಪೊಟಾಸಿಯಂ ಅಂಶ ಹೊಂದಿದೆ. ಅಧಿಕ ರತ್ತದೊತ್ತಡ ಕಡಿಮೆ ಮಾಡುತ್ತದೆ. ಇದರಲ್ಲಿರುವ ಜೀವಸತ್ವ-ಸಿ ರೋಗ ನಿರೋಧಕ ಶಕ್ತಿಯನ್ನು ನೀಡಿದರೆ ಹಲಸು ಔಷಧ ಅಂಶವಾಗಿರುವ “ಜಾಕಲಿನ್” ವಿವಿಧ ವೈರಸ್ಗಳನ್ನು ದೂರವಿಡುತ್ತವೆ.

ಹಲಸಿನ ಮೌಲ್ಯವರ್ಧಿತ ಪದಾರ್ಥಗಳು:

ಹಣ್ಣಿನಿಂದ ಹಲ್ವ, ಚಿಪ್ಸ್, ಹಣ್ಣಿನ ರಸ, ಕ್ಯಾಂಡಿ ತಯಾರಿಸಿದರೆ ಬೀಜದಿಂದ ಬೇಕರಿ ತಿನಿಸುಗಳು, ಚಪಾತಿ, ವಡೆ ಇತ್ಯಾದಿ ತಯಾರಿಸಬಹುದು. ನಾರಿನಿಂದ ಟಾಫೀ, ಲಜಾಮ್, ಜ್ಯೂಸ್, ಕ್ಯಾಂಡಿ, ಚಿಪ್ಸ್, ಹಪ್ಪ ಇತ್ಯಾದಿ ತಯಾರಿಸಿ ಮಾರಾಟಮಾಡಿ ಅಧಿಕ ಲಾಭಗಳಿಸಬಹುದಾಗಿದೆ. ಒಂದು ಮರದಿಂದ ಸುಮಾರು ೫೦ ರಿಂದ ೫೦೦ ಹಣ್ಣುಗಳು ದೊರೆಯುತ್ತವೆ.  ಹಲಸಿನ ಮರಮುಟ್ಟು, ಹಲಸಿನ ಹಣ್ಣಿನಿಂದ ತಯಾರಿಸಿದ ಮೌಲ್ಯವರ್ಧಿತ ಉತ್ಪನ್ನಗಳು, ನಾರಿನಿಂದ ತಯಾರಾದ ಆರೋಗ್ಯಕರ ತಿನಿಸುಗಳು, ಹಲಸಿನ ಬೀಜದ ಸದ್ಬಳಕೆ ಇತ್ಯಾದಿಗಳಿಂದ ರೈತರು ಸ್ವಾವಲಂಬನೆಯತ್ತ ಹೆಜ್ಜೆ ಇರಿಸಬಹುದು.

ಹಲಸನ್ನು ಆರ್ಥಿಕ ಬೆಳೆಯಾಗಿ ನೋಡಿ ಲೇಖನ ಸರಣಿ ಮುಂದುವರಿಯುತ್ತದೆ

LEAVE A REPLY

Please enter your comment!
Please enter your name here