ಬೆಂಗಳೂರು: ಅಕ್ಟೋಬರ್ 16: ನಾಳೆ ಅಂದರೆ ಸೋಮವಾರ ಅಕ್ಟೋಬರ್ 17 ರಂದು ರೈತರ ಬ್ಯಾಂಕ್ ಖಾತೆಗಳಿಗೆ ಪ್ರಧಾನ ಮಂತ್ರಿ ಕಿಸಾನ್ ಪರಿಹಾರ ನಿಧಿಯ ಕಂತಿನ ಹಣ ವರ್ಗಾವಣೆಯಾಗಲಿದೆ.
ಇದು 12ನೇ ಕಂತಿನ ಹಣವಾಗಿದೆ. ಪ್ರತಿಯೋರ್ವ ನೋಂದಾಯಿಸಲ್ಪಟ್ಟ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ ನಿಧಿಯಿಂದ 2000 ಸಾವಿರ (ಎರಡು ಸಾವಿರ) ಜಮಾವಣೆಯಾಗುತ್ತದೆ,
ಆಗಸ್ಟ್ ತಿಂಗಳಿನಲ್ಲಿಯೇ ಕೃಷಿ ಸಮ್ಮಾನ್ ನಿಧಿಯ ಹಣ ವಿತರಣೆಯಾಗಬೇಕಿತ್ತು. ತಡವಾಗಿದ್ದ 12ನೇ ಕಂತಿನ ಹಣ ಪ್ರಸ್ತುತ ವರ್ಗಾವಣೆಯಾಗುತ್ತಿದೆ. ಸೋಮವಾರ ಎರಡು ದಿನ ಅವಧಿಯ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಂತಿನ ಹಣ ವರ್ಗಾವಣೆಗೆ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ.
ಇದೇ ಸಂದರ್ಭದಲ್ಲಿ ದೇಶಾದ್ಯಂತ ಕಾರ್ಯನಿರ್ವಹಿಸಲಿರುವ ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳಿಗೂ ಚಾಲನೆ ದೊರೆಯಲಿದೆ.