ಕೃಷಿಮೇಳದಲ್ಲಿ ನವೋದ್ಯಮಗಳಿಗೆ ಒತ್ತು

0

ಬೆಂಗಳೂರು: ಅಕ್ಟೋಬರ್ 31: 2020-21ನೇ ಸಾಲನ್ನು ಕೃಷಿ ನವೋದ್ಯಮದ ಸುವರ್ಣ ಯುಗ ಎಂದು ಪರಿಗಣಿಸಲಾಗಿದೆ. 2022ರಲ್ಲಿ ಕೃಷಿ ನವೋದ್ಯಮಗಳಿಗೆ ರೂ.539 ಮಿಲಿಯನ್ ಬಂಡವಾಳ ಹೂಡಿಕೆ ಮಾಡಲಾಗಿದೆ. 2025ರ ವೇಳೆಗೆ 283.5 ಕೋಟಿ ಮಾರುಕಟ್ಟೆ ಮೌಲ್ಯದತ್ತ ಪ್ರಗತಿ ಮತ್ತು ಕೃಷಿ ವಿಶ್ವವಿದ್ಯಾನಿಲಯದಿಂದ 24 ನವೋದ್ಯಮಗಳಿಗೆ ಇಂಕ್ಯೂಬೇಷನ್ ಸೌಲಭ್ಯ ನೀಡಲಾಗಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎನ್.ಬಿ. ಸುರೇಶ್ ತಿಳಿಸಿದರು.

ಅವರಿಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿರುವ ಡಾ. ನಾಯಕ್ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಈ ಬಾರಿ ಭೌತಿಕವಾಗಿ ಕೃಷಿಮೇಳ ನಡೆಯುತ್ತದೆ. ಅದರ ನೇರ ಪ್ರಸಾರವನ್ನು ಸಾಮಾಜಿಕ ಜಾಲತಾಣಗಳ ಮುಖಾಂತರ ಮಾಡಲಾಗುವುದು ಎಂದ ಅವರು  ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ನವೆಂಬರ್ 3 ರಿಂದ 6ರ ತನಕ ಆಯೋಜಿಸಿರುವ ಕೃಷಿಮೇಳ 2022ರ ವಿಶೇಷತೆಗಳನ್ನು ತಿಳಿಸಿದರು.

ಈ ಬಾರಿಯ ಕೃಷಿಮೇಳವನ್ನು  “ಕೃಷಿಯಲ್ಲಿ ನವೋಧ್ಯಮಗಳು” ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಲಾಗುತ್ತಿದೆ. ಘೋಷವಾಕ್ಯದ ಉದ್ದೇಶವೇನೆಂದರೆ 2020-21ನ್ನು ಕೃಷಿ ನವೋದ್ಯಮದ ಸುವರ್ಣ ಯುಗ ಎಂದು ಪರಿಗಣಿಸಲಾಗಿರುವುದು. ಎಂದು ತಿಳಿಸಿದರು. ಕೃಷಿಮೇಳದಲ್ಲಿ ವಿಶ್ವವಿದ್ಯಾಲಯ ನೂತನವಾಗಿ ಅಭಿವೃದ್ಧಿಪಡಿಸಿರುವ 9 ತಳಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ 38 ನೂತನ ತಂತ್ರಜ್ಞಾನಗಳ ಬಿಡುಗಡೆ ಮಾಡಲಾಗುವುದು, ಕೃಷಿ ಸಾಧಕರಿಗೆ ಪುರಸ್ಕಾರ ನೀಡಲಾಗುವುದು

ವಿಶೇಷತೆಗಳು:

ಮಣ್ಣು ರಹಿತ ಕೃಷಿ,  ಕೃಷಿಯಲ್ಲಿ ಡ್ರೋನ್‌ಗಳ ಬಳಕೆ, ಆಟೋಮೆಟೆಡ್ ಕೃಷಿ ಯಂತ್ರೋಪಕರಣಗಳು, ವಿವಿಧ ಬಗೆಯ ನಾಟಿ ಕೋಳಿಗಳ ಪ್ರದರ್ಶನ, ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ತಾಕುಗಳು.  ಸುಧಾರಿತ ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಗಳು, ಖುಷ್ಕಿ ಬೇಸಾಯಕ್ಕೆ ಸೂಕ್ತವಾದ ಬೆಳೆ ಪದ್ಧತಿಗಳು, ನೂತನವಾಗಿ ಬಿಡುಗಡೆಯಾದ ವಿವಿಧ ಬೆಳೆ ತಳಿಗಳ ಪ್ರಾತ್ಯಕ್ಷಿಕೆ, ತೋಟಗಾರಿಕೆ ಬೆಳೆಗಳ ಮತ್ತು ನಿಖರ ಕೃಷಿ ಪ್ರಾತ್ಯಕ್ಷಿಕೆ, ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿಕೆ, ಸಿರಿಧಾನ್ಯಗಳು ಹಾಗೂ ಮಹತ್ವ , ಔಷಧೀಯ ಮತ್ತು ಸುಗಂಧ ದ್ರವ್ಯ ಸಸ್ಯಗಳು, ಜಲಾನಯನ ನಿರ್ವಹಣೆ , ಸಾವಯವ ಕೃಷಿ ಪದ್ಧತಿಗಳು, ಸಮಗ್ರ ಪೋಷಕಾಂಶಗಳು, ರೋಗ ಹಾಗೂ ಪೀಡೆ ನಿರ್ವಹಣೆ, ಮಣ್ಣು ಪರೀಕ್ಷೆಗನುಗುಣವಾಗಿ ಬೆಳೆ ಸ್ಪಂದನೆ ಪ್ರಾತ್ಯಕ್ಷಿಕೆ, ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳು, ಮಳೆ ಹಾಗೂ ಮೇಲ್ಛಾವಣಿ ನೀರಿನ ಕೋಯ್ಲು, ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಕೊಯ್ಲಿನೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಬಿತ್ತನೆ ಬೀಜಗಳ ಪರೀಕ್ಷೆ ಹಾಗೂ ಶೇಖರಣೆ ಪಶುಸಂಗೋಪನೆ, ಹೈನುಗಾರಿಕೆ, ಕುರಿ, ಕೋಳಿ ಹಾಗೂ ಮೀನು ಸಾಕಣೆ, ಮಾರುಕಟ್ಟೆ ನೈಪುಣ್ಯತೆ ಮಾಹಿತಿ, ಹವಾಮಾನ ಚತುರ ಕೃಷಿ, ಕೃಷಿಯಲ್ಲಿ ನೂತನ ಮಾಹಿತಿ ತಂತ್ರಜ್ಞಾನ, ಜೈವಿಕ ಹಾಗೂ ನವೀಕರಿಸಲ್ಪಡುವ ಇಂಧನ, ರೈತ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ ಹಾಗೂ ರೈತರಿಂದ ರೈತರಿಗಾಗಿ ಚರ್ಚಾಗೋಷ್ಠಿ, ಮಣ್ಣುರಹಿತ ಕೃಷಿ

ವಾಹನ ನಿಲುಗಡೆ ಮತ್ತು ವಾಹನ ಸೌಲಭ್ಯ:

ಸಾರ್ವಜನಕ ಸಾರಿಗೆಯಲ್ಲಿ ಜಿಕೆವಿಕೆಗೆ ಬರುವವರಿಗೆ ಪ್ರವೇಶದ್ವಾರದಿಂದ ವಿಶ್ವವಿದ್ಯಾಲಯದ ವಾಹನಗಳಲ್ಲಿ ಕೃಷಿಮೇಳದ ಮೈದಾನದವರೆಗೆ ಉಚಿತವಾಗಿ  ಕರೆದುಕೊಂಡು ಹೋಗಲಾಗುವುದು, ಮತ್ತೆ ಕರೆತಂದು ಪ್ರವೇಶದ್ವಾರದವರೆಗೆ ಬಿಡಲಾಗುವ ವ್ಯವಸ್ಥೆ ಮಾಡಲಾಗಿದೆ

ಈ ಬಾರಿ ದ್ವಿಚಕ್ರ, ಕಾರು ಹೊರತುಪಡಿಸಿ ಇನ್ನಿತರ ವಾಹನಗಳನ್ನು ಜಕ್ಕೂರು ವಿಮಾನನಿಲ್ದಾಣದಲ್ಲಿ ನಿಲುಗಡೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ವಿಶ್ವವಿದ್ಯಾಲಯದ ವಾಹನಗಳಲ್ಲಿ ಕೃಷಿಮೇಳದ ಮೈದಾನಕ್ಕೆ ಉಚಿತವಾಗಿ ಕರೆದುಕೊಂಡು ಬಂದು ಮತ್ತೆ ವಾಪಸ್ ಬಿಡಲಾಗುವುದು.

LEAVE A REPLY

Please enter your comment!
Please enter your name here