ಪ್ರಗತಿ ಹೊಂದುತ್ತಿರುವ ಮುತ್ತು ಕೃಷಿ

0
2088984538

ಸ್ವಾಭಾವಿಕವಾಗಿ ಆಗುವ ಮುತ್ತುಗಳಿಗೆ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆ, ಮೌಲ್ಯವಿದೆ. ಆದರೆ ಇವುಗಳು ದೊರೆಯುವುದು ವಿರಳ. ಹೀಗಾಗಿ ಅಸ್ವಭಾವಿಕವಾಗಿ ಇವುಗಳ ಕೃಷಿ ಮಾಡುವ ಕ್ರಮ ಬಹಳ ಹಿಂದೆಯೇ  ರೂಢಿಗೆ ಬಂದಿದೆ. ಆದರೂ ಇದರಲ್ಲಿ ತುಂಬ ಅಡೆತಡೆ, ಸಮಸ್ಯೆಗಳಿರುವುದರಿಂದ ಕೈಗೊಳ್ಳುವವರ ಸಂಖ್ಯೆ ಕಡಿಮೆ.

ಕರ್ನಾಟಕದಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಮುತ್ತಿನ ಕೃಷಿ ಮಾಡುತ್ತಿದ್ದಾರೆ. ಆದರೆ ಅವರ್ಯಾರು ಬೆಳಕಿಗೆ ಬರುತ್ತಿಲ್ಲ.  ಕೃತಕವಾಗಿ ಮಾಡುವ ಮುತ್ತುಗಳಿಗೆ ಸಹಜ ಮುತ್ತಿನಷ್ಟು ಬೆಲೆ ಇಲ್ಲದಿದ್ದರೂ ಬೇರೆಬೇರೆ ಆಭರಣಗಳಿಗೆ ಅಳವಡಿಸುವ ಹಿನ್ನೆಲೆ, ಮುತ್ತಿನ ಸರದ ಬೇಡಿಕೆ ಕಾರಣಗಳಿಂದ ಉತ್ತಮ ಬೆಲೆ ಸಿಗುತ್ತಿದೆ.

ಮುತ್ತು ಕೃಷಿ ಕೊಳದಲ್ಲಿ ಕಾಯಕದಲ್ಲಿ ತೊಡಗಿರುವ ಮಧು ಪಟೇಲ್

ಬಿಹಾರ ರಾಜ್ಯದಲ್ಲಿಯೂ ನಿಧಾನವಾಗಿ ಮುತ್ತುಗಳ ಕೃಷಿಯೆಡೆಗೆ ಒಲವು ತೋರಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.  ಇವರಲ್ಲಿ ಅಲ್ಲಿನ ನಳಂದ ಜಿಲ್ಲೆಯ ಎಂ.ಎಸ್ ಸಿ ಪಧವೀಧರೆ  ಮಧು ಪಟೇಲ್‌ ಎಂಬ ಮಹಿಳೆ ಕೆಲವಾರು ಬಾರಿಯ ವಿಫಲತೆಗಳ ನಂತರ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ.

 ಎಂಟು ವರ್ಷಗಳ ಹಿಂದೆ ಟಿವಿಯಲ್ಲಿ ಮುತ್ತು ಕೃಷಿ  ಕಾರ್ಯಕ್ರಮವನ್ನು ನೋಡಿದೆ. ಈ ಬಗ್ಗೆ ಕೃಷಿ ಇಲಾಖೆಯಲ್ಲಿ  ವಿಚಾರಿಸಿದರೂ ಯಾರಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲ. ಇಲಾಖೆಯಿಂದ ಮುತ್ತು ಕೃಷಿಗೆ ಯಾವುದೇ ಯೋಜನೆ ಇಲ್ಲ ಎಂದು ತಿಳಿಸಿದರು. ನಂತರ, 2017 ರಲ್ಲಿ ಭುವನೇಶ್ವರದಲ್ಲಿರುವ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಫ್ರೆಶ್‌ವಾಟರ್ ಅಕ್ವಾಕಲ್ಚರ್ ಗೆ (CIFA) ಹೋಗಿ ಮುತ್ತು ಕೃಷಿಯಲ್ಲಿ ತರಬೇತಿಯನ್ನು ಪಡೆದುಕೊಂಡೆ ಎಂದು ಮಧು ಪಟೇಲ್‌ ಹೇಳುತ್ತಾರೆ.

ಆರಂಭದಲ್ಲಿ ನಷ್ಟವಾದರೂ ಮಧು ಪಟೇಲ್‌ ಅವರು ಹಿಂಜರಿಯಲಿಲ್ಲ. ಒಮ್ಮೆಯಂತೂ ತಂದಿದ್ದ ಸಿಂಪಿಗಳಲ್ಲಿ ಶೇಕಡ ೧೦ರಷ್ಟು ಮಾತ್ರ ಉಳಿದಿದ್ದವು. ಆದರೂ ಅವರು ಪಟ್ಟು ಬಿಡದೇ ಮುತ್ತಿನ ಕೃಷಿ ಮುಂದುವರಿಸಿದರು.“ನಾನು ಭರವಸೆ ಕಳೆದುಕೊಳ್ಳಲಿಲ್ಲ ಶೇಕಡ  10 ರಷ್ಟು  ಸಿಂಪಿಗಳು ಜೀವಂತವಾಗಿದ್ದರೆ ಬಿಹಾರದಲ್ಲಿಯೂ ಮುತ್ತು ಕೃಷಿ ಮಾಡಬಹುದು ಎಂದು ಭಾವಿಸಿದೆ. ಮತ್ತೊಮ್ಮೆ CIFA ಅನ್ನು ಸಂಪರ್ಕಿಸಿದೆ.   ನನ್ನ ಮೊದಲ ಪ್ರಯತ್ನದ ಬಗ್ಗೆ ಅವರಿಗೆ ತಿಳಿಸಿದೆ.   ಆಗ  ಅವರು ಕೆಲವು ಸಲಹೆಗಳನ್ನು ನೀಡಿದರು. ಇದರಿಂದ  ನಾನು ಮಾಡಿದ ತಪ್ಪುಗಳ ಅರಿವಾಯಿತು. ಬಳಿಕ  2018 ರಲ್ಲಿ ಮತ್ತೆ ಪ್ರಯತ್ನಿಸಿದಾಗ ಸಿಂಪಿಗಳ  ಮರಣ ಪ್ರಮಾಣ  ಶೇಕಡ  20 ರಷ್ಟು ಮಾತ್ರ ಆಗಿತ್ತು. ಶೇಕಡ  80 ರಷ್ಟು  ಸಿಂಪಿಗಳು ಬದುಕುಳಿದಾಗ ಮುತ್ತಿನ ಕೃಷಿಯಲ್ಲಿ ಮುಂದುವರಿಯುವ ಭರವಸೆ ಮೂಡಿತು.  ಇದಾದ ನಂತರ ಹಿಂತಿರುಗಿ ನೋಡಲಿಲ್ಲ, ಈಗ ಮುತ್ತು ಕೃಷಿಯಿಂದ ಪ್ರತಿ ವರ್ಷ ರೂ.  12 ಲಕ್ಷದಿಂದ ರೂ. 15 ಲಕ್ಷ ಗಳಿಸುತ್ತೇನೆ’ ಎಂದು ಮಧು ಪಟೇಲ್ ಹೇಳುತ್ತಾರೆ.

27,2220 ಚದರ ಅಡಿಗಳ ಕೊಳದಲ್ಲಿ ಬೆಳೆಸುತ್ತಾರೆ. ಮುತ್ತುಗಳನ್ನು ಕೊಯ್ಲು ಮಾಡಲು ಸುಮಾರು 12-18 ತಿಂಗಳುಗಳ ಅವಧಿ ಬೇಕು.  ಉತ್ತಮ ಫಲಿತಾಂಶಗಳು, ದೊರೆಯುತ್ತಿವೆ. ದುಂಡಗಿನ ಆಕಾರದ ಮುತ್ತುಗಳನ್ನು ಪಡೆಯಲು  ಕನಿಷ್ಠ ನಾಲ್ಕೈದು ವರ್ಷಗಳು ಬೇಕಾಗುತ್ತದೆ ಎಂದು ವಿವರಿಸುತ್ತಾರೆ

ಎರಡು ಮುತ್ತುಗಳನ್ನು ಒಳಗೊಂಡಿರುವ ಪ್ರತಿ ಸಿಂಪಿ ಬೆಲೆ  ರೂ.  6 ರಿಂದ ರೂ. 10 ರ ತನಕ ಇದೆ.  ಮಧು ಪಟೇಲ್‌ ಅವರು ಇವುಗಳನ್ನು    ನಳಂದಾದಲ್ಲಿಯೇ ಖರೀದಿಸುತ್ತಾರೆ.  ಪ್ರಸ್ತುತ ಕೊಯ್ಲಿಗೆ, ಪಟೇಲ್ 5,500 ಸಿಂಪಿಗಳನ್ನು ನೆಟ್ಟಿದ್ದಾರೆ. ಅದರ ವಿನ್ಯಾಸವನ್ನು ಅವಲಂಬಿಸಿ, ಪ್ರತಿ ಬಾರಿ  ಕೊಯ್ಲು ಮಾಡಿದ  ಒಂದು ಮುತ್ತಿಗೆ  ರೂ.  150 ರಿಂದ  ರೂ.  300 ರ ತನಕ ಬೆಲೆ ಇದೆ.   ಬಿಹಾರದಲ್ಲಿ ಇನ್ನೂ ಹೆಚ್ಚಿನ ಬೆಲೆ ದೊರೆಯದ ಕಾರಣ ಅವರು  ಮುತ್ತುಗಳನ್ನು ಹೈದರಾಬಾದ್, ಸೂರತ್, ಮುಂಬೈ ಮತ್ತು ದೆಹಲಿಯಲ್ಲಿ ಸ್ಥಿರ ಖರೀದಿದಾರರಿಗೆ ಮಾರಾಟ ಮಾಡುತ್ತಿದ್ದಾರೆ.

ರಾಜ್ಯ ಸರ್ಕಾರದಿಂದ  ಮುತ್ತಿನ ಕೃಷಿ ಬಗ್ಗೆ ಯೋಜನೆಗಳು ರೂಪುಗೊಳ್ಳಬೇಕು. ಉತ್ತಮ ಪ್ರೋತ್ಸಾಹ ದೊರೆತರೆ ಮತ್ತಷ್ಟು ಕೃಷಿಕರು “ಮುತ್ತು ಕೃಷಿ”ಯತ್ತ ಒಲವು ತೋರಬಹುದು. ಈ ದಿಶೆಯಲ್ಲಿ ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದವರು ಚಿಂತನೆ ಮಾಡಬೇಕು.

LEAVE A REPLY

Please enter your comment!
Please enter your name here