ಕರ್ನಾಟಕ ರಾಜ್ಯದಲ್ಲಿ ಒಣಹವೆ ಮುಂದುವರಿದಿದೆ. ಬಾಗಲಕೋಟೆಯಲ್ಲಿ ಕನಿಷ್ಟ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಇವತ್ತಿನ ವಾತಾರವರಣದ ಮುಖ್ಯಾಂಶಗಳು: ದಕ್ಷಿಣ ಅಂಡಮಾನ್ ಸಮುದ್ರದ ಮಧ್ಯಭಾಗ ಹಾಗೂ ಪೂರ್ವ ಭೂ ಮಧ್ಯ ಹಿಂದೂ ಮಹಾಸಾಗರ ಮೇಲ್ಮೆಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರಿಂದ ಸಮುದ್ರ ಮಟ್ಟದಿಂದ 2.6 ಕಿಲೋ ಮೀಟರ್ ಎತ್ತರದವರೆಗೂ ಸುಳಿಗಾಳಿ ವ್ಯಾಪಿಸಿದೆ.
ಇದು ಮುಂದಿನ ಮೂರು ದಿನಗಳಲ್ಲಿ ಪಶ್ಚಿಮ ಅಥವಾ ವಾಯುವ್ಯ ದಿಕ್ಕಿನಲ್ಲಿ ಚಲಿಸಿ ಶ್ರೀಲಂಕಾದ ಪೂರ್ವ ಕರಾವಳಿಗೆ ತಲುಪುವ ನಿರೀಕ್ಷೆ ಇದೆ. ಪಶ್ಚಿಮ ಮಧ್ಯ ಅರಬ್ಬಿ ಸಮುದ್ರದಲ್ಲಿ ಸ್ಪಷ್ಟವಾಗಿ ಗುರುತಿಸಲಾದ ವಾಯುಭಾರ ಕುಸಿತವಿದೆ. ಅದು ಮುಂದಿನ ದಿನಗಳಲ್ಲಿ ದುರ್ಬಲವಾಗುವ ಸಾಧ್ಯತೆ ಇದೆ.
ಮುನ್ಸೂಚನೆ: ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಇವತ್ತಿನಿಂದ ಐದು ದಿನದವರೆಗೂ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನಲ್ಲಿ ಇವತ್ತು ಮತ್ತು ನಾಳೆ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ. ಮೂರು ಮತ್ತು ನಾಲ್ಕನೇ ದಿವಸ ಕೆಲವೊಂದು ಜಿಲ್ಲೆಗಳಲ್ಲಿ ಅಂದರೆ ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ ಈ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಐದನೇ ದಿನ ಮತ್ತೆ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ.
ದಾಖಲಾದ ಬೆಂಗಳೂರು ಹವಾಮಾನ ವರದಿ:
ಬೆಂಗಳೂರಿನಲ್ಲಿ ನಿನ್ನೆ ಗರಿಷ್ಠ ಉಷ್ಣಾಂಶ 28.4 ಇತ್ತು. ಕನಿಷ್ಟ 18.4 ಆಗತ್ತು. ಅಕ್ಟೋಬರ್ 1 ರಿಂದ 43 ಸೆಂಟಿ ಮೀಟರ್ ಮಳೆಯಾಗಿದೆ. ಸಾಮಾನ್ಯವಾಗಿ 24 ಸೆಂಟಿ ಮೀಟರ್ ಮಳೆ ಆಗಬೇಕು ಆದರೆ ಸಾಮಾನ್ಯಕ್ಕಿಂತ 19 ಸೆಂಟಿ ಮೀಟರ್ ಮಳೆ ಹೆಚ್ಚು ಆಗಿದೆ.
ಬೆಂಗಳೂರು ಹವಾಮಾನ ಮುನ್ಸೂಚನೆ: ಇವತ್ತು ಮತ್ತು ನಾಳೆ ಸಾಮಾನ್ಯವಾಗಿ ಆಕಾಶ ಭಾಗಶಃ ಮೋಡವಾಗಿರುತ್ತದೆ. ಮುಂಜಾನೆ ಮಂಜು ಕವಿಯುವ ಸಾಧ್ಯತೆ ಇದೆ. ಗರಿಷ್ಟ 28 ಮತ್ತು ಕನಿಷ್ಟ 17 ಡಿಗ್ರಿ ಸೆಲ್ಸಿಯಸ್ಉಷ್ಣಾಂಶ ಇರುವ ಸಾಧ್ಯತೆ ಇದೆ. ನಾಳೆ ಗರಿಷ್ಠ 28 ಕನಿಷ್ಟ 16 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಗಳಿದೆ.