Home Blog Page 4
ಬೆಳ್ಳಂಬೆಳಿಗ್ಗೆ ಮಂಜು ಕವಿದು ದೂರದ ಗಿಡಮರಗಳು ಕಾಣದೆ ಮಸುಕಾಗಿದ್ದವು. ಚುಮು ಚುಮು ಚಳಿ. ಎದ್ದು ಸೀದಾ ಹಸು ಕಟ್ಟಿದ ಕೊಟ್ಟಿಗೆ ಕಡೆ ನಡೆದೆ. ಹಾಲು ಕರೆದೆ. ಹಸು ಆಚೆ ಕಟ್ಟಿದೆ. ಸಗಣಿಯನ್ನು ಮನೆಯ ಹಿಂದೆಯಿದ್ದ ತಿಪ್ಪೆಗೆ ಸೇರಿಸಿದೆ. ಅಷ್ಟರಲ್ಲಾಗಲೇ ಮಗಳು ವನ್ಯ  ಎದ್ದು ಹೊರ ಬಂದು ತದೇಕಚಿತ್ತದಿಂದ ಸುಮ್ಮನೆ ನೋಡುತ್ತಾ ನಿಂತಿದ್ದಳು "ಮಂಜಪ್ಪ ಅಲ್ಲಿ ನೋಡು ಚಿಗ್ನೇಚರ್ ಪೈಡರ್ ಎಷ್ಟು ಚೆನ್ನಾಗಿದೆ. ರಾತ್ರಿಯಿಂದ ಅದು ಇಲ್ಲೇ ಇದೆ, ಪಾಪ ಅದರ ಮನೆಗೆ ಹೋಗೆ ಇಲ್ಲ" ಎನ್ನುತ್ತಾ ಮೆಟ್ಟಿಲ ಎರಡು ಗೋಡೆಗಳನ್ನು ಆಧಾರವಾಗಿಸಿಕೊಂಡು ಬಲೆಯನ್ನು...
ಬೆಂಗಳೂರು: ರಾಜ್ಯದಲ್ಲಿ ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಪುಷ್ಪೋದ್ಯಮವಿದೆ.  ಮಾರಾಟ ಮತ್ತು ರಫ್ತು ಉತ್ತೇಜಿಸಲು ಬೆಂಗಳೂರಿನಲ್ಲಿ ಸುಸಜ್ಜಿತವಾದ ಅಂತಾರಾಷ್ಟ್ರೀಯ ಮಟ್ಟದ ವಾಣಿಜ್ಯ ಪುಷ್ಪ ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ವಿಧಾನಪರಿಷತ್ತಿಗೆ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಮಂಗಳವಾರ ಶಾಸಕ ಸಿ. ಎನ್. ಮಂಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಾರ್ವಜನಿಕ ಸಹಭಾಗಿತ್ವದ ಬದಲಿಗೆ ಸರ್ಕಾರ ಅಥವಾ ಎಪಿಎಂಸಿಯ ಸ್ವಂತ ನಿಧಿಯಿಂದ ಮಾರುಕಟ್ಟೆ ಅನುಷ್ಠಾನಗೊಳಿಸಲು ನಿರ್ಧರಿಸಿ ಆರ್ಥಿಕ ಇಲಾಖೆಗೆ ಕಡತ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಬೆಂಗಳೂರಿನ ದಾಸನಪುರ, ಮೈಸೂರು, ಕೋಲಾರ...
ಹೌದು ಕಾಫಿಗೆ ಉತ್ತಮ ಬೆಲೆ ಬಂದಿದೆ. ಆದರೆ ಪತ್ರಿಕೆಯವರು ಮತ್ತು ಇನ್ನೂ ಕೆಲವರು ಹೇಳುವಂತೆ ಹುಚ್ಚು ಬೆಲೆ ಅಲ್ಲ. ಬ್ರೆಜಿಲ್, ವಿಯೆಟ್ನಾಂ ಸೇರಿದಂತೆ ಎಲ್ಲ ಕಡೆ ಕಡಿಮೆ ಬೆಳೆಯಾಗಿರುವುದು ಮತ್ತು ಡಾಲರ್ ಎದುರು ರೂಪಾಯಿ ಬೆಲೆ ಇಳಿದಿರುವುದು ಸೇರಿ ಕಾಫಿಗೆ ಈಗಿನ ಬೆಲೆ ಬಂದಿದೆ ಕಾಫಿಗೆ ಹುಚ್ಚು ಬೆಲೆ ಬಂದದ್ದು ಒಮ್ಮೆ 1994 ಸಮಯದಲ್ಲಿ. ಆಗ ಕೆಲವರು ಬೆಳೆಗಾರರೂ  ತಲೆ ಕೆಟ್ಟವರಂತೆ ಖರ್ಚು ಮಾಡಿ ಮತ್ತೆ ಸೋತಿದ್ದರು. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಅಂದಿನ ಪೀಳಿಗೆಯವರು ಹಿಂದೆ ಸರಿದು ಯುವಕರು ಕಾಫಿ ಬೆಳೆಯಲ್ಲಿ...
ರಾಜ್ಯಾದ್ಯಂತ ವರದಿಯಾಗುತ್ತಿರುವ ರೈತ-ಕೃಷಿಕೂಲಿಕಾರರ ಆತ್ಮಹತ್ಯೆಗಳು, ವಲಸೆ-ಮರುವಲಸೆ ಸಂಕಟಗಳು, ತೀವ್ರ ಗತಿಯಲ್ಲಿ ಹೆಚ್ಚುತ್ತಿರುವ ಗ್ರಾಮೀಣ ನಿರುದ್ಯೋಗ ಮತ್ತು ಸಾಲಭಾಧೆಗೆ ಪರಿಹಾರ ಒದಗಿಸುವಲ್ಲಿ 2025-26 ರ  ಬಜೆಟ್  ವಿಫಲವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಕಟು ಟೀಕೆ ಮಾಡಿದೆ. ಉದ್ದೇಶ ಮತ್ತು ಸ್ವರೂಪಗಳ ಪ್ರಸ್ತಾಪ ಇಲ್ಲದೇ ಹೊಸ ಭೂ ಕಂದಾಯ ಕಾಯ್ದೆಯ ಘೋಷಣೆ ಮಾಡಿರುವುದು ,ಕೃಷಿ ಭೂಮಿ ಪಹಣಿಗಳಿಗೆ ಆಧಾರ್ ಜೋಡಿಸಿ ಡಿಜಿಟಲೀಕರಣಗೊಳಿಸುವುದು ಈಗಾಗಲೇ ಕೇಂದ್ರಿಕೃತವಾಗಿ ನಿರ್ವಹಿಸಲ್ಪಡುತ್ತಿರುವ ಇಂತಹ ದಾಖಲಾತಿಗಳು , ಭೂ ಗಳ್ಳತನದಂತಹ  ಹೊಸ ಹೊಸ ಸೈಬರ್ ಅಪರಾಧಗಳಿಗೆ...
ಬೆಂಗಳೂರು: ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ಕೇಂದ್ರ ಸರ್ಕಾರ ಕುಸುಬೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಸಮ್ಮತಿಸಿದ್ದು, ಕ್ವಿಂಟಾಲ್‌ಗೆ ರೂ 5,940 ನಿಗದಿಪಡಿಸಲಾಗಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್‌.ಪಾಟೀಲ ತಿಳಿಸಿದ್ದಾರೆ. ಮಾರುಕಟ್ಟೆಯಲ್ಲಿ ಕುಸುಬೆ ಬೆಲೆ ಕುಸಿದಿರುವ ಕಾರಣ ಬೆಂಬಲ ಬೆಲೆಯಲ್ಲಿ ಖರೀದಿಗೆ ರಾಜ್ಯ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು, ಸಂಬಂಧಪಟ್ಟವರಿಗೆ ಖರೀದಿ ಪ್ರಕ್ರಿಯೆ ಆರಂಭಿಸಲು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಬೀದರ್‌, ಧಾರವಾಡ, ದಾವಣಗೆರೆ, ಗದಗ, ವಿಜಯಪುರ, ಕಲಬುರಗಿ, ಚಿತ್ರದುರ್ಗ, ಕೊಪ್ಪಳ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕುಸುಬೆ ಬೆಳೆಯಲಾಗುತ್ತಿದೆ. ಜನವರಿಯಿಂದ...
ಅರ್ಕಾ ಕ್ರಾಂತಿ ತೊಗಲು ಬೊಂಬೆಯಾಟ
ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಫೆಬ್ರವರಿ  27 ರಿಂದ  ರಾಷ್ಟ್ರೀಯ ತೋಟಗಾರಿಕಾ ಮೇಳ ನಡೆಯತ್ತಿದೆ. ಇದನ್ನು ನೋಡಲು ದೇಶದ ನಾನಾ ಮೂಲೆಗಳಿಂದ ಜನರು ಆಗಮಿಸುತ್ತಿದ್ದಾರೆ. ಮಾರ್ಚ್ 1 ರಂದು ಮೇಳದ ಸಮಾರೋಪ ಸಮಾರಂಭ ಇದೆ. ಈ ಬಾರಿಯ ತೋಟಗಾರಿಕೆ ಮೇಳದಲ್ಲಿ  ವಿಶೇಷವಾಗಿ ಸೂತ್ರದ ಗೊಂಬೆಯಾಟ ಪ್ರದರ್ಶನ ನಡೆದಿದೆ.   ಅರ್ಕಾ ಕ್ರಾಂತಿ ಎಂಬ ಹೆಸರಿನಲ್ಲಿ ಸೂತ್ರದಗೊಂಬೆಯಾಟದ ಮೂಲಕ ರೈತರಿಗೆ ಆಧುನಿಕ ಕೃಷಿಯ ಬಗ್ಗೆ, ಮತ್ತು  IIHR ನ ತಂತ್ರಜ್ಞಾನದ ಬಗ್ಗೆ ತಿಳಿಸುವ ಸಲುವಾಗಿ ಈ ರೀತಿಯ ಪ್ರಯೋಗ ಮಾಡಲಾಗಿದೆ. ಮುಖ್ಯವಾಗಿ ರೈತರ ಬದುಕು ಮತ್ತು...
ಬೆಂಗಳೂರು: ಬೆಳಗಾವಿಯ ಎಸ್‌.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಿಂದ ಸಕ್ಕರೆ ತಂತ್ರಜ್ಞಾನದಲ್ಲಿ ಎಂ.ಎಸ್ಸಿ., ಕೋರ್ಸ್‌ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಸಕ್ಕರೆ ಸಚಿವ ಶಿವಾನಂದ ಎಸ್‌. ಪಾಟೀಲ ತಿಳಿಸಿದರು. ಎಸ್‌.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ  ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಬೆಳಗಾವಿ ಸಮೀಪದ ಬೆನಕನಹಳ್ಳಿಯಲ್ಲಿ ಸಕ್ಕರೆ, ಮದ್ಯಸಾರ ಸಂಶೋಧನಾ ಕೇಂದ್ರ ಆರಂಭಿಸಲು ಹಾಗೂ ಆಸಕ್ತರಿಗೆ ಸಕ್ಕರೆ ಮತ್ತು ತಂತ್ರಜ್ಞಾನದಲ್ಲಿ ಪಿ.ಎಚ್‌ಡಿಗೆ ಅವಕಾಶ ಕಲ್ಪಿಸಲು ಆಡಳಿತ ಮಂಡಳಿ ನಿರ್ಣಯ ಮಾಡಿದೆ. ಕಾಲೇಜು ಆರಂಭಿಸಲು ಸುಮಾರು ರೂ 15 ಕೋಟಿ ಅಗತ್ಯವಿದೆ. ತಕ್ಷಣಕ್ಕೆ  5...
ಕೃಷಿಕರ ಜೀವನೋಪಾಯ ಭದ್ರತೆಯನ್ನು ಖಾತ್ರಿ ಮಾಡಲು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ.  ಹಸಿರುಕ್ರಾಂತಿ ಪ್ರಯತ್ನಗಳ ಮೂಲಕ ಭಾರತ ಆಹಾರ ಭದ್ರತೆ ಸಾಧಿಸಿದರೂ, 2047ರೊಳಗೆ ವಿಶ್ವದ ಆಹಾರ ಬುಟ್ಟಿಯಾಗುವ ನಿಟ್ಟಿನಲ್ಲಿ ಶಕ್ತಿಶಾಲಿ ರಾಷ್ಟ್ರವಾಗುವ ಸಾಧ್ಯತೆ ಇದೆ. ಇದನ್ನು ಸಾಧಿಸಲು, ಉತ್ಕೃಷ್ಟ ತಳಿಗಳು, ಹೆಚ್ಚಿನ ಸಾಂದ್ರತಾ ಬೆಳೆ ಪದ್ಧತಿಗಳು ಮತ್ತು ಸ್ಥಿರತೆಯಿಂದ ಯುಕ್ತವಾದ ನವೀನ ತಂತ್ರಜ್ಞಾನಗಳ ಮೂಲಕ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರದ ಎಂಎಸ್ಎಮ್‌ಇ, ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಪಾದಿಸಿದರು. ಅವರು...
ಭಾಗ - 2 ತುಮಕೂರಿನ ತೆಂಗಿಗೆ ಸಂಕಷ್ಟ ನಿಮ್ಮೆಲ್ಲರ ತೋಟದ ತೆಂಗಿನ ಇಳುವರಿ ಕಡಿಮೆಯಾಗಲು ಮುಖ್ಯ ಕಾರಣ ಏನು ಎಂದು ಇಂದು ಸಿಪಿಸಿಆರ್ ಐ ಹಿರಿಯ ವಿಜ್ಞಾನಿಗಳಿಗೆ ಕೇಳಿದೆ. ಅವರು ಹೇಳಿದ್ದು, ನಾನು ಈ ಹಿಂದಿನ ಪೋಸ್ಟ್ ನಲ್ಲಿ ಬರೆದಿದ್ದ ಹಾಗೆ ಹವಾಮಾನ ವೈಪರೀತ್ಯಗಳು ಕಾರಣ. ವೈಟ್ ಫ್ಲೈನಂತಹ ಕೀಟ ಬಾಧೆ ಹೆಚ್ಚಾಗಲು  ಈ ಹವಾಮಾನ ವೈಪರೀತ್ಯವೆ ಕಾರಣವಾಗಿದೆ ಎಂದರು. ತುಮಕೂರು ಮತ್ತು ಪೊಲ್ಲಾಚಿ ಭಾಗದಲ್ಲಿ ಹವಾಮಾನ ವೈಪರೀತ್ಯದ ಸಮಸ್ಯೆ ತೆಂಗಿನ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಇದೆ ಎಂದರು. ತುಮಕೂರು ಭಾಗದಲ್ಲಿ ಅಂತರ್ಜಲ ಆಳ ಆಳಕ್ಕೆ...
ವಿಕಸಿತ ಭಾರತಕ್ಕಾಗಿ ತೋಟಗಾರಿಕೆ (ಪೋಷಣೆ, ಸಬಲೀಕರಣ ಮತ್ತು ಜೀವನೋಪಾಯ) ಘೋಷವಾಕ್ಯದೊಂದಿಗೆ 2025ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮೇಳ ಆಯೋಜಿತವಾಗಿದೆ. ಫೆಬ್ರವರಿ 27ರಿಂದ ಮಾರ್ಚ್ 1ರ ತನಕ ಬೆಂಗಳೂರು ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಮತ್ತು ಸಂಶೋಧನಾ ಸಂಸ್ಥೆ ಆವರಣದಲ್ಲಿ ನಡೆಯಲಿದೆ. 2025ನೇ ರಾಷ್ಟ್ರೀಯ ತೋಟಗಾರಿಕಾ ಮೇಳದ ಈ ಬಾರಿಯ ಮುಖ್ಯ ವಿಷಯ "ವಿಕಸಿತ ಭಾರತಕ್ಕಾಗಿ ತೋಟಗಾರಿಕೆ (ಪೋಷಣೆ, ಸಬಲೀಕರಣ ಮತ್ತು ಜೀವನೋಪಾಯ)" ಆಗಿದೆ.  ಪೌಷ್ಠಿಕಾಂಶಯುಕ್ತ ಬೆಳೆಗಳ ಮೂಲಕ ಪೌಷ್ಠಿಕತೆ ಹೆಚ್ಚಿಸುವ ತಂತ್ರಜ್ಞಾನ ಮತ್ತು ಕ್ರಮಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸಲಾಗುವುದು ಎಂದು ರಾಷ್ಟ್ರೀಯ ತೋಟಗಾರಿಕೆ ಮೇಳ 2025 ರ...

Recent Posts