ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಮತ್ತು ಡಲ್‌ಹೌಸಿ ವಿಶ್ವವಿದ್ಯಾನಿಲಯ, ಕೆನಡ ಒಡಂಬಡಿಕೆಗೆ ಸಹಿ

0

ದಿನಾಂಕ 18-10-2022ರಂದು ಶಾಸ್ತಿç ಇಂಡೋ–ಕೆನಡಿಯನ್ ಸಂಸ್ಥೆಯ(ಎಸ್.ಐ.ಸಿ.ಐ.) ಸದಸ್ಯರುಗಳ ದುಂಡು ಮೇಜಿನ ಸಭೆಯನ್ನು ನಡೆಸಲಾಯಿತು. ಡಾ.ಕೆ.ಸಿ. ನಾರಾಯಣಸ್ವಾಮಿ, ಕುಲಪತಿ, ಕೃಷಿ ವಿಶ್ವವಿದ್ಯಾನಿಯ, ಬೆಂಗಳೂರು ಇವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದು, ಶಾಸ್ತಿç ಇಂಡೋ–ಕೆನಡಿಯನ್ ಸಂಸ್ಥೆಯ ನಿರ್ದೇಶಕರಾದ ಡಾ. ಪ್ರಾಚಿ ಕೌಲ್ ರವರು ಸಭೆಯನ್ನು ಆಯೋಜಿಸಿದ್ದರು.

ಭಾರತ ಮತ್ತು ಕೆನಡಾ ದೇಶದ ವಿಶ್ವವಿದ್ಯಾನಿಲಯಗಳು ವಿವಿಧ ಕ್ಷೇತ್ರಗಳಲ್ಲಿ ಜಂಟಿಯೋಜನೆಗಳನ್ನು ಹಮ್ಮಿಕೊಂಡು ಸಮನ್ವಯತೆ ಮತ್ತು ಅಭಿವೃದ್ದಿಯನ್ನು ಸಾಧಿಸುವ ಬಗ್ಗೆ ಚರ್ಚಿಸಲಾಯಿತು. ಈ ಬಗ್ಗೆ ರಚಿಸಲಾದ ಒಡಂಬಡಿಕೆಯ ಮೂಲ ಉದ್ದೇಶಗಳು ಮತ್ತು ಅದರಿಂದ ಎರಡೂ ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ, ಸಂಶೋಧನಾ ಮತ್ತು ವಿಸ್ತರಣಾ ಕ್ಷೇತ್ರಗಳಲ್ಲಿ, ಅಗಬಹುದಾದ ಪ್ರತಿಕೂಲ ಪರಿಣಾಮಗಳ ಬಗ್ಗೆ ಸಂಕ್ಷಿಪ್ತವಾಗಿ ಚರ್ಚಿಸಲಾಯಿತು.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಪರವಾಗಿ ಡಾ.ಬಸವೇಗೌಡ, ಕುಲಸಚಿವರು ಮತ್ತು ಡಲ್‌ಹೌಸಿ ವಿಶ್ವವಿದ್ಯಾನಿಲಯ, ಕೆನಡ ಪರವಾಗಿ ಶ್ರೀ ಮಟ್ ಹಬ್, ಉಪಾಧ್ಯಕ್ಷರು ಮತ್ತು ಜಾಗತಿಕ ವ್ಯವಹಾರಗಳು, ಒಡಂಬಡಿಕೆಗೆ ಸಹಿ ಹಾಕಿದರು.

 

ಈ ಸಂದರ್ಭದಲ್ಲಿ ಶಾಸ್ತಿç ಇಂಡೋ–ಕೆನಡಿಯನ್ ಸಂಸ್ಥೆಯ(ಎಸ್.ಐ.ಸಿ.ಐ.) ಸದಸ್ಯರುಗಳಾದ ಪ್ರೊ. ಪಿ. ಸುಬ್ರಮಣ್ಯ ಯಡಪಡಿತ್ತಾಯ, ಕುಲಪತಿಗಳು, ಮಂಗಳೂರು ವಿಶ್ವವಿದ್ಯಾನಿಲಯ, ಪ್ರೊ.ವಿ.ಸಿ. ವಿವೇಕಾನಂದನ್, ಕುಲಪತಿಗಳು, ಹಿದಯತುಲ್ಲಾ ರಾಷ್ರ‍್ಷೀಯ ಕಾನೂನು ವಿಶ್ವವಿದ್ಯಾನಿಲಯ, ರಾಯ್‌ಪುರ, ಡಾ.ಪಿ.ಸಿ. ದೇಶ್‌ಮುಖ್, ಪ್ರಾಧ್ಯಾಪಕರು(ಭೌತಶಾಸ್ತç), ಭಾರತೀಯ ತಂತ್ರಜ್ಞಾನ ಸಂಸ್ಧೆ, ತಿರುಪತಿ, ಡಾ.ಅಲೋಕ್ ಕುಮಾರ್ ಮಿಶ್ರಾ, ಸಹ ನಿರ್ದೇಶಕರು(ಅಂತರಾಷ್ಟೀ್ರಯ ವ್ಯವಹಾರ) ಹೈದ್ರಾಬಾದ್ ವಿಶ್ವವಿದ್ಯಾನಿಲಯ, ಡಾ.ಎಂ.ಎಸ್. ಕುಲಕರ್ಣಿ, ಡೀನ್(ಸಂಶೋಧನೆ ಮತ್ತು ಸಮಾಲೋಚನೆ) ರಾಷ್ಟೀ್ರಯ ತಾಂತ್ರಿಕ ಸಂಸ್ಧೆ ಕರ್ನಾಟಕ, ಸುರತ್ಕಲ್, ಡಾ.ಬಾಲಕೃಷ್ಣ ಪೃಥ್ವಿ ರಾಜ್, ಸಹ ಉಪಾಧ್ಯಕ್ಷರು-ಜಾಗತಿಕ ವ್ಯವಹಾರಗಳು, ಡಲ್‌ಹೌಸಿ ವಿಶ್ವವಿದ್ಯಾನಿಲಯ, ಕೆನಡ, ಡಾ.ಮಿರಿಯಮ್ ಗೋರ್ಡನ್, ಸಹಾಯಕ ಡೀನ್- ಅಂತರಾಷ್ಟೀ್ರಯ, ಕೃಷಿ ಶೈಕ್ಷಣಿಕ, ಡಲ್‌ಹೌಸಿ ವಿಶ್ವವಿದ್ಯಾನಿಲಯ, ಕೆನಡ, ಡಾ.ಆನಡ್ರಿಕ್ ರ‍್ಯೂ ಚಾಪ್ಲಿನ್, ಡೀನ್- ಕಂಪ್ಯೂಟರ್ ವಿಜ್ಞಾನ, ಡಲ್‌ಹೌಸಿ ವಿಶ್ವವಿದ್ಯಾನಿಲಯ, ಕೆನಡ ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಹಾಜರಿದ್ದರು.

LEAVE A REPLY

Please enter your comment!
Please enter your name here