ಬಿದಿರು ಬಳಸಿ ಕಚೇರಿಗಳು, ಮನೆಗಳನ್ನು ನಿರ್ಮಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿದಿರು ಬಳಕೆಯನ್ನು ಗರಿಷ್ಠಗೊಳಿಸಲು ಸಂಶೋಧನೆಗಳು ನಡೆಯುತ್ತಿವೆ. ಇತ್ತೀಚೆಗೆ ಚೀನಾ ದೇಶದ ವಿಜ್ಞಾನಿಗಳು ಸಾಮಾನ್ಯ ಹಳೆಯ ಬಿದಿರನ್ನು ಪಾರದರ್ಶಕ ವಸ್ತುವಾಗಿ ಪರಿವರ್ತಿಸುವ ವಿಧಾನ ಅಭಿವೃದ್ಧಿಪಡಿಸಿದ್ದಾರೆ. ಇದು ಬೆಂಕಿ ಮತ್ತು ನೀರಿಗೆ ನಿರೋಧಕವಾಗಿದೆ ಜೊತೆಗೆ ಹೊಗೆಯನ್ನು ನಿಗ್ರಹಿಸುತ್ತದೆ ಎಂಬುದು ಗಮನಾರ್ಹ ಸಂಗತಿ
ವಿಜ್ಞಾನಿಗಳು ಮರದ ನಾರುಗಳಿಂದ ಲಿಗ್ನಿನ್ ಅನ್ನು ರಾಸಾಯನಿಕವಾಗಿ ತೆಗೆದ ಬಳಿಕ ಉಳಿದ ವಸ್ತುಗಳನ್ನು ಪ್ಲೆಕ್ಸಿಗ್ಲಾಸ್ ಅಥವಾ ಎಪಾಕ್ಸಿಯೊಂದಿಗೆ ಚಿಕಿತ್ಸೆ ನೀಡುತ್ತಾರೆ. ಇದರ ಅಂತಿಮ ಫಲಿತಾಂಶದಿಂದ ಪಾರದರ್ಶಕ, ನವೀಕರಿಸಬಹುದಾದ ಮತ್ತು ಗಾಜಿನಂತೆ ಬಲಿಷ್ಢವಾದ ಉತ್ಪನ್ನ ರೂಪಿತವಾಗುತ್ತದೆ. ಇದು ಬಲಯುತವಾಗಿರುವುದರ ಜೊತೆಗ
ಇದು ಉಪಯುಕ್ತವಾದರೂ ಮರವನ್ನು ಬಳಸುವುದರಲ್ಲಿ ಕೆಲವು ಸಮಸ್ಯೆಗಳಿವೆ. ಇಂಥ ಉತ್ಪನ್ನಗಳನ್ನು ರೂಪಿಸಲು ಹೆಚ್ಚು ಅವಧಿ ಬೇಕಾಗುತ್ತದೆ. ಈ ಹಿನ್ನೆಯಲ್ಲಿ ಚೀನಾದ ಸೆಂಟ್ರಲ್ ಸೌತ್ ಯೂನಿವರ್ಸಿಟಿ ಆಫ್ ಫಾರೆಸ್ಟ್ರಿ ಅಂಡ್ ಟೆಕ್ನಾಲಜಿಯ (CSUFT) ಸಂಶೋಧಕರು ಮರದ ಬದಲಿಗೆ ಬಿದಿರಿನ ಕಡೆಗೆ ಗಮನ ಹರಿಸಿದರು.
“ಬಿದಿರು, ಸಾಮಾನ್ಯವಾಗಿ ‘ಎರಡನೇ ಅರಣ್ಯ’ ಎಂದು ಕರೆಯಲ್ಪಡುತ್ತದೆ, ಇದು ವೇಗದ ಬೆಳವಣಿಗೆ ಮತ್ತು ಪುನರುತ್ಪಾದನೆಯ ದರವನ್ನು ಹೊಂದಿದ. ಬೆಳವಣಿಗೆಯ ನಾಲ್ಕರಿಂದ ಏಳು ವರ್ಷಗಳಲ್ಲಿ ಕಟ್ಟಡ ಸಾಮಗ್ರಿಯಾಗಿ ರೂಪಿತವಾಗುತ್ತದೆ. ಪ್ರತಿ ಎಕರೆಗೆ ಮರಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಉತ್ಪಾದನೆಯೊಂದಿಗೆ, ಬಿದಿರು ಅದರ ಅಸಾಧಾರಣ ದಕ್ಷತೆಗಾಗಿಯೂ ಗುರುತಿಸಲ್ಪಟ್ಟಿದೆ ಎಂದು ವಿಜ್ಞಾನಿ ಕೈಚಾವೊ ವಾನ್ ಹೇಳಿದರು.
ಬಿದಿರಿನ ಆಂತರಿಕ ರಚನೆ ಮತ್ತು ರಾಸಾಯನಿಕ ಸಂಯೋಜನೆಯು ಮರಕ್ಕೆ ಹೋಲುತ್ತದೆ, ಆದ್ದರಿಂದ ವಿಜ್ಞಾನಿಗಳ ತಂಡವು ಅದನ್ನು ಪಾರದರ್ಶಕವಾಗಿಸಲು ಅದೇ ವಿಧಾನವನ್ನು ಬಳಸಿತು. ಲಿಗ್ನಿನ್ ಅನ್ನು ತೆಗೆದ ನಂತರ, ಬಿದಿರಿನಲ್ಲಿ ಅಜೈವಿಕ ದ್ರವ ಸೋಡಿಯಂ ಸಿಲಿಕೇಟ್ ಅನ್ನು ತುಂಬಿಸಲಾಗುತ್ತದೆ, ಇದು ಫೈಬರ್ಗಳ ಬೆಳಕಿನ ವಕ್ರೀಭವನವನ್ನು ಬದಲಾಯಿಸುತ್ತದೆ. ನಂತರ, ವಸ್ತುವನ್ನು ಹೈಡ್ರೋಫೋಬಿಕ್ ಅಥವಾ ನೀರನ್ನು ಹಿಮ್ಮೆಟ್ಟಿಸಲು ಸಂಸ್ಕರಿಸಲಾಗುತ್ತದೆ.
ಅಂತಿಮ ಫಲಿತಾಂಶವು ಮೂರು-ಪದರದ ರಚನೆಯಾಗಿದೆ – ಮೇಲ್ಭಾಗದಲ್ಲಿ ಸಿಲೇನ್, ಮಧ್ಯದಲ್ಲಿ ಸಿಲಿಕಾನ್ ಡೈಆಕ್ಸೈಡ್ ಮತ್ತು ಕೆಳಭಾಗದಲ್ಲಿ ಸೋಡಿಯಂ ಸಿಲಿಕೇಟ್. ಬಿದಿರು ಪಾರದರ್ಶಕವಾಗಿದ್ದು, 71.6%ನಷ್ಟು ಬೆಳಕಿನ ಪ್ರಸರಣ, ಬೆಂಕಿ ನಿವಾರಕ, ನೀರು-ನಿವಾರಕ, ಮತ್ತು ನಿರ್ಬಂಧಿಸಿದ ಹೊಗೆ ಮತ್ತು ಕಾರ್ಬನ್ ಮಾನಾಕ್ಸೈಡ್ ನಿವಾರಕವಾಗಿದೆ. ಯಾಂತ್ರಿಕವಾಗಿ, ಇದು 7.6 GPa ನ ಬಾಗುವ ಮಾಡ್ಯುಲಸ್ ಮತ್ತು 6.7 GPa ನ ಕರ್ಷಕ ಮಾಡ್ಯುಲಸ್ ಅನ್ನು ಹೊಂದಿದೆ.
ಈ ಪಾರದರ್ಶಕ ಬಿದಿರನ್ನು ಕಟ್ಟಡ ಸಾಮಗ್ರಿಯಾಗಿ ಮಾತ್ರ ಬಳಸದೇ ಇತರ ಉಪಯೋಗಗಳಿಗೂ ಬಳಸುತ್ತಾರೆ. ಪೆರೋವ್‌ಸ್ಕೈಟ್ ಸೌರ ಕೋಶಗಳಿಗೆ ತಲಾಧಾರವಾಗಿ ಬಳಸಿದಾಗ, ಇದು ಬೆಳಕಿನ ನಿರ್ವಹಣಾ ಪದರದಂತೆ ಕಾರ್ಯನಿರ್ವಹಿಸುತ್ತದೆ. ಇದು ಕೋಶಗಳ ವಿದ್ಯುತ್ ಪರಿವರ್ತನೆ ಸಾಮರ್ಥ್ಯವನ್ನು 15.29% ರಷ್ಟು ಹೆಚ್ಚಿಸುತ್ತದೆ.
“ಭವಿಷ್ಯದ ಸಂಶೋಧನೆಯಲ್ಲಿ, ನಾವು ಈ ಪಾರದರ್ಶಕ ಬಿದಿರಿನ ದೊಡ್ಡ-ಪ್ರಮಾಣದ ಫ್ಯಾಬ್ರಿಕೇಶನ್ ಮತ್ತು ಬಹು-ಕಾರ್ಯನಿರ್ವಹಣೆಯ ಮೇಲೆ ಕೇಂದ್ರೀಕರಿಸುತ್ತೇವೆ” ಎಂದು ವಾನ್ ಹೇಳಿದರು.
ಈ ಅಧ್ಯಯನವನ್ನು ರಿಸರ್ಚ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.