ಕೃಷಿ ಯುವಜನೋತ್ಸವ ಲಾಂಛನ ಬಿಡುಗಡೆ

0

ಅಖಿಲ ಭಾರತ 21ನೇ ಕೃಷಿ ಯುವಜನೋತ್ಸವದ ಲಾಂಛನವನ್ನು ದಿನಾಂಕ:15-12-2022ರಂದು ಕೃವಿವಿ, ಜಿಕೆವಿಕೆ, ಬೆಂಗಳೂರಿನಲ್ಲಿ ಕುಲಪತಿ ಡಾ. ಎಸ್.ವಿ.ಸುರೇಶ, ಬಿಡುಗಡೆ ಮಾಡಿದರು

ಈ ಸಂದರ್ಭದಲ್ಲಿ ಮಾತನಾಡಿದ ಕುಲಪತಿ, 2023ನೇ ಜನವರಿ 18 ರಿಂದ 22 ರವರೆಗೆ ಐದು ದಿನಗಳವರೆಗೆ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ, ಬೆಂಗಳೂರಿನಲ್ಲಿ ಅಖಿಲ ಭಾರತ 21ನೇ ಕೃಷಿ ಯುವಜನೋತ್ಸವು ಜರುಗಲಿದೆ. ಯುವಜನೋತ್ಸವದಲ್ಲಿ ವಿವಿಧ ರಾಜ್ಯಗಳ 74 ಕೃಷಿ ಸಂಬಂಧಿ ವಿಶ್ವವಿದ್ಯಾನಿಲಯಗಳು ಭಾಗವಹಿಸಲಿವೆ. ಸುಮಾರು 2,500 ಪ್ರತಿನಿಧಿಗಳು ಯುವಜನೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

 ಈ ಹಿಂದೆ ಎರಡು ಭಾರಿ 2008 ಮತ್ತು 2013 ರಂದು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಅಖಿಲ ಭಾರತ ಕೃಷಿ ಯುವಜನೋತ್ಸವನ್ನು ಆಯೋಜಿಸಿತ್ತು. ಯುವಜನೋತ್ಸವದಲ್ಲಿ 5 ವಿಷಯಗಳಲ್ಲಿ 18 ಸ್ಪರ್ಧೆಗಳು ಜರುಗಲಿವೆ. ಸಂಗೀತದಲ್ಲಿ: ಭಾರತೀಯ ಲಘು ಸಂಗೀತ, ಭಾರತೀಯ ಸಮೂಹ ಗಾಯನ (ದೇಶಭಕ್ತಿ ಗೀತೆ), ಭಾರತೀಯ ಸಮೂಹ ಗಾಯನ (ಜಾನಪದ ಗೀತೆ), ನೃತ್ಯದಲ್ಲಿ: ಸಮೂಹ ನೃತ್ಯ (ಜನಪದ), ಸಾಹಿತ್ಯದಲ್ಲಿ: ರಸಪ್ರಶ್ನೆ, ವಾಕ್ ಸ್ಪರ್ಧೆ,, ಚರ್ಚಾ ಸ್ಪಧೆÉð ಮತ್ತು ಆಶುಭಾಷಣ ಸ್ಪರ್ಧೆ, ರಂಗಭೂಮಿಯಲ್ಲಿ: ಏಕಾಂಕ ನಾಟಕ, ಲಘು ಪ್ರಹಸನ, ಮೂಕಾಭಿನಯ ಮತ್ತು ಏಕ ಪಾತ್ರಾಭಿನಯ, ಲಲಿತಕಲೆÀಯಲ್ಲಿ: ಸ್ಥಳದಲ್ಲಿ ಚಿತ್ರ ರಚನೆ, ಬಿತ್ತಿ ಪತ್ರ ರಚನೆ, ತುಣುಕು ಚಿತ್ರ ರಚನೆ, ಮಣ್ಣಿನ ಆಕೃತಿ ರಚನೆ, ರಂಗೋಲಿ ಮತ್ತು ವ್ಯಂಗ ಚಿತ್ರ ರಚನೆ ಸ್ಪಧೆÉÉðಗಳು ಜರುಗಲಿವೆ.

ಲಾಂಛನ ಬಿಡುಗಡೆ ಸಮಾರಂಭದಲ್ಲಿ ಡಾ. ಕೆ.ಸಿ. ನಾರಾಯಣಸ್ವಾಮಿ, ಶಿಕ್ಷಣ ನಿರ್ದೇಶಕರು, ಡಾ. ಎನ್.ಬಿ. ಪ್ರಕಾಶ್, ಡೀನ್ (ಕೃಷಿ), ಡಾ: ಬಸವೇಗೌಡ, ಕುಲಸಚಿವರು, ಡಾ: ಕೆ. ನಾರಾಯಣಗೌಡ, ವಿಸ್ತರಣಾ ನಿರ್ದೇಶಕರು, ಡಾ: ಕೆ. ಶಿವರಾಮು, ಹಿರಿಯ ವಾರ್ತಾತಜ್ಞರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here