ಬೆಂಗಳೂರು ಸಮೀಪದ ಹೆಸರಘಟ್ಟದಲ್ಲಿ ಇರುವ ತೋಟಗಾರಿಕೆ ಸಂಸ್ಥೆ ಆವರಣದಲ್ಲಿ ಫೆಬ್ರವರಿ 22 ರಿಂದ ರಾಷ್ಟ್ರೀಯ ತೋಟಗಾರಿಕೆ ಮೇಳ ನಡೆಯುತ್ತಿದೆ. ಕಾರ್ಯಕ್ರಮದ ಎರಡನೇ ದಿನ ಹನ್ನೊಂದು ಸಾವಿರಕ್ಕೂ ಹೆಚ್ಚು ಮಂದಿ ರೈತರು ಹಾಜರಿದ್ದರು. ಸುಮಾರು ಎರಡು ಸಾವಿರ ರೈತರು ತಮಿಳುನಾಡು, ಆಂಧ್ರಪ್ರದೇಶ, ಕೇರಳ, ತೆಲಂಗಾಣ, ಹರಿಯಾಣ, ಛತ್ತೀಸ್‌ಗಢ ಮುಂತಾದ ಇತರ ರಾಜ್ಯಗಳಿಂದ ಬಂದಿದ್ದರು.
ಎನ್‌ಎಚ್‌ಎಫ್‌ಗೆ ಸಮಾನಾಂತರವಾಗಿ ಹೈಟೆಕ್ ಕೃಷಿ ತಂತ್ರಗಳ (ಹೈಡ್ರೋಪೋನಿಕ್ಸ್, ಏರೋಪೋನಿಕ್ಸ್, ಆಕ್ವಾಪೋನಿಕ್ಸ್, ವರ್ಟಿಕಲ್ ಫಾರ್ಮಿಂಗ್) ಕಾರ್ಯಾಗಾರವನ್ನು ನಡೆಸಲಾಯಿತು. ಸೊಸೈಟಿ ಫಾರ್ ದಿ ಪ್ರಮೋಷನ್ ಆಫ್ ಹಾರ್ಟಿಕಲ್ಚರ್ (SPH) ಸಹಯೋಗದೊಂದಿಗೆ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆಸಲಾಯಿತು.
ಬೀಜ ಮತ್ತು ನಾಟಿ ವಸ್ತುಗಳಿಗೆ ಭಾರಿ ಬೇಡಿಕೆ ಇತ್ತು, ರೈತರು ಇವುಗಳನ್ನು ಖರೀದಿಸಿ ಸಾಗಣೆ ಮಾಡುತ್ತಿರುವುದು ಎನ್‌ಎಚ್‌ಎಫ್ ಪ್ರದೇಶದಲ್ಲಿ ಸಾಮಾನ್ಯ ದೃಶ್ಯವಾಗಿದೆ. ಐಐಎಚ್‌ಆರ್ ಮಳಿಗೆಯಲ್ಲಿ ಉತ್ತಮ ವಹಿವಾಟು ಆಗುತ್ತಿದೆ. ಖಾಸಗಿ ಸಂಸ್ಥೆಗಳು ತೆರೆದಿರುವ ಮಳಿಗೆಗಳಲ್ಲಿಯೂ ಭರ್ಜರಿ ವ್ಯಾಪಾರ ನಡೆಯುತ್ತಿದೆ.
ಸಂಸ್ಥೆಯ ಪರಿಣಿತರ ನೇತೃತ್ವದಲ್ಲಿ ರೈತರ ಸಮಾಲೋಚನೆ ಕೂಡ ನಡೆಯಿತು, ಸಾಕಷ್ಟು ಮಂದಿ ರೈತರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡರು. ರಾಗಿ ಥೀಮ್ ಪಾರ್ಕ್ ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಹೆಚ್ಚಿನ ಆಕರ್ಷಣೆಯಾಗಿದೆ
Good