ರೇಷ್ಮೆ ಮೂಲ ಭಾರತದ್ದೇ ಎನ್ನಲು ಆಧಾರಗಳು

1
ಡಾ. ಸುನಿಲ್ ಕುಮಾರ್ ಟಿ., ಸಹಾಯಕ ಪ್ರಾಧ್ಯಾಪಕರು, ರೇಷ್ಮೆಕೃಷಿ ಮಹಾವಿದ್ಯಾಲಯ, ಚಿಂತಾಮಣಿ

ಭಾಗ – 2

ಓದುಗರಿಗೆ ಅಚ್ಚರಿ ಉಂಟು ಮಾಡುವುದು ; ಕ್ರಿ.ಪೂ. 5000 ವರ್ಷಗಳ ಹಿಂದೆ ನಡೆದ ಮಹಾಭಾರತ ಮತ್ತು ಕ್ರಿ.ಪೂ 12000 ವರ್ಷಗಳ ಹಿಂದೆ ನಡೆದ ರಾಮಾಯಣದಲ್ಲಿ ಉಲ್ಲೇಖವಾಗುವ ರೇಷ್ಮೆ ಚೀನಾದಲ್ಲಿ ರೇಷ್ಮೆಬೆಳಕಿಗೆ ಬರುವುದಕ್ಕಿಂತ ಮುಂಚೆಯೇ ರೇಷ್ಮೆ ಭಾರತದ ಮೂಲದ್ದು ಎಂಬುದನ್ನು ಎತ್ತಿಹಿಡಿಯುತ್ತದೆ. ಅಲ್ಲದೆ Harappa Archrolgical Research Project ಇತ್ತಿಚೆಗೆ ನೀಡಿದ ಫಲಿತಾಂಶವೂ ಭಾರತದಲ್ಲಿ ರೇಷ್ಮೆ ಬಳಕೆ ಚೀನಾಕ್ಕಿಂತಲ್ಲೂ ಮುಂಚೆ ಇತ್ತು ಎನ್ನುವುದನ್ನು ರುಜುವಾತು ಮಾಡಿದೆ.

ಈ ಲೇಖನದ ಮೊದಲ ಭಾಗದ ಲಿಂಕ್ : ರೇಷ್ಮೆ ಮೂಲ ಭಾರತದ್ದೇ ಎಂದೆಳಲು ಅಂಜಿಕೆ ಏಕೆ ?

ಕೌತುಕವೆಂದರೆ ಹಿಪ್ಪುನೇರಳೆ ರೇಷ್ಮೆಹುಳು Bombyx mori L. ಹೊರತುಪಡಿಸಿ ಇತರೇ ರೇಷ್ಮೆಹುಳುಗಳಾದ ಎರಿ, ಮೂಗ, ಟಸ್ಟಾರ್ ಇತ್ಯಾದಿ ಭಾರತೀಯ ನೆಲೆಯಲ್ಲಿ ಭದ್ರವಾಗಿ ಬೇರೂರಿ ನಿಂತಿದೆ.

1924 ರಲ್ಲಿ ನಿಕೊಲೈ ವೆವಿಲೊ ಅವರೇ ಹೇಳುವಂತೆ “ಯಾವುದೇ ಭೌಗೋಳಿಕ ಪ್ರದೇಶವನ್ನು ಜೀವಪ್ರಭೇದದ ಮೂಲವೆಂದು ಪರಿಗಣಿಸಬೇಕೆಂದರೆ ಆ ಪ್ರದೇಶದಲ್ಲಿ ಆ ಜೀವ ಪ್ರಭೇದದ ಪೂರ್ವಜರು ಹುಟ್ಟಿ ಅಲ್ಲಿ ತಮ್ಮ ಸಂತತಿಯನ್ನು ಬೆಳೆಸುತ್ತಾ, ಸಹ ಪ್ರಭೇದ, ಜಾತಿಗಳಾಗಿ ಜೀವ ವೈವಿದ್ಯತೆ ಮೆರೆದಿರಬೇಕಾಗಿರುತ್ತದೆ”. ಈ ವಿಜ್ಞಾನ ಸಿದ್ದಾಂತದಡಿ ಒಮ್ಮೆ ನೋಡುವಾಗ ನಿಜವಾಗಿಯೂ ಚೀನಾ ಒಟ್ಟಾರೆ ರೇಷ್ಮೆಯ ಉಗಮ ಸ್ಥಳವೇ? ಅಥವಾ ಕೇವಲ ಹಿಪ್ಪುನೇರಳೆ ರೇಷ್ಮೆಯ ಉಗಮಸ್ಥಳವೇ? ಅಥವಾ ಚೀನಾವನ್ನು ಹೊರತುಪಡಿಸಿ ಬೇರೆ ಇನ್ನಾವ ದೇಶವಾದರೂ ಇರಬಹುದೇ ಎಂಬ ಕೌತುಕಮಯ ಪ್ರಶ್ನೆಗಳು ಉದ್ಭವಿಸುವುದು ಸತ್ಯ.

ಇನ್ನು ವಿಜ್ಞಾನದ ಭೂತಗನ್ನಡಿಯಲ್ಲಿ ಗಮನಿಸಿದಾಗ, ರೇಷ್ಮೆಯ ಪೂರ್ವಜನಾಗಿ ಗುರುತಿಸಲ್ಪಡುವ ಚೀನಾದ Bombyx mandarina (2n=56) ಹೊರುತುಪಿಡಿಸಿ ಜಪಾನಿನಲ್ಲಿ Bombyx mandarina (2n=54) ಎನ್ನುವ ಒಂದು ಪ್ರಭೇಧ ಕಂಡುಬರುತ್ತದೆ. ಜೀವವಿಕಾಸದ ಸಿದ್ದಾಂತದ ಪ್ರಕಾರ ಸಾಮಾನ್ಯವಾಗಿ ಕಡಿಮೆ ವರ್ಣತಂತುಗಳಿAದ ಹೆಚ್ಚು ವರ್ಣತಂತುಗಳೆಡೆಗೆ ಜೀವ ವಿಕಾಸ ಸಾಗುವ ಸಾರ್ವಕಾಲಿಕ ಸತ್ಯ ಇದೆ (From lower ploidy to higher ploidy) ಹಾಗಾದರೆ ಜಪಾನಿನಲ್ಲಿಯ B. mandarina ªÀtð vÀAvÀÄUÀ¼ÀÄ (2n=54) ವರ್ಣ ತಂತುಗಳು (2ಟಿ=54) ಮತ್ತು ಚೀನಾದಲ್ಲಿ B. mandarina 2n=56 ಹೊಲಿಕೆ ಮಾಡಿದಾಗ ಜಪಾನನ್ನು ನಿಜವಾಗಿಯೂ B. mandarina ದ ಉಗಮ ಸ್ಥಳವೆಂದು ಏಕೆ ಗ್ರಹಿಸಲಿಲ್ಲ? ಎಂಬ ಪ್ರಶ್ನೆ ಹುಟ್ಟುತ್ತದೆ.

ಸಾಮಾನ್ಯವಾಗಿ ಉಗಮಸ್ಥಳದಲ್ಲಿ ಹೆಚ್ಚು ವೈವಿದ್ಯತೆ ತೋರುವ ಆ ಜೀವಿಯು ಜಾತಿಗಳಾಗಿ, ಪ್ರಭೇದಗಳಾಗಿ ವೃದ್ಧಿಯಾಗಿ ವ್ಯಾಪಕ ವೈವಿದ್ಯತೆ ತೋರಿಸುತ್ತಾ ನೆಲೆಸಬೇಕು. ಹಾಗಾದರೆ ಇಲ್ಲಿ ವೈವಿದ್ಯತೆ ಎನ್ನುವುದು, ಹೆಚ್ಚು ವರ್ಣತಂತುಗಳು ಇದ್ದರಷ್ಟೇ ವೈವಿದ್ಯತೆ ಹೆಚ್ಚಾಗುತ್ತದೆ. ಭಾರತದಲ್ಲಿಯ ಟಸ್ಟಾರ್ (Antheraca mylitta D)£ನಲ್ಲಿ 2n=62 ವರ್ಣತಂತುಗಳು ಕಂಡುಬರುವುದಲ್ಲದೆ ಅದರ ಸರಿಸುಮಾರು 44 EcoraceUÀ ಗಳು ವೃದ್ಧಿಗೊಂಡು ನೆಲೆನಿಂತಿವೆ.

ಇನ್ನೂ ಸಂಕ್ಷಿಪ್ತವಾಗಿ ನೋಡುವುದೇ ಆದರೆ ಭಾರತೀಯ ಮೂಲದ ÁÖgï (Oak tasar) Antheraea proylei J (2n=98) ಎನ್ನುವ ರೇಷ್ಮೆತಳಿಕೂಡ ಭಾರತೀಯ Antheraea roylei  (2n=60) ಹಾಗೂ ಚೀನಾದ A. pernyi G.M. (2n=49) ತಳಿಗಳ ನಡುವಣ ಸಂಕರಣದಿಂದ ವೃದ್ಧಿಯಾಗಿದ್ದಲ್ಲದೆ ಭಾರತೀಯ ಮೂಲದಲ್ಲಿ ತನ್ನ ಜೀವವೈವಿದ್ಯತೆ ಕವಲುಗಳನ್ನು ಹಿಮಾಲಯದ ತಪ್ಪಲು ಹಾಗೂ ಈಶಾನ್ಯ ಭಾರತದಲ್ಲಿ ಹಬ್ಬಿಸಿನಿಂತಿದೆ. ಹೆಚ್ಚಾಗಿ ಕಂಡು ಬರುವ ಟಸ್ಟಾರ್ ರೇಷ್ಮೆಯ ವಂಶವೃಕ್ಷವನ್ನು ಪತ್ತೆಹೆಚ್ಚುವಲ್ಲಿ ಇನ್ನೂ ಸಂಶೋಧನೆಯ ಅವಶ್ಯಕತೆ ಇದೆ.

ಚೀನಾದ A. Pernyi (2n=49) ಅನ್ನುವ ರೇಷ್ಮೆಹುಳು ಕೂಡ ಜಪಾನಿನ ಮೂಲದ A. yamamai ಮೂಲಕ ವಿಕಾಸಗೊಂಡಿದೆ ಎಂದು ಡಿ.ಎನ್.ಎ. ಆಧಾರಿತ ಸಂಶೋಧನಾ ಫಲಿತಾಂಶಗಳು ದೃಢಪಡಿಸಿದೆ.

ಪ್ರಪಂಚದ ಭೂಪಟದಲ್ಲಿ ಭಾರತದಲ್ಲಿ ಮಾತ್ರ ಕಾಣಸಿಗುವ ಮೂಗ ರೇಷ್ಮೆಹುಳುಗಳು Antheraea assamensis (2n=30) ಬಹುತೇಕ ಅಸ್ಸಾಂ ರಾಜ್ಯದಲ್ಲಿ ಹೊಂದಿಕೊಂಡು ತನ್ನ ಜೀವವೈವಿದ್ಯತೆಯನ್ನು ಬೆಳೆಸಿಕೊಂಡಿವೆ. ಭಾರತೀಯ ಮೂಲದ ಈ ಪ್ರಭೇದದ ಸುಮಾರು ಉಪÀಪ್ರಬೇದಗಳು ಪತ್ತೆಯಾಗಿರುವುದು ಮೂಗ ರೇಷ್ಮೆಯ ಉಗಮ ಭಾರತದ್ದು, ಎನ್ನುವಷ್ಟು ಭಾರತಕ್ಕೆ ಹೊಂದಿಕೊಂಡಿದೆ

ಅದರಂತೇಯೇ ಅಹಿಂಸಾ ರೇಷ್ಮೆ ಎನಿಸಿಕೊಳ್ಳುವ ಎರಿ ರೇಷ್ಮೆ Philosamia cynthia ricini Bosideval (2n=25, 28)  ಕೂಡ ಬಹುತೇಕ ಅಸ್ಸಾಂನಲ್ಲಿ ತನ್ನ ಜೀವ ವೈವಿದ್ಯತೆಯನ್ನು ಹಬ್ಬಿಸಿಕೊಂಡಿದೆ. ಇತ್ತಿಚೀಗೆ ಬಿಹಾರ, ಪಶ್ಚಿಮಬಂಗಾಳ, ಮಣಿಪುರ, ಓರಿಸ್ಸಾ, ತ್ರಿಪುರ, ತಮಿಳುನಾಡುನಲ್ಲಿ ಕಾಣಿಸಿಕೊಂಡಿರುವುದು ಭಾರತೀಯ ಭೌಗೋಳಿಕ ಪ್ರದೇಶ ಎರಿ ರೇಷ್ಮೆಹುಳುವಿನ ಆಶ್ರಯತಾಣವಾಗಿದೆ (ವೆಲಯುದನ್ 2014)

ಈ ಮೇಲ್ಕಂಡ ಎಲ್ಲ ವೈಜ್ಞಾನಿಕ ಅಂಶಗಳನ್ನು ಸಂಕ್ಷಿಪ್ತವಾಗಿ ವ್ಯಾವಿಲೊ ಅವರ Center of origin ನ ವಿಷಯದ ಜೊತೆಗೆ ಹೊಲಿಕೆ ಮಾಡಿದಾಗ ಉಗಮಸ್ಥಾನಕ್ಕೆ ಬೇಕಾಗಬಹುದಾದ ಪ್ರಮುಖ ಅಂಶ ಅದರಲ್ಲಿಯ ವರ್ಣತಂತುಗಳ ಸಂಖ್ಯೆ ಕಡಿಮೆ ಇದ್ದು ಕ್ರಮೇಣ ವಿಕಾಸ ಹೊಂದಿರಬೇಕು. ಈ ನೆಲೆಗಟ್ಟಿನಲ್ಲಿ ಯೋಚನೆ ಮಾಡಿ ನೋಡಿದಾಗ B. mandarina (2n=54) ಜಪಾನಿನಲ್ಲಿ ಕಂಡುಬರುವುದರಿAದ ಹಿಪ್ಪುನೇರಳೆ ಉಗಮಸ್ಥಾನ ಜಪಾನಿನೆಡೆಗೆ ತಿರುಗುತ್ತದೆ. ಆದರೆ ವಿಕಾಸವಾದದಲ್ಲಿ ಯಾವುದೇ ಎರಡು ವಿಭಿನ್ನ ಭೌಗೋಳಿಕ ಪ್ರದೇಶದಲ್ಲಿ ಒಂದೇ ಸಮಯದಲ್ಲಿ ಪ್ರಭೇದವೊಂದು ಹುಟ್ಟಿ ವೈವಿದ್ಯತೆಗಳಿಸಿಕೊಳ್ಳÀಬಹುದು ಎಂಬ ನಂಬಿಕೆಯ ಅಡಿಗಲ್ಲಿನ ಮೇಲೆ ಯೊಚಿಸಿದಾಗ B. mandarina ಚೀನಾ ಮತ್ತು ಜಪಾನಿನಲ್ಲಿ ಒಂದೇ ಕಾಲಘÀಟ್ಟದಲ್ಲಿ ರೂಪತಳೆದಿರಬಹುದು ಎಂಬ ಒಂದು ಸತ್ಯ ಕೂಡ ಮುನ್ನೆಳಗೆ ಬರುತ್ತದೆ.

ಹಾಗಂತ ಯಾವುದೇ ಪ್ರಭೇದವೊಂದರ ಮೂಲದಲ್ಲಿ ಇರುವ ಕಡಿಮೆ ವರ್ಣತಂತುಗಳ ಸಂಖ್ಯೆಯಿಂದ ಹೆಚ್ಚಿನ ಸಂಖ್ಯೆಯ ವರ್ಣತಂತುಗಳಾಗಿ ವಿಕಾಸದ ಹಾದಿ ಸಾಗುತ್ತದೆ ಎಂಬ ಆಲೋಚನೆ ಎಲ್ಲ ಸಮಯದಲ್ಲಿ ಅನ್ವಯ ಅಗಬೇಕಂತ ಏನಿಲ್ಲ. ಯಾವುದೇ ಉಗಮಸ್ಥಳದಲ್ಲಿ ಮೈದಳೆದ ಪೂರ್ವಜರಲ್ಲಿಯ ವೈವಿದ್ಯತೆ ಹಾಗೂ ಜಿನೊಮಿಕ್ ಆವರ್ತನ (Genomic frequency) ಪೀಳೆಗೆಯಿಂದ ಪೀಳಿಗೆಗೆ ನಿರಂತವಾಗಿ ಸಾಗಿಬರುತ್ತದೆ.

ಒಂದು ವೇಳೆ ಆ ಪ್ರಭೇದದ ಪೀಳಿಗೆಗಳು ಯಾವುದೇ ಅಡ್ಡಹಾಯುವಿಕೆಗೆ, ರೂಪಾಂತರ ಪರಿವರ್ತನೆಗೆ (Mutatoin), ವ್ಯತಿರಿಕ್ತ ಆಯ್ಕೆಗೆ (Selection)ಗೆ ಒಳಪಟ್ಟಾಗ ನಿರಂತರವಾಗಿ ಸಾಗಿಬರುವ ಜೀವತಂತುಗಳಲ್ಲಿ ಏರಿಳಿತ ಕಾಣಸಿಗುತ್ತದೆ (HardyWeinberg equilibrium ¹zÁÝAvÀ).ಸಿದ್ದಾಂತ). ಆದ್ದರಿಂದಲೇ ಜೀವವಿಕಾಸದ ಮೂಲದಲ್ಲಿ ಕಡಿಮೆ ವರ್ಣತಂತುಗಳು ಕ್ರಮೇಣ ವಿಕಾಸದ ಮಜುಲುಗಳನ್ನು ತುಳಿದ ಪೀಳಿಗೆಯಲ್ಲಿ ಹೆಚ್ಚು ಸಂಖ್ಯೆಯ ವರ್ಣತಂತುಗಳಾಗಿ ಕಾಣುವ ಉದಾಹರಣೆ ಕಂಡುಬರುತ್ತದೆ.

ಉದಾ: ಜಪಾನಿನ B. mandarina (2n=54) ಇದ್ದದ್ದು, ವಿಕಾಸದ ಹಾದಿಯಲ್ಲಿ ಚೀನಾದಲ್ಲಿ B. mandarina 2n=56 ಆಗಿ ಪರಿವರ್ತನೆ ಆಗಿರಬಹುದಲ್ಲವೇ.  ಅದೇ ರೀತಿ ಭಾರತೀಯ ಮೂಲದಲ್ಲಿ ಸಿಗುವ ಮೂಗ ರೇಷ್ಮೆ (2n=30), ಟಸ್ಟಾರ್ (2n=62), ಎರಿ ರೇಷ್ಮೆ (Centre of Diversity) ಗಳನ್ನು ಗಮನಿಸಿದಾಗ ಅವುಗಳ ಪೂರ್ವಜರನ್ನು ಹುಡುಕುವ ಡಿ.ಎನ್.ಎ ಆಧಾರಿತ ಸಂಶೋಧನೆ ಆಗ ಬೇಕಾಗಿದೆ. ಯಾವುದೇ ಪ್ರಬೇಧವೊಂದರ ಉಗಮ ಸ್ಥಳದಲ್ಲಿ ಪ್ರಭೇದದ ಹೆಚ್ಚು ಸಂತತಿಗಳು ಕವಲುಗಳಾಗಿ ಬೆಳೆದಿರುತ್ತವೆ Ecorace ಎಂಬ ವಿಷಯದಡಿ ನೋಡಿದಾಗ ಭಾರತದಲ್ಲಿ ಹಿಪ್ಪುನೇರಳೆ, ಮೂಗ, ಟಸ್ಟಾರ್ ಮತ್ತು ಎರಿಯ ಇಛಿoಡಿಚಿಛಿeಗಳು ಹೇರಳವಾಗಿ ವೃದ್ಧಿಯಾಗಿರುವುದು ಕಂಡುಬರುತ್ತದೆ ಮತ್ತು ಭಾರತ ಈ ರೇಷ್ಮೆ ಅeಟಿಣಡಿe oಜಿ ಆiveಡಿsiಣಥಿ ಎನ್ನುವುದರಲ್ಲಿ ಅನುಮಾನ ಇಲ್ಲ ಅನಿಸುತ್ತದೆ.

ಹೆಚ್ಚು ವರ್ಣತಂತುಗಳು ಇದ್ದಷ್ಟು (ಜೀನ್‌ಗಳು ಹೆಚ್ಚು) ವೈವಿಧ್ಯ ಹೆಚ್ಚಾಗುತ್ತಾ ಹೋಗುತ್ತದೆ ಅನ್ನುವ ವಿಜ್ಞಾನದ ಸತ್ಯವನ್ನು ಭಾರತೀಯ ನೆಲದಲ್ಲಿ ಸಿಗುವ ಎಲ್ಲಾ ರೇಷ್ಮೆಹುಳುಗಳ ವರ್ಣತಂತುಗಳನ್ನು ಕಂಡಾಗ ಭಾರತವು ರೇಷ್ಮೆಯ ವೈವಿದ್ಯತೆಯ ಸ್ಥಳ ಅಥವಾ ರೇಷ್ಮೆಯ ಉಗಮ ಸ್ಥಳ ಎಂಬ ಸುಳಿವು ನೀಡುತ್ತದೆ. ಈ ಹೇಳಿಕೆಗೆ ಅಡ್ಡಿಮಾಡುವ ವಿಜ್ಞಾನದ ಹೇಳಿಕೆ ಒಂದು ಇದೆ.

The Species with higher chromosomes possess large quantities of DNA with “Nonsense” sequence of nucleotide, having no additive value.  This individual within the same species and related species separated geographically would show variable chromosome size (ಎಲ್ಲ ಸಮಯದಲ್ಲಿ ಜೀವಿಯಲ್ಲಿ ಹೆಚ್ಚು ವರ್ಣತಂತುಗಳಿದ್ದಾಗ ಆ ಜೀವಿ ಹೆಚ್ಚು ವೈವಿದ್ಯತೆಯನ್ನು ವ್ಯಕ್ತಪಡಿಸುತ್ತದೆ ಎನ್ನಲಾಗದು. ಕಾರಣ ಆ ಜೀವಿಯ ವರ್ಣತಂತುಗಳಲ್ಲಿ Non-Scene ನ್ಯೂಕ್ಲಿಯೊಟೈಡಗಳು ಇರಬಹುದು. ಇವುಗಳು ವರ್ಣತುಂತುಗಳಲ್ಲಿ ಕಂಡು ಬಂದರೂ ಯಾವುದೇ ಕೆಲಸಕ್ಕೆ ಬರದಂತೆ ಉಳಿದುಬಿಡುವುದಲ್ಲದೆ ಕೇವಲ ವರ್ಣ ತಂತುಗಳ ಸಂಖ್ಯೆ ಮತ್ತು ಗಾತ್ರದಲ್ಲಿ ಏರಿಳಿತ ಇರಬಹುದು) ಆದರೂ ಈ ವಿಜ್ಞಾನದ ಸತ್ಯ ಬಹುತೇಕ ಹೆಚ್ಚಿನ ಜೀವಿಗಳಲ್ಲಿ ಕಂಡುಬರುವುದಿಲ್ಲ ಅನ್ನುವು ಮೇಲೆ ಉಲ್ಲೇಖ ಮಾಡಿರುವ ವಿಷಯಕ್ಕೆ ಅಡ್ಡಿಯಾಗದು ಎಂದು ಭಾವಿಸಬಲ್ಲೆ.

ಪ್ರಸ್ತುತÀ ದಿನಮಾನಗಳವರೆಗೂ ಚೀನಾದಲ್ಲಿಯ B. mandarina, B. mori ಯ ರೂಪವಿಜ್ಞಾನ (Morphology) ಆಧಾರವಾಗಿಸಿಕೊಂಡು ಪ್ರಪಂಚದ ಇತರ ರಾಷ್ಟçಗಳಲ್ಲಿ ಕಂಡುಬರುವ ರೇಷ್ಮೆಯನ್ನ ಚೀನಾದ ರೇಷ್ಮೆಗೆ ಹೊಲಿಸಿ ಉಗಮ ಹಾಗೂ ರೇಷ್ಮೆಯ ಹರಡಿದ ಹಾದಿಯ ವ್ಯಕ್ತಪಡಿಸುವ ಬದಲು Epigenetics ಬಗ್ಗೆ ಮಾತಾಡುತ್ತಿರುವ ಇವತ್ತಿನ ದಿನಮಾನಗಳಲ್ಲಿ ಡಿ.ಎನ್.ಎ. ಆಧಾರತ ಸಂಶೋಧನೆಗೆ ಒತ್ತು ನೀಡಬೇಕಾಗಿದೆ. ಇದು ಕೇವಲ ಹಿಪ್ಪುನೇರಳೆ ರೇಷ್ಮೆ ಬಗ್ಗೆ ಮಾತ್ರ ಚೀನಾದಲ್ಲಿ ಜರುಗಿವೆ. ಆದ್ದರಿಂದ ಹಿಪ್ಪುನೇರಳೆ ಮತ್ತು ಇತರೆ ರೇಷ್ಮೆಯ ಎಲ್ಲ ವಂಶವೃಕ್ಷಗಳನ್ನ ಪತ್ತೆಹಚ್ಚುವುದರಿಂದ ಸತ್ಯಾಂಶವನ್ನು ಹುಡುಕಲು ನೆರವಾಗುತ್ತದೆ.

ವಿಜ್ಞಾನದ ಆಲೋಚನೆಯ ಹಾದಿಯಲ್ಲಿ ನೋಡಿದಾಗ ಭಾರತವು ಇತರೆ ರೇಷ್ಮೆಯ ಉಗಮ ಸ್ಥಳ ಅಥವಾ ವೈವಿದ್ಯತೆಯ ಕೇಂದ್ರ ಎಂಬುದಕ್ಕೆ ಮೇಲಿನ ಚರ್ಚೆಗೆ ಒಳಪಟ್ಟ ವಿಷಯವೇ ಸಾಕ್ಷಿ.  ಹಾಗೆಯೇ ಭಾರತೀಯ ನೆಲದಲ್ಲಿ ದಾಖಲಾಗಿರುವ ಚಾರಿತ್ರಿಕ ಪುಟಗಳನ್ನು ತಿರುವಿ ತಾಳೆ ಹಾಕಿದಾಗ ರೇಷ್ಮೆಭಾರತದಲ್ಲಿಯೇ ಉಗಮಿಸಿರಬೇಕು ಎನ್ನುವಷ್ಟು ಹೊಸ ಆಲೋಚನೆಗೆ ದಾರಿಮಾಡಿಕೊಡುತ್ತವೆ.

ಮಹಾಕಾವ್ಯಗಳಂತಿರುವ ರಾಮಯಣದಲ್ಲಿ ಅನೇಕ ಕಡೆ ರೇಷ್ಮೆಯ ಬಗ್ಗೆ ಉಲ್ಲೇಖವಿದೆ ಆದರೆ ಇಲ್ಲಿ ಪ್ರಶ್ನೆ ರಾಮಾಯಣನಡೆದ ಕಾಲಘಟ್ಟ ಭಾರತೀಯ ಖಗೋಳಶಾಸ್ತçದ ಲೆಕ್ಕಾಚಾರದಡಿ ಕ್ರಿ.ಪೂ. 5114 ಪುಶ್ಕರ್ ಭಟ್‌ನಗರ್- Dating the Era of Lord Rama ಅವರ ಸಂಶೋಧನೆಯ ಆಧಾರದಂತೆ ರಾಮಯಣದ ಕಾಲಘಟ್ಟ ಸರಿ ಸುಮಾರು ಕ್ರಿ.ಪೂ. 5000 ಅಂತ ನಂಬಿಕೆ ಹಾಗೂ ಇತ್ತೀಚೆಗೆ ಖ್ಯಾತ ಇತಿಹಾಸ ಸಂಶೋಧಕರಾದ ನಿಲೆಶ್ ನೀಲಕಂಠ ಓಕ್ ರವರೂ ಕೂಡ ಮರು ಸಂಶೋಧನೆ ನಡೆಸಿ ಖಗೋಳಶಾಸ್ತç, ಕಾರ್ಬನ್ ಡೇಟಿಂಗ್, ಭೂ ವಿಜ್ಞಾನ ಆಧಾರವಾಗಿಸಿಕೊಂಡು ಭಾರತದಲ್ಲಿ ರಾಮಾಯಣ ನಡೆದ ಕಾಲಘಟ್ಟ ಕ್ರಿ.ಪೂ 12200 ಹಾಗೂ ಮಹಾಭಾರತ ಗತಿಸಿದ ಕಾಲಘಟ್ಟ ಕ್ರಿ.ಪೂ. 5000 ವರ್ಷಗಳ ಹಿಂದೆ ಎಂದು ತಮ್ಮ ಸಂಶೋಧನೆಯನ್ನ ಮಂಡಿಸಿದ್ದಾರೆ. (ಸೂಚನೆ: ಮುಂದಿನ ದಿನಗಳಲ್ಲಿ ವಿಮರ್ಶೆಗೆ ಒಳಪಡಬೇಕಾಗಿರುವ ವಿಚಾರವಾಗಿದೆ).

ಇಲ್ಲಿರುವ ಕೌತುಕವೆಂದರೆ ಯವುದೇ ರಾಮಾಯಣ ಅಥವಾ ಮಹಾಭಾರತ ಕಾಲಘಟ್ಟ ತೆಗೆದು ಕೊಂಡು ತೂಗಿದರೆ ಕನಿಷ್ಠ 5000 ಕ್ರಿ.ಪೂ. ಹಿಂದೆಯೇ ನಡೆದಿದೆ. ಚೀನಾದಲ್ಲಿ ರೇಷ್ಮೆಕೃಷಿ ಬೆಳಕಿಗೆ ಬಂದಿದ್ದು ಕೇವಲ ಕ್ರಿ.ಪೂ. 2000 ವರ್ಷಗಳ ಹಿಂದೆ, ಅಂದರೆ ಇಂದಿಗೆ ಒಟ್ಟು 4000 ವರ್ಷ. ಚೀನಾದಲ್ಲಿ ರೇಷ್ಮೆ ಬೆಳಕಿಗೆ ಬರುವುದಕ್ಕೂ ಮುಂಚೆ ಭಾರತದಲ್ಲಿ ನಡೆದಿದೆ ಎನ್ನಲಾದ ರಾಮಾಯಣ ಮತ್ತು ಮಹಾಭಾರತದಲ್ಲಿ ರೇಷ್ಮೆವಸ್ತ್ರದ ಬಗ್ಗೆ ಉಲ್ಲೇಖವಿರುವಾಗ ರೇಷ್ಮೆ ಮೊದಲು ಬೆಳಕಿಗೆಬಂದದು ಭಾರತದಲ್ಲಿ ಹಾಗೂ ಕೇವಲ ರೇಷ್ಮೆಸಕಾಣಿಕೆಯಲ್ಲದೆ ನೂಲುಬಿಚ್ಚಾಣಿಕೆ ತಂತ್ರಜ್ಞಾನವೂ ಭಾರತೀಯರಿಗೆ ಗೊತ್ತಿತ್ತು ಅನಿಸುವುದಿಲ್ಲವೇ  ಅಷ್ಟೇ ಅಲ್ಲದೆ ಪ್ರಪಂಚವೇ ನಂಬಿರುವ ಹರಪ್ಪನಾಗರೀಕತೆಯು ಕಾಲಘಟ್ಟ ಕ್ರಿ.ಪೂ. 1900- 3000 ವರ್ಷಗಳ ಹಿಂದೆ ನಡೆದಿದೆ ಎಂದು ನಂಬಲಾಗಿದೆ.

ಭಾರತೀಯರು ರೊಚಕತೆಯಿಂದ ಕಣ್ಣು ಹುಬ್ಬೇರಿಸುವಂತೆ ಮಾಡುವ ಕೌತುಕ ವಿಚಾರವೆಂದರೆ Harappa Archeological Research Project (HARP)ದಿಂದ ಹೊರಬಂದ ವಿಚಾರದಲ್ಲಿ ಭಾರತೀಯ ಮೂಲದ Antheraea mylitta ರೇಷ್ಮೆಯಿಂದ ಮಾಡಲ್ಪಟ್ಟಿದ ರೇಷ್ಮೆಯ Chanhvdaro Silk ಪಳಯುಳಿಕೆಗಳು ಕಂಡುಬಂದಿದೆ (Nature ಪತ್ರಿಕೆಯಲ್ಲಿ ಪ್ರಕಟ) ಎಂಬ ವಿಷಯ ಯೋಚನೆಗೆ ಒಳಪಡುವಂತೆ ಮಾಡುತ್ತದೆ. ಅಂದರೆ ಚೀನಾಕ್ಕಿಂತಲೂ ಮುಂಚೆ ಭಾರತೀಯರು ರೇಷ್ಮೆಸಾಕಾಣಿಕೆ ಅಲ್ಲದೇ ನೂಲುಬಿಚ್ಚಾನಿಕೆ ತಂತ್ರಜ್ಞಾನ ಬಲ್ಲವರಾಗಿದ್ದರು ಎಂಬ ಕೌತುಕಮಯ ವಿಷಯ ಹೊರಬರುವಂತೆ ಮಾಡುತ್ತದೆ.

Harappa Archeological Research Project (HARP) ಅಡಿಯಲ್ಲಿ ಜರುಗಿದ ಸಂಶೋಧನೆಯಲ್ಲಿ ಬೆಳಕಿಗೆ ಬಂದ ಭಾರತೀಯ ಮೂಲದ ಟಸ್ಸಾರ್ Antheraea mylitta

ಅಂದು ನನ್ನ ವಿದ್ಯಾರ್ಥಿ ಆದರ್ಶ್ ಹೇಳಿದಂತೆ ಸೀತಾ ಟಸ್ಸಾರ್ ತೊಟ್ಟ್ಟಿರಲಿ, ತೊಡದೆ ಇರಲಿ ಆದರೆ ಊಂಖPನ ಅಡಿಯಲ್ಲಿ ಹೊರಬಿದ್ದ ಟಸ್ಸಾರ್ ರೇಷ್ಮೆಹುಳುವಿನ Antheraea mylitta ನೂಲು ಬಹುತೇಕ ಅವನ ಹೇಳಿಕೆಗೆ ಪುಷ್ಠಿನೀಡುವಂತ್ತಿತ್ತು. ಒಬ್ಬ ಶಿಕ್ಷಕನಾಗಿ ಕಲಿಯುವುದು ಬಹಳಷ್ಟಿದೆ ಎಂಬುದಕ್ಕೆ ನನ್ನ ವಿದ್ಯಾರ್ಥಿ ಕೊಟ್ಟ ಒಂದು ಸುಳಿವು ಹಿಡಿದು ಜೀವವಿಕಾಸದ ಜರಡಿಯಲ್ಲಿ, ಆಧುನಿಕ ಸಂಶೋಧನೆಯ ತಿರುಳಿನಲ್ಲಿ ಈ ಲೇಖನವನ್ನು ನೋಡುತ್ತಾ ಹೋದಾಗ ಭಾರತ ರೇಷ್ಮೆಕೃಷಿಯ ಉಗಮ/ ವೈವಿಧ್ಯ ಸ್ಥಳವೆನಿಸುತ್ತದೆ.

ನಾನು ಈಗಾಗಲೇ ಆರಂಭದಲ್ಲಿ ಹೇಳಿರುವಂತೆ ವಿಜ್ಞಾನದಲ್ಲಿ ಕ್ರಾಂತಿಸೃಷ್ಟಿಸಿದ ಡಾರ್ವಿನ್ ಹಾಗೂ ರುಸ್ಸೆಲ್ಲರ ಜೀವವಿಕಾಸ ಸಿದ್ದಾಂತವನ್ನು ಜನರಿಗೆ ಮನದಟ್ಟು ಮಾಡಲು ನಿಯೋ ಡಾರ್ವಿನಿಸಂ ಯುಗದ ಪ್ರವರ್ತಕ ಮೆಂಡಲರು, ಸ್ಟಾçನ್ಸ್ ಬರ್ಗರ್ ಹಾಗೂ ವಾಟ್ಸನ್ ಕ್ರಿಕರು ಬರಬೇಕಾಯಿತು. ವಾಸ್ತವ ಸತ್ಯವನ್ನು ಜೀರ್ಣಿಸಿಕೊಳ್ಳಲು ಸಮಯವೇ ಬೇಕಾಗುತ್ತದೆ

ಅದೇ ರೀತಿ ಭಾರತದ ನೆಲೆಯಲ್ಲಿ ಹಿಪ್ಪುನೇರಳೆ, ಮೂಗ, ಎರಿ ಮತ್ತು ಟಸ್ಟಾರ್ ಅಂತಹ ರೇಷ್ಮೆಹುಳುಗಳ ವೈವಿದ್ಯತೆ ಹೆರಳವಾಗಿರುವುದಲ್ಲದೆ ಚೀನಾದಲ್ಲಿಯ ರೇಷ್ಮೆಸಾಕಾಣಿಯು ಕಣ್‌ತೆರೆಯುವ 4000ವರ್ಷಗಳ ಮುನ್ನವೇ ಭಾರತೀಯ ನೆಲದಲ್ಲಿ ರೇಷ್ಮೆಬಗ್ಗೆಯ ಉಲ್ಲೇಖ ನೀಡುವ ಜ್ಞಾನ ವಿಜ್ಞಾನದ ಉಲ್ಲೇಖಗಳು ಭಾರತವನ್ನು ರೇಷ್ಮೆಯ ವೈವಿಧ್ಯ  ಸ್ಥಳ ಅಥವಾ ಉಗಮ ಸ್ಥಳ ಎನ್ನುವ ಪುಷ್ಟಿ ನೀಡುತ್ತದೆ ಎಂಬ ಸತ್ಯ ಅರಿತು ನಂಬಲು ನಿಯೂಡಾರ್ವಿನ್ ಕಾಲದ ವಿಜ್ಞಾನಿಗಳಂತೆ ಇಂದಿನ ವಿಜ್ಞಾನಿಗಳು ಮರು ಸಂಶೋಧನೆ ಕೈಗೊಳ್ಳಬೇಕಾಗಿದೆ.

1 COMMENT

LEAVE A REPLY

Please enter your comment!
Please enter your name here