ಅಂದು ರೇಷ್ಮೆಕೃಷಿ ಮಹಾವಿದ್ಯಾಲಯ, ಚಿಂತಾಮಣಿಯಲ್ಲಿ ಸ್ನಾತಕ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ರೇಷ್ಮೆಹುಳುವಿನ ವಂಶಾವಳಿ (Genealogy) ಬಗ್ಗೆ ಪಾಠ ಹೇಳಿ ಮುಗಿಸುವ ಸಮಯಕ್ಕೆ ಕೌತುಕದ ವಿಚಾರವೊಂದನ್ನ ವಿದ್ಯಾರ್ಥಿಗಳ ಮುಂದಿಟ್ಟೆ.
ರೇಷ್ಮೆಕೃಷಿ ತಂತ್ರಜ್ಞಾನ 4000 ವರ್ಷಗಳ ಹಿಂದೆ ಚೀನಾದಲ್ಲಿ ಕಣ್ ತೆರೆಯಿತು ಎಂಬ ವ್ಯಾಖ್ಯಾನಕ್ಕೆ ತದ್ವಿರುದ್ದವಾದ ಅಂಶಗಳೆಂದರೆ ಕ್ರಿ.ಪೂ 12000ರ ರಾಮಾಯಣ ಹಾಗೂ 5000ರ ಮಹಾಭಾರತದಲ್ಲಿ ರೇಷ್ಮೆ ಉಲ್ಲೇಖವಿರುವಾಗ ಹೇಗೆ ರೇಷ್ಮೆ ಚೀನಾದ ಪಾಲಾಯಿತು? ರಾಮಾಯಣದ ಸೀತೆ ಭಾರತೀಯರಿಗೆ ಯಾವ ಸೀರೆ ತೊಟ್ಟಿದ್ದಳು ಎಂದು ಹೇಳದೆ ಮೋಸಮಾಡಿರಬೇಕು. ಮೈಸೂರ್‌ಸಿಲ್ಕ್ ಧರ್ಮವರಂ, ಕಾಂಚಿಪುರA, ಮೂಗ, ಎರಿ ಅಥವಾ ಟಸಾರ್ ರೇಷ್ಮೆಯಾ ಎಂದು ಸೀತೆ ಹೇಳಿದ್ದರೆ ಬಹಳ ಸಹಾಯವಾಗುತ್ತಿತ್ತು. ನಿಜವಾಗಿಯೂ ರೇಷ್ಮೆ ಚೀನಾದ್ದೊ ಅಥವಾ ಭಾರತದ್ದೊ ಎಂದು ಹೇಳುವಾಗ, ನನ್ನ ವಿದ್ಯಾರ್ಥಿಮಿತ್ರ ಆದರ್ಶ “ ಸರ್. ಸೀತಾ ಟಸಾರ್ ರೇಷ್ಮೆಸೀರೆ ತೊಟ್ಟಿದ್ದಳು” ಎಂದ…!
ನಾನು ಅವನ ಉತ್ತರಕ್ಕ ಪುರಾವೆ ಕೇಳಿದಾಗ ಕೆಲಪುಸ್ತಕದ ಪುಟಗಳನ್ನು ತೋರಿಸಿದ. ಅಲ್ಲಿಂದ ಕೆಲವು ದಿನಗಳವರೆಗೆ ನನ್ನ ತಲೆಯಲ್ಲಿ ಅಲೋಚನೆ ಆರಂಭವಾಯಿತು ಅದಕ್ಕೆ ತಕ್ಕಂತೆ ಡಾ. ರಾಮಕೃಷ್ಣನಾಯ್ಕ್ ಕೂಡಾ ಜೊತೆ ನೀಡಿದರು.
ಇಲ್ಲಿ ಪ್ರಶ್ನೆ ಚೀನಾದ ಚರಿತ್ರೆಗಿಂತ ಮುಂಚೆ ದಾಖಲಾಗಿರುವ ಮಹಾಭಾರತ ಅಥವಾ ರಾಮಾಯಣದಲ್ಲಿ ನಿಜವಾಗಿಯೂ ಸೀತೆ ಟಸ್ಸಾರ್ ಸೀರೆ ಹುಟ್ಟಿದ್ದಳೇ? ಅವಳು ಒಂದು ವೇಳೆ ತೊಟ್ಟಿದ್ದೇ ಅದಲ್ಲಿ ರೇಷ್ಮೆಕೃಷಿ ತಂತ್ರಜ್ಞಾನ ನೂಲು ಬಿಚ್ಚಾಣಿಕೆ ತಂತ್ರಜ್ಞಾನ ಪ್ರಪಂಚಕ್ಕೆ ಭಾರತ ಕೊಟ್ಟ ಕೊಡುಗೆಯಲ್ಲವೆ?. ಈ ವಿಷಯವನ್ನು ಸತ್ಯವೊ ಮಿಥ್ಯವೊ ಎಂದು ರಾಮಾಯಣ ಮಹಾಭಾರತದಲ್ಲಿ ಉಲ್ಲೇಖದ ಅಡಿಯಲ್ಲಿ ಚರ್ಚಿಸುವುದಾದರೂ ಹೇಗೆ? ಕೆಲವು ವೈಜ್ಞಾನಿಕ ಕಾರಣದ ಆಧಾರದ ಮೇಲೆ ವಿಷಯ ಮಂಡಿಸಿದರೂ ಜನರು ನಂಬಬಹುದೇ? ಎನ್ನುವ ತೊಳಲಾಟದಲ್ಲಿ ಇದ್ದಾಗ ನೆನಪಾಗಿದ್ದೇ ಜೀವವಿಕಾಸ ಸಿದ್ದಾಂತದ ಡಾರ್ವಿನ್ !
ಕ್ರಿ.ಶ. 1831-1836 ರ ಸಮಯವದು. ಶತಮಾನಗಳ ಮೌಢ್ಯತೆ ಬುಡಮೇಲು ಮಾಡುವ ಸಂಶೋಧನೆಯ ಸಾಬೀತಿಗಾಗಿ ಸಾಕ್ಷಿಕಲೆ ಹಾಕುತ್ತಾ ಮಹಾವಿಜ್ಞಾನಿ ಚಾರ್ಲ್ಸ್ಡಾರ್ವಿನ್ ಬೀಗಲ್ ಹಡಗಿನಲ್ಲಿ ಪ್ರಪಂಚ ಸುತ್ತುತ್ತಾ ಹೊರಟ್ಟಿದ್ದ. ಸಮುದ್ರಮಾರ್ಗದಲ್ಲಿ ಚಲಿಸುವಾಗ ಸಮಕಾಲಿನ ವಿಜ್ಞಾನಿ ಆಲ್ಫೆçಡ್ ರುಸೆಲ್ ವ್ಯಾಲೆಸ್‌ರ ಕಾಗದ ತಲುಪಿದಾಗ ಡಾರ್ವಿನ್ ಬೆವೆತು ಹೋಗಿದ್ದರು.
ತನ್ನ ಜೀವನದ ಅವಿರತ ಸಂಶೋಧನೆಯ ತಿರುಳೇ ಆ ಕಾಗದದಲ್ಲಿ ಇತ್ತು. ಆದರೆ ವ್ಯಾಲೆಸ್, ಡಾರ್ವಿನ್ ಸಂಶೋಧನೆಯು ಕೇವಲ ಕಾಗದ ಪತ್ರಗಳಿಗೆ ಸೀಮಿತವಾಗದೆ ಅದಕ್ಕೆ ಪೂರಕವಾದ ಸಾಕ್ಷಿಗಳಿಗಾಗಿ ಪ್ರಪಂಚ ಪರ್ಯಟನೆ ಕೈಗೊಂಡಿದ್ದನ್ನು ಕಂಡು, ವ್ಯಾಲೆಸ್ ಅವರ ಸಂಶೋಧನೆಯ ಅಪಾರ ಯಶಸ್ಸನ್ನು ಡಾರ್ವಿನರಿಗೆ ಬಿಟ್ಟುಕೊಟ್ಟಿದ್ದರು. ಕ್ರಮೇಣ 1859 ನವೆಂಬರ್ 24 ರಂದು “Origin of Species” ಎಂಬ ಕೃತಿ ಬಿಡುಗಡೆ ಆಗುತಿದ್ದಂತೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿನ ಜನರಲ್ಲಿ ತುಂಬಿದ ಕತ್ತಲೆಯ ಸೀಳುವ ಮೊದಲ ಮಿಂಚು ಮಿಂಚಿತ್ತು.
ಅಲ್ಲಿಯವರೆಗೂ ಜೀವಿಗಳು ಸೃಷ್ಟಿಕರ್ತನಿಂದ ಮಾಡಲ್ಪಟ್ಟಿವೆ ಎನ್ನುವ ಭಾವನೆಯಲ್ಲಿ ಜನರು ಮುಳುಗಿದ್ದರು. ಅವರೆದುರು ಡಾರ್ವಿನ್ ಅವರು ತಮ್ಮ ವಾದಗಳನ್ನ ಸಾಕ್ಷಿಸಮೇತ ಮಂಡಿಸಿದಾಗಲೂ ಅದನ್ನು ಜನರು ನಂಬಲು ಸಿದ್ದರಿರಲಿಲ್ಲ. ಕಾಲಕ್ರಮೇಣ ಜೀವವಿಕಾಸ ಸಿದ್ದಾಂತಕ್ಕೆ ಹೆಗಲು ಕೊಡುವಂತೆ ಗ್ರೀಕ್ ವಿಜ್ಞಾನಿ ಅರಿಸ್ಟಾಟಲ್‌ರ Physical Asculation,, ಬಳಿಕ ಅರ್ಥಶಾಸ್ತ್ರಜ್ಞ ಮಾಲ್ಥಸ್‌ರ Variation under domestication ಒಂದಿಷ್ಟು ವಿಜ್ಞಾನ ವಾದಕ್ಕೆ ಪುಷ್ಟಿಕೊಟ್ಟರೂ, ಜನರಿಗೆ ನಂಬಿಕೆ ಬರಲಿಲ್ಲ.
19 ನೇ ಶತಮಾನದಲ್ಲಿ ಡಿ.ಎನ್.ಎ. ಸಂಶೋಧನೆ ಹಾಗೂ ಮೆಂಡೇಲರ ಅನುವಂಶೀಯ ಸಿದ್ದಾಂತ ವಿಜ್ಞಾನದ ಯುಗದಲ್ಲಿ ಮಹಾಕ್ರಾಂತಿಯ ಮೈಲುಗಲ್ಲಾಗುವುದರ ಜೊತೆಗೆ ಡಾರ್ವಿನರ ಜೀವ ವಿಕಾಸಕ್ಕೆ ಬೆನ್ನೆಲುಬಾಗಿ ನಿಂತಿತು. ವಿಜ್ಞಾನದ ಆಲೋಚನೆಗಳೇ ಹೀಗೆ, ಎಷ್ಟೇಸ್ಟಷ್ಟವಾಗಿ ಮಂಡಿಸಿದರೂ ಕಾರಣಾಂತರಗಳಿAದ ಬೇಗ ಸ್ವೀಕೃತವಾಗುವುದೇ ಇಲ್ಲ. ಅದನ್ನು ಒಪ್ಪಿ ಸ್ವೀಕರಿಸಲು ಸಮಯವೇ ಬೇಕಾಗುತ್ತದೆ.
ರೇಷ್ಮೆಹುಳುಗಳ ವಿಕಾಸದ ಚಿತ್ರ
ಇಂತಹದ್ದೇ ರೀತಿಯಲ್ಲಿ ಎಷ್ಟೋ ಸತ್ಯಗಳು ಜನರ ನಂಬಿಕೆಯಿಂದ ದೂರ ಉಳಿದಿವೆ ಅಂತವುಗಳಲ್ಲಿ ಭಾರತವನ್ನು ರೇಷ್ಮೆಯ ಉಗಮಸ್ಥಳವೆಂದರೆ ಯಾರಾದರೂ ನಕ್ಕು ಬಿಡಬಹುದು ಕಾರಣ, ಪ್ರಪಂಚದಲ್ಲಿ ರೇಷ್ಮೆ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ಚೀನಾ ದೇಶವು ರೇಷ್ಮೆಯ ಉಗಮ ಸ್ಥಳ (Centre of Origin for Silk)) ಎಂಬ ಹಣೆಪಟ್ಟಿ ತೊಟ್ಟಿರುವಾಗ, ರೇಷ್ಮೆಯ ಮೂಲ ಭಾರತದ್ದು ಎನ್ನುವುದು ದಂತಕಥೆಯೇ? ಎನಿಸಿಬಿಡುತ್ತದೆ. ಆದರೆ ಇಲ್ಲಿಯೇ ಇರುವುದು ಕೌತುಕ ವಿಜ್ಞಾನ.
ಓದಿಕೊಂಡು ಮಾರ್ಕ್ಸ್ ತೆಗೆದು ಪದವಿ, ಡಾಕ್ಟರೇಟ್, ಚಿನ್ನದ ಪದಕಗಳನ್ನು ಪಡೆಯುವ ಬಹಳ ಮಂದಿ ಓದಿದ ವಿಜ್ಞಾನವನ್ನು ಯೋಚನೆಗೆ ಹಚ್ಚುವುದನ್ನು ಸಂಪೂರ್ಣವಾಗಿ ಮರೆತಿದ್ದೇವೆ.
ಬಹುಮುಖ್ಯವಾಗಿ ಚೀನಾದೇಶದಲ್ಲಿ ಕಾಣಸಿಗುವ ಚೀನಾ Bombyx mandarina (ವರ್ಣತಂತುಗಳ ಸಂಖ್ಯೆ 2n=56) ವನ್ನು ಪ್ರಪಂಚದೆಲ್ಲಡೆ ಇಂದಿನ ಹಿಪ್ಪುನೇರಳೆ ರೇಷ್ಮೆಹುಳು Bombyx mori L.£À (ವರ್ಣ ತಂತುಗಳ ಸಂಖ್ಯೆ: 2n=56) ಪೂರ್ವಜ (Wild ancesture) JAzÀÄ £ÀA§¯ÁVzÉ. ಚೀನಾದಲ್ಲಿ Bombyx mandarina ಮೊದಲು ಗುರುತಿಸಿಕೊಂಡದ್ದರಿAದ ಚೀನಾವನ್ನ ರೇಷ್ಮೆಯ ಉಗಮ ಸ್ಥಾನ ಎಂದು ಬಿಂಬಿಸಲಾಗುತ್ತಿದೆ.
ಇದಕ್ಕೆ ಪೂರಕವಾಗಿ ಚೀನಾದ ಚರಿತ್ರೆಯ ಪುಟಗಳು ಕೂಡ ಹೇಳಿಕೊಳ್ಳುತ್ತವೆ. ಸರಿಸುಮಾರು 4000 ವರ್ಷಗಳ ಹಿಂದೆ ಹ್ಸಿ ಲಿಂಗ್ ಶಿ (Hsi ling shi)ಎಂಬ ರಾಜಕುಮಾರಿ ಅರಮನೆಯ ಹಿತ್ತಲಲ್ಲಿ ಚಹಾ ಸೇವಿಸುವಾಗ ಅಚಾನಕ್ ಗೂಡೊಂದು ಬಿಸಿ ಚಹಾದಲ್ಲಿ ಬಿದ್ದದ್ದು, ಬಳಿಕ ಅದನ್ನ ಹೊರ ತೆಗೆಯ ಹೊರಟಾಗ ದಾರವಾಗಿ ಹೊಸರೂಪ ಪಡೆದದ್ದು ಅಲ್ಲಿಂದ ಚೀನಾದ ಚರಿತ್ರೆಯಲ್ಲಿ ರೇಷ್ಮೆಸಾಕಾಣಿಕೆ ಆರಂಭವಾದ ಚರಿತ್ರೆ ನಮಗೆ ಅನೇಕ ಪುಸ್ತಕದ ಪುಟಗಳಲ್ಲಿ ಕಂಡು ಬರುತ್ತವೆ.
ಕ್ರಮೇಣ ಪಾಶಿಮಾತ್ಯ ರಾಷ್ಟ್ರಗಳಾದ ಕೊರಿಯಾ, ಪರ್ಷಿಯಾ, ಜಪಾನ್ ಮತ್ತು ರೋಮ್‌ಗೆ ವ್ಯಾಪಾರಿಗಳ ಮುಖಾಂತರ ಪೂರ್ವದಿಕ್ಕಿನ ಚೀನಾದಿಂದ ಪಾಶಿಮಾತ್ಯ ರಾಷ್ಟ್ರಗಳಿಗೆ ಸರಿಸುಮಾರು 6400 ಕಿ.ಮಿ. ಕ್ರಮಿಸಿತು. ರೇಷ್ಮೆಕೃಷಿ ತಂತ್ರಜ್ಞಾನ ಪರಿಚಯವಾದ ಈ ಸುದೀರ್ಘ ಯಾನದ ಹೆದ್ದಾರಿಯನ್ನ ಇಂದಿಗೂ ಪ್ರಪಂಚದ ಚರಿತ್ರೆಯಲ್ಲಿ ಸಿಲ್ಕ್ ರೂಟ್ (Silk route ) ಎಂದು ದಾಖಲಾಗಿದೆ.
ಬಳಿಕ ಚೀನಾದ ರಾಜುಕುಮಾರಿಯೋರ್ವಳನ್ನ ಟೆಬೆಟಿನ ರಾಜನಿಗೆ ಮದುವೆ ಮಾಡಿಕೊಟ್ಟಾಗ ರೇಷ್ಮೆ ತಂತ್ರಜ್ಞಾನ ಟಿಬೆಟಿಗೆ ಪರಿಚಯವಾದದು ಟಿಬೆಟ್‌ನಿಂದ ಭಾರತಕ್ಕೆ ಬೌದ್ಧಬಿಕ್ಕುಗಳು ರೇಷ್ಮೆಯನ್ನು ಪರಿಚಯಿಸಿದರು ಎಂಬುದನ್ನು ಇಂದಿಗೂ ಓದುತ್ತೇವೆ. ಇಲ್ಲಿ ಸ್ವಷ್ಟ್ಚವಾಗುವುದು ರೇಷ್ಮೆಯ ಪೂರ್ವಜ Bombyx mandarina ಚೀನಾದಲ್ಲಿ ಕಾಣಿಸಿಕೊಂಡದ್ದು, 4000 ವರ್ಷಗಳ ಹಿಂದೆ ರೇಷ್ಮೆ ಸಾಕಣೆ ಆರಂಭವಾದದ್ದು ದಾಖಲೆಗಳಿರುವುದರಿಂದ “ಚೀನಾ ಪ್ರಪಂಚದ ಒಟ್ಟಾರೆ ರೇಷ್ಮೆಯ ಉಗಮ ಸ್ಥಳವಾಯಿತು” ಎಂಬುದು ತಿಳಿದು ಬರುತ್ತದೆ. ಆದರೆ ಸತ್ಯವೇನು ?
ಮುಂದುವರಿಯುತ್ತದೆ…
great effort