ಬಹುಪಯೋಗಿ ಅಂತರ ಬೇಸಾಯ ಯಂತ್ರ

0
ಲೇಖಕರು: ಡಾ. ನಾಗರಾಜ್ ಸಿ., ಯಂತ್ರ ವಿನ್ಯಾಸ ಮತ್ತು ಅಭಿವೃದ್ಧಿಕಾರರು, ಮುಖ್ಯಸ್ಥರು, ಮಾರುತಿ ಕೃಷಿ ಉದ್ಯೋಗ್

ಬೇಸಾಯ ಮಾಡುವ ಸಂದರ್ಭದಲ್ಲಿ ಅನೇಕ ತೊಂದರೆಗಳು ಎದುರಾಗುತ್ತವೆ. ಸಕಾಲದಲ್ಲಿ ಕೃಷಿಕಾರ್ಮಿಕರು ದೊರಕುವುದಿಲ್ಲ. ಸಣ್ಣ, ಮಧ್ಯಮ ಪ್ರಮಾಣದ ರೈತರಿಗೆ ಟ್ರಾಕ್ಟರ್ ನಿಂದ ಉಳುಮೆ ಮಾಡಿಸುವುದು ಬಹು ದುಬಾರಿ. ಒಂದು ತಾಸಿಗೆ ಇಷ್ಟು ಎಂದು ನಿಗದಿಪಡಿಸಿರುವ ದರವನ್ನು ಭರಿಸುವುದು ಕಷ್ಟ. ಇದಲ್ಲದೇ ಅಂತರ ಬೇಸಾಯಕ್ಕೆ ಟ್ರಾಕ್ಟರ್ ಗಳು ಸೂಕ್ತವಾಗುವುದಿಲ್ಲ. ಇವುಗಳಲ್ಲದೇ ಬೇಸಾಯದ ಸಂದರ್ಭದಲ್ಲಿ ಇನ್ನೂ ಅನೇಕ ಸಮಸ್ಯೆಗಳು ಎದುರಾಗುತ್ತವೆ.

ಇವುಗಳೆಲ್ಲವನ್ನು ಅಧ್ಯಯನ ಮಾಡಿದ ಬಳಿಕವೇ ಬಹುಪಯೋಗಿ ಅಂತರ ಬೇಸಾಯ ಉಳುಮೆ ಯಂತ್ರ (multipurpose power inter cultivator) ವನ್ನು ಅಭಿವೃದ್ಧಿಪಡಿಸಿದೆ. ಇದು ಪವರ್ ವೀಡರ್ (power weeder) ಆಗಿಯೂ ಕೆಲಸ ಮಾಡುತ್ತದೆ. ಮಾರುತಿ ಕೃಷಿ ಉದ್ಯೋಗ್ ನಿರಂತರ ಪರಿಶ್ರಮದಿಂದ ನಿರ್ಮಿತವಾದ ಈ ಯಂತ್ರಕ್ಕೆ ಮಲ್ಟಿಪರ್ಪಸ್ ಪವರ್ ಇಂಟರ್ ಕಲ್ಟಿವೇಟರ್ 63002/3 (ಪವರ್ ವೀಡರ್) ಎಂದು ಹೆಸರಿಟ್ಟಿದ್ದೇನೆ.

ಹಲವು ಪ್ರಯೋಜನಗಳು

ಮಲ್ಟಿ ಪರ್ಪಸ್ ಪವರ್ ಇಂಟರ್ ಕಲ್ಟಿವೇಟರ್ (multipurpose power inter cultivator) ಬಳಸಿ ಅಂತರ ಬೇಸಾಯ ಮಾಡುವುದರಿಂದ ಕೃಷಿಭೂಮಿಗೆ ಹಾಗೂ ಕೃಷಿಕರಿಗೆ ಹಲವಾರು ರೀತಿಯ ಉಪಯೋಗಗಳಿವೆ.
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿ ರೈತರ ಬಳಿ ಎತ್ತುಗಳಿಲ್ಲ. ಎತ್ತುಗಳು, ಟ್ರಾಕ್ಟರ್, ಟಿಲ್ಲರ್ ಇವುಗಳನ್ನು ಪದೇಪದೇ ಬಾಡಿಗೆಗೆ ತಂದು ಕೃಷಿಕಾರ್ಯ ಮಾಡಿಸುವುದು ಕೃಷಿವೆಚ್ಚವನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ಅದಲ್ಲದೇ ಇವುಗಳ ಉಪಯೋಗವನ್ನು ತೀರಾ ಕಡಿಮೆ ಮಾಡಿ ಈ ಅಂತರ ಬೇಸಾಯ ಯಂತ್ರದಿಂದ ಉಳುಮೆ ಮಾಡಿದಾಗ ವಿಶೇಷವಾದ ಪ್ರಯೋಜನಗಳು ದೊರಕುತ್ತವೆ.

ಶಿಲ್ಟ್ ಉತ್ಪಾದನೆ ಕಡಿಮೆ

ಉಳುಮೆಯಲ್ಲಿ ಅತ್ಯಲ್ಪ ಘರ್ಷಣೆಯಿಂದ ಶಿಲ್ಟ್ ಉತ್ಪಾದನೆ ಕಡಿಮೆಯಾಗಿ, ವಿವಿಧ ಪೋಷಕಾಂಶಗಳಿರುವ ಮಳೆನೀರು ಅಧಿಕ ಪ್ರಮಾಣದಲ್ಲಿ ಭೂಮಿಯೊಳಗೆ ಇಂಗುತ್ತದೆ. ಇದರಿಂದ ಸಹಜವಾಗಿ ಭೂ ಫಲವತ್ತತೆ ಹೆಚ್ಚಾಗುವುದಲ್ಲದೇ ಕೃಷಿ ಭೂಮಿಯ ಒಡಲು ಸದಾ ತಂಪಾಗಿರುತ್ತದೆ.

ಕೃಷಿಕಾರ್ಮಿಕರ ಅಲಭ್ಯತೆ

ಕೃಷಿಕಾರ್ಮಿಕರ ಅಲಭ್ಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸಕಾಲದಲ್ಲಿ ಇವರ ನೆರವು ದೊರಕದೇ ಇದ್ದಾಗ ಕಳೆಯ ಪ್ರಮಾಣ ಅಧಿಕವಾಗುತ್ತದೆ. ಬೆಳೆಯ ಬೆಳವಣಿಗೆಗೆಗೂ ತೊಂದರೆಯ಻ಗುತ್ತದೆ. ಈ ಸಮಸ್ಯೆಯನ್ನು ಈ ಅಂತರ ಬೇಸಾಯ ಯಂತ್ರದಿಂದ ನಿವಾರಣೆ ಮಾಡಬಹುದು. ಸಕಾಲಕ್ಕೆ ಕಳೆಯನ್ನು ತೆಗೆಯಬಹುದು.

ಸಾಯವಯ ಉಳುಮೆ

ದಿನದಿಂದ ದಿನಕ್ಕೆ ಭಾರತವಲ್ಲದೇ ವಿಶ್ವದ ಎಲ್ಲೆಡೆಯೂ ಸಾವಯವ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಈ ಅಂತರ ಬೇಸಾಯ ಯಂತ್ರವು ಸಾವಯವ ಉಳುಮೆ ಕಾರ್ಯವನ್ನು ಮಾಡುತ್ತದೆ. ಮೊದಲೇ ಹೇಳಿದಂತೆ ಈ ಯಂತ್ರದಿಂದ ುಳುಮೆ ಮಾಡಿದಾಗ ಮಣ್ಣಿನ ಪದರಗಳು ಸಡಿಲಗೊಂಡು ಮಳೆನೀರು ಭೂಮಿಯೊಳಗೆ ಉತ್ತಮವಾಗಿ ಇಂಗಲು ಕಾರಣವಾಉತ್ತದೆ. ಭಾರಿ ತೂಕದ ಯಂತ್ರಗಳನ್ನು ಬಳಸಿ ಉಳುಮೆ ಮಾಡಿದಾಗ ಕೃಷಿಭೂಮಿಯ ಮಣ್ಣು ಗಟ್ಟಿಯಾಗಿ ಮಳೆನೀರು ಸಲೀಸಾಗಿ ಇಂಗಲು ಕಷ್ಟವಾಗುತ್ತದೆ. ಅಂಥ ತೊಂದರೆಯನ್ನು ಈ ಅಂತರ ಬೇಸಾಯ ಯಂತ್ರ ನಿವಾರಿಸುತ್ತದೆ.

ಬೆಳೆಗಳ ಅತ್ಯುತ್ತಮ ಬೆಳವಣಿಗೆ

ಕೃಷಿಕರು ಅಂತರ ಬೇಸಾಯಕ್ಕೆ ಪವರ್ ಇಂಟರ್ ಕಲ್ಟಿವೇಟರ್ ಬಳಸಿದಾಗ ಒಟ್ಟಿಗೆ ಮೂರು ಕಾರ್ಯಗಳು ನೆರವೇರುತ್ತವೆ. ಕಳೆಯನ್ನು ತೆಗೆಯುತ್ತದೆ, ಮಣ್ಣನ್ನು ಚೆನ್ನಾಗಿ ಹುಡಿ ಮಾಡುತ್ತದೆ, ಮತ್ತು ಬೆಳೆಯ ಎರಡೂ ಬದಿಗಳಲ್ಲಿಯೂ ಮಣ್ಣನ್ನು ಏರಾಕುವುದರಿಂದ ಬೆಳೆಯ ಬುಡ ಭದ್ರವಾಗಿ ಉತ್ತಮವಾಗಿ ಬೆಳವಣಿಗೆಯಾಗಲು ಸಹಾಯ ಮಾಡುತ್ತದೆ.

ಪೋಷಕಾಂಶಗಳ ಸಮರ್ಪಕ ಮಿಶ್ರಣ

ಸಾಯವವ ಗೊಬ್ಬರಗಳು ಮಣ್ಣಿನಲ್ಲಿ ಅತ್ಯುತ್ತಮವಾಗಿ ಮಿಶ್ರಣವಾಗುವಂತೆ ಮಾಡುತ್ತದೆ. ಇವುಗಳ ಸಾರಾಂಶ ಭೂಮಿಗೆ ಚೆನ್ನಾಗಿ ದಕ್ಕುವುದರಿಂದ ಬೆಳೆಯಿಂದ ಬೆಳೆಗೆ ಸಾವಯವ ಗೊಬ್ಬರಗಳನ್ನು ಬಳಕೆ ಮಾಡುವ ಪ್ರಮಾಣವೂ ಗಣನೀಯವಾಗಿ ತಗ್ಗುತ್ತಾ ಬರುತ್ತದೆ.ಮುಖ್ಯವಾಗಿ ಮಣ್ಣಿನಲ್ಲಾಗಿರುವ ಹಾರ್ಡ್ ಪ್ಯಾನ್ (Hard Pan) ಕಡಿಮೆಯಾಗುತ್ತಾ ಬರುತ್ತದೆ. ಇದರಿಂದ ಆಗುವ ಪ್ರಯೋಜನಗಳು ರೈತರ ಅರಿವಿಗೆ ಬರುತ್ತದೆ.

ಬಳಕೆಗೆ ಸರಳ

ರೈತರು ಬಹಳ ಸಲೀಸಾಗಿ ಸರಳವಾಗಿ ಬಳಸಲು ಅನುಕೂಲವಾಗುವಂತೆ ಈ ಅಂತರ ಬೇಸಾಯ ಯಂತ್ರವನ್ನು ವಿನ್ಯಾಸ ಮಾಡಲಾಗಿದೆ. ನಿರ್ವಹಣೆಯೂ ವೆಚ್ಚದಾಯಕವಲ್ಲ. ಈ ಯಂತ್ರದಲ್ಲಿ ಅಳವಡಿಸಲಾಗಿರುವ ಉತ್ತಮ ದರ್ಜೆಯ ಗುಳಗಳು ಮಣ್ಣನ್ನು ಅಳವಾಗಿ ಉಳುಮೆ ಮಾಡುವುದಲ್ಲದೇ ಮಣ್ಣಿನ ಹೆಂಟೆಗಳನ್ನು ಸಂಪೂರ್ಣವಾಗಿ ಹುಡಿ ಮಾಡುತ್ತದೆ. ಸಾಲುಗಳು ಸಹ ಕ್ರಮಬದ್ಧವಾಗಿರುತ್ತವೆ.

ಮಣ್ಣಿನಲ್ಲಿ ದೀರ್ಘಕಾಲ ತೇವಾಂಶ

ಈ ಅಂತರ ಬೇಸಾಯ ಯಂತ್ರದಿಂದ ುಳುಮೆ ಮಾಡಿದಾಗ ಮಣ್ಣಿನ ಹೆಂಟೆಗಳು ಸಂಪೂರ್ಣ ಹುಡಿಯಾಗುವುದರಿಂದ ಸುದೀರ್ಘ ಸಮಯ ಮಣ್ಣಿನಲ್ಲಿ ತೇವಾಂಶ ಿರುತ್ತದೆ. ಜೊತೆಗೆ ಮಣ್ಣಿನ ಪಿಎಚ್. ವ್ಯಾಲ್ಯೂ (ph value of soil) ಸಮತೋಲವನ್ನು ನಿರ್ವಹಣೆ ಮಾಡುತ್ತದೆ.ಈ ಕಾರ್ಯಗಳಿಂದ ಅತ್ಯಲ್ಪ ಮಳೆ ಬೀಳುವ ಪ್ರದೇಶಗಳಲ್ಲಿಯೂ ಅಧಿಕವಾದ ಬೆಳೆ ಇಳುವರಿ ಪಡೆಯಲು ಸಹಾಯಕವಾಗುತ್ತದೆ.

ಅತ್ಯಲ್ಪ ಡೀಸೆಲ್ ಬಳಕೆ

ಈ ಅಂತರ ಬೇಸಾಯ ಯಂತ್ರವು ಅತ್ಯಲ್ಪ ಇಂಧನ ಬಳಕೆ ಮಾಡುತ್ತದೆ. ಒಂದೇ ಲೀಟರ್ ಡೀಸೆಲ್ ಬಳಸಿ ಒಂದು ಎಕರೆ ಕೃಷಿಭೂಮಿಯನ್ನು ಎರಡು ತಾಸಿನಲ್ಲಿ ಸಾಗುವಳಿ ಮಾಡಬಹುದು. ಎಂಟು ತಾಸುಗಳಲ್ಲಿ ನಾಲ್ಕು ಎಕರೆ ಕೃಷಿಭೂಮಿಯ ಅಂತರ ಬೇಸಾಯ ಮಾಡುವ ಸಾಮರ್ಥ್ಯವನ್ನು ಇದು ಹೊಂದಿರುವುದು ಗಮನಾರ್ಹ

ಸಾಲುಗಳ ಮಧ್ಯದಲ್ಲಿ ಚಾಲನೆ

ಪವರ್ ಇಂಟರ್ ಕಲ್ಟಿವೇಟರ್ ಯಂತ್ರವನ್ನು ಸಾಲುಗಳ ಮಧ್ಯದಲ್ಲಿ ಸರಾಗವಾಗಿ ಚಲಿಸುವಂತೆ ವಿನ್ಯಾಸ ಮಾಡಲಾಗಿದೆ. ಇದರಿಂದ ಎಲ್ಲ ಸಾಲು ಬೆಳೆಗಳಲ್ಲಿಯೂ ಈ ಯಂತ್ರ ಬಳಕೆ ಮಾಡಬಹುದು. ಉದಾಹರಣೆಗೆ ಹೇಳುವುದಾದರೆ ರೇಷ್ಮೆ, ನೆಲಗಡಲೆ, ಅಡಿಕೆ, ಬಾಳೆ, ತರಕಾರಿ ಬೆಳೆಗಳು, ಎಣ್ಣೆಕಾಳು ಬೆಳೆಗಳು ಮತ್ತು ಇನ್ನಿತರ ಬೆಳೆಗಳಲ್ಲಿನ ಅಂತರ ಬೇಸಾಯಕ್ಕೆ ಇದು ಅತ್ಯಂತ ಸೂಕ್ತ ಯಂತ್ರವಾಗಿದೆ.

ಬೀಜ ಬಿತ್ತುವ ಉಪಕರಣ

ಇದಲ್ಲದೇ ಈ ಅಂತರ ಬೇಸಾಯ ಯಂತ್ರಕ್ಕೆ ನೆಲಗಡಲೆ ಬೀಜ ಬಿತ್ತುವ ಉಪಕರಣವನ್ನೂ ಅಳವಡಿಸಬಹುದು.ಯಂತ್ರದಿಂದ ಸಾಲು ಮಾಡಿ ಬೀಜಗಳನ್ನು ಕ್ರಮಬದ್ಧವಾಗಿ ಸಾಲು ತಪ್ಪದಂತೆ ಬಿತ್ತನೆ ಮಾಡಿ ಅವುಗಳ ಮೇಲೆ ಮೊಳಕೆಗೆ ಹೊರೆಯಾಗದ ರೀತಿ ಮಣ್ಣು ಹೊದಿಸಬಹುದು.

ಟ್ರಾಲಿ ಅಳವಡಿಕೆ

ಕೃಷಿಭೂಮಿಯಲ್ಲಿ ಕೃಷಿ ಸಂಬಂಧಿತ ಉಪಕರಣಗಳು, ಗೊಬ್ಬರದ ಚೀಲಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಟ್ರಾಲಿ ಮೂಲಕ ಸಾಗಾಟ ಮಾಡಲು ಕೂಡ ಈ ಯಂತ್ರ ಸಹಾಯಕ.

ಸಿಂಪಡಣೆ

ಮುಖ್ಯವಾಗಿ ಈ ಅಂತರ ಬೇಸಾಯ ಯಂತ್ರಕ್ಕೆ ಸಿಂಪಡಣಾ ಉಪಕರಣವನ್ನುವಿನ್ಯಾಸ ಮಾಡಿ ಅಳವಡಿಸಲಾಗಿರುತ್ತದೆ. ಆದ್ದರಿಂದ ಕೃಷಿಕರು ಈ ಕಾರ್ಯವನ್ನು ಆಯಾ ಸಮಯಕ್ಕೆ ಅನುಗುಣವಾಗಿ ಮಾಡಬಹುದು.

ಮುಂದುವರಿಯುತ್ತದೆ ….

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:  ಮಾರುತಿ ಕೃಷಿ ಉದ್ಯೋಗ್‌, ಕೆರೆಕೋಡಿ, ನೆಲಮಂಗಲ ಟೌನ್‌, ಕರ್ನಾಟಕ – 562123, ಸಂಚಾರಿ ದೂರವಾಣಿ: 8618693986 /  9482975463

LEAVE A REPLY

Please enter your comment!
Please enter your name here